ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೈ ನವಿರೇಳಿಸುವ ಅತ್ಯದ್ಭುತ ಆಲ್ಬಂ ಒಂದನ್ನು ರೋರಿಂಗ್ ಸ್ಟಾರ್ ಶ್ರೀ ಮುರುಳಿ ರವರು ಬಿಡುಗಡೆ ಮಾಡಿದ್ದಾರೆ.. ಅದೇ “ತಾಯಿ ಕನ್ನಡ”.. ಹೆಣ್ಣನ್ನು ಪ್ರಧಾನವಾಗಿಟ್ಟುಕೊಂಡು ಮಾಡಿರುವ ಈ ಕನ್ನಡದ ಆಲ್ಬಂಗೆ ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಎಲ್ಲಾ ಕಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ..
ಬೆಂಗಳೂರಿನ ಸಂಜಯನಗರದ ಸಮಾಜ ಸೇವಕರಾದ ಶ್ರೀಮತಿ ಸುನಿತಾ ಮಂಜುನಾಥ್ ರವರು ಕನ್ನಡದ ಮೇಲಿನ ಅಭಿಮಾನಕ್ಕಾಗಿ ಈ ಆಲ್ಬಂ ಅನ್ನು ನಿರ್ಮಾಣ ಮಾಡಿದ್ದಾರೆ.. ಈಗಾಗಲೇ ತಮ್ಮ ಎಜುಕೇಶನ್ ಟ್ರಸ್ಟ್ ಗಳ ಮೂಲಕ ಸಮಾಜ ಸೇವೆ ಮಾಡುತ್ತಾ ಅಪಾರ ಹೆಸರು ಗಳಿಸಿರುವ ಇವರು ಇದೀಗ ಕನ್ನಡಕ್ಕೆ ಹಾಡಿನ ರೂಪದಲ್ಲಿ ಕೊಡುಗೆಯೊಂದನ್ನು ನೀಡಿದ್ದಾರೆ..
ಪ್ರಖ್ಯಾತ ರ್ಯಾಪರ್ ಅಲೋಕ್ ರವರು ಹಾಡಿರುವ ಈ ಆಲ್ಬಂ ನಲ್ಲಿ ಹೆಸರಾಂತ IPS ಆಫೀಸರ್ ಡಿ.ರೂಪ ರವರು, ಸುಧಾ ನಾರಾಯಣಮೂರ್ತಿಯವರು, ಹಾಗೂ ಚಿತ್ರ ನಟಿಯರಾದ ಮಯೂರಿ, ಸಂಯುಕ್ತ ಹೊರನಾಡ್, ಸುಧಾ ಬೆಳವಾಡಿ, ಹಾಗೂ ಆಯುಷಿ ರವರು ಸೇರಿದಂತೆ ಇನ್ನು ಅನೇಕ ಮಂದಿ ಕಾಣಿಸಿಕೊಂಡಿದ್ದಾರೆ..
ಕೇಳಿದರೇ ಮೈ ರೋಮಾಂಚನವಾಗುವ ಈ ಹಾಡನ್ನು ನಮ್ಮ ಸ್ಯಾಂಡಲ್ವುಡ್ ನ ರೋರಿಂಗ್ ಸ್ಟಾರ್ ಶ್ರೀ ಮುರುಳಿ ರವರು ಬಿಡುಗಡೆ ಮಾಡಿದ್ದಾರೆ..ಆಲ್ಬಂ ಬಿಡುಗಡೆ ಮಾಡಿದ ಸಂಧರ್ಭದಲ್ಲಿ ರೋರಿಂಗ್ ಸ್ಟಾರ್ ಶ್ರೀ ಮುರುಳಿ ರವರು ಮಾತನಾಡಿ “ತಾಯಿ ಕನ್ನಡ” ಆಲ್ಬಂ ವೈಯಕ್ತಿಕವಾಗಿ ನನಗೆ ಬಹಳ ಇಷ್ಟವಾದ ಹಾಡು.. ಇಂತಹ ಕನ್ನಡದ ಹಾಡುಗಳು ಹೆಚ್ಚು ಹೆಚ್ಚಾಗಿ ಬರಬೇಕೆಂದು ಆಶಯ ವ್ಯಕ್ತಪಡಿಸಿದರು..
ಈ ಅಧ್ಬುತ ವೀಡಿಯೋವನ್ನು ನೋಡಿ:https://youtu.be/AK9ZQl4ARDY
ಕನ್ನಡ ತಾಯಿ ಪ್ರಧಾನವಾದ ಈ ಆಲ್ಬಂ ನಲ್ಲಿ ನೂರಾರು ಮಕ್ಕಳು ಅಭಿನಯಿಸಿದ್ದಾರೆ.. ನಗರದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿಸಿರುವ ಸುನಿತಾ ಮಂಜುನಾಥ್ ರವರು ತಮ್ಮ ಶಾಲೆಗಳಲ್ಲೂ ಈ ಹಾಡಿನ ಚಿತ್ರೀಕರಣಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ..
