ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇವಾಗ ಸೆಲ್ಫಿ ಯುಗ.ನಮ್ಮ ಕೈನಲ್ಲಿ ಮೊಬೈಲ್ ಇದ್ದರೆ ಸಾಕು ಸೆಲ್ಫಿ ಪೋಟೋಗಳದ್ದೆ ಕಾರು ಬಾರು.ಈಗಂತೂ ಸೆಲ್ಫಿಗೆ ಇಂತದ್ದೇ ಸ್ಥಳ,ಜಾಗ,ಸಮಯ ಅಂತೇನೂ ಇಲ್ಲ. ಎಲ್ಲೆಂದರೆ ಅಲ್ಲೇ,ಹೇಗೆಂದರೆ ಹಾಗೆ ಸೆಲ್ಫಿ ಪೋಟೋ ತೆಗೆದುಕೊಳ್ಳುತ್ತಾರೆ.ಊಟಕ್ಕೆ, ಶಾಪಿಂಗ್‌ಗೆ, ಪಾರ್ಟಿಗೆ, ಅಥವಾ ಕಾರಣವೇ ಇಲ್ಲದೇ ಸುಮ್ಮನೇ ಸೆಲ್ಫಿ ಜೊತೆಗಿರಬೇಕು.
ಈಗ ಸೆಲ್ಫಿ ಫೋಟೋಗಳಿಗಾಗಿಯೇ ಹೊಸ ಹೊಸ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ಫೋನ್’ಗಳು ಬರುತ್ತಿವೆ.ಈ ಸೆಲ್ಫಿ ಫೋಟೋ ತೆಗೆದುಕೊಳ್ಳುವುದು, ಎಷ್ಟು ರೋಮಾಂಚನವಾಗಿರುತ್ತೋ ಅಷ್ಟೇ ಭಯಾನಕತೆಯೂ ಇದೆ.ಈ ಸೆಲ್ಫಿ ಹುಚ್ಚಿನಿಂದಾಗಿ ವಿಶ್ವದಾದ್ಯಂತ ಸಾವಿರಾರು ಜನರು ಸಾವನಪ್ಪಿದ್ದಾರೆ.ಅಂಕಿ ಅಂಶಗಳ ಪ್ರಕಾರ ಶೇಕಡಾ 60ರಷ್ಟು ಪಾಲು ಭಾರತದಲ್ಲಿದೆ.
ಈ ಮಧ್ಯೆ ನಡೆದ ಸಂಶೋಧನೆಯೊಂದು ಸೆಲ್ಫಿಯನ್ನು ಮಾನಸಿಕ ರೋಗ ಎಂದು ಘೋಷಣೆ ಮಾಡಿದೆ. ಯುಕೆ ನ ನಾಟ್ಟಿಂಗ್ಹ್ಯಾಮ್ ಟ್ರೆಂಟ್ ಯುನಿವರ್ಸಿಟಿ ಮಧುರೈನ ತ್ಯಾಗರಾಜ್ ಮ್ಯಾನೇಜ್ಮೆಂಟ್ ಶಾಲೆಯಲ್ಲಿ ಈ ಅಧ್ಯಯನ ಮಾಡಿದ್ದಾರೆ.ಅವಶ್ಯಕತೆಗಿಂತ ಹೆಚ್ಚು ಸೆಲ್ಫಿ ತೆಗೆಯುವುದು ಹಾಗೂ ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುವುದು ಒಂದು ರೋಗ. ಇದನ್ನು ಸೆಲ್ಫಿಟಿಸ್ ಎಂದು ಕರೆಯಲಾಗುತ್ತದೆ. ಸೆಲ್ಫಿಟಿಸ್ ಅನೇಕ ವರ್ಷಗಳಿಂದ ಕೇಳಿ ಬರುತ್ತಿರುವ ಶಬ್ಧ. ಆದರೆ ಇವಾಗ ವೈದ್ಯರು ಇದಕ್ಕೆ ಮಾನಸಿಕ ರೋಗದ ರೂಪ ಕೊಟ್ಟಿದ್ದಾರೆ.
ಸಂಶೋಧನಕಾರರು ಇದನ್ನು ಸೆಲ್ಫಿಟಿಸ್ ಬಿಹೇವಿಯರ್ ಸ್ಕೇಲ್ ಎಂದು ಕರೆದಿದ್ದಾರೆ. ಇದರಲ್ಲಿ ಮೂರು ಹಂತವಿರುತ್ತದೆ. ಪ್ರಾರಂಭದಲ್ಲಿ ಈ ರೋಗಿಗಳು ದಿನಕ್ಕೆ ಮೂರು ಸಲ ಮಾತ್ರ ಫೋಟೋ ತೆಗೆದುಕೊಳ್ಳುತ್ತಾರೆ.ಆದರೆ ಸಾರ್ವಜನಿಕ ಜಾಲತಾಣಕ್ಕೆ ಹಾಕುವುದಿಲ್ಲ. ಎರಡನೇ ಹಂತದಲ್ಲಿ ಸೆಲ್ಫಿ ತೆಗೆಯುವ ಪ್ರಮಾಣ ಹೆಚ್ಚಾಗುವ ಜೊತೆಗೆ ಸಾರ್ವಜನಿಕ ಜಾಲತಾಣಕ್ಕೆ ಫೋಟೋ ಹಾಕುವ ಚಟ ಶುರುವಾಗುತ್ತದೆ. ದಿನದಲ್ಲಿ ಹೆಚ್ಚೆಚ್ಚು ಫೋಟೋ ಹಾಕಲು ಮನಸ್ಸು ಹೇಳುತ್ತದೆ . ಈ ಕ್ರಿಯೆ ತುಂಬಾ ಜಾಸ್ತಿ ಆದಲ್ಲಿ ಅದನ್ನು ಕೊನೆಯ ಹಂತವೆಂದು ಹೇಳಬಹುದು.
