ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನವದೆಹಲಿ, ಕೊಡಗುಜಿಲ್ಲೆಯಲ್ಲಿ ವರ್ಗಭೂಮಿ ಹೊಂದಿರುವವರಿಗೆ ಲಭ್ಯವಾಗುವಬಾಣೆ ಜಮೀನು ಹಂಚಿಕೊಳ್ಳುವ ಅಧಿಕಾರವನ್ನುಸುಪ್ರೀಂ ಕೋರ್ಟ್ ನೀಡಿದೆ. ಈ ಮೂಲಕ ಬಾಣೆ ಜಮೀನು ಕೂಡ ಸೀಮಿತ ಆಸ್ತಿ ಹಕ್ಕಿನ ವ್ಯಾಪ್ತಿಯನ್ನು ಹೊಂದಿದೆಎಂಬ ವಾದಕ್ಕೆ ಸುಪ್ರೀಂನ ಮುದ್ರೆ ಬಿದ್ದಂತಾಗಿದೆ.
ಕೊಡಗಿನ ಬಾಣೆ ಭೂಮಿಗೆ ಸಮಾನಂತರವಾಗಿ ವ್ಯಾಖ್ಯಾನಿಸಲಾಗುವ ಕುಮ್ಕಿ, ಕಾಣೆ, ಬೆಟ್ಟಭೂಮಿ, ಹಾದಿ ಭೂಮಿ, ಕಾನ್ ಮತ್ತು ಸೊಪ್ಪಿನ ಬೆಟ್ಟ, ಜಮ್ಮಾ ಮತ್ತು ಮೊಟಸ್ಥಳಗಳನ್ನು ಹೊಂದಿರುವ ರಾಜ್ಯದ ಉದ್ದಗಲದಲ್ಲಿನ ಲಕ್ಷಾಂತರ ರೈತರಿಗೆ ಸುಪ್ರೀಂಕೋರ್ಟ್‌ನ ಈ ಆದೇಶ ತುಸು ನೆಮ್ಮದಿಯನ್ನು ನೀಡಿದೆ.
ಕೊಡಗಿನ ಕೋಟಿಯಂಗದ ಬಿ. ಮೋಟಯ್ಯ ವರ್ಸಸ್ ಮಾಚಿಮಾಡ ಬೆಳ್ಳಿಯಪ್ಪ ಮತ್ತಿತರರು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಕದ ತಟ್ಟಿದ್ದರು. ನ್ಯಾಯಮೂರ್ತಿ ನವೀನ್ ಸಿನ್ಹಾ ಮತ್ತು ನ್ಯಾ. ಇಂದಿರಾ ಬ್ಯಾನರ್ಜಿ ಅವರಿದ್ದ ದ್ವಿಸದಸ್ಯ ನ್ಯಾಯಪೀಠವು ಬಾಣೆ ಜಮೀನಿನ ಹಕ್ಕನ್ನು ಗುರುತಿಸಿ ಅದನ್ನು ಹಂಚಿಕೊಳ್ಳುವ ಅಧಿಕಾರವನ್ನು ಕಲ್ಪಿಸಿ ಆ.28ರಂದು ಆದೇಶ ನೀಡಿದೆ. ಇದು ಕರ್ನಾಟಕ ಭೂ ಕಂದಾಯ ಕಾಯ್ದೆ- 1964ಕ್ಕೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ತೀರ್ಪು ಎಂದು ವಿಶ್ಲೇಷಿಸಲಾಗಿದೆ.
ಬಳ್ಳಿ ಮಂಡೂರು ಗ್ರಾಮದಲ್ಲಿ ವರ್ಗ ಜಮೀನಿಗೆ ತಾಕಿಕೊಂಡಿದ್ದ ಬಾಣೆ ಜಾಗಕ್ಕೆ ಸಂಬಂಧಿಸಿ ತಕರಾರಿನ ಬಗ್ಗೆ ವಿಚಾರಣೆ ನಡೆಸಿತು. ಸುಪ್ರೀಂ ಕೋರ್ಟ್, ವರ್ಗ ಭೂಮಿ ಹೊಂದಿರುವವರಿಗೆ ಮಾತ್ರ ಅಲ್ಲಿನ ಬಾಣೆ ಜಮೀನಿನ ಮೇಲೆ ಅಧಿಕಾರವಿದೆ ಎಂಬ ಹೈಕೋರ್ಟ್ ಮತ್ತು ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯುವುದರೊಂದಿಗೆ ಬಾಣೆ ಜಮೀನನ್ನು ಹಂಚುವ ಅಧಿಕಾರ ವರ್ಗ ಭೂಮಿಯ ಮಾಲೀಕನಿಗೆ ಸಿಕ್ಕಂತಾಗಿದೆ.