ಇಂತಹ ಕನ್ನಡದ ಹಾಡನ್ನು ನಮಗೆ ನೀಡಿದ ಸಮಾಜ ಸೇವಕಿ ಶ್ರೀಮತಿ ಸುನಿತಾ ಮಂಜುನಾಥ್ ರವರಿಗೆ ಹಾಗೂ ಹಾಡಿದಂತಹ ಅಲೋಕ್ ರವರಿಗೆ.. ಈ ಆಲ್ಬಂ ನಲ್ಲಿ ಕಾಣಿಸಿಕೊಂಡಿರುವ ಎಲ್ಲಾ ಸಾಧಕರಿಗೂ ನಮ್ಮ ಧನ್ಯವಾದಗಳು..
ಜೈ ಕರ್ನಾಟಕ..
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚಿಗೆ ಅಯೋಧ್ಯೆಯ ಸೀತಾರಾಮ ದೇವಸ್ಥಾನ, ಮುಸ್ಲಿಮರಿಗಾಗಿ ಇಫ್ತಾರ್ ಕೂಟ ಏರ್ಪಡಿಸಿ ಬಾಂಧವ್ಯದ ಬೆಸುಗೆಯನ್ನು ಎತ್ತಿ ಹಿಡಿದಿತ್ತು. ಇದೀಗ ಅದೇ ರೀತಿಯಲ್ಲಿ ಉತ್ತರ ಪ್ರದೇಶದ ಮೀರಥ್‌ನ ಜಾಮಾ ಮಸೀದಿಯಲ್ಲಿ ಶಿವ ಭಂಡಾರಾದ ಊಟದ ತಯಾರಿ ನಡೆಸಲು ಮುಂದಾಗುವ ಮೂಲಕ ಸಾಮರಸ್ಯವನ್ನು ಸಾರಿದೆ. ನಗರದಲ್ಲಿರುವ ಸೋಮನಾಥ ಶಿವ ದೇವಸ್ಥಾನದ 150ನೇ ಪ್ರತಿಷ್ಠಾಪನೆಯ ದಿನವನ್ನು ಆಚರಿಸುವ ಸಂದರ್ಭದಲ್ಲಿ ಶಿವ ಭಂಡಾರವನ್ನು ಏರ್ಪಡಿಸಿದ್ದು, ಈ ವೇಳೆ ಜಾಮಿಯಾ ಮಸೀದಿಯ ಮುಖ್ಯ ಖಾಝಿ ಜೇನ್-ಉಸ್-ಸಜಿದಿನ್ ಆಹಾರ ವ್ಯವಸ್ಥೆಯನ್ನು ನೋಡಿಕೊಳ್ಳಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ತರಕಾರಿ…
ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ಮೊಬೈಲ್ ಚಾರ್ಜರ್‌ನ್ನು ಇನ್ನೊಬ್ಬರಿಂದ ಪಡೆಯುವುದು ಸಹಜ. ಇನ್ನೇನು ಸ್ವಿಚ್ ಆಫ್ ಆಗುತ್ತದೆ ಎನ್ನುವ ವೇಳೆ ಇನ್ನೊಬ್ಬರಿಂದ ಚಾರ್ಜರ್ ಕೇಳುತ್ತೇವೆ. ಆದರೆ ಇನ್ನು ಮುಂದೆ ಈ ರೀತಿ ಪಡೆಯುವಾಗ ಎಚ್ಚರದಿಂದ ಇರಿ. ಹೌದು, ಚಾರ್ಜರ್ ಪಡೆಯುವುದರಿಂದ ಏನು ಸಮಸ್ಯೆ ಎಂದು ಯೋಚಿಸುತ್ತಿದ್ದರೆ, ಈ ರೀತಿ ಚಾರ್ಜಿಂಗ್ ಕೇಬಲ್ ಪಡೆಯುವುದರಿಂದಲೂ ಮೊಬೈಲ್ ಗೆ ವೈರಸ್ ಬರುವ ಸಾಧ್ಯತೆಯಿದೆ ಎನ್ನುವ ಆಘಾತಕಾರಿ ವರದಿ ಹೊರ ಬಿದಿದ್ದೆ. ಐಬಿಎಂ ಸೆಕ್ಯುರಿಟಿಯ ಸಂಶೋಧನೆಯಲ್ಲಿ ಈ ಅಂಶ ಬಯಲಾಗಿದೆ. ಇನ್ನೊಬ್ಬರ…
ಪ್ರಧಾನಿ ನರೆಂದ್ರ ಮೋದಿ ಅವರ ಕನಸಿನ ಬುಲೆಟ್ ರೈಲು ಯೋಜನೆಗೆ ಗುರುವಾರ ಶಂಕುಸ್ಥಾಪನೆ ನಡೆಯಲಿದೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ಮೋದಿ ಅವರು ಅಹಮದಾಬಾದ್‍ನಲ್ಲಿ ಅಡಿಗಲ್ಲು ಹಾಕುವ ಮೂಲಕ ಯೋಜನೆಗೆ ಚಾಲನೆ ಸಿಗಲಿದೆ.ಇದರ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.
