ಉಪಯುಕ್ತ ಮಾಹಿತಿ

ಭೀಮ್ ಆ್ಯಪ್ ಇದ್ದವರಿಗೆ ಬಂಪರ್ ಆಫರ್.!1ರೂ ಕಳಿಸಿ 51ರೂಪಾಯಿಗಳ ಕ್ಯಾಶ್ಬ್ಯಾಕ್ ಪಡೆಯಿರಿ.!ಹೇಗೆಂದು ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

678

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಡಿಜಿಟಲ್‌ ಪೇಮೆಂಟ್‌ ಮೊಬೈಲ್‌ ಆ್ಯಪ್‌ ಆಗಿರುವ ಭೀಮ್‌ ಅನ್ನು ಪ್ರಚಾರ ಪಡಿಸುವ ಸಲುವಾಗಿ ಕೇಂದ್ರ ಸರಕಾರ ಏ.14ರಿಂದ ನಾನಾ ಬಗೆಯ ಕ್ಯಾಶ್‌ ಬ್ಯಾಕ್‌ ಮತ್ತು ಇನ್ಸೆಂಟಿವ್‌ಗಳನ್ನು ನೀಡಲಿದೆ.

ಭೀಮ್ ಆ್ಯಪ್’ನ್ನು ಪ್ರಧಾನಿ ನರೇಂದ್ರ ಮೋದಿಯವರು 30 ಡಿಸೆಂಬರ್ 2016ರಂದು ಬಿಡುಗಡೆ ಮಾಡಿದ್ದರು. ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್) ಮೂಲಕ ಹಣ ಪಾವತಿ ಮಾಡಲು ಬಳಸುವ ಆ್ಯಪ್ ಇದಾಗಿದೆ.

 

ಈಗಾಗಲೇ ಒಂದು ವರ್ಷ ಪೂರೈಸಿರುವ ಈ ಭೀಮ್ ಆ್ಯಪ್,ಮೊನ್ನೆ ತಾನೇ ನಡೆದ ಅಂಬೇಡ್ಕರ್ ಜಯಂತಿಯಂದು ಅಪ್ಡೇಟ್ ಆಗಿದೆ.ಈಗಾಗಿ ಕೇಂದ್ರ ಸರ್ಕಾರ ಏಪ್ರಿಲ್ 14 2018 ರಿಂದ ಬಂಪರ್ ಭೀಮ್ ಆ್ಯಪ್ ನೀಡುತ್ತಿದೆ.

 ಏನಿದು ಭೀಮ್ ಆ್ಯಪ್ ಭೀಮ್ ಆ್ಯಪ್..?

ಈಗ ಭೀಮ್ ಆ್ಯಪ್ ಬಳಕೆದಾರರು ಪ್ರತಿ ತಿಂಗಳು ಸುಮಾರು 750 ರೂಪಾಯಿ ಕ್ಯಾಶ್ಬ್ಯಾಕ್ ಪಡೆಯಬಹುದಾಗಿದೆ.ಹೆಚ್ಚಿನ ಬಳಕೆದಾರರನ್ನು ಸೆಳೆಯಲು ಕೇಂದ್ರ ಸರ್ಕಾರ ಈ ಕ್ಯಾಶ್ಬ್ಯಾಕ್ ಆಫರ್ ನೀಡುತ್ತಿದೆ.ಈಗಾಗಲೇ ಪೇಟಿಎಮ್, ಗೂಗಲ್ ಟೆಜ್,ಮತ್ತು ಫೋನ್ ಪೇ ಹಾಗೂ ಇನ್ನೂ ಹಲವಾರು ಆ್ಯಪ್’ಗಳು ಕ್ಯಾಶ್ಬ್ಯಾಕ್ ಆಫರ್’ಗಳನ್ನೂ ತನ್ನ ಬಳಕೆದಾರರಿಗೆ ನೀಡಿವೆ.

51ರೂ ಕ್ಯಾಶ್ಬ್ಯಾಕ್ ಆಫರ್

ಮೊದಲನೆಯದಾಗಿ ಹೊಸ ಬಳಕೆದಾರು ತಮ್ಮ ಭೀಮ್ ಆ್ಯಪ್ ಮೂಲಕ ಬೇರೆಯವರ ಭೀಮ್ ಆ್ಯಪ್’ಗೆ 1 ರೂ ಕಳುಹಿಸಿದರೂ ಸಹ ಅವರು 51ರೂ ಕ್ಯಾಶ್ಬ್ಯಾಕ್ ಆಫರ್ ಪಡೆಯುತ್ತಾರೆ.

ಈಗಾಗಲೇ ಭೀಮ್ ಆ್ಯಪ್ ಇರುವವರಿಗೆ ಏನು ಲಾಭ..?

