ಜ್ಯೋತಿಷ್ಯ

ಹೋಳಿ ಹಬ್ಬದ ಈ ಶುಭ ದಿನ, ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಗುರು ನಿಮಗೆ ಒಲಿಯಲಿದ್ದಾನೆಯೇ ನೋಡಿ…

457

ಇಂದು ಗುರುವಾರ, 1/3/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಮಾನಸಿಕವಾಗಿ ಚಿಂತೆ ಕಾಡುವುದು. ಹಳೆಯ ಸಂಬಂಧ, ಆರೋಗ್ಯ ದೃಷ್ಟಿಯಿಂದ ಉತ್ತಮವಾದ ದಿನ.ವ್ಯವಹಾರಗಳನ್ನು ಮುಂದುವರಿಸಿಕೊಳ್ಳುವುದು ಉತ್ತಮ. ಕೋರ್ಟು ವ್ಯವಹಾರ ಗಳಲ್ಲಿ ಮುನ್ನಡೆ ಸಾಂಸಾರಿಕವಾಗಿ ಸಂಪ್ರಾಪ್ತಿಯಾಗಲಿದೆ. ಗೌಪ್ಯವಾದ ಮಾಹಿತಿಯನ್ನು ಬಹಿರಂಗಪಡಿಸಬೇಡಿ.

ವೃಷಭ:-

ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ನಿರುದ್ಯೋಗಿ ಗಳಿಗೆ ಅನಿರೀಕ್ಷಿತ ಫ‌ಲ ತರಲಿದೆ. ನಿಮ್ಮ ಯೋಜನೆಗಳಿಗೆ ಕೊನೆಯ ಕ್ಷಣದಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಕೈಗೆತ್ತಿಕೊಂಡ ಕೆಲಸ ಕಾರ್ಯಗಳು ಸುಗಮವಾಗಿ ಆಗುವವು.

ಮಿಥುನ:

ಹೊಸ ಕೆಲಸದ ಯೋಜನೆಗಳನ್ನು ಮಾಡುವುದರಿಂದ, ಅದು ನಿಮಗೆ ಯಶಸ್ಸು ನೀಡುತ್ತದೆ. ನಿಮ್ಮ ಸಹೋದ್ಯೋಗಿಗಳು ಸಾಕಷ್ಟು ಬೆಂಬಲ ನೀಡುತ್ತಿಲ್ಲ ಎಂದು ನಿಮಗನ್ನಿಸಬಹುದಾದರೂ ಇಂದು ತಾಳ್ಮೆ ಕಳೆದುಕೊಳ್ಳಬೇಡಿ. ಹೊಸ ಮನೆಗೆ ಪ್ರವೇಶ ಮಾಡುವ ಸಾಧ್ಯತೆ. ಆರ್ಥಿಕವಾಗಿ ಧನಸಂಗ್ರಹವಾದರೂ ಜಾಗ್ರತೆ ಇರಲಿ.

ಕಟಕ :-

ಹತ್ತಿರದವರಿಂದಲೇ ಹೊಸ ಸಮಸ್ಯೆಯು ಎದುರಾಗುವ ಸಾಧ್ಯತೆ. ಐಷಾರಾಮಿ ಚಟುವಟಿಕೆಗಳಿಗೆ ವೆಚ್ಚ. ಹೊಸ ಮನೆಗೆ ಪ್ರವೇಶ ಮಾಡುವ ಸಾಧ್ಯತೆ. ಖರ್ಚು ವೆಚ್ಚಗಳು ಮಿತಿಮೀರದಂತೆ ಗಮನಹರಿಸಿರಿ.

 ಸಿಂಹ:

ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ಹೆಚ್ಚು ಆದಾಯದ ಮೂಲವನ್ನು ಪಡೆಯುತ್ತೀರಿ. ಎಂದಿನಂತೆ ಕೆಲಸಗಳನ್ನು ಸಲೀಸಾಗಿ ಮುಂದುವರಿಸಿಕೊಂಡು ಹೋಗುವಿರಿ. ದಾಯಾದಿಗಳ ಬಗ್ಗೆ ಜಾಗ್ರತೆ.ನಿಮಗೆ ಬರುವ ಒಂದು ತಪ್ಪು ಮಾಹಿತಿ,ನಿಮ್ಮ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.

