ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮನಸ್ಸಿನಲ್ಲಿ ದೃಢವಾದ ನಿರ್ಣಯವು ಇದ್ದಲ್ಲಿ ಯಾವುದೇ ಕೆಲಸ ಕಷ್ಟವಲ್ಲ .ನಿಮ್ಮಲ್ಲಿ ಪ್ರತಿಭೆ ಇದ್ದು,ಗುರಿ ಅನ್ನುವ ಛಲ ಹೊಂದಿದ್ದರೆ ನಿಮ್ಮನ್ನು ಜಗತ್ತಿನ ಯಾವುದೇ ಶಕ್ತಿಯು ತಡೆಯಲಾರದು ಎಂಬ ಮಾತಿದೆ. ಆದ್ರೆ ಎಷ್ಟೇ ತೊಂದರೆಗಳು ಬರ್ರ್ಲಿ ಯಾವುತ್ತು ನಮ್ಮ ಧೈರ್ಯವನ್ನು ನಾವು ಬಿಡಬಾರದು ಎಂಬ ಮಾತಿದೆ.
ಈ ಮಾತಿಗೆ ಉದಾಹರಣೆ ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ‘ಪದ್ಮಶಿಲಾ ತಿರುಪಡೆ’. ಇವರು ತಮ್ಮ ಕಷ್ಟದ ದಿನಗಳಲ್ಲೂ, ಸೋಲನ್ನು ಒಪ್ಪಿಕೊಳ್ಳದೆ,ದೇಶದ ಎಲ್ಲಾ ಮಹಿಳೆಯರಿಗೂ ಸ್ಪೂರ್ತಿಯಾಗಿದ್ದಾರೆ.

ಸಾಧನೆ ಅನ್ನುವುದು ಸಾಮಾನ್ಯವಾದ ಕೆಲಸವಲ್ಲ, ಮಹಾರಾಷ್ಟ್ರ ಮೂಲದ ಒಬ್ಬ ಮಹಿಳೆ ಬಡತನದಿನದ ಬೆಂದು ಬಡತನ ಎನ್ನುವ ಪದಕ್ಕೆ ನಾಂಧಿಯಾಡಿರುವಂತಹ ಕಥೆ .ಪದ್ಮಶೀಲ ತೀರ್ಪುಡೆ ಎನ್ನುವ ಈ ಮಹಿಳೆ ಬಡತನದಿಂದ ಬೀದಿ ಬೀದಿಗಳಲ್ಲಿ ಹೊಟ್ಟೆ ಪಾಡಿಗಾಗಿ ರುಬ್ಬುವ ಕಲ್ಲನ್ನು ಹೊತ್ತುಕೊಂಡು ವ್ಯಾಪಾರ ಮಾಡಿ ಬಂದಂಥ ಕಾಸಿನಿಂದ ಆ ಹೊತ್ತಿನ ಊಟ ಮಾಡಿದಂತ ಮಹಿಳೆ.

ಪರಿಸ್ತಿತಿ ಇಷ್ಟೊಂದು ಗಂಭೀರವಾಗಿದ್ದರೂ ತಾವು ಓದಿ ಬದುಕಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಠ ತೊಟ್ಟ ಈ ಮಹಿಳೆ ಮುಂದೆ ಓದಲು ಶುರು ಮಾಡಿದರು.ಅಲ್ಲಿಂದಲೇ ಪ್ರಾರಂಭವಾಯಿತು ನೋಡಿ ಅವರ ಕಷ್ಟದ ಜೀವನ.ಹಗಲೆಲ್ಲಾ ರುಬ್ಬುವ ಕಲ್ಲನ್ನು ಹೊತ್ತುಕೊಂಡು ವ್ಯಾಪಾರ ಮಾಡುತ್ತಿದ್ದ ಇವರು ರಾತ್ರಿಹೊತ್ತಲ್ಲಿ ಓದುತ್ತಿದ್ದರು.
ಪದ್ಮಶಿಲಾರವರು ಹಳೆಯ ಪುಸ್ತಕಗಳನ್ನು ಒಗ್ಗೂಡಿಸಿಕೊಂಡು ಓದಿ, ತಮ್ಮ ದಿನದ ಕೆಲಸದ ಜೊತೆಗೆ ಓದಿ ಪದವಿ ಪೂರ್ಣಗೊಳಿಸಿದರು.ತಾನು ರುಬ್ಬು ಗಲ್ಲು ಮಾರಲು ಹೋಗುತ್ತಿರುವಾಗ ತನ್ನ ಹಸುಗೂಸು ಮಗುವನ್ನು ಸಹ ಕಂಕಳಲ್ಲಿ ಕಟ್ಟಿಕೊಂಡು ಹೋಗುತ್ತಿದ್ದಳು.

ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ಗ್ರಾಮದ ಒಂದು ಬಡ ಕುಟುಂಬದಲ್ಲಿ ಜನಿಸಿದ್ದರು ಪದ್ಮಶಿಲಾ.ಇವರ ತಂದೆ ತುಂಬಾ ಬಡವನಾಗಿದ್ದರೂ, ಮಗಳಿಗೆ ಶಿಕ್ಷಣ ಕೊಡಿಸುವುದರಲ್ಲಿ ಹಿಂದೆ ಬೀಳಲಿಲ್ಲ.ಹೀಗಾಗಿ ಪದ್ಮಶಿಲಾ ಯಾವುದೇ ತೊಂದರೆಯಿಲ್ಲದೆ ತಮ್ಮ ಕಡು ಬಡತನದಲ್ಲಿಯೂ ತಮ್ಮ ಶಾಲಾ ಶಿಕ್ಷಣವನ್ನು ಪೂರ್ತಿಗೊಳಿಸಿದರು.
ನಂತರ ಇನ್ನೂ ಪದ್ಮಶಿಲಾ 17ನೇ ವರ್ಷದಲ್ಲಿದ್ದಾಗಲೇ ಇವರ ತಂದೆ ಪಕ್ಕದ ಗ್ರಾಮದ ಓರ್ವ ಯುವಕನೊಂದಿಗೆ ಮದುವೆ ಮಾಡಿದ್ದಾರು. ಆದರೆ ಆ ಯುವಕನಿಗೆ ಓದು ಬರಹ ಗೊತ್ತಿರಲಿಲ್ಲ.

ಸ್ವಲ್ಪ ದಿನಗಳ ನಂತರ ಪದ್ಮಶಿಲಾ ಎರಡು ಮಕ್ಕಳಿಗೆ ತಾಯಿಯಾಗುತ್ತಾಳೆ.ದೊಡ್ಡ ಮಗನನ್ನು ಮನೆಯಲ್ಲಿಯೇ ಬಿಟ್ಟು, ತನನ್ ಚಿಕ್ಕ ಮಗುವನ್ನು ಎತ್ತಿಕೊಂಡು ಲಕ್ಷಾಂತರ ಬಡವರಲ್ಲಿ ತಾನು ಒಬ್ಬಳೆಂದು ಭಾವಿಸಿ ಕೆಲಸಕ್ಕೆ ಹೊರಡುತ್ತಾಳೆ.ಆದ್ರೆ ತಾನು ಶಾಲಾ ಶಿಕ್ಷಣವನ್ನು ಮುಗಿಸಿದ್ದ ಕಾರಣ ತಾನು ಮುಂದೆ ಓದಿ ತಮ್ಮ ಮಕ್ಕಳಿಗೂ ಒಂದು ಒಳ್ಳೆಯ ಭವಿಷ್ಯ ರೂಪಿಸಬೇಕೆಂದು ನಿರ್ದಾರ ಮಾಡಿ ಛಲ ಬಿಡದೆ ಸಾದಿಸಿ ತೋರಿಸಿದ್ದಾಳೆ.
ಅಂತಹ ಬಡತನದಲ್ಲಿ ಇದ್ದಂತ ಮಹಿಳೆಗೆ ಬೆನ್ನೆಲಬಾಗಿ ನಿಂತಿದ್ದು ತನ್ನ ಗಂಡ . ಆ ಬಡತನದಲ್ಲೂ ಹೆಂಡತಿಯನ್ನು ಪೊಲೀಸ್ ಅಧಿಕಾರಿ ಮಾಡುವ ಅಸೆ ಗಂಡನದ್ದು ಕೂಡ ಆಗಿತ್ತು.
