ರಸ್ತೆ

ಫೆರಿಫೆರಲ್‌ ರಿಂಗ್‌ ರಸ್ತೆ ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ

109
  • 21,091 ಕೋಟಿ ರೂ. ವೆಚ್ಚದ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ಬಾಕಿ
  • 73 ಕಿ.ಮೀ ಉದ್ದದ 8 ಪಥದ ಪೆರಿಫೆರಲ್‌ ರಿಂಗ್‌ ರಸ್ತೆ
  • ಸುಮಾರು 38,000 ಮರಗಳ ಹನನ..!

ತುಮಕೂರು ರಸ್ತೆ, ಹೊಸೂರು ರಸ್ತೆ ಸಂಪರ್ಕಿಸುವ ಪಿಆರ್‌ಆರ್‌ಗೆ ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ

ಯೋಜನೆ ಪೂರ್ಣಗೊಂಡ ನಂತರ, ಫೆರಿಫೆರಲ್‌ ರಿಂಗ್‌ ರಸ್ತೆಯು ಒಟ್ಟು 73 ಕಿ.ಮೀ ಉದ್ದ ಇರಲಿದ್ದು, ಇದು ಬೆಂಗಳೂರಿನ ಈಶಾನ್ಯ, ಪೂರ್ವ ಮತ್ತು ಆಗ್ನೇಯ ಭಾಗಗಳನ್ನು ಸಂಪರ್ಕಿಸಲಿದೆ. ನಗರದ ವಾಯುವ್ಯ, ಪಶ್ಚಿಮ ಮತ್ತು ನೈಋುತ್ಯ ಪ್ರದೇಶಗಳ ಮೂಲಕ ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸುವ ನೈಸ್‌ ರಸ್ತೆಯೊಂದಿಗೆ ಬೆಂಗಳೂರು ತನ್ನ ವ್ಯಾಪ್ತಿಯಲ್ಲಿ 116 ಕಿ. ಮೀ. ಉದ್ದದ ಬೈಪಾಸ್‌ ಹೊಂದಲಿದೆ.

ಬಹು ದಿನಗಳಿಂದ ಬಾಕಿ ಉಳಿದಿದ್ದ ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆ ಸಂಪರ್ಕಿಸುವ 8 ಪಥದ ಪೆರಿಫೆರಲ್‌ ರಿಂಗ್‌ ರಸ್ತೆ (ಪಿಆರ್‌ಆರ್‌)ಗೆ ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ ತೋರಿದೆ.

ಭೂ ಸ್ವಾಧೀನ ಮತ್ತು ಅನುದಾನ ಕೊರತೆಯ ಕಾರಣ ದಶಕಗಳಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಅಗತ್ಯ ಭೂಮಿ ಸ್ವಾಧೀನಪಡಿಸಿಕೊಳ್ಳುವ ಮೂಲಕ ಪಿಆರ್‌ಆರ್‌ ಯೋಜನೆ ಆರಂಭಿಸುವಂತೆ ಸುಪ್ರೀಂ ಕೋರ್ಟ್‌ ಇತ್ತೀಚಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕೆ ಸೂಚಿಸಿದೆ.

ಯೋಜನೆಗೆ ತಾಂತ್ರಿಕ ವಿವರಗಳು ಮತ್ತು ಟೆಂಡರ್‌ಗಳನ್ನು ಅಂತಿಮಗೊಳಿಸಲು ರಾಜ್ಯ ಸರಕಾರ ಇತ್ತೀಚಿಗೆ ಎರಡು ಸಭೆಗಳನ್ನು ನಡೆಸಿದೆ. ಯೋಜನಾ ವೆಚ್ಚ 21,091 ಕೋಟಿ ರೂ. ಆಗಿದ್ದು, ಸಾರ್ವಜನಿಕ – ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ) ರಸ್ತೆ ನಿರ್ಮಿಸಲು ಸರಕಾರ ಮತ್ತು ಬಿಡಿಎ ನಿರ್ಧರಿಸಿವೆ. ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಆಧಾರದ ಮೇಲೆ ಗುತ್ತಿಗೆದಾರರ ನಿರ್ಧಾರವಾಗುವ ನಿರೀಕ್ಷೆಯಿದೆ.