ಅನಂತರ ಭೀಮ್ ಆ್ಯಪ್ ಹೊಸ ಗ್ರಾಹಕರಾಗಲಿ,ಈಗಾಗಲೇ  ಬಳಸುತ್ತಿರುವ ಹಳೇ ಗ್ರಾಹಕರೇ ಆಗಲಿ 100ರುಪಾಯಿಗಿಂತ ಹೆಚ್ಚು ಮೊತ್ತವನ್ನು ಯಾವುದೇ ಆನ್ಲೈನ್ ಆ್ಯಪ್ ಹಾಗಿರಲಿ, ಬ್ಯಾಂಕ್ ಖಾತೆಗೆ ಹಾಗಿರಲಿ ಅಥವಾ ಮೊಬೈಲ್ ನಂಬರ್’ಗೆ ಹಾಗಿರಲಿ ಕಳುಹಿಸಿದ್ದಲ್ಲಿ ಅವರು 25ರೂ ಗಳ ಕ್ಯಾಶ್ಬ್ಯಾಕ್ ಆಫರ್ ಪಡೆಯಲಿದ್ದಾರೆ.

ತಿಂಗಳಿಗೆ ಎಷ್ಟು ಕಳುಹಿಸಿದ್ರೆ  ಕ್ಯಾಶ್ಬ್ಯಾಕ್ ಆಫರ್ ಸಿಗುತ್ತೆ..?

ಇದರ ಮಿತಿಯು ತಿಂಗಳಿಗೆ 500ರೂಗಳ ಮಿತಿಯಿದೆ.ಅಂದ್ರೆ ನೀವೂ 30 ದಿನಗಳಲ್ಲಿ 500 ರೂ ಗಳವರೆಗೆ ಎಷ್ಟು ಕಳುಹಿಸಿದರೂ ಸಹ ನಿಮಗೆ ಕ್ಯಾಶ್ಬ್ಯಾಕ್ ಆಫರ್ ಸಿಗಲಿದೆ.

ಭೀಮ್ ಆ್ಯಪ್ ಬಳಕೆದಾರು ಒಂದು ತಿಂಗಳಿಗಿಂತ ಹೆಚ್ಚು, ಅಂದ್ರೆ ಅನಿಯಮಿತವಾಗಿ ಭೀಮ್ ಆ್ಯಪ್’ನಲ್ಲಿಯೇ ಹಣ ಕಳುಹಿಸುವುದನ್ನು ಮಾಡುತ್ತಿದ್ದರೆ ಅಂತಹ ಬಳಕೆದಾರರು ಹತ್ತು ಹಲವಾರು ಕ್ಯಾಶ್ಬ್ಯಾಕ್ ಆಫರ್’ಗಳನ್ನೂ ಪಡೆಯಲಿದ್ದಾರೆ.

ಎಷ್ಟು ಟ್ರಾನ್ಸಾಕ್ಷನ್ಸ್ ಮಾಡಿದ್ರೆ, ಎಷ್ಟು ಕ್ಯಾಶ್ಬ್ಯಾಕ್ ಸಿಗುತ್ತೆ..?

ಉದಾಹರಣೆಗೆ ಭೀಮ್ ಆ್ಯಪ್ ಬಳಕೆದಾರು 25 ರಿಂದ 50 ಟ್ರಾನ್ಸಾಕ್ಷನ್ಸ್ ಗಳನ್ನು ಮಾಡಿದ್ರೆ ಅವರು 100ರೂ ಗಳ ಕ್ಯಾಶ್ಬ್ಯಾಕ್ ಪಡೆಯುತ್ತಾರೆ.ಬಳಕೆದಾರು ಒಂದೇ ತಿಂಗಳಿನಲ್ಲಿ 50ಕ್ಕಿಂತ ಹೆಚ್ಚು ಟ್ರಾನ್ಸಾಕ್ಷನ್ಸ್ ಮಾಡಿದ್ರೆ ಅವರು 200ರೂ ಗಳ ಕ್ಯಾಶ್ಬ್ಯಾಕ್ ಪಡೆಯುತ್ತಾರೆ.ಹಾಗೂ 50 ರಿಂದ 100ರ ಒಳಗೆ ಟ್ರಾನ್ಸಾಕ್ಷನ್ಸ್ ಮಾಡಿದ್ರೆ ಅವರ ಬ್ಯಾಂಕ್ ಖಾತೆಗೆ 250ರೂ ಕ್ಯಾಶ್ಬ್ಯಾಕ್ ಕ್ರೆಡಿಟ್ ಆಗುತ್ತೆ.

ಭೀಮ್ ಆ್ಯಪ್ ಅಪ್ಲಿಕೇಶನ್ನಿಂದ ರೂ. 1 ಅನ್ನು ಕಳುಹಿಸುವ ಮೂಲಕ 51 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ..?

