ರೆಸಿಪಿ

ಮೈಸೂರು ಶೈಲಿಯಲ್ಲಿ ಬಿಸಿ ಬಿಸಿ ‘ಚಿಲ್ಲಿ ಚಿಕನ್’ ಮಾಡಿ…

359

ಚಿಲ್ಲಿ ಚಿಕನ್ ಹೆಸರು ಕೇಳದವರೇ ಇಲ್ಲ. ಹೆಸರು ಕೇಳಿದ ಕೂಡಲೇ ಬಾಯಲ್ಲಿ ನೀರೂರಿಸುವ ಚಿಲ್ಲಿ ಚಿಕನ್ ಕಣ್ಣ ಮುಂದೆ ಬರುತ್ತದೆ. ನಿಮಗಾಗಿ ಬಾಯಿಲ್ಲಿ ನೀರಿರುವ, ಮೈಸೂರು ಶೈಲಿಯ ಚಿಲ್ಲಿ ಚಿಕನ್ ರೆಸಿಪಿ …

ಸಾಮಗ್ರಿಗಳು

ಚಿಕನ್‌ – 1 k.g

ಎಣ್ಣೆ – 1 ಕಪ್‌‌‌

ಕೊತ್ತಂಬರಿ ಸೊಪ್ಪು – 2 ಕಟ್ಟು

ಈರುಳ್ಳಿ – 4

ಏಲಕ್ಕಿ – 6

ಬಿರ್ಯಾನಿ ಎಲೆ – 6

ಲವಂಗ – 6

ಗೋಡಂಬಿ – 10

ತೆಂಗಿನ ಕಾಯಿ ಪೇಸ್ಟ್‌ – 1ಕಪ್

ಹಸಿಮೆಣಸಿನ ಕಾಯಿ – 5

ಮೊಸರು – 1/2 ಕಪ್‌‌‌

ಸೋಂಪು – 1 ಸ್ಪೂನ್

ಗಸಗಸೆ – 2 ಸ್ಪೂನ್.

ಶುಂಠಿ ಬೆಳ್ಳುಳ್ಳಿ ಪೇಸ್ಟ್‌‌ – 2 ಸ್ಪೂನ್.

ಉಪ್ಪು – ರುಚಿಗೆ ತಕ್ಕಷ್ಟು

ಅರಿಶಿನ – 1 ಸ್ಪೂನ್.

ಮಾಡುವ ವಿಧಾನ

*ಮೊದಲು ಪ್ಯಾನ್‌ಗೆ ಎಣ್ಣೆ ಹಾಕಿ ಕೋಳಿ ಮಾಂಸವನ್ನು 15 ನಿಮಿಷ ಉರಿದು ಬೇರೆ ಪಾತ್ರೆಗೆ ತೆಗೆದಿಟ್ಟುಕೊಳ್ಳಿ.

*ಜಾರ್‌ಗೆ ಹಸಿ ಮೆಣಸಿನಕಾಯಿ, ತೆಂಗಿನ ಕಾಯಿ ತುರಿ, ಗೋಡಂಬಿ, ಗಸಗಸೆ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್‌ ಮಾಡಿಕೊಳ್ಳಿ.

*ಮತ್ತೊಂದು ಪ್ಯಾನ್‌ಗೆ ಎಣ್ಣೆ ಹಾಕಿ ಅದು ಬಿಸಿಯಾದಾಗ ಏಲಕ್ಕಿ, ಲವಂಗ , ಸೋಂಪು, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌‌ ಹಾಕಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿಕೊಳ್ಳಿ.

*ನಂತರ ರುಬ್ಬಿಕೊಂಡ ತೆಂಗಿನಕಾಯಿ, ಗೋಡಂಬಿ ಮಿಶ್ರಣ, ಮೊಸರು ಹಾಕಿ 5 ನಿಮಿಷ ಬೇಯಿಸಿ.

*ಈ ಮಿಶ್ರಣಕ್ಕೆ ಎಣ್ಣೆಯಲ್ಲಿ ಉರಿದಿಟ್ಟುಕೊಂಡ ಚಿಕನ್‌ , ಅರಿಶಿನ, ಹಾಕಿ ಬೆರೆಸಿ 15 ನಿಮಿಷ ಬೇಯಿಸಿದರೆ ಬಾಯಲ್ಲಿ ನೀರೂರಿಸುವ ಮೈಸೂರು ಚಿಲ್ಲಿ ಚಿಕನ್ ರೆಡಿ.