 

ಹಿಂದಿನ ಪ್ರಸ್ತಾವನೆಯಂತೆ ಯೋಜನೆಗಾಗಿ 33,000 ಮರಗಳನ್ನು ತೆರೆವುಗೊಳಿಸಬೇಕಿದೆ. ಯೋಜನೆಯ ವಿನ್ಯಾಸದಲ್ಲಿ ಬದಲಾವಣೆ ಹಿನ್ನೆಲೆಯಲ್ಲಿ ಹೆಚ್ಚುವರಿ ಭೂಮಿ ಸ್ವಾಧೀನದ ಕಾರಣ ಹೆಚ್ಚುವರಿ 5,000 ಮರಗಳನ್ನು ತೆರೆವುಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಹೊಸ ಪ್ರಸ್ತಾವನೆಯನ್ನು ಬಿಡಿಎ ಸಲ್ಲಿಸಿದೆ ಎಂದು ತಿಳಿಸಿದರು.

15 ವರ್ಷಗಳ ಹಿಂದೆ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದಾಗ ಯೋಜನಾ ವೆಚ್ಚ 3 ಸಾವಿರ ಕೋಟಿ ರೂ. ಆಗಿತ್ತು. ಆದರೆ ಸುದೀರ್ಘ ವಿಳಂಬದ ಕಾರಣ ಯೋಜನಾ ವೆಚ್ಚು ಏಳು ಪಟ್ಟು ಹೆಚ್ಚಿದೆ. ಇತ್ತೀಚಿನ ಅಂದಾಜಿನ ಪ್ರಕಾರ, ಭೂಸ್ವಾಧೀನಕ್ಕೆಂದೇ 15,475 ಕೋಟಿ ರೂ. ವೆಚ್ಚವಾಗಲಿದೆ ಹಾಗೂ ಸಂಪೂರ್ಣ ಯೋಜನಾ ವೆಚ್ಚ 21,091 ಕೋಟಿ ರೂ. ನಿಗದಿಪಡಿಸಲಾಗಿದೆ.

ಪಿಆರ್‌ಆರ್‌ ನಿರ್ಮಾಣಕ್ಕೆ ಐರೋಪ್ಯ ಕಂಪನಿಗಳು ಮತ್ತು ಇಸ್ರೇಲಿ ಸಂಸ್ಥೆ ಆಸಕ್ತಿ ತೋರಿವೆ. ಆದರೆ ಇನ್ನೂ ಟೆಂಡರ್‌ ಪ್ರಕ್ರಿಯೆ ಆರಂಭವಾಗಿಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಶ-ವಿದೇಶ

    ಮೋದಿ ಸರ್ಕಾರದ ಹೊಸ ಶಾಕ್ !!!

    ಅಪನಗದೀಕರಣದಿಂದ ಚೇತರಿಸಿಕೊಳ್ಳುವಾಗಲೇ ಮತ್ತೊಂದು ಶಾಕ್ ನೀಡಲು, ಮೋದಿ ಸರಕಾರ ಮುಂದಾಗುವ ಸಾಧ್ಯತೆ ಇದೆ, ಎಂದು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವರದಿಯಾಗಿದೆ.

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(6 ಮಾರ್ಚ್, 2019) ನಿಮ್ಮ ಪತ್ನಿಯೊಂದಿಗಿನ ಸಂಬಂಧಗಳನ್ನು ಉತ್ತಮಗೊಳಿಸುವ ಒಂದು ದಿನ. ಕುಟುಂಬದಲ್ಲಿರುವ ಇಬ್ಬರೂ ಅವರ ಸಂಬಂಧದಲ್ಲಿ…

