ಉಪಯುಕ್ತ ಮಾಹಿತಿ

ಹಲಸಿನ ಹಣ್ಣಿನ ಈ ಪ್ರಯೋಜನಗಳನ್ನು ಕೇಳಿದ್ರೆ, ನೀವು ತಿನ್ನದೇ ಸುಮ್ಮನೆ ಇರಲ್ಲ…

962

ಹಲಸಿನ ಹಣ್ಣಿನ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಆದ್ರೆ ಇದು ವರ್ಷ ಪೂರ್ತಿ ನಮ್ಗೆ ಸಿಗೋದಿಲ್ಲ. ಕೆಲವೊಂದು ಸೀಸನ್’ಗಳಲ್ಲಿ ಮಾತ್ರ ಸಿಗುತ್ತೆ. ಹಲಸಿನ ಹಣ್ಣಿನ ವಿಚಾರದಲ್ಲಿ, ಆರೋಗ್ಯದ ಕಡೆ ಬಂದ್ರೆ ಕೆಲವೊಂದು ಅಭಿಪ್ರಾಯಗಳು ವಿಭಿನ್ನವಾಗಿವೆ. ಎನಂದ್ರೆ ಹಲಸಿನ ಹಣ್ಣು ತಿಂದ್ರೆ ಖಾಯಿಲೆ ಬರುತ್ತೆ, ಆರೋಗ್ಯ ಕೆಡುತ್ತೆ ಅನ್ನೋದು ಇದೆ.

ಆದರೆ ಈ ಹಣ್ಣು ಕಾಯಿಲೆ ತರುವುದಿಲ್ಲ, ಕಾಯಿಲೆ ಹೋಗಲಾಡಿಸಲು ಸಹಕಾರಿಯಾಗಿದೆ.

ಹಲಸಿನ ಹಣ್ಣು ತಿಂದ್ರೆ ತಿಂದರೆ ಏನೆಲ್ಲಾ ಆರೋಗ್ಯಕಾರಿ ಲಾಭಗಳಿವೆ ಗೊತ್ತಾ? ತಿಳಿಯಲು ಮುಂದೆ ಓದಿ…

ಹಲಸಿನ ಹಣ್ಣು ತಿಂದ್ರೆ ತಿಂದರೆ ಜ್ವರ ಬರುವುದಿಲ್ಲ, ಆದರೆ ಜ್ವರ ಇದ್ದಾಗ ಈ ಹಣ್ಣುಗಳನ್ನು ತಿನ್ನಲು ಹೋಗಬೇಡಿ.

ಹಲಸಿನ ಹಣ್ಣಿನ ಆರೋಗ್ಯಕರ ಗುಣಗಳು:

  • ರೋಗನಿರೋದಕ ಶಕ್ತಿ ಹೆಚ್ಚು ಮಾಡುತ್ತದೆ: 

 

ಹಲಸಿನ ಹಣ್ಣು ತಿಂದರೆ ಕಾಯಿಲೆ ಬರುತ್ತದೆ ಎಂದು  ತಿನ್ನಲು ಭಯಪಡುವಾಗ ಇದನ್ನು ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಅಂದರೆ ಆಶ್ಚರ್ಯವಾಗುವುದು ಸಹಜ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಉತ್ತಮ ಪೋಷಕಾಂಶಗಳಿದ್ದು ಶೀತ, ಸೋಂಕು ಇವುಗಳನ್ನು ತಪ್ಪಿಸಲು ಸಹಕಾರಿಯಾಗಿದೆ. ಇದರಲ್ಲಿ antioxidant ಪ್ರಮಾಣ ಅಧಿಕವಾಗಿದೆ.

  • ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ:

ದೇಹದಲ್ಲಿ ಖನಿಜಾಂಶಗಳ ಕೊರತೆ ಉಂಟಾದರೆ ದೇಹದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗುತ್ತದೆ. ಹಲಸಿನ ಹಣ್ಣಿನಲ್ಲಿ ಖನಿಜಾಂಶಗಳು ಅಧಿಕವಾಗಿ ಇರುವುದರಿಂದ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.

