ಸುದ್ದಿ

ಬೆಂಗಳೂರಿನ ಇಬ್ಬರ ಬಳಿ ಬಿಟ್ರೆ,ಈ ಕಾರು ಇರುವದು ಈ ಕ್ಷೌರಿಕನಲ್ಲಿ ಮಾತ್ರ..!ಈ ಲೇಖನ ಓದಿ ಶಾಕ್ ಆಗ್ತೀರಾ…

1176

2011ರಲ್ಲಿ ರಾಲ್ಸ್ ರಾಯ್ಸ್ ಕಾರು ಕೊಂಡು ಸಖತ್ ಫೇಮಸ್ ಆಗಿದ್ದ ಕ್ಷೌರಿಕ ರಮೇಶ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಕಳೆದ ತಿಂಗಳು ರಮೇಶ್ 3.2 ಕೋಟಿ ರೂ.ಮೌಲ್ಯದ ದುಬಾರಿ ಮರ್ಸಿಡಿಸ್ ಮೇಬ್ಯಾಕ್ ಎಸ್600 ಕಾರನ್ನ ಕೊಂಡುಕೊಂಡಿದ್ದಾರೆ.

ಜರ್ಮನಿಯಿಂದ ಆಮದು ಮಾಡಿಕೊಂಡಿರೋ ಈ ಕಾರ್ ಬೆಂಗಳೂರಿನಲ್ಲಿ ವಿಜಯ್ ಮಲ್ಯ ಹಾಗೂ ಮತ್ತೊಬ್ಬ ಉದ್ಯಮಿ ಬಳಿ ಬಿಟ್ಟರೆ ಈಗ ರಮೇಶ್ ಅವರ ಬಳಿ ಮಾತ್ರ ಇರೋದು.

ಇವರ ಬಳಿ ಈಗಾಗಲೇ ರೋಲ್ಸ್ ರಾಯ್ಸ್ ಕಾರು, 11 ಮರ್ಸಿಡಿಸ್, 10 ಬಿಎಂಡಬ್ಲ್ಯೂ, 3 ಆಡಿ ಹಾಗೂ 2 ಜಾಗ್ವಾರ್ ಕಾರುಗಳಿವೆ.

45 ವರ್ಷದ ರಮೇಶ್ ಕಳೆದ ತಿಂಗಳು ಬ್ಯಾಂಕ್ ಲೋನ್ ಜೊತೆಗೆ ತಮ್ಮ ಸ್ವಂತ ಹಣದಲ್ಲಿ ಮರ್ಸಿಡಿಸ್ ಮೇಬ್ಯಾಕ್ ಕಾರನ್ನು ಕೊಂಡುಕೊಂಡಿದ್ದಾರೆ. 1994ರಲ್ಲಿ ಮಾರುತಿ ಓಮ್ನಿ ಕಾರನ್ನು ಕೊಂಡು ಬಾಡಿಗೆಗೆ ಬಿಟ್ಟ ನಂತರ ರಮೇಶ್ ಅವರ ಅದೃಷ್ಟವೇ ಬದಲಾಯಿತು.

ಅಲ್ಲಿಂದ ರಮೇಶ್ ಅವರಿಗೆ ಕಾರ್‍ಗಳ ಮೇಲಿನ ಪ್ರೀತಿ ಶುರುವಾಯ್ತು. ಪ್ರಸ್ತುತ ರಮೇಶ್ ಅವರ ಬಳಿ 150 ಐಷಾರಾಮಿ ಕಾರುಗಳಿವೆ. ಇವುಗಳಲ್ಲಿ ಕೆಲವನ್ನ ರಮೇಶ್ ಕೆಲಸಕ್ಕೆ ಹೋಗುವಾಗ ತೆಗೆದುಕೊಂಡು ಹೋಗ್ತಾರೆ ಅಥವಾ ಒಳ್ಳೇ ಗ್ರಾಹಕರು ಸಿಕ್ಕರೆ ಬಾಡಿಗೆಗೆ ಕೊಡ್ತಾರೆ.