ಕನ್ಯಾ :-

ಸಿಟ್ಟಾಗಬೇಡಿ,ಇದೆ ನಿಮ್ಮ ನಾಶಕ್ಕೆ ಕಾರನವಾಗಿತ್ತದೆ.ಆರೋಗ್ಯದ ಸಲುವಾಗಿ ಅತಿಯಾದ ಔಷಧ ಸೇವನೆ ಮಾಡುವುದು ಉತ್ತಮವಲ್ಲ. ಖರ್ಚು ಇದ್ದರೂ ಧನಾಗಮನ ಇದೆ.ಧಾನ್ಯ ವ್ಯವಹಾರದಲ್ಲಿ ಹಿನ್ನಡೆ.

ತುಲಾ:

ಕೌಟುಂಬಿಕ ಜೀವನದಲ್ಲಿ ಮಾನಸಿಕ ನೆಮ್ಮದಿ. ಅತಿಯಾದ ಮಾನಸಿಕ ಸಮಸ್ಯೆಯನ್ನು ದೂರವಿಡಿ. ದೊಡ್ಡ ವ್ಯವಹಾರವೊಂದರ ಬಗ್ಗೆ ಯೋಜನೆ ರೂಪಿಸುವ ಸಾಧ್ಯತೆ. ಆರೋಗ್ಯದ ಬಗ್ಗೆ ಬಗ್ಗೆ ಗಮನ ಇರಲಿ.

ವೃಶ್ಚಿಕ :-

ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ವೈಫಲ್ಯ ಉಂಟಾಗುವ ಸಾಧ್ಯತೆ ವ್ಯವಹಾರಗಳ ಬಗ್ಗೆ ಹೆಚ್ಚಿನ ಜಾಗರೂಕತೆ ಅವಶ್ಯ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಫ‌ಲ ಸಿಗಲಾರದು. ಮಾನಸಿಕ ನೆಮ್ಮದಿ. ಅನ್ಯವ್ಯಕ್ತಿಗಳ ಮಾತಿನಿಂದ ನಿಷ್ಠುರ.

ಧನಸ್ಸು:

ಇತರರು ಹೇಳುವ ಮಾತಿನಿಂದ ಕ್ರೋಧ. ನಿಮಗೆ ಪ್ರೇಮ ನಿವೇದನೆ ಮಾಡುವ ಸಾಧ್ಯತೆಗಳಿವೆ. ಹಂತ ಹಂತವಾಗಿ ಅಭಿವೃದ್ಧಿ ನೆಮ್ಮದಿಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ಕುಡಿಯುವ ಮತ್ತು ತಿನ್ನುವಾಗ ಎಚ್ಚರದಿಂದಿರಿ.ಭೂ ವಾಹನಾದಿಗಳಲ್ಲಿ ಸುಖ.

ಮಕರ :-

ಅತಿ ವಿನಯದಿಂದ ನಿಮ್ಮ ಮುಂದೆ ಬರುವ ಜನರಿಂದ ಮೋಸಕ್ಕೆ ಒಳಗಾಗುವ ಸಾಧ್ಯತೆ. ವಾಹನಗಳ ವ್ಯವಹಾರದಿಂದ ಅಧಿಕ ಲಾಭ  ಧನಾತ್ಮಕ ಚಿಂತನೆ ನಿಮಗೆ ತುಂಬಾ ಸಹಾಯ ಮಾಡುತ್ತದೆ. ನ್ಯಾಯಾಲಯದ ವಿಚಾರಗಳಿಗಾಗಿ ನಡೆಸುವ ಅಲೆದಾಟ ಕಡಿಮೆಯಾಗುವುದು. ದಾಂಪತ್ಯದಲ್ಲಿ ಸುಖ ಸಂತೋಷ

ಕುಂಭ:-

ಜೀವನದ ಏಳಿಗೆಗಾಗಿ ಸಂಕಲ್ಪ. ಹೊಸ ಉದ್ಯೋಗ ಪಡೆಯುವುದಕ್ಕಿಂತ ಮೊದಲು, ಈಗಿರುವ ಕೆಲಸಕ್ಕೆ ರಾಜೀನಾಮೆ ನೀಡಬೇಡಿ. ಉತ್ತಮ ಭಾಗ್ಯ ನಿಮಗಿದೆ. ಬಂದ ಅವಕಾಶಗಳನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಿ. ಭೂ ಸಂಬಂಧಿ ವ್ಯವಹಾರಗಳಲ್ಲಿ ತೊಡಗಿರುವವರ ವ್ಯವಹಾರದಲ್ಲಿ ಚುರುಕುತನ

ಮೀನ:-

ಮನೆಯಲ್ಲಿ ಮಂಗಳ ಕಾರ್ಯಗಳ ಪ್ರಸ್ತಾಪ. ಬಂಧು, ಮಿತ್ರರಿಂದ ಸಹಕಾರ. ದುಬಾರಿ ಸಾಹಸಕ್ಕೆ ಕೈಹಾಕುವ ಮೊದಲು ನಿಮ್ಮ ವಿವೇಚನೆ ಬಳಸಿ. ಹೊಸ ಕಾರ್ಯಗಳಿಗೆ ಉತ್ತಮ ಸಮಯವಲ್ಲ. ಹಣಕಾಸು ಲಾಭಗಳು ವಿವಿಧ ಮೂಲಗಳಿಂದ ಬರುತ್ತದೆ.ಆರ್ಥಿಕ ಅಡಚಣೆಗಳು ಬಂದರೂ ಹೆಚ್ಚಿನ ಸಮಸ್ಯ ಇಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇವರು-ಧರ್ಮ

    ಪ್ರತಿಯೊಬ್ಬ “ಹಿಂದೂ ಧರ್ಮ”ದವರು ಕೂಡ ತಿಳಿಯಲೇಬೇಕಾದ ಈ ವಿಷಯಗಳು..!ಏನೆಂದು ತಿಳಿಯಬೇಕಾದ್ರೆ ಈ ಲೇಖನ ಓದಿ…

    ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, “ಶಾಶ್ವತ ಧರ್ಮ” ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ “ಪ್ರಕಾರಗಳು”, ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ.

  • ಸುದ್ದಿ

    ಈ ಲಿಪ್ ಸ್ಟಿಕ್ ಬಾಬಾನ ಆ 20 ವರ್ಷದ ಹುಡುಗನ ಜೊತೆ ಮಾಡಿದ್ದೇನು ಗೊತ್ತಾ.?ತಿಳಿಯಲು ಈ ಲೇಖನ ಓದಿ…

    ರಾಜಸ್ತಾನ ಪೊಲೀಸರು ಸ್ವಯಂಘೋಷಿತ ದೇವಮಾನವ ಕುಲದೀಪ್ ಸಿಂಗ್ ಝಾಲಾ ಎಂಬಾತನನ್ನು ಬಂಧಿಸಿದ್ದಾರೆ. 20 ವರ್ಷದ ಯುವಕ ಯುವರಾಜ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಈತನ ಬಂಧನವಾಗಿದೆ. ದೇವತೆಯರಾದ ಶಕ್ತಿ ಹಾಗೂ ಜಗದಂಬೆ ತನ್ನಲ್ಲಿ ಪುನರ್ಜನ್ಮ ಪಡೆದಿದ್ದಾರೆ ಅಂತಾ ಕುಲದೀಪ್ ಹೇಳಿಕೊಳ್ತಾನೆ. ನವರಾತ್ರಿ ಸಮಯದಲ್ಲಿ ಈತ ಮಹಿಳೆಯರಂತೆ ವೇಷ ಧರಿಸಿ ಲಿಪ್ ಸ್ಟಿಕ್ ಹಚ್ಚಿಕೊಳ್ತಾನೆ. ಈತನನ್ನು ಜನ ಲಿಪ್ ಸ್ಟಿಕ್ ಬಾಬಾ ಎಂದೇ ಕರೆಯುತ್ತಾರೆ. ಮಗನ ಸಾವಿಗೆ ಬಾಬಾ ಕಾರಣ ಅಂತಾ ಯುವರಾಜ್ ತಂದೆ ಸೋಹನ್ ಸಿಂಗ್ ಪೊಲೀಸರಿಗೆ ದೂರು…

  • ಆಧ್ಯಾತ್ಮ

    ಹಿಂದೂಗಳಿಗೆ ನಾಗರ ಪಂಚಮಿ ಹಬ್ಬ ಏಕೆ ತುಂಬಾ ಮಹತ್ವ ಗೊತ್ತಾ?ರೋಚಕವಾಗಿದೆ ಈ ಹಬ್ಬದ ವೈಶಿಷ್ಟ್ಯಗಳು…

    ನಾಡಿನೆಲ್ಲೆಡೆ ನಾಗರ ಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಆದರೆ ಬಹಳಷ್ಟು ಜನರು ನಾಗರ ಪಂಚಮಿಯ ಮಹತ್ವವನ್ನು ತಿಳಿಯದೆಯೇ ಅದನ್ನು ಆಚರಿಸುತ್ತಿರುತ್ತಾರೆ. ಈ ನಾಗ ದೇವತೆಯ ಆಚರಣೆಯ, ಪೂಜೆಯ ಮತ್ತು ನೈವೇಧ್ಯಗಳ ಹಿಂದೆ ಕೆಲವೊಂದು ಪುರಾಣ ಕತೆಗಳು ಮತ್ತು ಸತ್ಯಾಂಶಗಳು ಇವೆ.