ಇವರ ಒಂದು ಪ್ರಯತ್ನಕ್ಕೆ ಯಶಸ್ಸು ಸಿಕ್ಕೆದೆ. ಮಹಾರಾಷ್ಟ್ರ ಸರಕಾರದ ಪೋಲೀಸ್ ಟೆಸ್ಟ್ ಬರೆದು ಪಾಸಾಗಿ ಪೋಲೀಸ್ ಆಫೀಸರ್ ಆಗಿದ್ದಾರೆ. ಇವರ ಒಂದು ಸಾಧನೆಯನ್ನು ಹೋಗಲು ಪದಗಳೇ ಸಾಲದು ಎನ್ನಬಹುದು. ಅದನೆ ಇರಲಿ ಇಂಥವರು ಬೇರೆಯವರಿಗೆ ಮಾದರಿಯಾಗಿದ್ದಾರೆ ಅನ್ನಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೈ ತೋಟದಲ್ಲಿ ಬೆಳೆಯುವ ಘಮ ಘಮ ವೆನ್ನುವ “ಪುದೀನ ಸೊಪ್ಪು” ಅಡಿಗೆ ಮನೇಲಿ ಮಾತ್ರ ಸೀಮಿತ ಆಗದೇ ಆರೋಗ್ಯಕ್ಕೂ ತುಂಬಾ ಒಳ್ಳೇದು. ಏಷ್ಯಾದಲ್ಲಿ ಬೆಳೆದು ಪ್ರಪಂಚದಾದ್ಯಂತ ಬಳಾಕೆಯಾಗುತ್ತಾ ಇರೋ ಈ ಸೊಪ್ಪಲ್ಲಿ ಪ್ರೋಟೀನ್, ಐರನ್, ಕ್ಯಾಲ್ಷಿಯಂ, ಪೊಟ್ಯಾಷಿಯಂ, ಫಾಸ್ಫರಸ್,ಮಗ್ನೀಷಿಯಂ ಅಲ್ಲದೇ ವಿಟಮಿನ್ A ಹಾಗು C ಇರೋದ್ರೀಂದ ಆರೋಗ್ಯಕ್ಕೆ ಬಹಳ ಒಳ್ಳೇದು.
ನಮ್ಮ ಮೆಟ್ರೋ ಬೆಂಗಳೂರಿಗೆ ಮತ್ತೊಂದು ಗರಿ ಸೇರ್ಪಡೆಯಾಗಲಿದೆ. ಮೆಟ್ರೋ ಪಿಲ್ಲರ್ ಗಳು ಡಬಲ್ ಡೆಕ್ಕರ್ ಆಗಿ ಸಂಚಾರ ಸೇವೆ ನೀಡಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿಗೆ ಹೈಟೆಕ್ ಟಚ್ ಹೆಚ್ಚಾಗಲಿದೆ. ಜಯದೇವ ಆಸ್ಪತ್ರೆ ಮುಂಭಾಗ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಡಬಲ್ ಡೆಕ್ಕರ್ ಮೆಟ್ರೋ ಬರಲಿದೆ. ಅಂದ್ರೆ ಒಂದೇ ಮಾರ್ಗದಲ್ಲಿ ಒಂದೇ ಪಿಲ್ಲರ್ ಮೇಲೆ ಮೆಟ್ರೋ ಹಾಗೂ ಕಾರು, ಬೈಕ್ ಗಳು ಸಂಚರಿಸುವ ಡಬಲ್ ಟ್ರ್ಯಾಕ್ ಬರಲಿದೆ. ನಾಗಪುರದಲ್ಲಿ ಡಬಲ್ ಟ್ರ್ಯಾಕ್ ಮೆಟ್ರೋ ಕಂ ರೋಡ್ ಲೈನ್ ಮಾಡಲಾಗಿದೆ. ಈಗ…
ಈಗಂತೂ ಸರ್ಕಾರಿ ಸಂಸ್ಥೆಗಳಲ್ಲಿ ನಮಗೆ ಬೇಕಾದ ದಾಖಲಾತಿಗಳನ್ನು ಪಡೆಯುವುದು ಅಷ್ಟು ಸುಲಭವಲ್ಲ…ಆದರೆ ನಮಗೆ ಗೊತ್ತಿಲ್ಲದ ವಿಷಯವೇನೆಂದರೆ ಕೆಲವೊಂದು ಸೌಲಭ್ಯಗಳನ್ನು ತುಂಬಾ ಸರಳವಾಗಿ ನಾವು ಪಡೆದುಕೊಳ್ಳಬಹುದು.ಅದರಲ್ಲಿ ಒಂದು, ನಮ್ಮ ಜಮೀನುಗಳಿಗೆ ಸಂಬಂದಪಟ್ಟಪಹಣಿ (RTC), ಮತ್ತು ಮಿಟೆಶನ್ ಗಳನ್ನೂ ನಾವು ನಿಮ್ಮ ಮೊಬೈಲ್ನಲ್ಲಿ ಚೆಕ್ ಮಾಡಿಕೊಳ್ಳಬಹುದು.
