ಆಧ್ಯಾತ್ಮ

ವಿಜ್ಞಾನಿಯಾಗಿ ಆಯ್ಕೆಆಗಿದ್ದ ಇವರು, ಆಧ್ಯಾತ್ಮಿಕ ಗುರುಗಳಾಗಿದ್ದರ ಹಿಂದೆ ಇದೆ ಒಂದು ರೋಚಕ ಕತೆ..!ತಿಳಿಯಲು ಈ ಲೇಖನ ಓದಿ…

9954

ಇದು ಬಾಲಗಂಗಾಧರನಾಥ ಸ್ವಾಮೀಜಿ ಮಹಾ ಸಮಾಧಿಯಾದ ಬಳಿಕ ಆದಿ ಚುಂಚನಗಿರಿ ಮಠದ 72ನೇ ಪೀಠಾಧಿಕಾರಿಯಾದ ನಿರ್ಮಲಾನಂದನಾಥ ಸ್ವಾಮೀಜಿ ಪೂರ್ವಾಶ್ರಮದ ವೃತ್ತಾಂತ.

ಶ್ರೀಗಳ ಜನನ ಮತ್ತು ಬಾಲ್ಯ:-

ನಿರ್ಮಲಾನಂದನಾಥ ಸ್ವಾಮೀಜಿ ಪೂರ್ವಾಶ್ರಮದ ಊರು ಗುಬ್ಬಿ ತಾಲ್ಲೂಕು ಮಾವಿನಹಳ್ಳಿ, ಸಮೀಪದ ಚೀರನಹಳ್ಳಿಯಲ್ಲಿ 20 ಜುಲೈ 1969ರಲ್ಲಿ ಜನಿಸಿದರು. ಅವರ ಪೂರ್ವಾಶ್ರಮದ ಹೆಸರು ಸಿ.ಎನ್.ನಾಗರಾಜ್. ತಂದೆ ನರಸೇಗೌಡ, ಈಗ ಅವರಿಲ್ಲ. ತಾಯಿ ನಂಜಮ್ಮ ಇದ್ದಾರೆ. ಆರು ಮಕ್ಕಳಲ್ಲಿ ನಾಗರಾಜ್ ನಾಲ್ಕನೇಯವರು. ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನ, ಕೂಲಿ ಮಾಡಿ ಜೀವನ ಸಾಗಿಸುವ ಪರಿಸ್ಥಿತಿ. ಈಗಲೂ ಕುಟುಂಬದವರು ಕೂಲಿ ಮಾಡಿಯೇ ಜೀವನದ ನೊಗ ಹೊತ್ತಿದ್ದಾರೆ. ಸನ್ಯಾಸ ಸ್ವೀಕರಿಸಿದ ನಂತರ ಒಮ್ಮೆಯೂ ಊರಿನತ್ತ ಬಂದಿಲ್ಲ. ತಂದೆ ತೀರಿಕೊಂಡಾಗಲೂ ಊರಿನತ್ತ ಮುಖ ಮಾಡಿಲ್ಲ.

ಶ್ರೀಗಳ ವಿದ್ಯಾಭ್ಯಾಸ:-

ಕೂಲಿ ಮಾಡುತ್ತಲೇ ಪ್ರಾಥಮಿಕ ಶಿಕ್ಷಣ- ಮಾವಿನಹಳ್ಳಿ ಸರ್ಕಾರಿ ಶಾಲೆಯಲ್ಲಿ, ಪ್ರೌ ಶಿಕ್ಷಣವನ್ನು ಮಾವಿನಹಳ್ಳಿ ಪ್ರಗತಿಪರ ವಿದ್ಯಾವರ್ಧಕ ಶಾಲೆಯಲ್ಲಿ ಪೂರ್ಣಗೊಳಿಸಿದರು.`ಪ್ರೌಢಶಾಲೆ ತರಗತಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಪಡೆದಿರುವ ಅಂಕಗಳ ದಾಖಲೆಯನ್ನು ಇಲ್ಲಿಯವರೆಗೂ ಈ ಶಾಲೆಯಲ್ಲಿ ಯಾರೂ ಮುರಿದಿಲ್ಲ’ ಎನ್ನುತ್ತದೆ ಶಾಲೆಯ ಆಡಳಿತ ಮಂಡಳಿ.