ಬಾಣೆ, ಕುಮ್ಕಿ, ಜಮ್ಮಾ ಮುಂತಾದವು ವರ್ಗ ಜಮೀನಿಗೆ ತಾಕಿಕೊಂಡಿದ್ದು ಈ ಜಮೀನಿನ ಮೇಲೆ ಸರ್ಕಾರಕ್ಕೆ ಅಧಿಕಾರವಿದೆ. ಕೃಷಿಕರಿಗೆ ತಮ್ಮ ಕೃಷಿ ಚಟುವಟಿಕೆಗೆ ಪೂರಕವಾದ ಮತ್ತು ಮನೆ ಬಳಕೆಗೆ ಬೇಕಾದ ಸೊಪ್ಪು ಸಂಗ್ರಹ, ಕಟ್ಟಿಗೆ, ಮರಮಟ್ಟುಗಳನ್ನು ಮಾತ್ರ ಈ ಜಮೀನಿನಿಂದ ಪಡೆಯಬಹುದೇ ಹೊರತು ಅಲ್ಲಿ ಕೃಷಿ ಮಾಡುವಂತಿಲ್ಲ ಎಂದು ಭೂ ಕಂದಾಯ ಕಾಯ್ದೆ ಹೇಳಿದೆ. ಆದರೆ ಕೃಷಿಕರು ಬಾಣೆ ಅಥವಾ ಕುಮ್ಕಿ ಜಮೀನಿನ ಮೇಲೆ ತಮಗೆ ಪೂರ್ಣ ಅಧಿಕಾರ ನೀಡಬೇಕು ಎಂದು ಅನೇಕ ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ಬಾಣೆ ಭೂಮಿಯನ್ನು ಹಂಚುವ ಅಧಿಕಾರ ನೀಡಿರುವುದು ಬಾಣೆ ಜಮೀನಿನ ಮೇಲೆ ರೈತರ ಸೀಮಿತ ಅಧಿಕಾರವನ್ನು ನ್ಯಾಯಾಲಯ ಮಾನ್ಯ ಮಾಡಿದಂತೆ ಆಗಿದೆ ಎಂದು ಹೇಳಲಾಗುತ್ತಿದೆ.
ಕಾನೂನಾತ್ಮಕವಾಗಿ ಸುಪ್ರೀಂ ಕೋರ್ಟ್‌ನ ಈ ನಡೆ ಬಾಣೆ ಭೂಮಿಯನ್ನು ಆಸ್ತಿ ಹಕ್ಕಿನ ವ್ಯಾಪ್ತಿಯಲ್ಲಿ ಗುರುತಿಸಿದಂತಾಗಿದೆ. ಭೂ ಸ್ವಾಧೀನ ಕಾಯ್ದೆ ವರ್ಗ ಜಮೀನಿಗೆ ಮಾತ್ರ ಅನ್ವಯವಾಗುತ್ತದೆ. ಒಂದು ವೇಳೆ ಬಾಣೆ ಅಥವಾ ಕುಮ್ಕಿ ಭೂಮಿಯು ಆಸ್ತಿ ಹಕ್ಕಿನ ಒಳಗೆ ಅಧಿಕೃತವಾಗಿ ಸೇರಿದರೆ ಭೂ ಸ್ವಾಧೀನ ಕಾಯ್ದೆ ಅನ್ವಯಿಸುವ ಸಂದರ್ಭದಲ್ಲಿ ಸರ್ಕಾರವು ಕಾಯ್ದೆಯನ್ವಯ ಪರಿಹಾರವನ್ನು ನೀಡಿಯೇ ಜಮೀನನ್ನು ವಶಕ್ಕೆ ಪಡೆದುಕೊಳ್ಳಬೇಕಾಗುತ್ತದೆ ಎಂಬ ವಾದಕ್ಕೆ ಪುಷ್ಠಿ ಸಿಕ್ಕಂತಾಗಿದೆ. ಇದೇ ವೇಳೆ, ಬಾಣೆ ಜಮೀನಿನ ವಿವಾದಗಳು ಸಿವಿಲ್ ನ್ಯಾಯಾಲಯದ ವಿಚಾರಣಾ ವ್ಯಾಪ್ತಿಗೆ ಬರುತ್ತದೆ ಎಂಬ ವಾದವನ್ನೂ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಬಾಣೆ ಭೂಮಿಗೆ ರಾಜ್ಯದ ಎಲ್ಲೆಲ್ಲಿ ಏನು ಹೇಳ್ತಾರೆ? ಖಾಸಗಿ ಜಮೀನಿನ ಪಕ್ಕವಿರುವ ಜಮೀನಿಗೆ ಕರಾವಳಿ ಜಿಲ್ಲೆಗಳಲ್ಲಿ ಕುಮ್ಕಿ, ಬಾಣೆ, ಕಾನ್, ಉತ್ತರ ಕನ್ನಡದಲ್ಲಿ ಬೆಟ್ಟ, ಹಾದಿ, ಮೈಸೂರಿನಲ್ಲಿ ಸೊಪ್ಪಿನ ಬೆಟ್ಟ, ಕಾನ್ ಜಮೀನು, ಕೊಡಗಿನಲ್ಲಿ ಜಮ್ಮಾ ಮತ್ತು ಬಾಣೆ ಮತ್ತು ಕಲಬುರಗಿಯಲ್ಲಿ ಮೊಟಸ್ಥಳ ಎಂದು ಕರೆಯುತ್ತಾರೆ. ವರ್ಗ ಭೂಮಿಗೆ ಸಿಗುವ ಈ ಜಮೀನಿನ ಪ್ರಮಾಣದಲ್ಲಿ ವ್ಯತ್ಯಾಸವಿದ್ದರೂ ಇದೆಲ್ಲದರ ಸ್ವರೂಪ ಮತ್ತು ವ್ಯಾಖ್ಯಾನ ಒಂದೇ ಆಗಿದೆ. ಉದಾಹರಣೆಗೆ ಬಾಣೆ ಜಮೀನು ವರ್ಗ ಜಮೀನಿನ ಗರಿಷ್ಠ ಎರಡು ಪಟ್ಟು ಇದ್ದರೆ ಕುಮ್ಕಿಯು ವರ್ಗ ಜಮೀನಿನ ಸುತ್ತ 100 ಗಜದಷ್ಟುಇರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಡತನ ಅನ್ನೋದು ಮನಸ್ಸಿನಲ್ಲಿ ಇದೆಯಾ ಅಥವಾ ಆಸ್ತಿಯಲ್ಲಿ ? ದುಡ್ಡಿನ ಓಟದಲ್ಲಿ ನಾವು ಯಾರು ಎಂಬುದನ್ನು ನಾವೇ ಮರೆತಿದ್ದೇವೆ. ಬಡವರು ಯಾರು? ಶ್ರೀಮಂತರು ಯಾರು? ಈ ಲೇಖನ ಓದಿ ನೀವೆ ನಿರ್ಧರಿಸಿ ಹೇಳಿ.
ಆನ್ಲೈನಿನಲ್ಲಿ ಮಾರಕಟ್ಟಗೆ ಬಂದ ಶಿಯೋಮಿ ರೆಡ್ಮಿ ನೋಟ್ 4 ಸ್ಮಾರ್ಟ್ಪೋನು ಈ ಹಿಂದಿನ ನೋಟ್ 3 ಮಾರಾಟದ ದಾಖಲೆಯನ್ನು ಅನಾಯಸವಾಗಿ ಆಳಿಸಿ ಹಾಕಿತ್ತು. ಮೂರು ವಿಧದಲ್ಲಿ ಈ ಪೋನು ಲಭ್ಯವಿದ್ದು, 4 GB RAM ಮತ್ತು 64 GB ROM ಮಾದರಿಗಳಲ್ಲಿ ಮಾರಾಟವಾಗುತ್ತಿದೆ….
