News

ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಬಸವ ಜಯಂತಿ ಆಚರಣೆ ಎಲ್ಲಿ?
ಬೆಂಗಳೂರು IPL ಟಿಕೆಟ್ ಸ್ಕ್ಯಾಮ್: 11 ಮಂದಿ ಬಂಧನ
Strait of Hormuz ಪ್ರದೇಶದಲ್ಲಿ ಎರಡು ಭಾರತೀಯ ಹಡಗುಗಳ ಮೇಲೆ ದಾಳಿ
ಕೆ. ಎಲ್. ರಾಹುಲ್ – (ಕಣ್ಣೂರು ಲೋಕೇಶ್ ರಾಹುಲ್) – ಕನ್ನಡದ ಹುಡುಗ ರಾಹುಲ್
ವಿಶ್ವದ ಅತಿ ಎತ್ತರದ ರಾಷ್ಟ್ರೀಯ ಉದ್ಯಾನವನಗಳಿವು.!
ಬೇಸಿಗೆ ರಜೆಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಪೋಷಕರಿಗೆ ಮಹತ್ವದ ಸೂಚನೆ
ಜನಗಣತಿ ಹೆಸರಿನಲ್ಲಿ ಮನೆಗಳಿಗೆ ಬರುವವರ ಬಗ್ಗೆ ಎಚ್ಚರಿಕೆ! – ಜನಗಣತಿ ಹೆಸರಿನಲ್ಲಿ ವಂಚನೆ
ಮುಂದಿನ 5 ದಿನಗಳಲ್ಲಿ ಕರ್ನಾಟಕದಲ್ಲಿ ಭಾರೀ ಬಿಸಿಲು
ಅಂಬೇಡ್ಕರ್ 135ನೇ ಜಯಂತಿ 2026 – ಅಂಗವಾಗಿ ನಿವೃತ್ತ ಸೈನಿಕ: ಹರೀಶ್ ಕುಮಾರ್ ಎಚ್.ಎಸ್. ಹುಂಗೇನಹಳ್ಳಿ ಗ್ರಾಮ ಅವರಿಗೆ ಭವ್ಯ ಸನ್ಮಾನ
MIಗೆ ವಾಂಖೆಡೆಯಲ್ಲಿ ಸೋಲಿನ ರುಚಿ ತೋರಿಸಿದ RCB
inspirational

ಹೆದ್ದಾರಿ ಪ್ರಯಾಣ ಮತ್ತಷ್ಟು ದುಬಾರಿ!!!

51

ಹೆದ್ದಾರಿ ಪ್ರಯಾಣ ಮತ್ತಷ್ಟು ದುಬಾರಿ – ದೇಶದೆಲ್ಲೆಡೆ ಟೋಲ್ ದರ ಹೆಚ್ಚಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ…

ಏಪ್ರಿಲ್ 1 ರಿಂದ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಹಲವು ಪ್ರಮುಖ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ಹೆಚ್ಚಿಸಿದೆ. ಈ ದರ ಏರಿಕೆಯು ಕಾರು, ಬಸ್, ಮತ್ತು ಲಘು ವಾಣಿಜ್ಯ ವಾಹನಗಳ ಮೇಲೆ ಪರಿಣಾಮ ಬೀರಲಿದ್ದು, ಪ್ರಯಾಣಿಕರ ಜೇಬಿಗೆ ಹೊರೆಯಾಗಲಿದೆ.

ಉಡುಪಿ/ಕೊಪ್ಪಳ/ ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಏಪ್ರಿಲ್ 1 ರಿಂದ ಅಂದರೆ ಇಂದಿನಿಂದ ಜಾರಿಗೆ ಬರುವಂತೆ ಪ್ರಮುಖ ಕಾರಿಡಾರ್‌ಗಳಲ್ಲಿ ಟೋಲ್ ಶುಲ್ಕವನ್ನು ಹೆಚ್ಚಿಸಿದೆ. ಈ ಪರಿಷ್ಕೃತ ಪದರಗಳು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (ಕರ್ನಾಟಕದೊಳಗೆ ಹೊಸಕೋಟೆ-ಕೆಜಿಎಫ್ ಮಾರ್ಗ), ದಾಬಸ್‌ಪೇಟೆ ಮತ್ತು ಹೊಸಕೋಟೆ ನಡುವಿನ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (ಎಸ್‌ಟಿಆರ್‌ಆರ್), ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿ, ಕನಕಪುರ ರಸ್ತೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಹೋಗುವ ಬಳ್ಳಾರಿ ರಸ್ತೆ ಮತ್ತು ಇತರ ರಾಷ್ಟ್ರೀಯ ಹೆದ್ದಾರಿಗಳಿಗೆ ಅನ್ವಯಿಸುತ್ತವೆ.

