ಉಪಯುಕ್ತ ಮಾಹಿತಿ

ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ..!ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

By admin

April 19, 2018

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಸಾಮಾನ್ಯವಾಗಿ ನಾವು ಮನೆಯಲ್ಲಿ ಅನ್ನ ಮಾಡುವಾಗ ಅಕ್ಕಿಯನ್ನು ತೊಳೆದು ಆ ನೀರನ್ನು ಚೆಲ್ಲುತ್ತೇವೆ‌ ಅಥವಾ ಹಸುಗಳಿಗೆ ಕುಡಿಸುತ್ತೇವೆ. ಇದು ಎಲ್ಲರೂ ಮಾಡುವುದೇ…ಅಕ್ಕಿ ತೊಳೆದ ನೀರು ಅಥವಾ ಗಂಜಿ ನೀರು ನಮ್ಮ ಚರ್ಮದ ಸೌಂದರ್ಯ ಹೆಚ್ಚಿಸುವಲ್ಲಿ ಪ್ರಧಾನ ಪಾತ್ರ ವಹಿಸಬಲ್ಲದು. ಮುಖದ ಸೌಂದರ್ಯ ಹೆಚ್ಚಿಸಲು, ಹಾಗೂ  ಮುಖದ ಮೇಲಿನ ಮೊಡವೆಗಳನ್ನು ದೂರ ಮಾಡಿಕೊಳ್ಳುಬಹುದಲ್ಲದೇ ನಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದಂತೆ.

ಅಕ್ಕಿ ತೊಳೆದ ನೀರು ಅಥವಾ ಗಂಜಿ ತಿಳಿ ಮಿಕ್ಕಿದ್ದರೆ ಅದನ್ನು ಒಂದು ಹತ್ತಿ ಅಥವಾ ಶುದ್ಧವಾದ ಬಟ್ಟೆ ಉಪಯೋಗಿಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಬಹುದು. ನಿಯಮಿತವಾಗಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚುವುದು. ಪ್ರಾಯದಲ್ಲಿ ತೊಂದರೆ ಮಾಡುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು ಮೊಡವೆಗಳು. ಮುಖದ ಅಂದವನ್ನು ಹಾಳುಮಾಡುವ ಇವು ನಮಗೆ ತೊಂದರೆಯನ್ನು ಕೊಡುತ್ತವೆ.

ಅವುಗಳನ್ನು ಕಡಿಮೆ ಮಾಡಿಕೊಳ್ಳಲು ನಾನಾ ತರದ ಕ್ರೀಮ್’ಗಳನ್ನು ಬಳಸುತ್ತೇವೆ. ಏನೇ ಮಾಡಿದರೂ ಮೊಡವೆಗಳು ಕಡಿಮೆಯಾಗುವುದು ಇರಲಿ ಮತ್ತಷ್ಟು ಹೆಚ್ಚಾಗುವ ಅಪಾಯವಿದೆ. ಮೊಡವೆಗಳ ಸಮಸ್ಯೆಯನ್ನು ಅನುಭವಿಸುತ್ತಿರುವವರಿಗೆ ತಜ್ಞರು ಒಂದು ಪರಿಹಾರ ಮಾರ್ಗವನ್ನು ಸೂಚಿಸಿದ್ದಾರೆ.ಹದಿನೈದು ನಿಮಿಷದಲ್ಲಿ ಎರಡು ಬಾರಿ ಅಕ್ಕಿ ತೊಳೆದ ನೀರಿನಲ್ಲಿ ಮುಖ ತೊಳೆಯುವುದರಿಂದ ಮುಖದ ಮೇಲಿರುವ ರಾಷೆಸ್ ಕಡಿಮೆಯಾಗುತ್ತವೆ.

ಮೊಡವೆಗಳ ಮೇಲೆ ಅಕ್ಕಿ ತೊರೆದ ನೀರು ಪ್ರಭಾವ ಬೀರುತ್ತದೆ. ಅಕ್ಕಿ ತೊಳೆದ ನೀರಿನಲ್ಲಿ ಟಿಷ್ಯು ಪೇಪರ್ ಅನ್ನು ಮುಳಗಿಸಿ ಮುಖಕ್ಕೆ ಅಪ್ಲೇ ಮಾಡುವುದರಿಂದ ನಿಮ್ಮ ಮುಖ ಫ್ರೆಶ್ ಆಗಿ, ಮೃದುವಾಗುತ್ತದೆ. ಈ ನೀರಿನಿಂದ ಮುಖದಲ್ಲಿ ರಾಷೆಸ್ ಇರುವ ಜಾಗದಲ್ಲಿ ಉಜ್ಜಿದರೆ ಗುಣವಾಗುತ್ತದೆ. ಈ ನೀರಿನಲ್ಲಿರುವ ವಿಟಮಿನ್ಸ್, ಮಿನರಲ್ಸ್ ಚರ್ಮಕ್ಕೆ ಅಷ್ಟೇ ಅಲ್ಲದೇ ಕೂದಲಿಗೂ ಸಹ ಹೆಚ್ಚಿನ ಸೌಂದರ್ಯವನ್ನು ನೀಡುತ್ತದೆಯಂತೆ.

ಅಕ್ಕಿ ತೊಳೆದ ನೀರಿನಲ್ಲಿ ಮುಖ ತೊಳೆಯುವುದರಿಂದ ಸಿಗುವ ಹಲವು ಪ್ರಯೋಜನಗಳು:-