ತಂತ್ರಜ್ಞಾನ

ಮೊಬೈಲ್‌ ನೆಟ್‌ವರ್ಕ್‌ ಇಲ್ಲದ ಪ್ರದೇಶದಲ್ಲಿ ಸಂದೇಶ ಕಳುಹಿಸಲು ಹೊಸ ಆ್ಯಪ್‌..!ತಿಳಿಯಲು ಈ ಲೇಖನ ಓದಿ…

232

ಮೊಬೈಲ್‌ ನೆಟ್‌ವರ್ಕ್‌ ಇಲ್ಲದ ಪ್ರದೇಶದಲ್ಲಿ ಸಂಪರ್ಕ ಸಾಧಿಸಲು ಹೊಸ ಆ್ಯಪ್‌ವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.ಈ ಆ್ಯಪ್‌ ಅನ್ನು ಯಾವುದೇ ಸ್ಮಾರ್ಟ್‌ಫೋನ್‌ಗೆ ಅಳವಡಿಸಬಹುದು. ನೆಟ್‌ವರ್ಕ್‌ ಇಲ್ಲದಿದ್ದರೂ ಈ ಆ್ಯಪ್‌ ಹಲವು ಕಿಲೋ ಮೀಟರ್‌ಗಳ ದೂರದವರೆಗೂ ವೈ–ಫೈ ಸಿಗ್ನಲ್‌ ಹೊರಸೂಸುತ್ತದೆ.

ಅಪಘಾತ, ನೈಸರ್ಗಿಕ ವಿಕೋಪ, ಅಗ್ನಿ ಅವಘಡ ಮುಂತಾದ ಅನಾಹುತಗಳು ಸಂಭವಿಸಿದಾಗ ತುರ್ತು ಸಂದೇಶ ಕಳುಹಿಸಲು ಈ ಆ್ಯಪ್‌ ಸಹಕಾರಿಯಾಗುತ್ತದೆ. ಸ್ಪೇನ್‌ನ ಯುನಿವರ್ಸಿಡಾಡ್‌ ಡೆ ಅಲಿಕೇಂಟ್‌ನ (ಯುಎ) ವಿಜ್ಞಾನಿಗಳು ಈ ಆ್ಯಪ್‌ ರೂಪಿಸಿದ್ದಾರೆ.

ಇದರಿಂದ ನೆಟ್‌ವರ್ಕ್‌ ಇಲ್ಲದೆ ತೊಂದರೆಯಲ್ಲಿ ಸಿಲುಕಿರುವ ವ್ಯಕ್ತಿಯ ಸ್ಥಳದ ನಿಖರ ಮಾಹಿತಿ ದೊರೆಯುತ್ತದೆ. ಜತೆಗೆ ‘ನಾನು ಗಾಯಗೊಂಡಿದ್ದೇನೆ’, ನನಗೆ ಸಹಾಯ ಬೇಕಿದೆ’ ಎನ್ನುವ ಸಂದರ್ಭಾನುಸಾರ ಸಂದೇಶ ಕಳುಹಿಸಬಹುದು. ಇದರಿಂದ ಅವರು ಸಹಾಯ ಪಡೆಯಲು ಅನುಕೂಲವಾಗುತ್ತದೆ’ ಎಂದು ಯುಎಯ ಅಧ್ಯಾಪಕ ಮತ್ತು ಆ್ಯಪ್‌ ರೂಪಿಸಿರುವ ಏಂಜೆಲ್‌ ಬರ್ನಾ ತಿಳಿಸಿದ್ದಾರೆ.

ಈ ಉಪಕರಣದಲ್ಲಿ ಚಿಕ್ಕ ಅಂಟೆನಾ ಇದ್ದು, ಅದು ಅಪಾಯದಲ್ಲಿರುವ ವ್ಯಕ್ತಿಯ ಸ್ಮಾರ್ಟ್‌ಫೋನ್‌ಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಇಷ್ಟೆಲ್ಲ ಆಗುವ ಮೊದಲು ತೊಂದರೆಯಲ್ಲಿರುವ ವ್ಯಕ್ತಿ ತನ್ನ ಮೊಬೈಲ್‌ನಲ್ಲಿರುವ ಈ ಆ್ಯಪ್‌ ಅನ್ನು ಚಾಲನೆಗೊಳಿಸಿರಬೇಕು’ ಎಂದು ಅವರು ವಿವರಿಸಿದ್ದಾರೆ.

ದುರಂತಗಳು ಸಂಭವಿಸಿದ ಸಂದರ್ಭಗಳಲ್ಲಿ ಸಂಕಷ್ಟದಲ್ಲಿ ಸಿಲುಕಿದ ವ್ಯಕ್ತಿ ಕಳುಹಿಸುವ ತುರ್ತು ಸಂಕೇತಗಳನ್ನು ಸ್ವೀಕರಿಸಲು ರಕ್ಷಣಾ ತಂಡದ ಬಳಿಯೂ ಉಪಕರಣ ಇರಬೇಕು. ಆ ಉಪಕರಣವನ್ನು ಸಹ ಈ ಸಂಶೋಧನಾ ತಂಡ ತಯಾರಿಸಿದೆ.

