ರಾಜಕೀಯ

ಅಂದು ಈ ಯುವಕನ ಭಾಷಣದಿಂದ,ಪ್ರಧಾನಿ ಮೋದಿ ಮತ್ತು ಗುಜರಾತ್ ಸರ್ಕಾರವೇ ಶೇಕ್ ಆಗಿತ್ತು..!

By admin

August 07, 2017

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಿಟ್ಟರೆ ಇಡೀ ದೇಶದಲ್ಲಿ ಪ್ರಖರವಾದ ಭಾಷಣ ಮಾಡಿ ಜನರನ್ನ ಸೆಳೀತಿದ್ದ ವ್ಯಕ್ತಿ ಅಂದ್ರೆ ಪ್ರಧಾನಿ ನರೇಂದ್ರ ಮೋದಿ. ತಮ್ಮ ಮೊನಚು ಮಾತುಗಳಿಂದಲೇ ಜನರ ಮನ ಗೆದ್ದು ತಮ್ಮ ಬಹುಮತದಿಂದ, ಯಾವ ಪಕ್ಷಗಳ ಸಹಾಯವಿಲ್ಲದೆ ಅಧಿಕಾರದ ಗದ್ದುಗೆ ಏರಿದ ಜಾದುಗಾರ.

ಆದ್ರೀಗ ಮೋದಿಗಿಂತಲೂ ಪ್ರಖರವಾದ ಮಾತಿನ ಮೋಡಿಗಾರ ಅದೇ ಗುಜರಾತ್​ ನೆಲದಲ್ಲಿ ಜನ್ಮ ತಾಳಿದ್ದಾನೆ. ಇವನು ಗುಜರಾತ್​ನಲ್ಲಿ ದೊಡ್ಡ ಮಟ್ಟದ ಕ್ರಾಂತಿ ಮಾಡೋ ಮೂಲಕ ದೇಶಾದ್ಯಂತ ಮಿಂಚಿನ ಸಂಚಲನ ಮೂಡಿಸಿದ್ದಾನೆ.

ಆತನನೇ ಹಾರ್ದಿಕ್ ಪಟೇಲ್​.. ಪಟೇಲ್ ಸಮುದಾಯದ ವ್ಯಕ್ತಿ. ಈತನ ವಯಸ್ಸು ವಯಸ್ಸು ಎಷ್ಟು ಗೊತ್ತಾ. ಈಗ ಕೇವಲ 24 ವರ್ಷ ಅಷ್ಟೇ. ಆದ್ರೆ ಈ ಯುವಕನ ಒಂದು ಭಾಷಣದ ಕರೆಗೆ ಓಗೊಟ್ಟು ಅಹಮದಾಬಾದ್​​ನಲ್ಲಿ ಜನಸಾಗರವೇ ಸೇರಿತ್ತು.

ಹಾರ್ದಿಕ್ ಪಟೇಲ್ ಭಾಷಣ ಹೇಗಿತ್ತೆಂದ್ರೆ, ಆತನ ಭಾಷಣ ಕೇಳೋದಕ್ಕೆ ಬಂದ ಜನರು ಜಾಗ ಸಾಕಾಗದೇ ನಡು ರಸ್ತೆಯಲ್ಲಿ ನಿಂತು, ಫ್ಲೈ ಓವರ್​ಗಳ ಮೇಲೆ ನಿಂತು, ಹಾರ್ದಿಕ್ ಪಟೇಲ್​ರ ಭಾಷಣ ಕೇಳ್ತಿದ್ರು.

ಈ ನವಯುವಕನ ಕ್ರಾಂತಿಕಾರಿ ಹೆಜ್ಜೆಯನ್ನ ನೋಡಿ ಗುಜರಾತ್​ ಸರ್ಕಾರಾನೇ ಶೇಕ್ ಆಗಿತ್ತು. ಅಷ್ಟೇ ಅಲ್ಲ, ಮೋದಿ ಹುಟ್ಟಿದ ನಾಡಲ್ಲೇ, ಮೋದಿಯನ್ನೇ ಅಲುಗಾಡಿಸೋ ಶಕ್ತಿಯಾಗಿ ಗುಜರಾತ್​ನಲ್ಲಿ ನೆಲೆಯೂರಿದ್ದಾರೆ.