  • ಮೂಳೆ ಸವೆತವನ್ನು ತಡೆಗಟ್ಟುತ್ತದೆ:

ಈ ಹಣ್ಣಿನಲ್ಲಿ ಅಧಿಕ ಮ್ಯಾಗ್ನಿಷಿಯಂ ಮತ್ತು ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ, ಪೊಟಾಷ್ಯಿಯಂ ಅಧಿಕವಿರುವ ಆಹಾರ ತಿಂದರೆ ಮೂಳೆಗಳು ಗಟ್ಟಿಯಾಗುವುದು.

  • ಥೈರಾಯ್ಡ್ ಗ್ರಂಥಿಯನ್ನು ಆರೋಗ್ಯಕರವಾಗಿ ಇಡುತ್ತದೆ:

ಹಲಸಿನ ಹಣ್ಣಿನಲ್ಲಿರುವ ಖನಿಜಂಶಗಳು (micromineral) ಥೈರಾಯ್ಡ್ ಗ್ರಂಥಿಯ ಆರೋಗ್ಯವನ್ನು ಕಾಪಾಡುತ್ತದೆ. ದೇಹದಲ್ಲಿ ಹಾರ್ಮೋನ್ ಗಳ ಉತ್ಪತ್ತಿಯನ್ನು ಸರಿ ಪ್ರಮಾಣದಲ್ಲಿ ಇಡಲು ಥೈರಾಯ್ಡ್ ಗ್ರಂಥಿ ಮುಖ್ಯ ಪಾತ್ರವಹಿಸುತ್ತದೆ.

  • ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ:

ಒಂದು ಹಲಸಿನ ಹಣ್ಣಿನಲ್ಲಿ ಬಾಳೆಹಣ್ಣಿನಲ್ಲಿರುವಷ್ಟು ಪೊಟಾಷ್ಯಿಯಂ ಅಂಶವಿರುತ್ತದೆ. ಪೊಟಾಷ್ಯಿಯಂ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ.

  • ಜೀರ್ಣಶಕ್ತಿ:

ಇದರಲ್ಲಿ ನಾರಿನಂಶವಿರುವುದರಿಂದ ಮಲಬದ್ಧತೆ ಸಮಸ್ಯೆ ಇರುವವರು ಇದನ್ನು ತಿನ್ನುವುದು ಒಳ್ಳೆಯದು.

  • ಇರುಳು ಕುರುಡುತನ ನಿವಾರಣೆಗೆ ಸಹಕಾರಿಯಾಗಿದೆ:

ಇದರಲ್ಲಿ ಕ್ಯಾರೆಟ್ ನಲ್ಲಿರುವ ಕಾಲು ಭಾಗದಷ್ಟು ವಿಟಮಿನ್ ಎ ಅಂಶವಿರುವುದರಿಂದ ಹಣ್ಣಿನ ದೃಷ್ಟಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ವಿಟಮಿನ್ ಎ ಕೊರತೆ ಉಂಟಾದರೆ ಇರುಳು ಕುರುಡುತನ ಉಂಟಾಗುವುದು.

  • ಹೃದಯದ ಸ್ವಾಸ್ಥ್ಯ ಹೆಚ್ಚಿಸುತ್ತದೆ: 

ಇದರಲ್ಲಿ ವಿಟಮಿನ್ ಬಿ6 ಅಂಶವಿರುವುದರಿಂದ ರಕ್ತದಲ್ಲಿರುವ homocystein ಪ್ರಮಾಣ ಕಡಿಮೆ ಮಾಡಿ ಹೃದಯದ ಸ್ವಾಸ್ಥ್ಯ ಹೆಚ್ಚಿಸಲು ಸಹಕಾರಿಯಾಗಿದೆ.

  • ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ:

ಇದರಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳು ದೇಹದಲ್ಲಿ ರಕ್ತ ಸರಾಗವಾಗಿ ಹರಿಯಲು ಸಹಕಾರಿಯಾಗಿದೆ. ಮೂಳೆಗಳನ್ನು ಬಲಪಡಿಸಿ ಶರೀರದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯನ್ನು ತಡೆಗಟ್ಟುತ್ತದೆ.

  • ರಕ್ತ ಹೀನತೆಯನ್ನು ತಡೆಗಟ್ಟುತ್ತದೆ:

ಇದರಲ್ಲಿ ಕಬ್ಬಿಣದಂಶ ಕೂಡ ಇರುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಗೆ ಇದನ್ನು ತಿನ್ನುವುದು ಒಳ್ಳೆಯದು.