ಬೆಂಗಳೂರು : ನೂತನ ಆರ್ಥಿಕ ವರ್ಷ ಆರಂಭದಲ್ಲೇ ರಾಜ್ಯದ ವಾಹನ ಮಾಲೀಕರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಟೋಲ್‌ ಶುಲ್ಕ ಹೆಚ್ಚಳದ ಹೊರೆ ಹಾಕುತ್ತಿದೆ. ರಾಜ್ಯದ ಪ್ರಮುಖ ಟೋಲ್‌ಗಳಲ್ಲಿನ ಟೋಲ್‌ ಶುಲ್ಕದಲ್ಲಿ ಶೇ.3ರಿಂದ 5ರಷ್ಟು ಹೆಚ್ಚಳ ಮಾಡಲಾಗುತ್ತಿದ್ದು, ಈ ಕುರಿತು ಎನ್‌ಎಚ್‌ಎಐ ಇನ್ನೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸಲಿದೆ.

ಟೋಲ್ ದರ ಏರಿಕೆ ಬಿಸಿ: ಏಪ್ರಿಲ್ 1 ರಿಂದ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ದುಬಾರಿ!

NHAI ‘ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್’ ದರವನ್ನು ಪರಿಷ್ಕರಿಸಿದೆ. ಏಪ್ರಿಲ್ 1 ರಿಂದ, ವಾಣಿಜ್ಯೇತರ ವಾಹನ ಬಳಕೆದಾರರು 3,000 ರೂ. ಬದಲಿಗೆ 3,075 ರೂ. ಪಾವತಿಸಬೇಕಾಗುತ್ತದೆ. ಈ ಪಾಸ್ ಒಂದು ವರ್ಷ ಅಥವಾ 200 ಟ್ರಿಪ್‌ಗಳವರೆಗೆ ರಾಷ್ಟ್ರೀಯ ಹೆದ್ದಾರಿ ಟೋಲ್‌ಗಳಲ್ಲಿ ಮಾನ್ಯವಾಗಿರುತ್ತದೆ.

ಸಾರ್ವಜನಿಕರಿಗೆ ಹೆಚ್ಚಿನ ಟೋಲ್ ದರದಿಂದ ವಿನಾಯಿತಿ ನೀಡಲು ಮತ್ತು ಪ್ರಯಾಣವನ್ನು ಸುಗಮಗೊಳಿಸಲು ಕಳೆದ ವರ್ಷ ಆಗಸ್ಟ್ 15 ರಂದು ಪರಿಚಯಿಸಲಾದ ‘ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್’ (FASTag Annual Pass) ದರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪರಿಷ್ಕರಿಸಿದೆ. ಮಾರ್ಚ್ 12 ರಂದು ಹೊರಡಿಸಲಾದ ಆದೇಶದ ಪ್ರಕಾರ, ಮುಂಬರುವ 2026-27ನೇ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ವಾರ್ಷಿಕ ಪಾಸ್ ದರವನ್ನು ಹೆಚ್ಚಿಸಲಾಗಿದೆ. ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ, ವಾಣಿಜ್ಯೇತರ ವಾಹನ ಬಳಕೆದಾರರು ಈಗಿನ 3,000 ರೂ. ಬದಲಿಗೆ 3,075 ರೂ. ಪಾವತಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ನಿರ್ಧಾರ ಮತ್ತು ಸಂಗ್ರಹ) (ತಿದ್ದುಪಡಿ) ನಿಯಮಗಳು, 2025ರ ಪ್ರಕಾರ, ಪ್ರತಿ ವರ್ಷ ವಾರ್ಷಿಕ ಪಾಸ್ ಮೊತ್ತವನ್ನು ಪರಿಷ್ಕರಿಸುವುದು ಕಡ್ಡಾಯವಾಗಿದೆ.