ಪ್ರಾಯೋಗಿಕ ಪರೀಕ್ಷೆಯಲ್ಲಿ ಇದರ ವ್ಯಾಪ್ತಿ 2–3 ಕಿಲೋ ಮೀಟರ್‌ ಇದ್ದು, ಇದನ್ನು ಇನ್ನಷ್ಟು ವಿಸ್ತರಿಸಬಹುದು. ಜತೆಗೆ ಕಡಿಮೆ ದರದಲ್ಲೂ ಇದು ಲಭ್ಯವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ, ಜ್ಯೋತಿಷ್ಯ

    ಶ್ರೀ ಚಕ್ರ ಆರಾಧಿಸಿದರೆ ಸಿಗುವ ಫಲ!!

    ಶ್ರೀ ಚಕ್ರದೇವತೆಯು ಸತ್ಯ ಸ್ವರೂಪಳೂ, ಸಕಲಾಧಾರರೂಪಳೂ, ಸಮಸ್ತ ಅಪೇಕ್ಷೆಗಳನ್ನು ಜಗತ್ತಿಗೆ ನೀಡುವವಳು, ಮಹಾಲಕ್ಷೀ, ಮಹಾಕಾಳಿ, ಮಹಾಸರಸ್ವತಿ ಸ್ವರೂಪಳು, ಶಿವಶಕ್ತಿಯೂ ಆಗಿರುತ್ತಾಳೆ. ಭವಬಂಧನದಿಂದ ಮುಕ್ತಿಪಥವ ತೋರುವುದು ಈಕೆಯೇ. ಶ್ರೀ ಚಕ್ರವು ದುಷ್ಟಶಕ್ತಿಗಳನ್ನು ತಡೆಗಟ್ಟುವವಳು, ಇದು ಚಕ್ರರಾಜ ಎನಿಸಿಕೊಂಡು ಮಹಾಪುರುಷರಿಂದ ಸೇವಿಸಲ್ಪಟ್ಟು ಐಶ್ವರ್ಯ, ಸುಖ, ಶಾಂತಿ, ಸಂಪತ್ತುಗಳನ್ನು ನೀಡಿದೆ. ”ಶ್ರೀ” ಎಂದರೆ ಶ್ರೀಹರಿಯ ಸ್ವರೂಪ. ಇನ್ನು “ಚಕ್ರ” ಎಂದರೆ ಲೋಕವನ್ನು ದುಷ್ಟರಿಂದ ರಕ್ಷಿಸಿ, ಶಿಷ್ಟರ ಪರಿಪಾಲನೆ ಮಾಡುತಾ ನಮ್ಮನ್ನು ಪ್ರಕೃತಿಯ ನಿಯಮದಂತೆ ನಡೆಸುತಾ ನಮ್ಮಲ್ಲಿರುವ ಸತ್ವಗುಣಗಳನ್ನು ಪರಮಾತ್ಮನಿಗೆ ಸೇವೆ ಮಾಡುವಂತಹುದ್ದೇ…

  • ರಾಜಕೀಯ

    ಅಬ್ಬಾ! ಬೃಹತ್ ಸೇಬಿನ ಹಾರ ಹಾಕಿ ಹೆಚ್.ಡಿ.ಕೆ ಅವರಿಗೆ ಸ್ವಾಗತ…ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ…ನೀವೂ ನೋಡಿ…

    ಮದ್ದೂರು ಕುಮಾರ ಪರ್ವ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ  ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬೃಹತ್ ಸೇಬಿನ ಹಾರ ಹಾಕಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸ್ವಾಗತಿಸಿದರು. ಸುಮಾರು 5000ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು  ಅದ್ಧೂರಿ ಬೈಕ್ ರ‍್ಯಾಲಿ ಮೂಲಕ ಅಭೂತಪೂರ್ವಕ ಸ್ವಾಗತ ಮಾಡಿದ್ದಲ್ಲದೆ, ಸುಮಾರು 500 ಕೆಜಿ ಸೇಬಿನ ಹಾರವನ್ನು ಕ್ರೈನ್ ಮೂಲಕ ಹಾಕುವ ಮುಖಾಂತರ ಕುಮಾರಸ್ವಾಮಿಯವರಿಗೆ ತಮ್ಮ ಅಭಿಮಾನ ಮೆರೆದರು. ಅಬ್ಬಾ..ಇಲ್ಲಿದೆ ನೋಡಿ ಬೃಹತ್ ಸೇಬಿನ ಹಾರ ಹಾಕಿದ ವಿಡಿಯೋ…