ಮೂಲ: ಸಂಗ್ರಹ ಮಾಹಿತಿ

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ರೋಗಗಳಿಗೆ ಎಳನೀರು ರಾಮಬಾಣ. ಈ ಅರೋಗ್ಯ ಮಾಹಿತಿ ನೋಡಿ!

    ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪ ಹೆಚ್ಚದಾಗ ಜನರು ತಂಪುಪಾನೀಯಗಳ ಮೊರೆ ಹೋಗುವುದು ಸಹಜ. ಆದರೆ ಆರೋಗ್ಯದ ದೃಷ್ಟಿಯಿಂದ ಎಳನೀರಿನ ಸೇವನೆ ಅತಿ ಉತ್ತಮ ಎಂದು ವೈಜ್ಞಾನಿಕವಾಗಿಯೇ ತಿಳಿದಿರುವ ವಿಷಯ.  ಎಳನೀರು ನೂರು ರೋಗಗಳಿಗೆ ಒಂದೇ ಔಷಧಿ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಎಳನೀರಿನಲ್ಲಿ ಅಧಿಕ ವಿಟಮಿನ್ ಹಾಗೂ ಖನಿಜವನ್ನು ಒಳಗೊಂಡಿದೆ. ಇದರ ಸೇವನೆಯಿಂದ ದೇಹಕ್ಕೆ ಆರೋಗ್ಯ ನೀಡುವುದಲ್ಲದೇ,ಫಿಟ್ನೆಸ್ ಗೂ ಇದು ಉಪಯೋಗಕರವಾಗಿದೆ. ಗರ್ಭಿಣಿ ಮಹಿಳೆ ಇದನ್ನು ನಿಯಮಿತವಾಗಿ ಸೇವಿಸಿದರೆ ಸುಂದರ ಹಾಗೂ ಸ್ವಾಸ್ಥ್ಯ ಮಗು ಹುಟ್ಟಲಿದೆ. ಈ…

  • ಗ್ಯಾಜೆಟ್

    ಈ ಅಪಾಯಕಾರಿ ಆಪ್ಸ್ ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿವೆಯೇ..? ಕೂಡಲೆ ತೆಗೆದುಬಿಡಿ..!

    ಆಂಡ್ರಾಯ್ಡ್ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್‌ಫೋನ್ ಯಾವುದೇ ಆಗಿರಲಿ ಅದರಲ್ಲಿ ಗೂಗಲ್ ಪ್ಲೇಸ್ಟೋರ್ ಇದ್ದೇ ಇರುತ್ತದೆ. ಅಲ್ಲಿಂದಲೇ ಬಳಕೆದಾರರೆಲ್ಲ ಆಪ್ಸ್, ಗೇಮ್ಸ್ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಇದು ಗೂಗಲ್ ಅಧಿಕೃತ ಸ್ಟೋರ್ ಆದ ಕಾರಣ ಅದರಲ್ಲಿರುವ ಆಪ್ಸ್ ಎಲ್ಲವೂ ಸುರಕ್ಷಿತವಾದವು ಎಂದೇ ಭಾವಿಸುತ್ತಾರೆ. ಆದರೆ ಅದು ತಪ್ಪು. ಯಾಕೆಂದರೆ ಪ್ಲೇಸ್ಟೋರ್‌ನಲ್ಲೂ ಹಲವು ಮಾಲ್‌ವೇರ್, ವೈರಸ್ ಇರುವ ಆಪ್ಸ್ ಇವೆಯಂತೆ. ಒಂದು ಪ್ರಮುಖ ಐಟಿ ಸೆಕ್ಯುರಿಟಿ ಕಂಪೆನಿ ಈ ವಿಷಯವನ್ನು ಬಯಲುಮಾಡಿದೆ. ಗೂಗಲ್ ಈಗಾಗಲೆ ಬಹಳಷ್ಟು ಮಾಲ್‌ವೇರ್ ಇರುವ ಆಪ್ಸನ್ನು ಪ್ಲೇಸ್ಟೋರ್‌ನಿಂದ…

  • ಉಪಯುಕ್ತ ಮಾಹಿತಿ

    ಮತದಾರ ತಾನು ಚಲಾಯಿಸಿದ ಮತ ಸರಿಯಾಗಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳುವುದು ಹೇಗೆ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