About the author / 

Shashikumar H M

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಗ್ಯಾಜೆಟ್

    ಜಿಯೋ ಗ್ರಾಹಕರೇ ಎಚ್ಚರ..!ಇನ್ಮೇಲೆ ಈ ಆಫರ್ ಸಿಗಲ್ಲ!ಯಾಮಾರಿದ್ರೆ ನಿಮ್ಮ ಜೋಬಿಗೆ ಬೀಳುತ್ತೆ ಕತ್ತರಿ..!

    ಸದ್ಯ ಭಾರತದಲ್ಲಿ ಅನ್ ಲಿಮಿಟೆಡ್ ಕಾಲಿಂಗ್ ಮತ್ತು ಅನ್ ಲಿಮಿಟೆಡ್ ಡಾಟಾ ಆಫರ್ ನೀಡವ ಮೂಲಕ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿತ್ತು ರಿಲಯನ್ಸ್ ಜಿಯೋ ಸಂಸ್ಥೆ. ತನ್ನ ಜನಪ್ರಿಯ ಯೋಜನೆಯಾದ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಗೆ ಬ್ರೇಕ್ ಹಾಕಿ, ಇನ್ಮೇಲೆ ಜಿಯೋ ಫ್ರೀ ವಾಯ್ಸ್ ಕಾಲ್ ಅನ್ನು

  • ಸೌಂದರ್ಯ

    ಮೊಡವೆಗಳಿಂದ ಬೇಜಾರಾಗಿದ್ರೆ ಇಲ್ಲಿದೆ ಸಿಂಪಲ್ ಮನೆಮದ್ದು……

    ನಮ್ಮಲ್ಲಿ ಅನೇಕರಿಗೆ ಆಹಾರ ಕ್ರಮಗಳಿಂದಾಗಿ, ಮೊಡವೆಗಳು ಬಂದು, ಅವು ನಮ್ಮ ಚರ್ಮದ ಮೇಲೆ ಕಲೆಯಾಗಿ ಕಾಡುತ್ತದೆ. ಇದನ್ನು ಹೋಗಲಾಡಿಸಲು ಅನೇಕ ಕಸರತ್ತುಗಳನ್ನು ಮಾಡುತ್ತಾರೆ.

  • ಆರೋಗ್ಯ

    ಮಧುಮೇಹಿಗಳಿಗೆ ಗುಡ್ ನ್ಯೂಸ್, ಶುಗರ್ ಕಂಟ್ರೋಲ್ ಮಾಡೊದರ ಜೊತೆಗೆ ಶಾಶ್ವತ ಪರಿಹಾರ ಶುಗರ್ ಇದ್ದವರು ಇಲ್ಲದವರು ತಪ್ಪದೆ ನೋಡಿ.

    ಸೀಬೆಕಾಯಿ ಎಲೆಗಳಿಂದ ಆರೋಗ್ಯದಲ್ಲಿ ಬದಲಾವಣೆ ಸಾಧ್ಯ. ಸೀಬೆಕಾಯಿ ಅಥವಾ ಪೇರಳೆ ಹಣ್ಣು ಹೆಚ್ಚಿನವರಿಗೆ ಇಷ್ಟ. ಈ ಹಣ್ಣು ಎಲ್ಲಾ ಕಾಲದಲ್ಲೂ ಸಾಮಾನ್ಯವಾಗಿ ಬೆಳೆಯುತ್ತದೆ. ಇದು ಆರೋಗ್ಯಕ್ಕೂ ಸಹ ಉತ್ತಮವಾದ ಹಣ್ಣು. ಕೇವಲ ಹಣ್ಣು ಮಾತ್ರ ಅಲ್ಲ, ಸೀಬೆಕಾಯಿ ಎಲೆಯಿಂದ ಸಹ ಅರೋಗ್ಯ ಕಾಪಾಡಲು ಸಾಧ್ಯ. ಮಧುಮೇಹಿಗಳಿಗೆ ಗುಡ್ ನ್ಯೂಸ್,ಶುಗರ್ ಕಂಟ್ರೋಲ್ ಮಾಡೊದರ ಜೊತೆಗೆ ಶಾಶ್ವತ ಪರಿಹಾರ ಶುಗರ್ ಇದ್ದವರು ಇಲ್ಲದವರು ತಪ್ಪದೆ ನೋಡಿ.ಮಧುಮೇಹ ಕಾಯಿಲೆ ಅಥವಾ ಸಕ್ಕರೆ ಕಾಯಿಲೆ ಇರುವವರಿಗೆ ಮನೆಯಲ್ಲಿ ಔಷಧಿ ತಯಾರಿ ಮಾಡುವುದನ್ನು ನಿಮಗೆ…