ಇದನ್ನು ನೀವು ಅನ್ನ, ರೊಟ್ಟಿ, ದೋಸೆ , ಚಪಾತಿಯೊಂದಿಗೆ ತಿನ್ನಬಹುದು. ಇನ್ನು ಬಹಳಷ್ಟು ಮಂದಿ ಚಿಕನ್‌ ಅನ್ನು ಫ್ರೈ ಮಾಡುವುದಿಲ್ಲ. ಹೀಗೆ ಬಳಸಿದರೆ ಹಸಿ ವಾಸನೆ ಹೋಗುವುದಿಲ್ಲ. ಆದ್ದರಿಂದ ಯಾವುದೇ ಚಿಕನ್, ಮಟನ್ ಡಿಶ್‌ ಮಾಡುವ ಮುನ್ನ ಎಣ್ಣೆಯಲ್ಲಿ 15 ನಿಮಿಷ ಉರಿದುಕೊಂಡರೆ ಮತ್ತಷ್ಟು ರುಚಿ ಹೆಚ್ಚುತ್ತದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉದ್ಯೋಗ

    ಕೆಲಸದ ಜೊತೆಗೆ ಇವುಗಳನ್ನು ಮಾಡಿದ್ರೆ, ನಿಮ್ಗೆ ಕೆಲಸದಲ್ಲಿ ಪ್ರಮೋಷನ್ ಸಿಗುತ್ತೆ!

    ಸರಕಾರಿ ಮತ್ತು ಖಾಸಗಿ ಕಂಪನಿ ಎಲ್ಲಿ ಕೆಲಸ ಮಾಡಿದರೂ ,ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡಿದರೂ, ಉದ್ದ್ಯೋಗಿಗಳು ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದರು ಪ್ರಮೋಷನ್, ಸಂಬಳ ಹೆಚ್ಚಳದ ಬಗ್ಗೆ ಎದರು ನೋಡುತ್ತಿರುತ್ತಾರೆ

  • karnataka

    ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

  • ಸುದ್ದಿ

    ಪ್ರತಿದಿನ ಎದೆಗೆ ಗುದ್ದುತ್ತಿದ್ದ ಸಾಕುನಾಯಿಗಳು, ನೋವಿನಿಂದ ವೈದ್ಯರ ಬಳಿ ಹೋದ ಮಹಿಳೆಗೆ ಕಾದಿತ್ತು ಭಾರಿ ಶಾಕ್.​

    ತನ್ನ ಜೀವನದಲ್ಲಿ ಎದುರಾಗುತ್ತಿದ್ದ ಅಪಾಯಾಕಾರಿ ಕ್ಯಾನ್ಸರ್​ ರೋಗವನ್ನು ಪತ್ತೆ ಹಚ್ಚಿ ಜೀವ ಉಳಿಸಿದ ತನ್ನ ನಾಯಿಗಳಿಗೆ ಜೀವನವನ್ನೇ ಮುಡಿಪಾಗಿಟ್ಟಿರುವುದಾಗಿ ವೇಲ್ಸ್​ ಮೂಲದ ಶ್ವಾನ ಪ್ರೇಮಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ವೇಲ್ಸ್​ನ ಬಾರ್ಗೋಡ್​ ನಿವಾಸಿಯಾಗಿರುವ​ ಲಿಂಡಾ ಮುಂಕ್ಲೆ(65) ವೇಲ್ಸ್​ ಆನ್​ಲೈನ್​ ಪತ್ರಿಕೆಗೆ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನ್ನ ಬಳಿ ಐದು ವರ್ಷದ ಬಿಯಾ ಮತ್ತು ಅದರ ಮೂರು ವರ್ಷದ ಹೆಣ್ಣುನಾಯಿ ಎನ್ಯಾ ಸೇರಿದಂತೆ ಒಟ್ಟು ನಾಲ್ಕು ಜರ್ಮನ್​ ಶೆಫರ್ಡ್​ ನಾಯಿಗಳನ್ನು ಸಾಕುತ್ತಿರುವುದಾಗಿ ತಿಳಿಸಿದ್ದಾರೆ. ಅದರಲ್ಲಿ ಎರಡು ನಾಯಿ ತನ್ನ ಬಳಿ…

  • ಸುದ್ದಿ

    ನಾಲ್ಕು ವರ್ಷಗಳಿಂದ ಪೋಸ್ಟ್ ಗೆ ಬಂದ ಪತ್ರಗಳನ್ನು, ಹಂಚದ ಪೋಸ್ಟ್‌ಮ್ಯಾನ್‌.

