ಸಿನಿಮಾ

ಮೊದಲ ದಿನವೇ ಕಾಲೇಜ್ ಕುಮಾರನಿಗೆ ಒಲಿದ ಪ್ರೇಕ್ಷಕ ಮಹಾಶಯರು..!ತಿಳಿಯಲು ಈ ಲೇಖನ ಓದಿ…

253

ಕೆಂಡಸಂಪಿಗೆಯ ವಿಕ್ಕಿ ವರುನ್ ಹಾಗೂ ಕಿರಿಕ್ ಪಾರ್ಟಿಯ ಸಂಯುಕ್ತ ಹೆಗ್ಡೆ ನಟಿಸಿರುವ ಈ ಸಿನಿಮಾವನ್ನು ಅಲೆಮಾರಿ ಸಂತೋಷ್ ನಿರ್ದೇಶನ ಮಾಡಿದ್ದಾರೆ..

 

MR ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ L ಪದ್ಮನಾಭ ರವರು ಅದ್ಧೂರಿಯಾಗಿ ನಿರ್ಮಾಣ ಮಾಡಿರುವ ಕಾಲೇಜ್ ಕುಮಾರ್ ಚಿತ್ರದಲ್ಲಿಪ್ರಕಾಶ್ಬೆಳವಾಡಿ, ಶ್ರುತಿ, ರವಿಶಂಕರ್, ಸಾಧು ಕೋಕಿಲ, ವನ್ನವಳ್ಳಿ ಕೃಷ್ಣ, ಸಿಲ್ಲಿ ಲಲ್ಲಿಯ ವಿಶಾಲು,  ಅಚ್ಯುತ್ ಕುಮಾರ್ ಹೀಗೇ ದೊಡ್ಡ ತಾರಾ ಬಳಗವೇ ಇದೆ.

ಒಬ್ಬ ಮಿಡಲ್ ಕ್ಲಾಸ್ ಫ್ಯಾಮಿಲಿಯ ಚಿತ್ರಣವನ್ನು ಹಾಸ್ಯಭರಿತವಾಗಿ ಹೆಣೆದು ಎಷ್ಟು ಮನರಂಜಿಸಬಹುದೊ ಅಷ್ಟು ಪ್ರಯತ್ನಪಟ್ಟು ಯಶಸ್ವಿಯಾಗಿದ್ದಾರೆ..

ಆಫೀಸರ್ ಮಾಡಬೇಕೆಂಬ ಅಪ್ಪನ ಕನಸು..‌ಕಾಲೇಜ್ ನಲ್ಲಿ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಅಡ್ಡಾಡುವ ಮಗ.. ಗಂಡ ಹಾಗೂ ಮಗ ಇಬ್ಬರನ್ನು ನಿಭಾಯಿಸುವ ಅಮ್ಮ.. ಇದರ ಮಧ್ಯೆ ಕಾಲೇಜ್ ಕುಮಾರನ ಲವ್ ಅಲ್ಲಿ ಬೀಳಿಸುವ ಕಥಾ ನಾಯಕಿ.. ಎಲ್ಲರ ಅಭಿನಯ ಮನ ಮುಟ್ಟುವಂತಿದೆ.ಇನ್ನು ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರದಾರಿಗಳೂ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿ ಜನರ ಮೆಚ್ಚುಗೆಯನ್ನು ಪಡೆಯುತ್ತಾರೆ..

ಕಾಲೇಜ್ ನಲ್ಲಿ ಮಗ ಪೊರ್ಕಿಯಾಗಿರುವ ವಿಷಯ ತಿಳಿದ ತಂದೆ ಏನು ಮಾಡುತ್ತಾನೆ?? ಅದೇ ಈ ಚಿತ್ರದ ದೊಡ್ಡ ಟ್ವಿಸ್ಟ್.. ಯಾರೂ ಊಹಿಸಲಾಗದ ಈ ಕಥೆ ಮನಸ್ಸಿಗೆ ಬೇಜಾರು ಒತ್ತಡ ಅಥವಾ ಇನ್ಯಾವುದೇ ಇರಲಿ.. ಎಲ್ಲರನ್ನೂ ಮನರಂಜಿಸದೇ ಕಳಿಸಲಾರದು..

