ಗ್ಯಾಜೆಟ್

ವೊಡಾಫೋನ್ ಗ್ರಾಹಕರಿಗೆ ಸಿಹಿ ಸುದ್ದಿ! ತನ್ನ ಗ್ರಾಹಕರಿಗಾಗಿ ಭರ್ಜರಿ ಆಫರ್ ನೀಡಿದ ವೊಡಾಫೋನ್ !!!

1671

ಮುಖೇಶ್ ಅಂಬಾನಿ ಅವರ ನೇತೃತ್ವದ ರಿಲಾಯನ್ಸ್ ಜಿಯೋ, ತನ್ನ ಗ್ರಾಹಕರಿಗೆ ಹಲವಾರು ಆಫರ್’ಗಳನ್ನು ಕೊಟ್ಟು ಇತಿಹಾಸ ಸೃಷ್ಟಿಸುತ್ತಿದ್ದಲ್ಲದೆ, ಬೇರೆ ಟೆಲಿಕಾಂ ಕಂಪನಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇದರ ಪ್ರಭಾವ ಏರ್ಟೆಲ್, ವೊಡಾಫೋನ್ ಮುಂತಾದ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಕಳೆದುಕೊಳ್ಳುವ ಭಯದಲ್ಲಿದ್ದು, ಈಗ ಈ ಕಂಪನಿಗಳು ಕೂಡ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಜಿಯೋ ಕಾಪನಿಗೆ ಟಾಂಗ್ ಕೊಡಲು ಹಲವು ರೀತಿಯ ಇತಿಹಾಸ ಸೃಷ್ಟಿಸುವಂತ ಆಫರ್’ಗಳನ್ನು ತನ್ನ ಗ್ರಾಹಕರಿಗೆ ಕೊಡುವಲ್ಲಿ ಹಟಕ್ಕೆ ಬಿದ್ದಿವೆ.

ಈಗ ಈ ಓಟದಲ್ಲಿ ವೊಡಾಫೋನ್ ಕಂಪನಿಯು ಮುಂದೆ ಬಂದಿದ್ದು, ಜಿಯೋ ಕಂಪನಿಗೆ ಟಾಂಗ್ ಕೊಡುವ ಮೂಲಕ, ವೊಡಾಫೋನ್ ಇತಿಹಾಸ ಸೃಷ್ಟಿಸುವಂತ ಆಫರ್ ಅನ್ನು ತನ್ನ ಗ್ರಾಹಕರಿಗೆ ಕೊಡುತ್ತಿದೆ.

ವೊಡಾಫೋನ್ ಕೊಡುತ್ತಿರುವ ಆಫರ್’ಗಳ ಬಗ್ಗೆ ತಿಳಿಯೋಣ:-

244 ರೂಪಾಯಿಗೆ ಅನ್‌ಲಿಮಿಟೆಡ್ ಸೇವೆಯನ್ನು ಕೊಡುತ್ತಿದೆ. ಕೇವಲ 244 ರೂಪಾಯಿಗೆ ಅನ್‌ಲಿಮಿಟೆಡ್ ಕಾಲ್, ಡೇಟಾ, ಎಸ್‌ಎಮ್‌ಎಸ್‌ ಸೇವೆಯನ್ನು ನೀಡುತ್ತಿದೆ. ಇದು ಇತಿಹಾಸಹ ಆಫರ್ ಆಗಿದ್ದು, ಆಫರ್ ಕೊಡುವಲ್ಲಿ ಜಿಯೋ ಕಂಪನಿಯನ್ನು ಕೂಡ ಹಿಂದಿಕ್ಕಲಿದೆ.

ಇದೇ ಮೊದಲ ಭಾರಿಗೆ ಇಷ್ಟು ಕಡಿಮೆ ಬೆಲೆಯಲ್ಲಿ ವೊಡಾಪೋನ್ ಇಂತಹದೊಂದು ಆಫರ್ ಬಿಡುಗಡೆ ಮಾಡಿದೆ. ವೊಡಾಫೋನ್ ತನ್ನ ಹೊಸ ಗ್ರಾಹಕರಿಗಾಗಿ 244 ರೂಪಾಯಿ ರಿಚಾರ್ಜ್‌ ಮಾಡುವ ಮೂಲಕ 70 ದಿನಕ್ಕೆ 70 ಜಿಬಿ 4 ಜಿ ಉಚಿತ ಡಾಟಾ, ಅನ್‌ಲಿಮಿಟೆಡ್‌ ವಾಯ್ಸ್ ಕರೆಗಳನ್ನು ಮಾಡಬಹುದಾಗಿದೆ. ವೊಡಾಫೋನ್ ಈ ಆಫರ್ ಬಿಡುಗಡೆ ಮಾಡಿರುವ ವಿಶೇಷತೆಯೇ, 3G ಮತ್ತು 4G ಗ್ರಾಹಕರಿಗೂ ಈ ಆಫರ್ ಲಭ್ಯವಿದೆ.

ಆಫ‌ರ್‌ನಲ್ಲಿ ಹೊಸಗ್ರಾಹಕರಿಗೆ 2 ನೇ ಬಾರಿ ರಿಚಾರ್ಜ್‌ನಲ್ಲೂ ಅನಿಮಿಯತ ಕರೆಗಳು ಮತ್ತು ದಿನಕ್ಕೊಂದು ಜಿಬಿ ಡಾಟಾ ನೀಡಿದ್ದು, ಆದರೆ ವ್ಯಾಲಿಡಿಟಿ 35 ದಿನಗಳಾಗಿರುತ್ತದೆ.

ಮತ್ತೊಂದು ರು. 346 ರೀಚಾರ್ಜ್ ಆಫರ್ ನೀಡಿದ್ದು, ಪ್ರತಿದಿನ 1ಜಿಬಿ ಡೇಟಾ, ಯಾವುದೇ ನೆಟ್ ವರ್ಕ್ ಗೆ 56 ದಿನಗಳ ಕಾಲ ಅನಿಯಮಿತ ವಾಯ್ಸ್ ಕಾಲ್ ಉಚಿತವಾಗಿರುತ್ತದೆ. ಈ ಆಫರ್ ನಲ್ಲಿ ಪ್ರತಿದಿನ 300 ನಿಮಿಷ ಹಾಗೂ ವಾರಕ್ಕೆ 1200 ನಿಮಿಷ ವಾಯ್ಸ್ ಕಾಲ್ ಉಚಿತವಾಗಿರುತ್ತದೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