  • ರಾಜಕೀಯ

    ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ..ನಿಮ್ಮ ಕ್ಷೇತ್ರದ ಅಭ್ಯರ್ಥಿ ಯಾರು..?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಚುನಾವಣಾ ರಣರಂಗ ದಿನೇ ದಿನೇ ಹೆಚ್ಚು ಹಾಮಾನಾ ಸೆಳೆಯುತ್ತಿದ್ದು, ಮತದಾನ ಮಾಡುವುದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದವು. ಆದರೆ ಕಾಂಗ್ರೆಸ್ ಮಾತ್ರ ತಾಳ್ಮೆ ತೆಗೆದುಕೊಂಡಿತ್ತು.. ಆದರೆ ನೆನ್ನೆ ಸಂಜೆ ವೇಳೆಗೆ ತನ್ನ ಮೊದಲ ಪಟ್ಟಿಯಲ್ಲಿ ಬಹುತೇಕ ಕರ್ನಾಟಕ ರಾಜ್ಯದ ವಿಧಾನಸಭಾ ಅಭ್ಯರ್ಥಿಗಳ ಹೆಸರನ್ನು ಒಂದೇ ಪಟ್ಟಿಯಲ್ಲಿ ಬಿಡುಗಡೆ ಮಾಡಿದೆ. ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಬಂಡ ಜಿ…

  • Health

    ನೆನೆಸಿಟ್ಟ ಒಣದ್ರಾಕ್ಷಿ ದಿನಾ ಒಂದೆರಡು ತಿಂದ್ರೆ, ಏನೆಲ್ಲಾ ಲಾಭವಿದೆ ಗೊತ್ತಾ?

    ಸಾಮಾನ್ಯವಾಗಿ ಸಿಹಿತಿಂಡಿಗಳ ರುಚಿಯನ್ನು ಹೆಚ್ಚಿಸಲು ಗೋಡಂಬಿಯ ಜೊತೆಗೆ ದ್ರಾಕ್ಷಿಯನ್ನು ಸೇರಿಸುತ್ತಾರೆ. ಹಲವು ಅಡುಗೆಗಳಿಗೆ ಈ ದ್ರಾಕ್ಷಿ ಗೋಡಂಬಿಗಳನ್ನು ಬಳಸುತ್ತಾರೆ. ಆದರೆ ಒಣದ್ರಾಕ್ಷಿಯ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೂ ಹಲವು ಲಾಭಗಳಿವೆ ಏನೆಂದು ತಿಳಿಯೋಣ ಬನ್ನಿ. ಹೃದಯದ ತೊಂದರೆಗಳಿಂದ ರಕ್ಷಿಸುತ್ತದೆ : ಒಣದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದ್ದು ಇದರೊಂದಿಗೆ ಹಲವು ಇತರ ಪೋಷಕಾಂಶಗಳೂ ಇವೆ. ಈ ಪೋಷಕಾಂಶಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ತನ್ಮೂಲಕ ಹೃದಯ ಸಂಬಂಧಿ…

  • ಸುದ್ದಿ

    ಹೊರಬಿತ್ತು ರಾಮ ಸೇತುವಿನ ನಿಗೂಡ ರಹಸ್ಯ..!ಅಮೇರಿಕಾದ ನಾಸಾ ವಿಜ್ಞಾನಿಗಳು ಹೇಳಿದ ಸತ್ಯ ಏನು ಗೊತ್ತಾ..?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ರಾಮ ಸೇತುವಿನ ಬಗ್ಗೆ ನಿಮಗೆ ತಿಳಿದೇ ಇದೆ. ರಾವಣ ಸೀತೆಯನ್ನು ಅಪಹರಿಸಿ ಲಂಕೆಯಲ್ಲಿಟ್ಟಾಗ ಆಕೆಯನ್ನು ಲಂಕೆಯಿಂದ ಕರೆದುಕೊಂಡು ಬರುವ ಸಲುವಾಗಿ ಭಾರತ ಮತ್ತು ಶ್ರೀಲಂಕಾದ ನಡುವೆ ರಾಮೇಶ್ವರದಲ್ಲಿ ನಿರ್ಮಾಣ ಮಾಡಿದ ರಾಮನ ಸೇತುವೆ ಇದಾಗಿದೆ. ಈ ಸೇತುವೆ ಸುಮಾರು 30 ಮೈಲು ಉದ್ದ ಇದೆ. ಈ ಹಿಂದೆ ಇದೆಲ್ಲಾ ಸುಳ್ಳು ಎಂದು ಹೇಳಲಾಗಿತ್ತು. ಆದರೆ ಈ ಸೇತುವೆಯ ಇರುವಿಕೆಯನ್ನು ನಾಸಾ ಸ್ಪಷ್ಟಪಡಿಸಿತ್ತು.