ಅಮ್ಮನಿಗೆ ವರ ಬೇಕಿದೆ ಎಂದು ಯುವಕನೋರ್ವನ ಫೇಸ್‍ಬುಕ್ ಪೋಸ್ಟ್ ವೈರಲ್ ಆಗಿದೆ. ತಾಯಿಗೆ ವರ ಹುಡುಕುತ್ತಿರುವ ಯುವಕನ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಂದನ್ ನಗರದ ಫ್ರೆಂಚ್ ಕಾಲೋನಿಯ ನಿವಾಸಿ ಗೌರವ್ ತಾಯಿಗಾಗಿ ಸೂಕ್ತ ವರನನ್ನು ಹುಡುಕುತ್ತಿದ್ದಾರೆ. ಐದು ವರ್ಷಗಳ ಹಿಂದೆ ನನ್ನ ತಂದೆ ವಿಧಿವಶರಾಗಿದ್ದು, 45 ವರ್ಷದ ನನ್ನ ಅಮ್ಮ ಮನೆಯಲ್ಲಿ ಏಕಾಂಗಿ ಆಗಿರುತ್ತಾರೆ. ಮದ್ಯ ಸೇವಿಸದ ಮತ್ತು ಶುದ್ಧ ಸಸ್ಯಹಾರಿಯಾಗಿರುವ ವರ ಬೇಕಿದೆ ಎಂದು ಗೌರವ್ ಫೇಸ್ಬುಕ್…
ಈರುಳ್ಳಿ ದೋಸೆಯನ್ನು ನಿಮ್ಮ ಮನೆಯಲ್ಲೇ ರುಚಿಯಾಗಿ ಈ ಸರಳ ವಿಧಾನದ ಮೂಲಕ ತಯಾರಿಸಿ ಸವಿಯಿರಿ. ದೋಸೆಯನ್ನು ಹೇಗೆ ಮಾಡುವುದು ಅನ್ನೋ ಚಿಂತೆ ಬಿಡಿ ಈ ವಿಧಾನ ಅನುಸರಿಸಿ… ತಯಾರಿಸಲು ಬೇಕಾಗುವ ಸಾಮಗ್ರಿಗಳುಎರಡು ಕಪ್ ಹುಳಿ ಬಂದ ದೋಸೆ ಹಿಟ್ಟು2-3 ಈರುಳ್ಳಿ3-4 ಹಸಿಮೆಣಸಿನ ಕಾಯಿಸ್ವಲ್ಪ ಕರಿಬೇವು ಸ್ವಲ್ಪ ಕೊತ್ತಂಬರಿ ಸೊಪ್ಪುಎರಡು ಚಮಚ ತುರಿದ ಕ್ಯಾರೇಟ್ರುಚಿಗೆ ತಕ್ಕಷ್ಟು ಉಪ್ಪುಎರಡು ಚಮಚ ಎಣ್ಣೆ ತಯಾರಿಸುವ ವಿಧಾನ: ಮೊದಲನೆಯದಾಗಿ ಹುಳಿ ಬಂದ ದೋಸೆ ಹಿಟ್ಟಿಗೆ ಈರುಳ್ಳಿ, ಹಸಿಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು, ತುರಿದ…
ನಮ್ಮ ದೇಶದಲ್ಲಿ ಮಕ್ಕಳು 21 ವರ್ಷದವರಾದರೆ ಅವರು ಇನ್ನು ಬಹುತೇಕ ಕಾಲೇಜಿನಲ್ಲಿರುತ್ತಾರೆ. ಪ್ರಮುಖವಾಗಿ ತಮ್ಮ ಓದನ್ನು ಮುಗಿಸಿಕೊಳ್ಳುವ ಒತ್ತಡವಿರುತ್ತದೆ. ಪ್ರವಾಸವೊಂದು ಐಷಾರಾಮಿ ಬದುಕಾಗಿರುತ್ತದಷ್ಟೇ. ಆದರೆ ಅಮೆರಿಕದ ಲೆಕ್ಸಿ ಅಲ್ಫೋರ್ಡ್ ಎನ್ನುವ ಯುವತಿ 21 ವರ್ಷ ದಾಟುವಷ್ಟರಲ್ಲಿ 196 ದೇಶಗಳಲ್ಲಿ ಹೋಗಿ ಜಗತ್ತಿನ ಎಲ್ಲ ದೇಶಗಳಲ್ಲಿ ಪ್ರಯಾಣಿಸಿದ, ಅತ್ಯಂತ ಕಿರಿಯ ವ್ಯಕ್ತಿ ಎಂದು ಗಿನ್ನಿಸ್ ಬುಕ್ ಆಫ್ ರೇಕಾರ್ಡ್ಸ್‌ನಲ್ಲಿ ಸೇರಿದ್ದಾರೆ. ಮೇ 31ರಂದು ಉತ್ತರ ಕೊರಿಯಾ ಪ್ರವೇಶಿಸಿದ ನಂತರ ಅವರು ಈ ದಾಖಲೆಗೆ ಭಾಜನರಾಗಿದ್ದಾರೆ. ಈ ಹಿಂದೆ ಈ…