    ಕಳೆದ ನಾಲ್ಕು ವರ್ಷಗಳಿಂದ ಪತ್ರಗಳನ್ನು ಹಂಚದೆ ಯಲಬುರ್ಗಾ ತಾಲೂಕಿನ ಪೋಸ್ಟ್‌ಮ್ಯಾನ್‌ ನಿರ್ಲಕ್ಷ್ಯ ತೋರಿದ ಸುರೇಶ್. ಪೋಸ್ಟ್‌ಮ್ಯಾನ್‌ ಸುರೇಶ್ ತಳವಾರ ಎನ್ನುವರು ನಾಲ್ಕು ವರ್ಷಗಳಿಂದ ಪೋಸ್ಟ್ ಗೆ ಬಂದ ಪತ್ರ, ಎಟಿಎಮ್ ಕಾರ್ಡ್, ಪರೀಕ್ಷಾ ಪ್ರವೇಶ ಪತ್ರ ಸೇರಿದಂತೆ ವಿವಿಧ ಮಹತ್ವದ ದಾಖಲೆಗಳನ್ನು ಹಂಚದೆ ನಿರ್ಲಕ್ಷ್ಯ ತೋರಿರುವ ಈ ಘಟನೆ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಕಂಡುಬಂದಿದೆ.  ಸರ್ಕಾರಿ ಕಚೇರಿಗಳಿಂದ ಬಂದ ಪೋಸ್ಟ್, ಹಾಗೂ ಬ್ಯಾಂಕಿನಿಂದ ಎಟಿಎಂ ಕಾರ್ಡ್ ಹಾಗೂ ಇತರೆ ದಾಖಲೆಗಳು ಬರುತ್ತಿಲ್ಲವೆಂದು ಗ್ರಾಹಕರು ತಲೆಕೆಡಿಸಿಕೊಂಡಿದ್ದಾರೆ….

  • ಸುದ್ದಿ

    ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಕಾಂಗ್ರೆಸ್ ಸರ್ಕಾರದ ಮೂವರು ನಾಯಕರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ…!

    ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಕಾಂಗ್ರೆಸ್ ಮೂವರು ನಾಯಕರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಕೈ ಹಿರಿಯ ನಾಯಕ ಸಿದ್ದಾರಾಮಯ್ಯ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಕೃಷ್ಣ ಬೈರೇಗೌಡ ಕೆಕೆ ಗೆಸ್ಟ್ ಹೌಸ್ ನಿಂದ ಒಂದೇ ಕಾರಿನಲ್ಲಿ ತೆರಳಿದ್ದಾರೆ. ಸುಪ್ರೀಂಕೋರ್ಟ್ ರಾಜ್ಯ ರಾಜಕೀಯದ ಬಗ್ಗೆ ಮಹತ್ವದ ತೀರ್ಪನ್ನು ಪ್ರಕಟ ಮಾಡಿದೆ. ವಿಶ್ವಾಸಮತದ ವೇಳೆ ಅತೃಪ್ತ ಶಾಸಕರು ಹಾಜರಾಗಬಹುದು ಅಥವಾ ಹಾಜರಾಗದೇ ಇರಬಹುದು ಎಂದು ತೀರ್ಪಿತ್ತಿದ್ದು, ಕಾಂಗ್ರೆಸ್ ನಾಯಕರನ್ನು ಕಂಗೆಡಿಸಿದೆ. ವಿಶ್ವಾಸ ಮತ ಯಾಚನೆ ಮಾಡಲು ಸಿಎಂ ಕುಮಾರಸ್ವಾಮಿ ನಿರ್ಧಾರ…