ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೇಂದ್ರದಲ್ಲಿ ಮೋದಿ ಸರ್ಕಾರ ಬಂದಾಗಿನಿಂದ, ದೇಶದಲ್ಲಿ ಒಂದಲ್ಲ ಒಂದು ಬದಲಾವಣೆಗಳು ಆಗುತ್ತಿವೆ. ಎಲ್ಇಡಿ ಬಲ್ಬ್ಗಳ ಬೆಲೆಯನ್ನು 300 ರೂ.ನಿಂದ 40 ರೂ. ಗೆ ಇಳಿಸುವಲ್ಲಿ ಸಫಲವಾಗಿದ್ದ ಸರ್ಕಾರ, ಈಗ ವಿದ್ಯುತ್ ಮೀಟರ್’ಗಳಲ್ಲಿ ಬದಲಾವಣೆ ತರಲು ಮುಂದಾಗಿದೆ.
ಎಲ್ಇಡಿ ಬಲ್ಬ್ಗಳನ್ನು ಕಡಿಮೆ ಬೆಲೆಗೆ ವಿತರಿಸಿದ ಹಾಗೆ , ಮನೆ ಹಾಗೂ ಕಚೇರಿಗಳಿಗೆ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್ಗಳ ಬೆಲೆಯನ್ನು ಇಳಿಸಲು ಚಿಂತನೆ ನಡೆಸಿದೆ.
ವರದಿಗಳ ಪ್ರಕಾರ ಸುಮಾರು 10 ರಿಂದ 15 ಸಾವಿರ ರೂ. ಬೆಲೆಯಿರುವ ವಿದ್ಯುತ್ ಮೀಟರ್ಗಳು 1 ಸಾವಿರ ರೂ.ಗೆ ಇಳಿಕೆಯಾಗಲಿದೆ. ಎಂದು ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಲಕ್ಷಾಂತರ ಹೊಸ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್ಗಳನ್ನು ಖರೀದಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಈ ಯೋಜನ ಜಾರಿಯಿಂದ ಆಗುವ ಅನುಕೂಲಗಳು:-
ಮೊದಲಿಗೆ ಇದರ ಬೆಲೆಯನ್ನು 2 ಸಾವಿರದಿಂದ 1500 ರವರೆಗೆ ಇಳಿಸಿ ಕೊನೆಗೆ 1 ಸಾವಿರ ರೂ. ಗಿಂತಲೂ ಕಡಿಮೆಗೆ ಇಳಿಸುವ ಪ್ರಯತ್ನ ಇದಾಗಿದೆ ಅಂದ್ರು. ಹರಿಯಾಣಾದಲ್ಲಿ ಇದೇ ರೀತಿಯ ಯೋಜನೆಗೆ ಮುಂದಾಗಿರುವ ಬಗ್ಗೆ ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್ಗಳು ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ:-
ಇಡೀ ವಿಶ್ವದಲ್ಲೇ ಈ ರೀತಿಯ ಸಾಧನ ತಯಾರಿಸವಲ್ಲಿ ಭಾರತ ಅತ್ಯುತ್ತಮ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿರುವುದರಿಂದ ಈ ಮೀಟರ್ಗಳು ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಆಗಿರಲಿವೆ ಅಂತ ಹೇಳಿದ್ದಾರೆ. ಇಲ್ಲಿ ಓದಿ:-ಮೋದಿ ಸರ್ಕಾರದಿಂದ,ಆಗಸ್ಟ್ 15ರ ನಂತರ ಭ್ರಷ್ಟ ಅಧಿಕಾರಿಗಳಿಗೆ ಕಾದಿದೆ ಮಾರಿ ಹಬ್ಬ!
ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ಮಾತುಕತೆ ನಡೆಯುತ್ತಿದೆ ಅಂತ ಪಿಯೂಶ್ ಗೋಯಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೆಚ್ಚಿನ ವಿಜ್ಞಾನಿಗಳು ಹೇಳುವಂತೆ ಶೌಚಾಲಯವು ರೋಗ ರುಜಿನಗಳ ತವರಾಗಿದೆ ಎಂದಾಗಿದೆ. ಆದ್ದರಿಂದ ನೀವು ಸ್ಥಳಕ್ಕೆ ಹೆಚ್ಚು ಆದ್ಯತೆ ನೀಡಿ ಸ್ವಚ್ಛಗೊಳಿಸಿದಂತೆ ನಿಮ್ಮ ಮನೆಯನ್ನು ರಕ್ಷಿಸಿಕೊಳ್ಳಬಹುದಾಗಿದೆ.