ಕರ್ನಾಟಕ ರಾಜ್ಯದ ಹಾಸನದ ಅರಕಲಗೂಡಿನ ರೈತರಿಗೆ ಲಾಭದಾಯಕ ಪಶು ತಳಿಗಳ ಪರಿಚಯ ಹಾಗೂ ಹೈನುಗಾರಿಕೆ ಕ್ಷೇತ್ರದ ಬಗ್ಗೆ ಸಂಶೋಧನೆಗಳನ್ನು ಪರಿಚಯಿಸುವ ಸಲುವಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಹಾಸನದ ಅರಕಲಗೂಡಿನಲ್ಲಿ ಮೂರು ದಿನಗಳ ‘ರಾಜ್ಯಮಟ್ಟದ ಪಶುಮೇಳ- 2018’ ಹಮ್ಮಿಕೊಳ್ಳಲಾಗಿದೆ.
ವೈದ್ಯರನ್ನು ದೂರವಿಡಲು ಈ ಹಣ್ಣುಗಳನ್ನು ಸೇವಿಸಿ, ಎಷ್ಟೋಂದು ಹಣ್ಣುಗಳು ಅಬ್ಬ! ತಿನ್ನಬೇಕು ಎಲ್ಲಾ ಫ್ರೂಟ್: ಆರೋಗ್ಯಕ್ಕಾಗಿ ಹಣ್ಣು ತಿನ್ನಿ ಆನಂದಕ್ಕಾಗಿ ಹಣ್ಣು ತಿನ್ನಿ ಪೌಷ್ಟಿಕ ಭದ್ರತೆಗೂ ಹಣ್ಣು ತಿನ್ನಿ…
ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಕೆಫೀನ್ನ ಇನ್ನೊಂದು ಉತ್ತಮ ಗುಣವೆಂದರೆ ಇದರ ಸೇವನೆಯಿಂದ ರಕ್ತದಲ್ಲಿ ಅಡ್ರಿನಲಿನ್ ಎಂಬ ಹಾರ್ಮೋನು ಬಿಡುಗಡೆಯಾಗುವುದು. ನಮ್ಮ ದೈಹಿಕ ಚಟುವಟಿಕೆಗಳಿಗೆ ಈ ಹಾರ್ಮೋನು ಅಗತ್ಯವಾಗಿದೆ. ಕಾಫಿ ಸೇವನೆಯ ಮೂಲಕ ಹೆಚ್ಚಿನ ಅಡ್ರಿನಲಿನ್ ಲಭ್ಯವಾಗುವುದರಿಂದ ನಿಮ್ಮ ಹಲವು ದೈಹಿಕ ಚಟುವಟಿಕೆಗಳು ಚುರುಕಾಗುತ್ತವೆ. ಕೆಫಿನ್ ಅಧಿಕವಾಗಿ ಇರುವಂತಹ ಕಾಫಿ ಸೇವನೆ ಮಾಡಬಾರದು ಎನ್ನುವಂತಹ ಮಾತನ್ನು ನಾವು ಹೆಚ್ಚಿನವರ ಬಾಯಿಯಿಂದ ಕೇಳುತ್ತಲಿರುತ್ತೇವೆ. ಕಾಫಿಯೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವಾದಿಸುವವರು ಹಲವಾರು ಮಂದಿ. ಆದರೆ ಕೆಲವು ಜನರು ಕಾಫಿ ಆರೋಗ್ಯಕ್ಕೆ ಒಳ್ಳೆಯದು…
ವಿದ್ಯುತ್ ಉತ್ಪಾದನೆಗೆ ಹಲವು ಆಯ್ಕೆಗಳಿವೆ. ನೀರು, ಗಾಳಿ, ಬೆಳಕು ಹೀಗೆ ವಿವಿಧ ಮಾದರಿಯಲ್ಲಿ ವಿದ್ಯುತ್ ಉತ್ಪಾದನೆಯ ಹೊರತಾಗಿಯೂ ವಿದ್ಯುತ್ ಗಳಿಸಲು ಜನರು ವಿವಿಧ ಆಯ್ಕೆಗಳನ್ನು ಸಂಶೋಧಿಸುತ್ತಿದ್ದಾರೆ.