ಡಾ. ತಿರುವೆಂಗಡಮ್ ಚೆನ್ನೈನ ವ್ಯಾಸಾರ್ಪಡಿನ ಶ್ರೀ ಕಲ್ಯಾಣಪುರಂನಲ್ಲಿ ವೀರರಾಘವನ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನದಾಗಿ ಇವರು ಚಿಕಿತ್ಸೆಯನ್ನು ನೀಡುವುದು ಕಾರ್ಮಿಕ ವರ್ಗದ ಪ್ರದೇಶದಲ್ಲಿ ಜನರ ಸಾಂಕ್ರಾಮಿಕ ಕಾಯಿಲೆಗಳಿಗೆ.
ಈಗಾಗಲೇ ನಮಗೆಲ್ಲರಿಗೂ ತಿಳಿದಿರುವ ವಿಷಯವೂ ಕರಾವಳಿ ಭಾಗದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರ್ಗಿಲ್ ಮೀನಿನ ಕಾಟವು ಮುಂದುವರೆದಿದೆ ಇದರಿಂದ ಮಂಗಳೂರಿನ ಕಡಲ ತೀರದಲ್ಲಿ ಕಂಡಿದ್ದ ಕಾರ್ಗಿಲ್ ಮೀನುಗಳು, ಕಳೆದೊಂದು ವಾರದಿಂದ ಗಂಗೊಳ್ಳಿ ಮೀನುಗಾರರಿಗೂ ಬಾಧಿಸಿದ್ದು, ಈ ಭಾಗದ ಮೀನುಗಾರರಲ್ಲಿ ಆತಂಕ ಉಂಟು ಮಾಡಿದೆ. ಗಂಗೊಳ್ಳಿ ಬಂದರಿಗೂ ಕಾರ್ಗಿಲ್ ಮೀನುಗಳು ವ್ಯಾಪಿಸುತ್ತಿವೆ. ಹೀಗಾಗಿ, ಮೀನುಗಾರರು ಕಾರ್ಗಿಲ್ ಮೀನುಗಳನ್ನು ಬೇರ್ಪಡಿಸುವಲ್ಲಿ ತೊಡಗಿಕೊಂಡಿದ್ದು, ಬಂಗುಡೆ, ಬೂತಾಯಿ ಹಾಗೂ ಇತರೆ ಮೀನುಗಳ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡಿದೆ. ಲಕ್ಷದ್ವೀಪ, ಹವಳದ ದಿಬ್ಬಗಳಲ್ಲಿ ಹೆಚ್ಚು ವಾಸಿಸುವ…
ರಾಜಕೀಯ ಮುಖಂಡರು ತಾವು ಏನು ಹೇಳುತ್ತಿದ್ದೇವೆ ಎಂಬ ಪರಿವೆ ಇಲ್ಲದೇ ಇಲ್ಲ ಸಲ್ಲದ ವಿವಾಧತ್ಮಕ ಹೇಳಿಕೆಗಳನ್ನು ಕೊಡುವುದರಲ್ಲಿ ಮೊದಲಿಗರಾಗಿರುತ್ತಾರೆ. ಈಗ ಹಿಂದೂಗಳು ಹಿಂಸಾಚಾರ ಮಾಡುತ್ತಾರೆ ಎಂಬುದನ್ನ ಈ ಹಿಂದೂ ಧರ್ಮದ ಈ ಮಹಾಕಾವ್ಯಗಳಿಗೆ ಹೋಲಿಕೆ ಮಾಡುವುದರ ಮುಖಾಂತರ ವಿವಾದ ಸೃಷ್ಟಿಸಿದ್ದಾರೆ. ಹಿಂದೂಗಳು ಹಿಂಸಾಚಾರ ಮಾಡ್ತಾರೆ ಎಂಬುದಕ್ಕೆ ರಾಮಾಯಣ-ಮಹಾಭಾರತವೇ ಸಾಕ್ಷಿ ಎಂದು ಹೇಳುವ ಮೂಲಕ ಸಿಪಿಐ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಯಚೂರಿ ವಿವಾದ ಸೃಷ್ಟಿಸಿದ್ದಾರೆ. ಹಿಂದೂಗಳು ಶಾಂತಿ ಪ್ರಿಯರು ಆದ್ರೆ ಕೆಲ ಧರ್ಮದವರು ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಕೆಲ ಬಿಜೆಪಿ…