  • inspirational, ಆರೋಗ್ಯ

    ಗೆಣಸು ನಮ್ಮ ಶರೀರದ ಆಂತರಿಕ ಅಂಗಾಂಗಗಳಿಗೆ ಎಷ್ಟು ಉಪಯೋಗಕಾರಿ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಬಿಟಾ-ಕೆರೋಟಿನ್, ವಿಟಾಮಿನ್ ಇ,ಸಿ ಮತ್ತು ಬಿ-6, ಪೊಟ್ಯಾಷಿಯಂ ಮತ್ತು ಕಬ್ಬಿಣವನ್ನು ಪುಷ್ಕಳವಾಗಿ ಹೊಂದಿರುವ ಗೆಣಸು ಬಟಾಟೆಗೆ ಹೋಲಿಸಿದರೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್‌ನ್ನು ಹೊಂದಿದೆ. ಹೀಗಾಗಿ ಅದು ಮಧುಮೇಹಿಗಳ ಸ್ನೇಹಿತನಾಗಿದೆ. ನಾವು ಸೇವಿಸುವ ಆಹಾರದಲ್ಲಿನ ಕಾರ್ಬೊಹೈಡ್ರೇಟ್‌ಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಬೀರುವ ಪ್ರಮಾಣವನ್ನು ತಿಳಿಯಲು ಗ್ಲೈಸೆಮಿಕ್ ಇಂಡೆಕ್ಸ್ ಮಾನದಂಡವಾಗಿದೆ.

  • ಜ್ಯೋತಿಷ್ಯ

    ವೆಂಕಟೇಶ್ವರ ಸ್ವಾಮಿಯನ್ನು ನೆನೆಯುತ್ತಾ ನಿಮ್ಮ ರಾಶಿಯ ಶುಭಫಲಗಳನ್ನು ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(31 ಮಾರ್ಚ್, 2019) ಮಾನಸಿಕ ಒತ್ತಡ ತರುವ ಸುಪ್ತ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನೀವು ತ್ವರಿತ ಹಣ ಪಡೆಯುವ…

  • ಚುನಾವಣೆ

    ಮೇ 3ನೇ ವಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ..?

    ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಮೇ ತಿಂಗಳ 3ನೇ ವಾರದಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ದತೆ ನಡೆಸಿದ್ದು, ಈ ಬಾರಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣೆಗೆ ಅಗತ್ಯವಿರುವ ಸಿದ್ದತೆಗಳು ಬಹುತೇಕ ಪೂರ್ಣ ಗೊಳಿಸಿರುವ ಆಯೋಗ ಏಪ್ರಿಲ್ ತಿಂಗಳ 2ನೇ ವಾರದಲ್ಲಿ ದಿನಾಂಕವನ್ನು ಘೋಷಣೆ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮತದಾರರ ಅಂತಿಮ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಕಾರಿಗಳು ಪೂರ್ಣಗೊಳಿಸಿರುವುದು, ಇವಿಎಂ ಯಂತ್ರ ಉಪಯೋಗಿಸುವ ಕುರಿತಂತೆ ತರಬೇತಿ, ಭದ್ರತೆ ಸೇರಿದಂತೆ ಚುನಾವಣೆಗೆ ಬೇಕಿರುವ ಪ್ರಕ್ರಿಯೆಗಳು…