ದೇಶ-ವಿದೇಶ

ಭಾರತದ ಈ ಪುಟ್ಟ ಬಾಲಕನ ಬುದ್ದಿವಂತಿಕೆ ಪ್ರಮಾಣ ಅಳೆಯಲು ವಿಜ್ನ್ಯಾನಿಗಳಿಗೂ ಕಷ್ಟವಾಗಿದೆ!ಹಾಗಾದ್ರೆ ಈ ಬಾಲಕನ ಸಾಧನೆ ಏನು ಗೊತ್ತಾ?

504

ಭಾರತ ಮೂಲದ ವಿಧ್ಯಾರ್ಥಿಗಳು ಎಷ್ಟು ಜೀನಿಯಸ್ ಎಂದ್ರೆ, ಪ್ರಪಂಚದ ಯಾವುದೇ ದೇಶದಲ್ಲಿ ಇದ್ದರೂ ಬುದ್ದಿವಂತಿಕೆಯಲ್ಲಿ ನಮ್ಮ ದೇಶದವರು ಒಂದು ಕೈ ಮೇಲೇನೆ ಇರುತ್ತಾರೆ.

ಮೂಲ

ಹೌದು! ಭಾರತ ಮೂಲದ ರಾಹುಲ್ ಎಂಬ ಪುಟ್ಟ ಬಾಲಕ ಬ್ರಿಟಿಷ್ ಟಿವಿ ಷೋ ಒಂದರಲ್ಲಿ ಭಾಗವಹಿಸುವ ಮುಖಾಂತರ ಫೇಮಸ್ ಆಗಿದ್ದಾನೆ.

ಭಾರತ ಮೂಲದ 12 ವರ್ಷ ವಯಸ್ಸಿನ ಬಾಲಕ ಬ್ರಿಟಿಷ್ ಟಿವಿ ಷೋ ಒಂದರಲ್ಲಿ ಎಲ್ಲ ಪ್ರಶ್ನೆಗಳಿಗೆ ಸರಿ ಉತ್ತರ ನೀಡುವ ಮೂಲಕ ರಾತ್ರೋರಾತ್ರಿ ಮನೆಮಾತಾಗಿದ್ದಾನೆ.

ಚಾನಲ್ 4 ಪ್ರಸಾರ ಮಾಡುವ ಚೈಲ್ಡ್ ಜೀನಿಯಸ್ ಕಾರ್ಯಕ್ರಮದಲ್ಲಿ ರಾಹುಲ್ ಎಂಬ ಪುಟ್ಟ ಬಾಲಕ ಮೊದಲ ಸುತ್ತಿನಲ್ಲಿ ಎಲ್ಲ 14 ಪ್ರಶ್ನೆಗಳಿಗೂ ಸರಿ ಉತ್ತರ ನೀಡಿ ಗಮನ ಸೆಳೆದಿದ್ದಾನೆ.

ಅಲ್ಬರ್ಟ್ ಐನ್ಸ್ಟೀನ್’ಗಿಂತಲೂ ಅಧಿಕ ಐಕ್ಯೂ

162 ಐಕ್ಯೂ ಹೊಂದಿರುವ ಈ ಬಾಲಕ, ಅಲ್ಬರ್ಟ್ ಐನ್ಸ್ಟೀನ್ ಹಾಗೂ ಸ್ಟೀಫನ್ ಹಾಕಿಂಗ್ಸ್ಗಿಂತಲೂ ಅಧಿಕ ಐಕ್ಯೂ ಹೊಂದಿದ್ದಾನೆ ಎಂದು ಹೇಳಲಾಗಿದೆ.

ಇವನ ಐಕ್ಯೂ ಪ್ರಮಾಣ ಹಳೆಯಲು ಇನ್ನೂ ಸಾಧ್ಯವಾಗಿಲ್ಲ

ಈ ಮೂಲಕ ಬಾಲಕ ವಿಶ್ವದ ಅತ್ಯಧಿಕ ಐಕ್ಯೂ ಹೊಂದಿದ ವ್ಯಕ್ತಿಗಳ ಸಾಲಿಗೆ ಸೇರಿದ್ದಾನೆ. ಆದರೆ ಈತನ ಐಕ್ಯೂ ಪ್ರಮಾಣವನ್ನು ನಿಖರವಾಗಿ ಯಾವ ವಿಜ್ಞಾನಿಗಳೂ ಅಳೆದಿಲ್ಲ. ಇದು ಅಂದಾಜು ಐಕ್ಯೂ ಆಗಿದೆ.

ಇದರ ಬಗ್ಗೆ ರಾಹುಲ್ ಹೇಳಿದ್ದೇನು ಗೊತ್ತಾ?

ರಾಹುಲ್ ಹೇಳಿರುವ ಪ್ರಕಾರ ನಾನು ಯಾವಾಗಲು ಖರ್ಚಿನ ಬಗ್ಗೆ ಯೋಚನೆ ಮಾಡದೆ, ನನ್ನ ಕಡೆಯಿಂದ ಅತ್ಯುತ್ತಮವಾದದನ್ನು ಏನೆಲ್ಲಾ ಕೊಡಬಹುದೋ, ಅದನ್ನು ಕೊಡಲು ಪ್ರಯತ್ನಿಸುತ್ತೇನೆ.ನನ್ನ ಪ್ರಕಾರ ನಾನು ಬುದ್ದಿವಂತ, ಪ್ರತಿಭಾವಂತ. ನಾನು ಮಾನಸಿಕ ಗಣಿತ ಮತ್ತು ಸಾಮಾನ್ಯ ಜ್ಞಾನದಲ್ಲಿ ತುಂಬಾ ಉತ್ತಮವಾಗಿದ್ದೇನೆ. ನನ್ನ ನೆಚ್ಚಿನ ಭಾಷೆ ಲ್ಯಾಟಿನ್ ಎಂದು ರಾಹುಲ್ ಹೇಳಿದ್ದಾರೆ.

ಪರೀಕ್ಷೆ ಹೇಗೆ ನಡೆಯುತ್ತೆ?

ಈ ಕಾರ್ಯಕ್ರಮದಲ್ಲಿ 12 ವರ್ಷ ವಯಸ್ಸಿನ 20 ಮಕ್ಕಳ ಪೈಕಿ ವಾರಕ್ಕೆ ಒಬ್ಬ ಬಾಲಕನನ್ನು ಆಯ್ಕೆ ಮಾಡಲಾಗುತ್ತದೆ. ಸ್ಪೆಲ್ಲಿಂಗ್ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದ ರಾಹುಲ್ ಕಠಿಣ ಶಬ್ದಗಳನ್ನು ಕೂಡಾ ಸಮರ್ಪಕವಾಗಿ ಉಚ್ಚರಿಸಿದ್ದ.

ಟೈಮ್ಡ್ ಮೆಮೊರಿ ಸುತ್ತಿನಲ್ಲಿ 15 ಪ್ರಶ್ನೆಗಳ ಪೈಕಿ 14ಕ್ಕೆ ಸರಿ ಉತ್ತರ ನೀಡಿದ್ದ. ಆದರೆ ಅಂತಿಮ ಪ್ರಶ್ನೆಗೆ ಉತ್ತರಿಸಲು ಸಮಯಾವಕಾಶ ಇರಲಿಲ್ಲ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