  • ಆಧ್ಯಾತ್ಮ

    ವಿಜ್ಞಾನಿಯಾಗಿ ಆಯ್ಕೆಆಗಿದ್ದ ಇವರು, ಆಧ್ಯಾತ್ಮಿಕ ಗುರುಗಳಾಗಿದ್ದರ ಹಿಂದೆ ಇದೆ ಒಂದು ರೋಚಕ ಕತೆ..!ತಿಳಿಯಲು ಈ ಲೇಖನ ಓದಿ…

    ಇದು ಬಾಲಗಂಗಾಧರನಾಥ ಸ್ವಾಮೀಜಿ ಮಹಾ ಸಮಾಧಿಯಾದ ಬಳಿಕ ಆದಿ ಚುಂಚನಗಿರಿ ಮಠದ 72ನೇ ಪೀಠಾಧಿಕಾರಿಯಾದ ನಿರ್ಮಲಾನಂದನಾಥ ಸ್ವಾಮೀಜಿ ಪೂರ್ವಾಶ್ರಮದ ವೃತ್ತಾಂತ.

  • ಜ್ಯೋತಿಷ್ಯ

    ತಿಮ್ಮಪ್ಪನನ್ನು ಕೃಪೆಯಿಂದ ಶುಭಯೋಗವಿದ್ದು ನಿಮ್ಮ ರಾಶಿಯೂ ಇದೆಯಾ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(13 ಮಾರ್ಚ್, 2019) ಇಂದು ನೀವು ಒಳ್ಳೆಯ ಹಣ ಮಾಡುತ್ತೀರಿ – ಆದರೆ ಅದು ನಿಮ್ಮ ಕೈಯಿಂದ…

  • ಸುದ್ದಿ

    ಪರ ಪುರುಷನ ಜೊತೆ ಒಂದೇ ಸ್ಟ್ರೆಚರ್‌ನಲ್ಲಿ ಹೋಗುವಂತೆ ಮಹಿಳೆಗೆ ಒತ್ತಾಯ…….!

    ಒಂದೇ ಸ್ಟ್ರೆಚರ್‌ನಲ್ಲಿ ಪುರುಷ ರೋಗಿ ಜೊತೆ ಎಕ್ಸ್ ರೇ ರೂಮಿಗೆ ಹೋಗುವಂತೆ ಮಹಿಳೆಗೆ ಒತ್ತಾಯಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‍ನಲ್ಲಿ ಇರುವ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ನಡೆದಿದೆ.ಸಂಗೀತಾ ಪುರುಷ ರೋಗಿ ಜೊತೆ ಸ್ಟ್ರೆಚರ್ ಹಂಚಿಕೊಂಡ ಮಹಿಳೆ. ಸಂಗೀತಾ ಕಳೆದ 12 ದಿನಗಳ ಹಿಂದೆ ಬಲಗಾಲು ಫ್ರ್ಯಾಕ್ಚರ್ ಆಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಎಕ್ಸ್ ರೇ ರೂಮಿಗೆ ಕರೆದುಕೊಂಡು ಹೋಗಬೇಕಾದರೆ ಸ್ಟ್ರೆಚರ್ ಇಲ್ಲವೆಂದು ಪುರುಷ ರೋಗಿಯಿದ್ದ ಸ್ಟ್ರೆಚರ್‌ನಲ್ಲಿ ಹೋಗುವಂತೆ ಸಿಬ್ಬಂದಿ ಒತ್ತಾಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ….

  • ಆಟೋಮೊಬೈಲ್ಸ್

    ಈ ಸ್ಕೂಟರ್ 125 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ..! ತಿಳಿಯಲು ಈ ಲೇಖನ ಓದಿ..

    ಯುಜೆಟ್ ಎಂಬ ಹೆಸರಿನ ಫೋಲ್ಡ್ ಮಾಡಬಹುದಾದ ಒಂದು ಅನನ್ಯ ಸ್ಕೂಟರನ್ನು ತರಲು ಸಿದ್ಧವಾಗಿದೆ. ಬ್ಯಾಟರಿ ಚಾಲಿತವಾದ ಈ ಸ್ಕೂಟರ್ ಪೂರ್ಣ ಚಾರ್ಜ್ ಮಾಡಿದ ನಂತರ 125 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ ಎಂದು ಕಂಪನಿ ಹೇಳಿದೆ. 2018 ರಲ್ಲಿ ಲಾಸ್ ವೇಗಾಸ್ನಲ್ಲಿ ಓಡುವ ಸ್ಕೂಟರ್ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋ (ಸಿಇಎಸ್) ಅನ್ನು ಯುಜೆಟ್ ಕಂಪನಿಯು ಪ್ರಾರಂಭಿಸಿದೆ.