ಟೀ ರುಚಿ ಹೆಚ್ಚಿಸುವ ಜೊತೆಗೆ ಗಂಟಲು ನೋವನ್ನು ಗುಣಪಡಿಸುವ ಕೆಲಸವನ್ನು ಮಾತ್ರ ಶುಂಠಿ ಟೀ ಮಾಡುವುದಿಲ್ಲ. ಮಸಾಲೆ ರೂಪದಲ್ಲಿ ಬಳಸುವ ಶುಂಠಿ ಬಹು ಉಪಯೋಗಿ. ಇದ್ರ ನೀರನ್ನು ಪ್ರತಿದಿನ ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದ್ರಲ್ಲಿರುವ ಆ್ಯಂಟಿ ಬ್ಯಾಕ್ಟಿರಿಯ, ಆ್ಯಂಟಿ ಫಂಗಲ್ ಅಂಶ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ಊಟ ಮಾಡಿದ 20 ನಿಮಿಷದ ನಂತ್ರ ಒಂದು ಕಪ್ ಶುಂಠಿ ನೀರನ್ನು ಕುಡಿಯಿರಿ. ಇದು ದೇಹದಲ್ಲಿರುವ ಆಮ್ಲ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದ್ರಿಂದ ಹೊಟ್ಟೆಯಲ್ಲಾಗುವ ಉರಿ ಕಡಿಮೆಯಾಗುತ್ತದೆ. ಶುಂಠಿಯನ್ನು ಕುಟ್ಟಿ ನೀರಿಗೆ ಹಾಕಿ ಕುದಿಸಿ…
ಸಿಗರೇಟ್ ಸೇದುವದನ್ತೂ ಈಗ ಪ್ಯಾಶನ್ ಆಗಿಬಿಟ್ಟಿದೆ.ಈಗಂತೂ ಪುರುಷರಿಗಿಂತ ಮಹಿಳೆಯರೇ ಧೂಮಪಾನ ಮಾಡೋದ್ರಲ್ಲಿ ಮುಂದಿರುತ್ತಾರೆ.
ಹೊಸ ಬೆಳೆ ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸರ್ಕಾರದಿಂದ ಬಿಗ್ ಶಾಕ್ ನೀಡಿದ್ದು, ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕೆ ಬ್ರೇಕ್ ಹಾಕಲಾಗಿದೆ. ಸಂಪನ್ಮೂಲ ಕೊರತೆ ಕಾರಣದಿಂದ ರೈತರ ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕೆ ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿದೆ ಎನ್ನಲಾಗಿದ್ದು, ಇದರಿಂದಾಗಿ ಸಹಕಾರಿ ಬ್ಯಾಂಕುಗಳಿಗೆ ಸಂಕಷ್ಟ ಎದುರಾಗಿದೆ. ಪರಿಣಾಮ ರೈತರು ಹೊಸದಾಗಿ ಬೆಳೆ ಸಾಲ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ರೈತರ ಸಾಲ ಮನ್ನಾ ಯೋಜನೆಯಡಿ ಮರುಪಾವತಿ ಮೊತ್ತ ಬಿಡುಗಡೆಯನ್ನು ಹಣಕಾಸು ಇಲಾಖೆ ತಡೆಹಿಡಿದಿದೆ. ಸಹಕಾರ…
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ಕೊನೆ ಬಡ್ಜೆಟ್ ಮಂಡಿಸಿರುವ ಕೇಂದ್ರ ಹಣಕಾಸು ಸಚಿವರ ಪಿಯೂಶ್ ಗೋಯಲ್ ಮಧ್ಯಮ ವರ್ಗಕ್ಕೆ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ. ಹೊಸ ಪಿಂಚಣಿ ಯೋಜನೆಯ ಅನುದಾನವನ್ನು ಸರ್ಕಾರ ಶೇ. 4ರಿಂದ 14ಕ್ಕೆ ಹೆಚ್ಚಳ ಮಾಡಿದೆ. ಹಾಲಿ ಇರುವ ಆದಾಯ ತೆರಿಗೆ ಮಿತಿಯನ್ನು 2.50 ಲಕ್ಷ ರೂ. ನಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಿದೆ. ಒಟ್ಟು 5 ಲಕ್ಷ ರೂ. ವರೆಗಿನ ಮಿತಿಯನ್ನು ಏರಿಸಿದೆ. ಇದರ ಜೊತೆಯಲ್ಲಿ ಹೂಡಿಕೆ ಮಾಡಿದರೆ 6.5 ಲಕ್ಷ…
ತುಮಕೂರು ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ, ಪಕ್ಷದ ನಾಯಕರ ಒತ್ತಡಕ್ಕೆ ಮಣಿದಿದ್ದು, ಚುನಾವಣಾ ಕಣದಿಂದ ಹಿಂದೆ ಸರಿಯಲು ಸಮ್ಮತಿಸಿದ್ದಾರೆನ್ನಲಾಗಿದೆ. ಮುದ್ದಹನುಮೇಗೌಡರು ತುಮಕೂರು ಕ್ಷೇತ್ರದ ಹಾಲಿ ಸಂಸದರಾಗಿದ್ದರೂ ಸಹ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು. ಈ ಹಿನ್ನಲೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡರು ಕಣಕ್ಕಿಳಿದಿದ್ದು, ಮುದ್ದಹನುಮೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರಿಂದ ಮೈತ್ರಿ…