ರವಿಶಂಕರ್ ಹಾಗೂ ವಿಕ್ಕಿ ರವರ ಅಭಿನಯ ಹೈಲೈಟ್ ಆಗುತ್ತದೆ.. ಎಲ್ಲರೂ ನಗೆ ಗಡಲಲ್ಲಿ ತೇಲುವುದಂತೂ ಸತ್ಯ..

ಅರ್ಜುನ್ ಜನ್ಯ ಮ್ಯೂಸಿಕ್ ಇರುವ ಈ ಸಿನಿಮಾದ ಎಲ್ಲಾ ಹಾಡುಗಳು ಹಿಟ್ ಆಗಿ ಅದರಲ್ಲೂ ಯೂಟ್ಯೂಬ್ ನಲ್ಲಿ ಟ್ರೆಂಡ್ ನಲ್ಲಿ ಇದ್ದದ್ದು ವಿಶೇಷ.. ಸುಮ್ಮ ಸುಮ್ಮನೆ ಬೇಡದ ಸನ್ನಿವೇಶದಲ್ಲಿ ಹಾಡುಗಳು ಬರದೆ ಸಂಧರ್ಭಕ್ಕೆ ತಕ್ಕ ಹಾಗೆ ಹಾಡುಗಳು ಬಂದು ಎಲ್ಲರಿಗೂ ಇಷ್ಟವಾಗುತ್ತದೆ..

ಇನ್ನು ಈ ಚಿತ್ರದ ಸೆಕೆಂಡ್ ಆಫ್ ನಲ್ಲಿ ಬರುವ ಟ್ವಿಸ್ಟ್ ನಿಂದಾಗಿ ಸಿನಿಮಾ ನೋಡಿದ ಪ್ರೇಕ್ಷಕರು ಇನ್ನಷ್ಟು ಜನರಿಗೆ ಹೇಳಿ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಕಳುಹಿಸುವುದಂತು ಸತ್ಯದ ಮಾತು..

ಚಿತ್ರದ ನಾಯಕ ನಾಯಕಿಯರಿಬ್ಬರದೂ ಇದು ಎರಡನೇ ಸಿನಿಮಾ.. ವಿಕ್ಕಿ ವರುನ್ ಈಗಾಗಲೇ ಕೆಂಡಸಂಪಿಗೆಯ ಮೂಲಕ ಎಲ್ಲರ ಮನ ಗೆದ್ದ ನಾಯಕ.. ಇನ್ನೂ ಕಿರಿಕ್ ಪಾರ್ಟಿಯ ಸಂಯುಕ್ತ ಕಿರಿಕ್ ಹುಡುಗಿ ಎಂದೇ ಹೆಸರುವಾಸಿ.. ಇವರಿಬ್ಬರ ಕಾಂಬಿನೇಷನ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ..

ಚಿತ್ರಮಂದಿರದಿಂದ ಹೊರಗೆ ಬರುವ ಪ್ರೇಕ್ಷಕನ ಮುಖದಲ್ಲಿ ಮಂದಹಾಸ ಬೀರುವುದಂತೂ ಸತ್ಯ..

 ಏನೇ ಆಗಲಿ ಕನ್ನಡದಲ್ಲಿ ಇಂತಹ ಸದಭಿರುಚಿಯ ಸಿನಿಮಾಗಳು ಬಂದಾಗ  ನಮ್ಮ ಪ್ರೇಕ್ಷಕರು ಗೆಲ್ಲಿಸುತ್ತಾರೆ ಎಂಬುದಕ್ಕೆ ಈಗ ಕಾಲೇಜ್ ಕುಮಾರ ಕೂಡ ಒಂದು ನಿದರ್ಶನ.. ಕೊಟ್ಟ ದುಡ್ಡಿಗೆ ಎರಡರಷ್ಟು ಮನರಂಜಿಸುವ ಸಿನಿಮಾ ನೀವು ನಿಮ್ಮ ಸ್ನೇಹಿತರು ಕುಟುಂಬದ ಜೊತೆ ಹೋಗಿ ನೋಡಿ ಬನ್ನಿ..