ಬಡತನದ ಕಾರಣ ಡಿಪ್ಲೊಮಾ ಪಾಲಿಟೆಕ್ನಿಕ್ ಅಧ್ಯಯನವನ್ನು ಒಂದು ವರ್ಷ ಮೊಟಕುಗೊಳಿಸಿದ್ದರು. ಆಗ ಅವರ ತಾತ, ಗುಬ್ಬಿ ಮಾಜಿ ಶಾಸಕ ಎನ್.ವೀರಣ್ಣಗೌಡರ ಬಳಿ ಕರೆದುಕೊಂಡು ಬಂದರು. ಅವರ ನೆರವಿನಿಂದ ಶಿಕ್ಷಣ ಮುಂದುವರಿಸಿದರು. ವೀರಣ್ಣಗೌಡರ ಮನೆ ಹಾಗೂ ತುಮಕೂರು ಬಿ.ಎಚ್.ರಸ್ತೆಯ ಸೈಕಲ್ ಮುದ್ದಣ್ಣ ಕಟ್ಟಡದಲ್ಲಿದ್ದ ವೀರಣ್ಣಗೌಡರ ಕಚೇರಿಯೇ ಅವರ ಆಶ್ರಯತಾಣವಾಗಿತ್ತು.

ಶ್ರೀಗಳ ಎಂಜಿನಿಯರಿಂಗ್ ಪದವಿ:-

ತುಮಕೂರಿನಲ್ಲಿ ಡಿಪ್ಲೊಮಾ ಮುಗಿಸಿ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಪದವಿಗೆ ಸೇರಿದ ಅವರು, ವಿಜಯನಗರದ ಆದಿಚುಂಚನಗಿರಿ ಮಠದ ವಿದ್ಯಾರ್ಥಿ ನಿಲಯದಲ್ಲಿ ಸೀಟಿಗೆ ಪರದಾಡಿದರು. ಆಗ ಸೀಟು ನಿರಾಕರಿಸಲಾಯಿತು. ವಿದ್ಯಾರ್ಥಿ ನಿಲಯದಲ್ಲಿ ಸೀಟು ಸಿಗದ ನೋವಿನಲ್ಲೇ ತೆರಳಿದ ನಾಗರಾಜ್ ಮುಂದೆ ವೀರಣ್ಣಗೌಡರ ಶಿಫಾರಸಿನ ಮೇಲೆ ಹಾಸ್ಟೆಲ್‌ಗೆ ಪ್ರವೇಶ ಗಿಟ್ಟಿಸಿಕೊಂಡರು.ಈಗ ಮಠದ ಪೀಠಾಧಿಪತಿಯಾಗುವವರೆಗೆ ಬೆಳೆದಿದ್ದು ಇತಿಹಾಸ.

ಎಂಜಿನಿಯರಿಂಗ್ ಬಳಿಕ ಐಐಟಿಯಲ್ಲಿ ಎಂ.ಟೆಕ್ ಪದವಿ ಪಡೆದು ಅಮೆರಿಕದಲ್ಲಿ ಕೈತುಂಬ ಸಂಬಳದ ಉದ್ಯೋಗದ ನಿರೀಕ್ಷೆಯಲ್ಲಿದ್ದರು. ಅಮೆರಿಕಕ್ಕೆ ಹೋಗುವ ಮುನ್ನ ಹಳೆ ಸ್ನೇಹಿತರನ್ನು ಮಾತನಾಡಿಸಿಕೊಂಡು ಬರಲು ವಿಜಯನಗರದ ಮಠದ ಹಾಸ್ಟೆಲ್‌ಗೆ ಬಂದಿದ್ದರು. ಅಲ್ಲಿಯವರೆಗೂ ಬಾಲಗಂಗಾಧರನಾಥ ಸ್ವಾಮೀಜಿ ಜತೆ ಸಣ್ಣ ಸಂಪರ್ಕ ಕೂಡ ಇರಲಿಲ್ಲ. ಮಠದ ಹಾಸ್ಟೆಲ್ ರಸ್ತೆಯಲ್ಲಿ ಹೋಗುತ್ತಿದ್ದ ಹುಡುಗನ್ನು (ನಾಗರಾಜ್) ಕಂಡ ಬಾಲಗಂಗಾಧರನಾಥ ಸ್ವಾಮೀಜಿ, ಆ ಹುಡುಗನನ್ನು ಚುಂಚನಗಿರಿಗೆ ಕರೆ ತರುವಂತೆ ಆದೇಶಿಸಿದ್ದರು. ನಿರ್ಮಲಾನಂದನಾಥರಿಗೆ ಆವರೆಗೂ ಸನ್ಯಾಸದ ಆಸಕ್ತಿಯೇ ಇರಲಿಲ್ಲ.

ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಪದವಿ ಪಡೆದು, ಏಳನೇ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಕ್ಕಾಗಿ ಜಿಂದಾಲ್ ಸಂಸ್ಥೆ ನೀಡುವ ಸ್ಕಾಲರ್ ಶಿಪ್ ಪಡೆದುಕೊಂಡಿದ್ದರು.ಮುಂದೆ ಮೈಸೂರಿನ ಹಿಂದುಳಿದ ವರ್ಗದ ವಸತಿ ನಿಲಯದಲ್ಲಿದ್ದುಕೊಂಡು ಎಂಜಿನಿಯರಿಂಗ್ ಅಭ್ಯಾಸ ಮಾಡಿದರು. ಪುಣೆಯ ಭಾರತ ಸರ್ಕಾರದ ಸಂಶೋಧನಾ ಕೇಂದ್ರಕ್ಕೆ ವಿಜ್ಞಾನಿಯಾಗಿ ಆಯ್ಕೆಯಾಗಿದ್ದರು. ಆದರೆ, ಅಧ್ಯಾತ್ಮದ ಸೆಳೆತ ಅವರನ್ನು ಶ್ರೀಮಠಕ್ಕೆ ಕರೆದುಕೊಂಡು ಬಂದಿತು.ಶ್ರೀಮಠದ ಸಂಸ್ಕೃತ ವೇದಾಗಮ ಮಹಾವಿದ್ಯಾಲಯದಲ್ಲಿ ಅದ್ವೈತ ವೇದಾಂತ ವಿದ್ವುದುತ್ತಮ ಮತ್ತು ಶೈವಾಗಮದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು

ಅಂದು ನಾಗರಾಜ್ ಕಾಣೆಯಾಗಿದ್ದು ಇಲ್ಲಿಯವರೆಗೂ ಯಾರಿಗೂ ಗೊತ್ತಿಲ್ಲ :-

ಸ್ವಾಮೀಜಿ ಬಳಿಗೆ ನಾಗರಾಜ್ ಅವರನ್ನು ಕರೆದುಕೊಂಡು ಹೋಗಬೇಕಾದರೆ ಆಗ ಮಠದ ಮ್ಯಾನೇಜರ್ ಆಗಿದ್ದ ಸಿದ್ದಲಿಂಗೇಗೌಡರು ಪಟ್ಟ ಪಾಡು ಅಷ್ಟಿಷ್ಟಲ್ಲ. ವಿಜಯನಗರದ ಕೊಠಡಿಯಲ್ಲಿ ಅವರನ್ನು ಇರಿಸಲಾಗಿತ್ತು. ಕೊಠಡಿಯಿಂದಲೇ ಕಾಣೆಯಾದ ನಾಗರಾಜ್ ಮಾರನೇ ದಿನ ಚುಂಚನಗಿರಿ ಮಠದಲ್ಲಿ ಪ್ರತ್ಯಕ್ಷವಾದುದ್ದು ಏಕೆ ಎಂದು ಇಲ್ಲಿವರೆಗೂ ಯಾರಿಗೂ ಗೊತ್ತಿಲ್ಲ.

