ಸುದ್ದಿ

ಭಾರತೀಯ ಸೇನೆ ಪಾಕ್ ನೆಲದಲ್ಲಿ ದಾಳಿ ನಡೆಸಿದ ವೇಳೆ ನರೇಂದ್ರ ಮೋದಿ ಏನ್ ಮಾಡ್ತಾ ಇದ್ರು ಗೊತ್ತಾ..?

125

ಪುಲ್ವಾಮ ದಾಳಿ ನಂತ್ರ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಏರ್ ಸ್ಟ್ರೈಕ್ ನಡೆಸಿದೆ. ಗಡಿ ನಿಯಂತ್ರಣ ರೇಖೆಯಲ್ಲಿರುವ ಜೈಷ್ ಉಗ್ರ ಸಂಘಟನೆ ಅಡಗು ತಾಣದ ಮೇಲೆ ರಾತ್ರಿ ಸುಮಾರು 3.30 ರ ಸುಮಾರಿಗೆ ಬಾಂಬ್ ದಾಳಿ ನಡೆಸಿದ್ದವು.

12 ಮಿರಾಜ್-2000 ಯುದ್ಧ ವಿಮಾನಗಳು 1000 ಕೆ.ಜಿ ಬಾಂಬ್ ದಾಳಿ ಮಾಡಿದ್ದವು. ದಾಳಿ ಬಗ್ಗೆ ಪಾಕಿಸ್ತಾನಕ್ಕೆ ಸಣ್ಣ ಸುಳಿವೂ ಇರಲಿಲ್ಲ. ವ್ಯವಸ್ಥಿತವಾಗಿ ದಾಳಿ ನಡೆಸಿದ್ದ ಸೇನೆ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.

ಮಂಗಳವಾರ ಬೆಳಗಿನ ಜಾವ ಈ ದಾಳಿ ನಡೆದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತ್ರ ಸೋಮವಾರ ರಾತ್ರಿ ಮಲಗಿರಲಿಲ್ಲವಂತೆ. ಮೂಲಗಳ ಪ್ರಕಾರ, ಮೋದಿ ಕಾರ್ಯಾಚರಣೆ ಮೇಲೆ ಕಣ್ಣಿಟ್ಟಿದ್ದರಂತೆ. ಹೋಗಿದ್ದ ಎಲ್ಲ ಯುದ್ಧ ವಿಮಾನಗಳು ವಾಪಸ್ ಬಂದಿವೆ ಎಂಬುದು ಕಾತ್ರಿಯಾದ್ಮೇಲೆ ಮೋದಿ, ಸೇನೆಗೆ ಶುಭಕೋರಿದ್ದರಂತೆ.

ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮಂತ್ರಿಮಂಡಲದ ಸಭೆ ನಡೆಸಿದ್ದರು. ನಂತ್ರ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ನಂತ್ರ ರಾಜಸ್ತಾನಕ್ಕೆ ತೆರಳಿದ್ದರು. ಅಲ್ಲಿ ಸಭೆ ನಡೆಸಿ ದೆಹಲಿಗೆ ವಾಪಸ್ ಆದ ಮೋದಿ ಮೆಟ್ರೋದಲ್ಲಿ ಇಸ್ಕಾನ್ ದೇವಸ್ಥಾನಕ್ಕೆ ತೆರಳಿದ್ದರು. ರಾತ್ರಿ ನಿದ್ರೆಗೆಟ್ಟಿದ್ದರೂ ಮೋದಿ ಮಂಗಳವಾರ ಇಡೀ ದಿನ ತಮ್ಮ ಕೆಲಸದಲ್ಲಿ ನಿರತರಾಗಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