ಹಬ್ಬ ಬಂತು ಅಂದ್ರೆ ಖುಷಿ ಖುಷಿಯಿಂದ ಆಚರಣೆಗೆ ಸಿದ್ಧವಾಗೋ ಹೆಣ್ಣುಮಕ್ಕಳು ಏನೇ ವಿಶೇಷ ಕಾರ್ಯಕ್ರಮ ಇದ್ದರೂ ಬ್ಯೂಟಿಪಾರ್ಲರ್ ಗೆ ಒಮ್ಮೆ ಭೇಟಿ ಕೊಟ್ಟು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳೋ ಪ್ರಯತ್ನ ಮಾಡ್ತಾರೆ . ಆದರೆ ಇಂತಹದ್ದೆ ಆಸೆಯಿಂದ ಬ್ಯೂಟಿಪಾರ್ಲರ್ ಗೆ ಹೋಗಿದ್ದ ವೈದ್ಯೆಯೊಬ್ಬರು ತಮ್ಮ ಮುಖವನ್ನು ಶಾಶ್ವತವಾಗಿ ಹಾಳುಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ .
ಬೆಂಗಳೂರಿನ ಸಿಎಂಎಚ್ ರಸ್ತೆಯಲ್ಲಿರುವ ಕ್ಲಬ್ ಸಿಟ್ರಸ್ ಸಲೂನ್ ನಲ್ಲಿ ಈ ಘಟನೆ ನಡೆದಿದೆ . ಯಶೋಧಾ ಎಂಬ ವೈದ್ಯೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಪೇಶಿಯಲ್ ಮಾಡಿಸಿಕೊಳ್ಳಲು ಪಾರ್ಲರ್ ಗೆ ತೆರಳಿದ್ದರು . ಈ ವೇಳೆ ಪೇಶಿಯಲ್ ಗೆ ತಣ್ಣಿರು ಬಳಸಬೇಕಿದ್ದ ಪಾರ್ಲರ್ ಸಿಬ್ಬಂದಿ ಏಕಾಏಕಿ ಬೀಸಿ ನೀರು ಸುರಿದಿದ್ದಾರೆ . ಇದರಿಂದ ವೈದ್ಯೆ ಯಶೋಧಾ ಸಂಪೂರ್ಣ ಸುಟ್ಟು ಹೋಗಿದೆ .
ವೆರೋನಿಕಾ ಎಂಬಾಕೆಯ ಒಡೆತನದಲ್ಲಿ ಈ ಸಲೂನ್ ನಡೆಯುತ್ತಿದ್ದು , ಘಟನೆ ಬಳಿಕ ಸಿಬ್ಬಂದಿ ಪರಾರಿಯಾಗಿದ್ದಾರೆ ಎನ್ನಲಾಗಿದೆ . ಇನ್ನು ವೈದ್ಯೆಯ ಮುಖ ಸಂಪೂರ್ಣ ಸುಟ್ಟು ಹೋದ ಪರಿಣಾಮ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಾಧ್ಯವಾಗದೇ , ವೈದ್ಯೆಯನ್ನ ದೆಹಲಿ ಆಸ್ಪತ್ರೆಗೆ ರವಾನಿಸಲಾಗಿದೆ .
ಇನ್ನು ಈ ಬಗ್ಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ , ಒಟ್ಟಿನಲ್ಲಿ ಸೌಂದರ್ಯ ಹೆಚ್ಚಿಸುವ ಪ್ರಯತ್ನದಲ್ಲಿ ವೈದ್ಯೆಯ ಮುಖ ಶಾಶ್ವತವಾಗಿ ಹಾಳಾಗಿದ್ದಲ್ಲದೇ ಜೀವ ಕೂಡ ಪಣಕ್ಕಿಡುವಂತಾಗಿದ್ದು ಮಾತ್ರ ದುರಂತವೇ ಸರಿ .