  • ಮೊದಲನೆಯದಾಗಿ ನಿಮ್ಮ ಮೊಬೈಲ್’ನಲ್ಲಿರುವ ಗೂಗಲ್ ಪ್ಲೇ ಸ್ಟೋರ್ ಮುಖಾಂತರ ಭೀಮ್ ಆ್ಯಪ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಇನಸ್ಟಾಲ್ ಮಾಡಿಕೊಳ್ಳಿ.
  • ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ನೋಂದಾಯಿಸಲಾದ ನಿಮ್ಮ ಸಿಮ್ ಕಾರ್ಡ್ ಆಯ್ಕೆಮಾಡಿ.
  • ನಂತರ ನಿಮಗೆ ಬರುವ ಒಟಿಪಿ ಮುಖಾತರ ಫೋನ್ ನಂಬರ್ ಪರಿಶೀಲಿಸಿ.
  • ಭದ್ರತಾ ಉದ್ದೇಶಕ್ಕಾಗಿ ನಿಮ್ಮ ನಾಲ್ಕು ಅಂಕಿಯ ಪಿನ್ ಕೋಡ್ ಅನ್ನು ಹೊಂದಿಸಿಕೊಳ್ಳಿ.
  • ನೆನಪಿರಲಿ:-ನೀವು ಭೀಮ್ ಆ್ಯಪ್ ಅಪ್ಲಿಕೇಶನ್ ಅನ್ನು ಬಳಸುವ ಪ್ರತಿ ಬಾರಿ ಈ ಪಿನ್ ಅಗತ್ಯವಿರುತ್ತದೆ.
  • ಇದು ಅಟೋಮೇಟಿಕ್ ಹಾಗಿ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಸಂಪರ್ಕ ಸಾಧಿಸಿ, ನಿಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್ ತೋರಿಸುತ್ತದೆ.
  • ನಂತರ ನೀವು BHIM ಅಪ್ಲಿಕೇಶನ್ ಅನ್ನು ಬಳಸುವ ಯಾರಿಗಾದರೂ ರೂ 1 ಅನ್ನು ಕಳುಹಿಸಿ 51 ಕ್ಯಾಶ್ಬ್ಯಾಕ್ ಪಡೆಯಬಹುದು.
  • ನೀವು ರೂ 1 ಅನ್ನು ಕಳುಸಿ 24 ಘಂಟೆಗಳ ಒಳಗೆ ನಿಮಗೆ ಕ್ಯಾಶ್ಬ್ಯಾಕ್ 51ರೂ ಗಳು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಕ್ರೆಡಿಟ್ ಆಗುತ್ತೆ.

ಭೀಮ್ ಆ್ಯಪ್’ನಿಂದ ವ್ಯಾಪಾರಿಗಳಿಗೂ ಬಂಪರ್ ಆಫರ್

ವ್ಯಾಪಾರಿಗಳಿಗೆ ಒಂದು ತಿಂಗಳಿಗೆ ಸುಮಾರು 1 ಸಾವಿರ ರೂಪಾಯಿಯವರೆಗೆ ಕ್ಯಾಶ್ಬ್ಯಾಕ್ ಸಿಗಲಿದೆ. ಹೊಸ ಬಳಕೆದಾರರಿಗೆ ಕೂಡ ಮೊದಲ ವಹಿವಾಟಿನಲ್ಲಿಯೇ 51 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ. ನೀವು ಎಷ್ಟು ಮೊತ್ತದ ವಹಿವಾಟು ನಡೆಸಿದ್ದೀರಿ ಎಂಬುದು ಇದ್ರಲ್ಲಿ ಮಹತ್ವ ಪಡೆಯುವುದಿಲ್ಲ.

ಯಾವ ಯಾವ ಬ್ಯಾಂಕ್..?

ಸದ್ಯ ಅಂಡ್ರಾಯ್ಡ್‌ನಲ್ಲಿ ಮಾತ್ರ ಈ ಆ್ಯಪ್ ಲಭ್ಯವಿದೆ. ಈ ಆ್ಯಪ್ ಮೂಲಕ ಹಣ ವರ್ಗಾವಣೆ ಮಾಡುವಾಗ ಯಾವುದೇ ರೀತಿಯ ಪ್ರೊಸೆಸಿಂಗ್ ಶುಲ್ಕ ಇರುವುದಿಲ್ಲ.

ಎಸ್‍ಬಿಐ, ಹೆಚ್‍ಡಿಎಫ್‌‍ಸಿ, ಐಸಿಐಸಿಐ,  ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸೌತ್ ಇಂಡಿಯಾ  ಬ್ಯಾಂಕ್, ಕರ್ನಾಟಕ ಬ್ಯಾಂಕ್, ಸ್ಟಾಂಡರ್ಡ್ ಚಾರ್ಟೆಡ್ ಬ್ಯಾಂಕ್  ಮೊದಲಾದ 30 ಬ್ಯಾಂಕ್‍ಗಳ ಗ್ರಾಹಕರು ಈ ಆ್ಯಪ್  ಮೂಲಕ ವಹಿವಾಟು ನಡೆಸಬಹುದಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