ನಾನು ಯಾವ ಮಟ್ಟದಿಂದ ಇಲ್ಲಿಯತನಕ ಬಂದೆ ಅನ್ನೋದನ್ನ ಮರೆಯಲು ಇಷ್ಟವಿಲ್ಲ. ನಾನು ಪಟ್ಟ ಕಷ್ಟ, ತಂದೆ ತೀರಿಕೊಂಡ ಬಳಿಕ ನನ್ನ ತಾಯಿ ಬಡತನದಲ್ಲೂ ನನ್ನನ್ನು ಕಷ್ಟಪಟ್ಟು ಸಾಕಿದ್ದನ್ನು ಮರೆಯೋಕಾಗಲ್ಲ.

ಈ ಕೆಲಸದಿಂದಲೇ ನಾನಿಂದು ಶ್ರೀಮಂತನಾಗಿದ್ದೀನಿ. ಆದ್ದರಿಂದ ಈ ಕೆಲಸವನ್ನು ಮುಂದುವರೆಸುತ್ತೇನೆ. ಈ ರೀತಿಯ ಇನ್ನೂ ಅನೇಕ ಕಾರ್‍ಗಳನ್ನು ಹೊಂದಬೇಕು ಎಂಬುದು ನನ್ನ ಡ್ರೀಮ್ ಅಂತಾರೆ ರಮೇಶ್.1979ರಲ್ಲಿ ಅವರ ತಂದೆ ತೀರಿಕೊಂಡಾದ ರಮೇಶ್‍ಗೆ 9 ವರ್ಷ.

ಎಸ್‍ಎಸ್‍ಎಲ್‍ಸಿ ಮುಗಿದ ಬಳಿಕ ವಿದ್ಯಾಭ್ಯಾಸ ನಿಲ್ಲಿಸಿ ತಂದೆಯಂತೆಯೇ ಕ್ಷೌರಿಕ ವೃತ್ತಿಯನ್ನ ಮುಂದುವರೆಸಿದ್ರು.ಸಲೂನ್‍ನಿಂದ ಇವರಿಗೆ ಬರುವ ಆದಾಯ ಸಾಧಾರಣವಾಗಿದ್ರೂ ಲಾಭದಾಯಕವಾದ ಕಾರ್ ಬಾಡಿಗೆಗೆ ಕೊಡುವ ಬಿಸಿನೆಸ್ ನಡೆಸಿಕೊಂಡು ಬರ್ತಿದ್ದಾರೆ ರಮೇಶ್ ಅವರು ತಮ್ಮ ಹೇರ್ ಸಲೂನ್‍ನಲ್ಲಿ 75 ರೂ.ಗೆ ಹೇರ್ ಕಟ್ ಮಾಡುವುದರ ಜೊತೆಗೆ ಐಷಾರಾಮಿ ಕಾರುಗಳನ್ನ ಬಾಡಿಗೆಗೆ ಕೊಡ್ತಾರೆ.

ರಮೇಶ್ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕರಾದ ಇವರು ಬೌರಿಂಗ್ ಇನ್ಸ್ ಟಿಟ್ಯೂಟ್‍ನ ತಮ್ಮ ಸಲೂನ್‍ನಲ್ಲಿ ಪ್ರತಿದಿನ ಕನಿಷ್ಠ 5 ಗಂಟೆಗಳ ಕಾಲ ಗ್ರಾಹಕರಿಗೆ ಹೇರ್‍ಕಟ್ ಮಾಡ್ತಾರೆ. ತನ್ನ ಕಸುಬನ್ನು ಬಿಡಬಾರದು ಎಂಬ ಕಾರಣಕ್ಕೆ ಕ್ಷೌರಿಕ ವೃತ್ತಿಯನ್ನ ಮುಂದುವರೆಸಿಕೊಂಡು ಬಂದಿದ್ದಾರೆ.

ತಮ್ಮ ಬಿಳಿ ಬಣ್ಣದ ರಾಲ್ಸ್ ರಾಯ್ಸ್ ಕಾರಿನಲ್ಲೇ ಕೆಲಸಕ್ಕೆ ರಮೇಶ್ ಹೋಗುವುದು ವಿಶೇಷ.ವಿಜಯ್ ಮಲ್ಯ ಬಳಿ ಕೂಡ ಚಿನ್ನದ ಬಣ್ಣದ ಮೇಬ್ಯಾಕ್ ಕಾರ್ ಇತ್ತು. ಮಲ್ಯ ಹಾಗೂ ಮತ್ತೊಬ್ಬ ಉದ್ಯಮಿಯನ್ನು ಬಿಟ್ಟರೆ.