ಬಾಲಗಂಗಾಧರನಾಥ ಸ್ವಾಮೀಜಿ ಹೇಳಿದ್ದು:-

`ಚುಂಚನಗಿರಿ ಮಠದಲ್ಲಿ ಸ್ವಾಮೀಜಿ ಎದುರು ನಾಗರಾಜ್ ಅವರನ್ನು ತಂದು ನಿಲ್ಲಿಸಿದಾಗ ನಾಳೆ ಗುರು ಪೂರ್ಣಿಮೆ, ನಿನಗೆ ದೀಕ್ಷೆ ಕೊಡುತ್ತೇನೆ’ ಎಂದು ಬಾಲಗಂಗಾಧರನಾಥ ಸ್ವಾಮೀಜಿ ಹೇಳಿದರು.

`ಸುಮ್ಮನೆ ತಲೆ ಅಲ್ಲಾಡಿಸಿದ ಅವರಿಗೆ ಮರುದಿನ ಇನ್ನಿತರರೊಂದಿಗೆ ದೀಕ್ಷೆ ನೀಡಿದ್ದು ಈಗಲೂ ಕಣ್ಣ ಮುಂದೆ ಕಟ್ಟಿದಂತಿದೆ’ ಎನ್ನುತ್ತಾರೆ ಸಿದ್ದಲಿಂಗೇಗೌಡ.

ನಾಗರಾಜ್ ಆದ್ರು ನಿರ್ಮಲಾನಂದನಾಥ ಸ್ವಾಮೀಜಿ:-

ಮೊದಲಿಗೆ ಬಿಳಿ ಬಟ್ಟೆ ತೊಟ್ಟು ಸನ್ಯಾಸ ದೀಕ್ಷೆ ಸ್ವೀಕರಿಸಿದ ನಂತರ ನಾಗರಾಜ್, ಹೆಸರನ್ನು ನಿರ್ಮಲಾನಂದನಾಥ ಸ್ವಾಮೀಜಿ ಎಂದು ನಾಮಕರಣ ಮಾಡಲಾಯಿತು.

ಪೂರ್ವಾಶ್ರಮ ತೊರೆದು ಮಠದ ದೀಕ್ಷೆ ತೊಟ್ಟ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಮೊದಲಿಗೆ ರಾಮನಗರ ಬಳಿಯ ಬಾನಂದೂರು (ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟೂರು) ಮಠಕ್ಕೆ ಕಳುಹಿಸಿಕೊಡಲಾಯಿತು.

ಕೆಲ ವರ್ಷಗಳ ಸೇವೆ ಬಳಿಕ ನಿರ್ಮಲಾನಂದನಾಥರಿಗೆ ಕಾವಿ ಬಟ್ಟೆ ನೀಡಿ ಚಿಕ್ಕಬಳ್ಳಾಪುರ ಶಾಖಾ ಮಠಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ನೇಮಿಸಿದರು. ಚಿಕ್ಕಬಳ್ಳಾಪುರದ ಮಠವನ್ನು ಸಾಕಷ್ಟು ಅಭಿವೃದ್ಧಿಗೊಳಿಸಿದ ಜೊತೆ ಜೊತೆಯಲ್ಲೇ ಬಾಲಗಂಗಾಧರನಾಥ ಸ್ವಾಮೀಜಿಗೆ ಅವರು ಅಚ್ಚುಮೆಚ್ಚಿನ ಶಿಷ್ಯರಾದರು. ಅದೀಗ ಅವರನ್ನು ಅತಿ ದೊಡ್ಡ ಮಠದ ಪೀಠಾಧಿಪತಿಯಾಗಿ ಮಾಡಿದೆ. ಅತ್ಯಂತ ಸರಳ, ಮೃದು ಮಾತಿನಿಂದಾಗಿ ನಿರ್ಮಲಾನಂದನಾಥ ಸ್ವಾಮೀಜಿ ಭಕ್ತರ ಮೆಚ್ಚುಗೆ ಗಳಿಸಿರುವುದು ಕೂಡ ನಿಜ.