ತಮ್ಮ ಭಾಷಣದಿಂದಲೇ ಜನರನ್ನು ಎತ್ತಿ ಕಟ್ಟಿದ್ದು ಹಾರ್ದಿಕ್ ಪಟೇಲ್’ರನ್ನು ಪರಿಸ್ಥಿತಿ ವಿಕೋಪಕ್ಕೆ ಪೊಲಿಸ್ರು ಬಂಧಿಸ್ತಾರೆ. ಹಾರ್ದಿಕ್ ಪಟೇಲ್​ರನ್ನ ಬಂಧಿಸಿದ್ರು. ಪ್ರತಿಭಟನೆ ನಿಲ್ಲುತ್ತೆ ಅಂತ ಎಲ್ರೂ ಅಂದುಕೊಂಡಿದ್ರು..

ಆದ್ರೆ ಹಾಗೆ ಆಗ್ಲೇ ಇಲ್ಲ. ಪೊಲೀಸರು ಹಾರ್ದಿಕ್ ಪಟೇಲ್ರನ್ನ ಬಂಧಿಸಿದ ನಂತರ ಹೋರಾಟ ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಳ್ತು.. ಪಟೇಲ್​ ಬೆಂಬಲಿಗರು ಎಲ್ಲೆಡೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ರು. ಗುಜರಾತ್​ ಗೃಹಸಚಿವರ ಮನೆಗೆ ಮುತ್ತಿಗೆ ಹಾಕಿದ್ರು..ಪರಿಣಾಮ ಗುಜರಾತ್​ನಾದ್ಯಂತ ಬಂದ್ ಮಾಡಲಾಯಿತು.

ಈ ಹಾರ್ದಿಕ್ ಪಟೇಲ್​ ಯಾರು ಗೊತ್ತಾ?

ಗುಜರಾತ್​ನಲ್ಲಿ ದೊಡ್ಡ ಅಲೆಯನ್ನು ಸೃಷ್ಟಿಸಿ, ಗುಜರಾತ್​ ಸರ್ಕಾರವನ್ನೇ ಗಡ ಗಡ ಅಂತ ಅಲುಗಾಡಿಸಿದ್ದ ಇವರು ಪ್ರಧಾನಿ ನರೇಂದ್ರ ಮೋದಿಗೂ ನುಂಗಲಾರದ ಬಿಸಿ ತುಪ್ಪವಾಗಿದ್ದರು. ಗುಜರಾತ್​ ಜನರನ್ನು ಒಗ್ಗೂಡಿಸಿ, ಮೋದಿ ನೆಲದಲ್ಲೇ ಮೋದಿಗೆ ಸಡ್ಡು ಹೊಡೆಯುವ ಮಟ್ಟಕ್ಕೆ ಬೆಳೆದಿದ್ದರು ಈ ಹಾರ್ದಿಕ್ ಪಟೇಲ್​.

ಇವರು 1993 ರಲ್ಲಿ, ಗುಜರಾತ್​ನ ಅಹಮದಾಬಾದ್​ನಲ್ಲಿರೋ ವಿರಾಂಗಾಂ ಅನ್ನೋ ಗ್ರಾಮದಲ್ಲಿ  ಇವರ​ ಜನ್ಮವಾಯಿತು. ಹಾರ್ದಿಕ್ ಪಟೇಲ್ ತಂದೆ ಭಾರತೀಭಾಯ್ ಪಟೇಲ್. ಇವರು​ ಬಿಜೆಪಿಯ ಕಾರ್ಯಕರ್ತರಾಗಿದ್ದರು. ಸಣ್ಣದೊಂದು ನೀರಿನ ವ್ಯಾಪಾರದ ಮೂಲಕ ಬದುಕಿನ ಬಂಡಿ ಸಾಗಿದ್ತಾ ಇತ್ತು ಹಾರ್ದಿಕ್ ಕುಟುಂಬ.