ಆ ಕ್ಷೌರಿಕ ಇತ್ತೀಚೆಗಷ್ಟೇ ಜರ್ಮನಿಯಿಂದ ಆ ಕಾರನ್ನು ಆಮದು ಮಾಡಿಕೊಂಡಿದ್ದರು. ಅವರು ಬೇರಾರೂ ಅಲ್ಲ, ಬೆಂಗಳೂರಿನ ದಂತಕತೆಯಾಗಿರುವ ಕ್ಷೌರಿಕ ರಮೇಶ್ ಬಾಬು. 75 ರೂ.ಗಳಿಗೆ ಕ್ಷೌರ ಸೇವೆ ನೀಡುವ ಅವರಿಗೆ ದುಬಾರಿ ಕಾರುಗಳನ್ನು ಸಂಗ್ರಹಿಸುವುದೇ ಹವ್ಯಾಸ

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ರಾಜ ರಾಜೇಶ್ವರಿ ದೇವಿಯನ್ನು ಭಕ್ತಿಯಿಂದ ಸ್ಮರಿಸಿ. ಈ ದಿನದ ನಿಮ್ಮ ರಾಶಿಯ ಶುಭ ಫಲಗಳನ್ನು ತಿಳಿಯಿರಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whatsapp/ ಮೇಷ ನಿಮ್ಮ ಖರ್ಚುಗಳಲ್ಲಿ…

  • ಕರ್ನಾಟಕ

    ನಮ್ಮ ಬೆಂಗಳೂರು ಮಹಾನಗರಕ್ಕೆ ಸಿಕ್ತು,ಹೊಸದೊಂದು ನೊರೆ ಬಾಗ್ಯ!ಏನಿದು ನೊರೆ ಬಾಗ್ಯ ಅಂತೀರಾ?ಮುಂದೆ ಓದಿ…

    ಮಳೆ ಬಂದ್ರೆ ಸಾಕು ಬೆಂಗಳೂರಿಗರಿಗೆ ಭಯ.ಯಾಕೆಂದ್ರೆ ಎಲ್ಲಿ ಏನಾಗುತ್ತೆ ಗೊತ್ತಿಲ್ಲ. ಯಾವ ಮೋರಿಯಿಂದ ನೀರು ಹೊರಬಂದು ಮನೆಗಳಿಗೆ ನುಗ್ಗುತ್ತೋ ಎನ್ನುವ ಭಯ. ಎಲ್ಲಿ ಟ್ರಾಫಿಕ್ ಜಾಮ್ ಆಗುತ್ತೋ ಅನ್ನೋ ಭಯ.ಇವೆಲ್ಲದರ ನಡುವೆ ಇನ್ನೊಂದು ಭಾಗ್ಯ ಬೆಂಗಳೂರಿಗರಿಗೆ ಸೇರಲಿದೆ.

  • ಸ್ಪೂರ್ತಿ

    19 ವರ್ಷದ ಈ ಯುವತಿ ತನ್ನ ಓದಿಗಾಗಿ ಮಾಡಿದ್ದು ಏನು ಗೊತ್ತಾ..!ಮುಂದೆ ಓದಿ ಶಾಕ್…

    ಜೀವನ ನಾವು ಅಂದುಕೊಂಡಷ್ಟು ಸುಲಭವೂ ಅಲ್ಲ, ಹಾಗೆಯೇ ಕಷ್ಟವೆಂದು ಕುಳಿತು ಕೊಳ್ಳುವಷ್ಟು ಕಷ್ಟವು ಅಲ್ಲ. ಜೀವನದಲ್ಲಿ ಕಷ್ಟ ಸುಖ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಮ್ಮೆ ಕಷ್ಟ ಬಂದರೆ ಮತ್ತೊಮ್ಮೆ ಸುಖ ಬರುತ್ತದೆ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೇ ಜೀವನವನ್ನ ನಡೆಸ ಬೇಕು. ಕಷ್ಟಗಳು ಬಂದವೆಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಬದಲು ಛಲದಿಂದ ಕಷ್ಟಗಳನ್ನ ಎದುರಿಸಿ ಮುಂದೆ ಸಾಗಬೇಕು. ನಾವೀಗ ಹೇಳಲಿರುವ ಯುವತಿ ಸಹ ಇದೇ ಪಟ್ಟಿಗೆ ಸೇರುತ್ತಾಳೆ.