    ಮತಗಟ್ಟೆಗೆ ಹೋಗುವ ನಾವು, ನಮಗೆ ಇಷ್ಟವಾದ ಪಕ್ಷಕ್ಕೋ, ಅಭ್ಯರ್ಥಿಗೋ ವೋಟ್ ಹಾಕಿ ಬಂದುಬಿಡ್ತಿವಿ.ಆದರೆ ನಾವು ಹಾಕಿದ ವೋಟ್, ನಾವು ಚುನಾಯಿಸಿದ ಅಭ್ಯರ್ಥಿಗೆ ಅಥವಾ ಪಕ್ಷಕ್ಕೆ ಬಿದ್ದಿದೆಯೇ ಎಂಬುವ ಗ್ಯಾರಂಟಿ ಯಾರು ಕೊಡುತ್ತಾರೆ..? ಹೌದು, ಇದು ಸಹಜವಾಗಿ ಎಲ್ಲರಲ್ಲೂ ಮೂಡುವ ಪ್ರಶ್ನೆ. ಹಾಗಾದ್ರೆ ನಾವು ಚುನಾಯಿಸಿದ ಅಭ್ಯರ್ಥಿ ಅಥವಾ ಪಕ್ಷಕ್ಕೆ ನಮ್ಮ ವೋಟ್ ಬಿದ್ದಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ಹೇಗೆ..? ವಿವಿಪ್ಯಾಟ್ ಅಂದ್ರೆ ಏನು..? ವಿವಿಪ್ಯಾಟ್ ಅಂದರೆ  “ವೋಟರ್ ವೆರಿಫಯಬಲ್ ಆಡಿಟ್ ಟ್ರಯಲ್” ಎಂದು. ಇದನ್ನು ಇಲೆಕ್ಟ್ರಾನಿಕ್ ವೋಟಿಂಗ್ ಮಷಿನ್’ಗೆ ಜೋಡಿಸಲಾಗಿರುತ್ತದೆ.ಇದರಿಂದ…

  • ಸುದ್ದಿ

    ನೀವು ಎಂದಾದರೂ ಗೂಗಲ್ ನೀಡಿರುವ ಚಾಲೆಂಜ್ ಆಡಿದ್ದಿರಾ;ಇಲ್ಲದಿದ್ದರೆ ಒಮ್ಮೆ ಆಡಿ ನೋಡಿ ಅದರಲ್ಲಿ ಸಿಗುತ್ತೆ ಬರೋಬ್ಬರಿ 10.76 ಕೋಟಿ,!

    ಈಗಿನ ಕಾಲದಲ್ಲಿ ಗೂಗಲ್ ಬಳಸದೆ ಇರುವ ವ್ಯಕ್ತಿಯನ್ನು ಕಂಡುಹಿಡಿಯಲು ಸಾಧ್ಯವಾಗದು  ಏಕೆಂದರೆ ಪ್ರತಿಯೊಬ್ಬರೂ ತಮ್ಮದೇ ಆದ ಕೆಲಸ ಕಾರ್ಯಗಳನ್ನು ಮಾಡುವುದಕ್ಕೆ ಗೂಗಲ್ ಸಹಾಯ ಪಡೆಯುತ್ತಾರೆ.ಆಗೆಯೇ ಗೂಗಲ್ ನಮ್ಮ ನಿಮ್ಮೆಲ್ಲರ ಸಮಸ್ಯೆಗೆ ಪರಿಹಾರ ನೀಡುವುದು ಮಾತ್ರವಲ್ಲದೆ ಹಣವನ್ನು ಸಂಪಾದಿಸುವ ದಾರಿಯು ತೋರಿಸುತ್ತದೆ. ಐಟಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತರಾಗಿದ್ದರೆ ಸರ್ಚ್ ಎಂಜಿನ್ ದೈತ್ಯ ಗೂಗಲ್ ನಿಮಗೊಂದು ಬಿಗ್ ಆಫರ್ ನೀಡಿದೆ. ಗೂಗಲ್ ನೀಡಿರುವ ಚಾಲೆಂಜ್ ಒಂದರಲ್ಲಿ ನೀವು ಗೆದ್ದರೆ ಬರೋಬ್ಬರಿ 10.76 ಕೋಟಿ ಬಹುಮಾನವನ್ನು ನಿಮ್ಮ ತೆಕ್ಕೆಗೆ ಹಾಕಿಕೊಳ್ಳಬಹುದಾಗಿದೆ.!ಹೌದು, ತನ್ನ…

  • ಸುದ್ದಿ

    18.70 ಲಕ್ಷ ರೈತರ 8759 ಕೋಟಿ ಸಾಲ ಮನ್ನಾ…!