  • ಸೌಂದರ್ಯ

    ವಯಸ್ಸು 50 ವರ್ಷವಾದರೂ, 20 ವರ್ಷದ ಹುಡುಗನಂತೆ ಕಾಣಿಸುತ್ತಾನೆ..!ತಿಳಿಯಲು ಈ ಲೇಖನ ಓದಿ..

    ಪುರುಷರು ತುಂಬಾ ಅಂದದಿಂದ ಇದ್ದರೆ ಸ್ತ್ರೀಯರು ಅವರನ್ನು ಹೊಗಳುತ್ತಾರೆ.ಇದು ಜಗತ್ತಿಗೆ ಗೊತ್ತಿರುವ ಸತ್ಯ.ಯಾವ ಪುರುಷ ತನ್ನ ಅಂದದಿಂದ ಆಕರ್ಷಿಸುತ್ತಾನೋ ಅಂತವರು ಸ್ತ್ರೀಯರ ಮನಸ್ಸನ್ನು ಸುಲಭವಾಗಿ ಕದಿಯುತ್ತಾನೆ.

  • ಸಿನಿಮಾ

    ಕೊನೆಗೂ ಎಲ್ಲರ ಮುಂದೆ ಕ್ಷಮೆ ಯಾಚಿಸಿದ ಗಂಡ ಹೆಂಡತಿ ನಟಿ ಸಂಜನಾ..!ಏಕೆ ಗೊತ್ತಾ..?

    ಗಂಡ ಹೆಂಡತಿ” ಸಿನಿಮಾ ವೇಳೆ ನಿರ್ದೇಶಕ ರವಿ ಶ್ರೀವತ್ಸ ಚಿತ್ರೀಕರಣದ ಸಮಯ ಕಿರುಕುಳ ನಿಡಿದ್ದರೆಂದು, ಬೆದರಿಕೆ ಹಾಕಿದ್ದರೆಂದೂ ಆರೋಪಿಸಿದ್ದ ನಟಿ ಸಂಜನಾ ಇದೀಗ ತಣ್ಣಗಾಗಿದ್ದಾರೆ.ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಸಂಜನಾ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಗಂಡ-ಹೆಂಡತಿ ಚಿತ್ರದಲ್ಲಿ ಪದೇ ಪದೇ ಕಿಸ್ಸಿಂಗ್ ಸೀನ್ ಮಾಡಿಸಿದ್ದರು ಎಂದು ಆರೋಪಿಸಿದ್ದ ಸಂಜನಾ ತಮ್ಮ ಆರೋಪದ ಕುರಿತು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಸಂಜನಾ ಕಲಾವಿದರ ಸಂಘ, ನಿರ್ದೇಶಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ…

  • inspirational

    ನಿಮ್ಮ ನೆನಪೇ ನಿತ್ಯ ಜ್ಯೋತಿ ನಿಮ್ಮ ಸ್ಮರಣೆಯೇ ಅಮರ ಪ್ರೀತಿ. ಅಂಬಿಗೆ ಸುಮಲತಾ ಶುಭಾಶಯ

    ಇಂದು ಅಂಬರೀಶ್ ಅವರ 68ನೇ ಜನ್ಮದಿನವಾಗಿದ್ದು, ಈ ಹಿಂದೆ ಅವರ ಅಭಿಮಾನಿಗಳು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಅಂಬಿ ನಿಧನದ ನಂತರ ಅಭಿಮಾನಿಗಳು ಅವರ ಸಮಾಧಿ ಸ್ಥಳಕ್ಕೆ ತೆರಳಿ ಜನ್ಮದಿನವನ್ನು ಆಚರಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಲಾಕ್‍ಡೌನ್ ಕಾರಣದಿಂದ ಅದು ಸಾಧ್ಯವಾಗಿಲ್ಲ. ಸುಮಲತಾ ಅವರು ಟ್ವೀಟ್ ಮಾಡುವ ಮೂಲಕ ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. “ಅಂಬರೀಶ್ ಅವರು ಇಂದು 68ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಆದರೆ ವಿಧಿ…