ಶ್ರೀಗಳ ದಿನಚರಿ :-

ಮೃದು ಸ್ವಭಾವಿ, ಮೆದು ಮಾತಿನವರಾಗಿದ್ದು, ಅಧ್ಯಾತ್ಮದ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡೇ ಮಠದ ಅಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಧರ್ಮ ಮತ್ತು ವಿಜ್ಞಾನದ ನಡುವೆ ಅಂತರ ಇರಬಾರದು ಎಂಬುದು ಶ್ರೀಗಳ ನಿಲುವಾಗಿದೆ. ಹಾಗಾಗಿ ಭಕ್ತಾದಿಗಳಿಗೆಂದು ಮಠದ ಆವರಣದಲ್ಲಿ ಉಚಿತ ವೈ-ಫೈ ಸೇವೆ ಒದಗಿಸುವ ಮೂಲಕ ಧರ್ಮ ಮತ್ತು ವಿಜ್ಞಾನದ ಸಂಯೋಜನೆ ಮಾಡುವುದರ ಮೂಲಕ “ಉಚಿತ ಅಂತರ್ಜಾಲ ವ್ಯವಸ್ಥೆ” ಮಾಡಿರುವ ಭಾರತದ ಮೊದಲ ಮಠ ಎಂಬ ಖ್ಯಾತಿಗೆ ಆದಿಚುಂಚನಗಿರಿ ಶ್ರೀಕ್ಷೇತ್ರ ಪಾತ್ರವಾಗಲು ಕಾರಣರಾಗಿದ್ದಾರೆ.

ಕೃಪೆ: ಸಂಗ್ರಹ ಮಾಹಿತಿ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ, ಈ ದಿನದ ಶುಭಫಲಗಳ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ಯಾವುದು ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(28 ಏಪ್ರಿಲ್, 2019) ಇತ್ತೀಚಿಗೆ ನಿಮಗೆ ಹತಾಶೆಯೆನಿಸುತ್ತಿದ್ದಲ್ಲಿ – ಇಂದು ಸರಿಯಾದ…

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(9 ಏಪ್ರಿಲ್, 2019) ನಿಮ್ಮ ಒರಟು ವರ್ತನೆ ನಿಮ್ಮ ಸ್ನೇಹಿತರಿಗೆ ಸ್ವಲ್ಪ ಸಮಸ್ಯೆ ಉಂಟುಮಾಡಬಹುದು. ನಿಮಗೆ ತಿಳಿದ…

  • ಸಿನಿಮಾ

    ವೈರಲ್ ಆಯ್ತು ರಾತ್ರೋ ರಾತ್ರಿ ಸ್ಟಾರ್ ಆದ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಕಿಸ್ಸಿಂಗ್ ವಿಡಿಯೋ..!

    ಕಣ್ಸನ್ನೆ ಮೂಲಕ ರಾತ್ರೋರಾತ್ರಿ ನ್ಯಾಷನಲ್ ಸ್ಟಾರ್ ಆದ ಮಲಯಾಳಂ ನಟಿ ಪ್ರಿಯಾ ವಾರಿಯರ್ ಅವರ ಲಿಪ್ ಲಾಕ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪ್ರಿಯಾ ತಮ್ಮ ಮುಂಬರುವ ‘ಒರು ಅಡಾರ್ ಲವ್’ ಚಿತ್ರದಲ್ಲಿ ನಟ ರೋಶನ್ ಅಬ್ದುಲ್ ರಹೂಫ್ ಅವರಿಗೆ ಕಣ್ಣು ಹೊಡೆದ ವಿಡಿಯೋ ವೈರಲ್ ಆಗಿತ್ತು. ಈಗ ಇದೇ ಚಿತ್ರದ ಪ್ರೋಮೋವೊಂದು ಬಿಡುಗಡೆ ಆಗಿದೆ.ಈ ಪ್ರೋಮೋದಲ್ಲಿ ರೋಶನ್ ಹಾಗೂ ಪ್ರಿಯಾ ಲಿಪ್ ಲಾಕ್ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ವೈರಲ್…