    ಬೆಂಗಳೂರು: ಸಾಲ ಮನ್ನಾ ಯೋಜನೆಯಲ್ಲಿ ಈವರೆಗೆ ರಾಜ್ಯದ 18.70 ಲಕ್ಷ ರೈತ ಕುಟುಂಬಗಳ 8759 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.ರಾಷ್ಟ್ರೀಯ ಬ್ಯಾಂಕ್‌ಗಳು ಸಾಲ ಮನ್ನಾ ವರ್ಗೀಕರಣ ಮಾಡುವಾಗ ಯಾದಗಿರಿಯಲ್ಲಿ ಕೆಲಗೊಂದಲ ಮೂಡಿದ್ದು ಈ ಕುರಿತು ಶುಕ್ರವಾರ ಜೂ.14ರಂದು ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಭೆ ಕರೆದಿದ್ದೇನೆ ಎಂದು ಹೇಳಿದ್ದಾರೆ. ಸಾಲ ಮನ್ನಾ ಯೋಜನೆಗೆ ಮೈತ್ರಿ ಸರ್ಕಾರ ಬದ್ಧವಾಗಿದ್ದು ನಿಗದಿತ ಅವಧಿಯೊಳಗೆ ಸಾಲಮನ್ನಾ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯಲಿದೆ ಎಂದು ತಿಳಿಸಿದ್ದಾರೆ.ವಾಣಿಜ್ಯ ಬ್ಯಾಂಕ್‌ಗಳಲ್ಲಿ 7.49…

  • ಸುದ್ದಿ

    ನಿರ್ದೇಶಕ ಮಿಲನ ಪ್ರಕಾಶ್‌ ಮತ್ತೊಮ್ಮೆ ದರ್ಶನ್‌ ಜತೆ ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ‘ತಾರಕ್‌’ ಚಿತ್ರದ ನಂತರ ಈ ಜೋಡಿ ಜತೆಯಾಗುತ್ತಿದೆ…!

    ಈಗಾಗಲೇ ಮಿಲನ ಪ್ರಕಾಶ್‌ ಅವರು ಕತೆ ಓಕೆ ಮಾಡಿಕೊಂಡಿದ್ದು, ಆ ಬಗ್ಗ ದರ್ಶನ್‌ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ಕೂಡ ಮಾಡಿದ್ದಾರೆ. ಸದ್ಯಕ್ಕೆ ದರ್ಶನ್‌ ಅವರು ‘ಒಡೆಯ’ ಚಿತ್ರದ ಬಾಕಿ ದೃಶ್ಯಗಳು ಹಾಗೂ ‘ರಾಬರ್ಟ್‌’ ಚಿತ್ರದ ಶೂಟಿಂಗ್‌ನಲ್ಲಿದ್ದಾರೆ. ಕುರುಕ್ಷೇತ್ರ ಅಬ್ಬರವೇ ಕಮ್ಮಿಯಾಗಿಲ್ಲ ಆಗಲೇ  ‘ಒಡೆಯಾ’ ರಿಲೀಸ್ ಡೇಟ್ ಫಿಕ್ಸ್,ಇದರ ನಡುವೆ ‘ಗಂಡುಗಲಿ ಮದಕರಿನಾಯಕ’ ಸಿನಿಮಾ. ಈ ಮೂರೂ ಚಿತ್ರಗಳ ನಂತರ ಪ್ರಕಾಶ್‌ ಅವರ ಸಿನಿಮಾ ಸೆಟ್ಟೇರುತ್ತಾ ಅಥವಾ ಇವುಗಳ ನಡುವೆಯೇ ಇವರ ಎರಡನೇ ಸಿನಿಮಾ ಶುರುವಾಗುತ್ತದ ಎಂಬುದು…