ಸರ್ಕಾರಿ ಯೋಜನೆಗಳು

ಅಂತರ್ಜಾತಿ ಮದುವೆ ಆಗಿ, ಕೇಂದ್ರ ಸರ್ಕಾರದಿಂದ ಲಕ್ಷ ಲಕ್ಷ ಹಣ ಪಡೆಯಿರಿ..!ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ…

By admin

December 16, 2017

ಜಾತಿ ಆಧಾರಿತ ತಾರತಮ್ಯ ತೊಡೆದುಹಾಕುವ ಪ್ರಯತ್ನವಾಗಿ ಕೇಂದ್ರ ಸರಕಾರವು, ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ದಲಿತ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ 2.5 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ಅಂತರ್ಜಾತಿ ವಿವಾಹಕ್ಕೆ ಬೆಂಬಲ ನೀಡಿ ಸಮಾಜದಲ್ಲಿ ಏಕತೆ ಮೂಡಿಸುವ ಸಲುವಾಗಿ ಡಾ. ಬಿಆರ್. ಅಂಬೇಡ್ಕರ್ ಯೋಜನೆಯನ್ನು 2013ರಲ್ಲಿ ಕೇಂದ್ರ ಸರ್ಕಾರ ಆರಂಭಿಸಿತ್ತು. ಈ ವೇಳೆ ಅಂತರ್ಜಾತಿ ವಿವಾಹವಾಗುವ ವಧು ಅಥವಾ ವರ ದಲಿತ ಸಮುದಾಯಕ್ಕೆ ಸೇರಿರಬೇಕು ಹಾಗೂ ಅವರ ಕುಟುಂಬದ ಆದಾಯ 5 ಲಕ್ಷ ರೂ. ಗಿಂತ ಜಾಸ್ತಿ ಇರಬಾರದು ಎನ್ನುವ ನಿಯಮವನ್ನು ವಿಧಿಸಲಾಗಿತ್ತು. ವಾರ್ಷಿಕವಾಗಿ 500 ಮಂದಿಗೆ ಈ ಆರ್ಥಿಕ ಸಹಾಯವನ್ನು ನೀಡುವ ಗುರಿಯನ್ನು ಸರ್ಕಾರ ಹಾಕಿಕೊಂಡಿತ್ತು.

ಆದರೆ ಈಗ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಎಲ್ಲ ರಾಜ್ಯಗಳಿಗೆ ಆದೇಶ ಹೊರಡಿಸಿದ್ದು, ಈ ಆದೇಶದಲ್ಲಿ 5 ಲಕ್ಷ ರೂ. ಆದಾಯ ಇರಬೇಕೆಂಬ ನಿಯಮವನ್ನು ಕೈ ಬಿಟ್ಟಿದೆ. ಮದುವೆಯಾದ ಎಲ್ಲರಿಗೂ ಪ್ರೋತ್ಸಾಹ ಧನವನ್ನು ನೀಡಲಾಗುವುದು ಎಂದು ತಿಳಿಸಿದೆ.

ಷರತ್ತುಗಳೇನು..?

  1. ಅಂತರಜಾತಿ ವಿವಾಹವಾಗುವ ದಂಪತಿಗಳಲ್ಲಿ ಒಬ್ಬರು ಪರಿಶಿಷ್ಟ ಜಾತಿಯವರಾಗಿದ್ದು, ಸವರ್ಣೀಯರನ್ನು ವಿವಾಹವಾಗಿರಬೇಕು.
  2. ಅವರ ವಾರ್ಷಿಕ ಆದಾಯ 50,000/- ರೂ. ಗಳನ್ನು ಮೀರಿರಬಾರದು.
  3. ಈ ಯೋಜನೆಗೆ ಒಳಪಡುವ ದಂಪತಿಗಳು ಕಾನೂನು ಪ್ರಕಾರ ಸಬ್ ರಿಜಿಸ್ಟ್ರಾರ್ ಆಫೀಸ್‍ನಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡ ದೃಢೀಕರಣ ಪತ್ರ ಹೊಂದಿರಬೇಕು.
  4. ಅವನು/ಅವಳಿಗೆ 2ನೇ ಮದುವೆಯಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಸಲ್ಲಿಸಬೇಕಾದ ದಾಖಲಾತಿಗಳು..

  1. ಸಬ್ ರಿಜಿಸ್ಟ್ರಾರ್ ಆಫೀಸ್‍ನಲ್ಲಿ ನೋಂದಾಯಿಸಿದ ದೃಢೀಕೃತ ವಿವಾಹ ಪ್ರಮಾಣ ಪತ್ರ.
  2. ದಂಪತಿಗಳ ಪ್ರತ್ಯೇಕವಾದ ವಾರ್ಷಿಕ ಆದಾಯ ಪ್ರಮಾಣ ಪತ್ರ.
  3. ಸಂಬಂಧಪಟ್ಟ ಪ್ರಾಧಿಕಾರಿಯಿಂದ ಹೊರಡಿಸಲಾದಜಾತಿ ಪ್ರಮಾಣ ಪತ್ರ (ಗಂಡ ಮತ್ತು ಹೆಂಡತಿ ಪ್ರತ್ಯೇಕವಾಗಿ).
  4. ವಿವಾಹವಾದ ದಂಪತಿಗಳ ಜೋಡಿ ಫೋಟೋ.
  5. ಸಂಬಂಧಪಟ್ಟ ಅಧಿಕಾರಿಯಿಂದ ದೃಡೀಕರಿಸಲ್ಪಟ್ಟ ವಾಸಸ್ಥಳದ ಪ್ರಮಾಣ ಪತ್ರ.

ಯಾರನ್ನು ಸಂಪರ್ಕಿಸಬೇಕು..?

ಅರ್ಹತೆಯುಳ್ಳ ದಂಪತಿಗಳು ಭರ್ತಿ ಮಾಡಲಾದ ಸೂಕ್ತ ದಾಖಲಾತಿಗಳನ್ನು ಸಂಬಂಧಿಸಿದ ತಾಲ್ಲೂಕಿನ ಸಹಾಯಕ ನಿರ್ದೇಶಕರು ಗ್ರೇಡ್ -1/ ಗ್ರೇಡ್-2, ಸಮಾಜ ಕಲ್ಯಾಣ ಇಲಾಖೆ ರವರಿಗೆ ಸಲ್ಲಿಸುವುದು. ಅರ್ಜಿ ಸ್ವೀಕರಿಸಿದ ಒಂದು ತಿಂಗಳೊಳಗೆ ಫಲಾನುಭವಿಗಳಿಗೆ ಹಣ ಸಿಗುತ್ತದೆ.