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಯುರ್ವೇದ

    ಆಯುರ್ವೇದ ಮೂಲಕ ಕರೊನಾ ಸೋಂಕು ಗೆದ್ದ ಬ್ರಿಟನ್​ ರಾಜ, ಬೆಂಗಳೂರಿನ ಸೌಖ್ಯದಿಂದ ಚಿಕಿತ್ಸೆ

    ಬೆಂಗಳೂರು ಮೂಲದ ಆರೋಗ್ಯ ರೆಸಾರ್ಟ್ ಆಯುರ್ವೇದ ಮತ್ತು ಹೋಮಿಯೋಪತಿ ಬಳಕೆಯಿಂದ ಕರೋನವೈರಸ್ನ ಬ್ರಿಟಿಷ್ ಸಿಂಹಾಸನದ ಉತ್ತರಾಧಿಕಾರಿಯಾದ ಪ್ರಿನ್ಸ್ ಚಾರ್ಲ್ಸ್ ಅವರನ್ನು ಗುಣಪಡಿಸಿದೆ ಎಂದು ಕೇಂದ್ರ ಆಯುಷ್ ರಾಜ್ಯ ಸಚಿವ ಶ್ರೀಪಾಡ್ ನಾಯಕ್ ಗುರುವಾರ ಹೇಳಿದ್ದಾರೆ.

  • ಸುದ್ದಿ

    ತಾಯಂದಿರು ಪರೀಕ್ಷೆ ಬರೆಯಲು ಹೋದಾಗ ಪೇದೆಗಳು ಮಾಡಿದ ಕೆಲಸವೇನು ಗೊತ್ತಾ?

    ಪರೀಕ್ಷೆ ಬರೆಯಲು ಹೋದ ತಾಯಂದಿರ ಮಕ್ಕಳನ್ನು ನೋಡಿಕೊಂಡ ಅಸ್ಸಾಂನ ಮಹಿಳಾ ಪೇದೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಸ್ಸಾಂನ ಮಹಿಳಾ ಪೇದೆಗಳು ಮಕ್ಕಳನ್ನು ಎತ್ತಿಕೊಂಡು ಅವರನ್ನು ನೋಡಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಸಾಕಷ್ಟು ಶೇರ್ ಆಗುತ್ತಿದ್ದು, ಅನೇಕರು ಪೇದೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಸ್ಸಾಂ ಪೊಲೀಸರು, ಇಬ್ಬರು ಮಹಿಳಾ ಪೇದೆಗಳು ಮಗುವನ್ನು ಎತ್ತಿಕೊಂಡು ಸಂತೈಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ತಾಯಿ ಯಾಗುವುದು ಒಂದು ಕ್ರಿಯೆ. ನೀವು ಅದನ್ನು…

  • ಸುದ್ದಿ

    ಡಿಕೆಶಿ ಪುತ್ರಿಗೂ ಸಿದ್ದಾರ್ಥ ಅವರ ಪುತ್ರನಿಗೂ ಮದುವೆ ನಿಶ್ಚಯ, ಮದುವೆ ಯಾವಾಗ!

    ಇಂದು ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮಗಳಿಗೂ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಮೊಮ್ಮಗನಿಗೂ ಮದುವೆ ನಿಶ್ಚಯವಾಗಿದೆ. ಮೂರು ದಿನಗಳ ಹಿಂದೆ ಎಸ್ ಎಂಕೆ ನಿವಾಸಕ್ಕೆ ಡಿಕೆಶಿ ಕುಟಂಬದವರು ಹೋಗಿದ್ದರು ಈಗ ಈ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್ ಮನೆಗೆ ಎಂಸ್ ಕೃಷ್ಣ ಅವರ ಕುಟುಂಬ ಆಗಮಿಸಿದ್ದು ಗುರು ಹಿರಿಯ ಸಮ್ಮುಖದಲ್ಲಿ ಸಿದ್ದಾರ್ಥ ಅವರ ಪುತ್ರ ಅಮರ್ಥ್ಯ ಸುಬ್ರಮಣ್ಯಗೂ ಮತ್ತು ಡಿಕೆಶಿ ಪುತ್ರಿ ಐಶ್ವರ್ಯಗೂ ಮದುವೆ ಫಿಕ್ಸ್ ಆಗಿದೆ. ಡಿಕೆ…

  • ಸುದ್ದಿ

    Video Game; 4 ತಿಂಗಳಲ್ಲಿ 30 ಗೇಮ್‌ ರಚಿಸಿ ಅಚ್ಚರಿ ಮೂಡಿಸಿದ ಬಾಲಕ,.!!