  • ಸಿನಿಮಾ

    ವಿಡಿಯೋದಲ್ಲಿ ಬಟ್ಟೆ ಬಿಚ್ಚಿ ಶ್ರಿರೆಡ್ಡಿಗೆ ಕೌಂಟರ್ ಕೊಟ್ಟ ಕನ್ನಡದ ನಟಿ..!ಯಾರು?ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಕೆಲವು ದಿನಗಳ ಹಿಂದಯೇ ನಟಿ ಶ್ರೀರೆಡ್ಡಿ,  ತೆಲುಗು ಚಿತ್ರರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತಾಗಿ ಹೇಳಿಕೆ ನೀಡಿದ್ದರು. ‘ನೇನು ನಾನಾ ಅಪದ್ಧಂ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಶ್ರೀರೆಡ್ಡಿ, ಮಂಚ ಹಂಚಿಕೊಳ್ಳಲು ಸಿದ್ಧವಿರುವವರಿಗೆ ಮಾತ್ರ ಚಾನ್ಸ್ ಕೊಡಲಾಗ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದಲ್ಲದೆ ತೆಲುಗು ಸಿನಿಮ ಕಲಾವಿದರ ಸಂಘದಿಂದ ಗುರುತಿನ ಚೀಟಿ ನೀಡದ ಸಂಭಂದ ಶ್ರೀರೆಡ್ಡಿ,ಹೈದರಾಬಾದ್’ನ ಫಿಲ್ಮ್ ಚೇಂಬರ್ ಎದುರು ಬೆತ್ತಲೆಯಾಗಿ ಪ್ರತಿಭಟನೆ ನಡೆಸಿ ವಿವಾದವಾಗಿದ್ದರು. ಶ್ರಿರೆಡ್ಡಿಗೆ ಕೌಂಟರ್ ಕೊಡಲು ಬಟ್ಟೆ…

  • ದೇಶ-ವಿದೇಶ

    ಹಾಡು ಹಗಲಲ್ಲೇ ಯುವತಿಯ ಮೇಲೆ ಕಾಮುಕರ ಗುಂಪಿನ ಅಟ್ಟಹಾಸ, ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ !!!

    ಇಲ್ಲಿನ ಅರಣ್ಯ ಪ್ರದೇಶವೊಂದರಲ್ಲಿ 12 ರಿಂದ 14 ಮಂದಿ ಪುಂಡ ಕಾಮುಕರ ಗುಂಪೊಂದು ರಸ್ತೆಯಲ್ಲಿ ತೆರಳುತ್ತಿದ್ದ ಇಬ್ಬರು ಯುವತಿಯನ್ನು ಎಳೆದಾಡಿ ಲೈಂಗಿಕ ಕಿರುಕುಳ ನೀಡಿ ಅಟ್ಟಹಾಸ ಗೈದ ವಿಡಿಯೋ ಇದೀಗ ವೈರಲ್‌ ಆಗಿದೆ.

  • ಸುದ್ದಿ

    ಹಳ್ಳಿ ಮತ್ತು ನಗರ ಬೈಕ್ ಸವಾರರೆ ಎಚ್ಚರ..!ನಿಮ್ಮಲ್ಲಿ ಇದು ಇಲ್ಲಂದ್ರೆ ಏನಾಗುತ್ತೆ ಗೊತ್ತಾ..?

    ಪೋಲೀಸರ ಕಾಟಕ್ಕೆ ಕಳಪೆಮಟ್ಟದ, ಬಿಐಎಸ್ ಅಥವಾ ಐಎಸ್‌’ಐ ಮಾರ್ಕ್ ಇಲ್ಲದ ಹೆಲ್ಮೆಟ್’ಗಳನ್ನು ಕೊಂಡು ಬೈಕ್ ಸವಾರಿ ಮಾಡುತ್ತಿದ್ದವರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ.ಬೆಂಗಳೂರಿನಲ್ಲಿ ಈಗಾಗ್ಲೆ ಅರ್ಧ ಹೆಲ್ಮೆಟ್ ಹಾಕಿ ಓಡಾಡುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.