  • ಸುದ್ದಿ

    ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ,…ಏನೆಂದು ತಿಳಿಯಿರಿ?

    ರಾಜ್ಯ ರಾಜಧಾನಿಯ ಮೆಜೆಸ್ಟಿಕ್ ರೈಲ್ವೇ ನಿಲ್ದಾಣಕ್ಕೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಕರೆ ಬಂದಿದ್ದು, ನಿಲ್ದಾಣದಲ್ಲಿದ್ದ ರೈಲಿನಲ್ಲಿ ಅನುಮಾನಾಸ್ಪದ ಬ್ಯಾಗೊಂದು ಪತ್ತೆಯಾಗಿದೆ.ಇಂದು ಮೆಜೆಸ್ಟಿಕ್ ರೈಲ್ವೇ ನಿಲ್ದಾಣಕ್ಕೆ ದುಷ್ಕರ್ಮಿಗಳು ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆಯನ್ನು ಮಾಡಿದ್ದರು. ಇದೇ ವೇಳೆ ನಿಲ್ದಾಣದಲ್ಲಿದ್ದ ಪಾಟ್ನಾ ಎಕ್ಸ್ ಪ್ರೆಸ್ ರೈಲಿನ ಬೋಗಿಯೊಂದಲ್ಲಿ ಅನುಮಾನಾಸ್ಪದ ಬ್ಯಾಗೊಂದು ಪತ್ತೆಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪ್ರಯಾಣಿಕರು ಭಯಭೀತರಾಗಿದ್ದು, ಸ್ಥಳಕ್ಕೆ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಬಂದು ಬ್ಯಾಗ್ ಪರಿಶೀಲನೆ ಮಾಡಿದ್ದಾರೆ. ಬಾಂಬ್ ಬೆದರಿಕೆ ಕರೆ…

  • ಸುದ್ದಿ

    ತೆಲಂಗಾಣದ ಶಾಲಾ ಹಾಸ್ಟೆಲ್ ಬೆಂಕಿಗೆ ಆಹುತಿ: ವಿದ್ಯಾರ್ಥಿಯ ದುರ್ಮರಣ……!

    ಶಾಲಾ ಹಾಸ್ಟೆಲ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪುಟ್ಟ ಮಕ್ಕಳಿರುವ ಶಾಲೆ, ಹಾಸ್ಟೆಲ್‌ಗಳಲ್ಲಿ ಎಷ್ಟು ಮುಂಜಾಗ್ರತೆ ವಹಿಸಿದರೂ ಸಾಲದು. ಹಾಗಿರುವಾಗ ಬೆಂಕಿ, ಶಿಥಿಲ ಕಟ್ಟಡಗಳ ಬಗ್ಗೆ ನಿಗಾ ಇಡಬೇಕಾಗಿರುವುದು ಆಡಳಿತ ಮಂಡಳಿಯ ಕರ್ತವ್ಯವಾಗಿದೆ. ಶಾಲಾ ಹಾಸ್ಟೆಲ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ 10 ವರ್ಷದ ವಿದ್ಯಾರ್ಥಿ ಬೆಂಕಿಯಲ್ಲೇ ಬೆಂದು ಮೃತಪಟ್ಟಿದ್ದಾನೆ. ತೆಲಂಗಾಣಾದ ಖಮ್ಮಮ್‌ನಲ್ಲಿ ಈ ಘಟನೆ ನಡೆದಿದೆ. ಬಾಲಕನಿಗೆ ಹಾಸ್ಟೆಲ್‌ನಿಂದ ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ. ಅಷ್ಟೇ ಅಲ್ಲದೆ ಹಾಸ್ಟೆಲ್‌…