    ಮಕ್ಕಳು ಮೊಬೈಲ್‌ ಹಿಡಿದುಕೊಂಡರೆ, ಮೊದಲು ಹುಡುಕುವುದು ಗೇಮ್ಸ್ ಇದೆಯೇ ಎಂದು! ಅದಾದ ಬಳಿಕ ವಿಡಿಯೋ, ಕ್ಯಾಮರಾ ಎಂದೆಲ್ಲ ವಿವಿಧ ಆಯ್ಕೆಗಳನ್ನು ಹುಡುಕುತ್ತಾರೆ. ಅಲ್ಲದೆ ಮೊಬೈಲ್, ಕಂಪ್ಯೂಟರ್ ಮತ್ತು ಟ್ಯಾಬ್ ಬಳಕೆಯನ್ನು ಕೂಡ ಬಹಳ ಬೇಗನೆ ಕಲಿತುಕೊಂಡು ಬಿಡುತ್ತಾರೆ. ಹೀಗೆ ಸ್ಮಾರ್ಟ್ ಆಗಿರುವ ನೈಜೀರಿಯಾದ 9 ವರ್ಷದ ಬಾಲಕನೊಬ್ಬ ನಾಲ್ಕೇ ತಿಂಗಳಲ್ಲಿ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್‌ಗಳಿಗಾಗಿ 30 ಗೇಮ್‌ಗಳನ್ನು ಅಭಿವೃದ್ಧಿ ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾನೆ. ಈ ಬಾಲಕನ ಹೆಸರು ಬೇಸಿಕ್‌ ಓಕ್ಪರಾ ಜ್ಯೂ. ಲಾಗೋಸ್‌ ನಿವಾಸಿಯಾಗಿರುವ…

  • ಸುದ್ದಿ

    ರಾಮ ಭಂಟ ಆಂಜನೇಯನ ‘ಜಾತಿ’ ಪ್ರಮಾಣ ಪತ್ರಕ್ಕಾಗಿ ಅರ್ಜಿ!

    ಈಗಂತೂ ರಾಜಕಾರಣಿಗಳು ತಾವು ಗೆಲ್ಲುವುದಕ್ಕಾಗಿ ಏನು ಬೇಕೋ ಮಾಡುತ್ತಾರೆ, ಹೇಗೆಂದರೆ ಹಾಗೆ ಮಾತನಾಡುತ್ತಾರೆ ಕೂಡ. ಕೊನೆಗೂ ರಾಜಕೀಯಕ್ಕೆ ದೇವರನ್ನು ಎಳೆದು ತಂದು ದೇವರಿಗೂ ಜಾತಿಯ ಪಟ್ಟಿಯನ್ನು ಕಟ್ಟಿಬಿಟ್ಟಿದ್ದಾರೆ. ಹನುಮಂತ ಅರಣ್ಯವಾಸಿ. ಆತ ದಲಿತ ವರ್ಗಕ್ಕೆ ಸೇರಿದ್ದವನೆಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಬಳಿಕ ಈ ಕುರಿತು ಪರ-ವಿರೋಧದ ಚರ್ಚೆಗಳು ಮುಂದುವರೆದಿವೆ. ಆದಿತ್ಯನಾಥ್ ಅವರ ಹೇಳಿಕೆಗೆ ಸ್ವಪಕ್ಷೀಯರಿಂದಲೂ ವಿರೋಧ ವ್ಯಕ್ತವಾಗಿದ್ದು, ಯೋಗಿ ಹೇಳಿಕೆಯನ್ನು ಖಂಡಿಸಿದ್ದ ಬಿಜೆಪಿ ಸಂಸದೆ ಸಾವಿತ್ರಿಬಾಯಿ ಫುಲೆ ಈಗ ಪಕ್ಷ ತೊರೆದಿದ್ದಾರೆ….