ಹಾರ್ದಿಕ್ ತಮ್ಮ ಪ್ರಾಥಮಿಕ ಶಿಕ್ಷಣವನ್ನ ವೀರಾಂಗಾಂ ಅನ್ನೋ ಊರಿನಲ್ಲೇ ಮುಗಿಸಿ, ಇದಾದ ನಂತರ,  ಬಿಕಾಂ ಪದವಿಯನ್ನೂ ಪಡ್ಕೋತಾರೆ. ಇದೇ ವೇಳೆ ಸರ್ದಾರ್​ ವಲ್ಲಭಾಯ್ ಪಟೇಲ್ ಗ್ರೂಪ್ಸ್​​ ಹೆಸರಿನ ಸಂಘಟನೆಗೆ ಸೇರಿಕೊಳ್ತಾರೆ.

ಆದ್ರೆ ಕೆಲವು ಕಾರಣಗಳಿಂದ, ತಮಗೆ ಸೂಕ್ತ ಸ್ಥಾನಮಾನ ಸಿಗಲಿಲ್ಲ ಅಂತ ಹೇಳಿ, 2011 ರಲ್ಲಿ ಆ ಸಂಘಟನೆಯನ್ನು ಬಿಟ್ಟು 2015 ರ ಜುಲೈನಲ್ಲಿ ಪಾಟಿದಾರ್​ ​ಅನಾಮತ್ ಆಂದೋಲನ್​ ಸಮಿತಿ ಅನ್ನೋ ಹೊಸ ಸಂಘಟನೆಯನ್ನು ಶುರು ಮಾಡ್ತಾರೆ. ಹಳ್ಳಿ ಹಳ್ಳಿಗೆ ಹೋಗಿ, ಪಟೇಲ್​ ಸಮುದಾಯದ ಬಗ್ಗೆ ಜಾಗೃತಿ ಮೂಡಿಸ್ತಾರೆ.

ಈ ಹಾರ್ದಿಕ್ ಪಟೇಲ್​ ಪಟೇಲ್ ಗುಜರಾತ್ನಲ್ಲಿ ಹಿರೋ ಆಗಿದ್ದು ಹೇಗೆ ಗೊತ್ತಾ?

ಗುಜರಾತ್​ನ ಅಹಮದಾಬಾದ್​ನಲ್ಲಿ, ಆಗಸ್ಟ್​ 17, 2015 ನೇ ತಾರೀಕು  ಒಂದು ಬೃಹತ್​ ಸಮಾವೇಶವನ್ನ ಮಾಡ್ತಾರೆ. ಆ ಸಮಾವೇಶದಲ್ಲಿ ತಮ್ಮ ಮೊನಚು ಮಾತುಗಳಿಂದ ರಾಜಕೀಯ ಪಕ್ಷಗಳನ್ನ ತಿವೀತಾರೆ. ಈ ಭಾಷಣ ​ಹಾರ್ದಿಕ್ ಪಟೇಲ್​ರನ್ನ​ ರಾತ್ರೋ ರಾತ್ರಿ ಹೀರೋ ಮಾಡಿಬಿಟ್ಟಿತ್ತು..

ಅವರ ಭಾಷಣ ಹೇಗಿತ್ತೆಂದ್ರೆ, ನಿಮ್ಮಲ್ಲಿ ನಾವು ಭಿಕ್ಷೆ ಬೇಡುತ್ತಿಲ್ಲ. ಮೀಸಲಾತಿ ಪಡೆಯುವುದು ನಮ್ಮ ಅಧಿಕಾರ. ಇಲ್ಲದಿದ್ದರೆ ಸರ್ಕಾರವನ್ನು ಕಿತ್ತೊಗೆಯುತ್ತೇವೆ. ಪಟೇಲ್ ಹಿತ ಕಾಯುವವರು ಮಾತ್ರ ಪಟೇಲರನ್ನು ಆಳಬೇಕು. ದೇಶದ ಯುವಕರು ಬೀದಿಯಲ್ಲಿ ನಿಂತು ಹಕ್ಕಿಗಾಗಿ ಒತ್ತಾಯಿಸಿದಾಗ ಹಕ್ಕು ನೀಡದಿದ್ದರೆ, ನಕ್ಸಲೈಟ್, ಭಯೋತ್ಪಾದಕರಾಗುತ್ತಾರೆ. ಹೀಗೆ ತಮ್ಮ ಮೊನಚಾದ ಭಾಷಣದಿಂದ ಅಂದು ಇಡೀ ಗುಜರಾತ್ ಜನರನ್ನು ತನ್ನತ್ತ ಸೆಳೆದರು.