ಸೆಲ್ಫಿ ಹುಚ್ಚಿಗೆ ಬಲಿಯಾಗುತ್ತಿರುವ ಪ್ರಕರಣಗಳನ್ನು ಹಲವಾರು ದೇಶಗಳು ಗಹನವಾಗಿ ತೆಗೆದುಕೊಂಡಿವೆ. ಇದರ ವಿಚಾರವಾಗಿ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಆದರೆ ಅಷ್ಟೊಂದು ಸೆಲ್ಫಿ ಹುಚ್ಚಿಗೆ ಸರಿಯಾದ ಕಾರಣವನ್ನು ಕಂಡುಇಡಿಯಲು ಆಗುತ್ತಿಲ್ಲ. ಆತ್ಮವಿಶ್ವಾಸದ ಕೊರತೆ, ಗಮನ ಸೆಳೆಯಲು, ಬೇರೆಯವರಿಗಿಂತ ಮುಂದಿರಲು ಬಯಸುವವರು ಈ ಹುಚ್ಚು ಹಚ್ಚಿಕೊಳ್ತಾರೆ ಎಂದು ನಂಬಲಾಗಿದೆ. ದೃಢ ನಿರ್ಧಾರ ಮಾಡಿದಲ್ಲಿ ಈ ರೋಗದಿಂದ ಸುಲಭವಾಗಿ ಹೊರಗೆ ಬರಬಹುದಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗಿನ್ನಿಸ್ ಬುಕ್ ಸೇರಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಒಬ್ಬೊಬ್ಬರು ಒಂದೊಂದು ಸಾಧನೆ ಮಾಡಿ ಗಿನ್ನಿಸ್ ಬುಕ್ ಸೇರ್ತಾರೆ. ಚೀನಾದ ಕ್ಸೀ ಕ್ಯುಪಿಂಗ್ ಜಗತ್ತಿನ ಅತೀ ಉದ್ದ ಕೂದಲು ಉಳ್ಳ ಮಹಿಳೆ ಎಂಬ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹೊಂದಿದ್ದಾಳೆ.
ವಿಮಾನದಲ್ಲಿ ಊಟ, ತಿಂಡಿ, ತಿನಿಸುಗಳನ್ನು ತಿನ್ನುವುದು ಸಾಮಾನ್ಯ. ಆದರೆ, ಉತ್ತರಪ್ರದೇಶದ ನೋಯ್ಡಾದಲ್ಲೊಂದು ಹಾರಾಡುವ ರೆಸ್ಟೋರೆಂಟ್ ಭಾರೀ ಜನಪ್ರಿಯಗೊಳ್ಳುತ್ತಿದೆ. ಭೂಮಿಯಿಂದ 160 ಅಡಿ ಎತ್ತರದ ಈ ರೆಸ್ಟೋರೆಂಟ್ ನಲ್ಲಿ ಸಾಹಸಮಯಿ ಜನರು ಊಟ ಮಾಡಿ ಸಂಭ್ರಮಿಸುತ್ತಿದ್ದಾರೆ. ಕ್ರೇನ್ ನ ಸಹಾಯದಿಂದ 160 ಅಡಿ ಎತ್ತರಕ್ಕೆ ಗ್ರಾಹಕರನ್ನು ಕರೆದೊಯ್ಯುವ ಈ ರೆಸ್ಟೋರೆಂಟ್ 24 ಸೀಟುಗಳ ಸಾಮರ್ಥ್ಯವನ್ನು ಹೊಂದಿದೆ. ದುಬೈನಲ್ಲಿ ಇಂತಹದ್ದೇ ಅನುಭವವನ್ನು ಪಡೆದು ಬಂದಿರುವ ನಿಖಿಲ್ ಕುಮಾರ್ ಎಂಬುವರು ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ರೆಸ್ಟೋರೆಂಟನ್ನು ಪರಿಚಯಿಸಿದ್ದಾರೆ.
ಪ್ಯಾರಾಚ್ಯೂಟ್ ಕೋಕೊನಟ್ ಆಯಿಲ್ ಗೊತ್ತಲ್ಲವೇ. ನಾವು ಚಿಕ್ಕಂದಿನಿಂದ ಅದನ್ನು ನಮ್ಮ ತಲೆಕೂದಲಿಗೆ ಹಚ್ಚಿಕೊಳ್ಳುತ್ತಿದ್ದೇವೆ. ಚಳಿಗಾಲದಲ್ಲಾದರೆ ಅದರಲ್ಲಿರುವ ಎಣ್ಣೆ ಗಡ್ಡೆಕಟ್ಟಿಕೊಳ್ಳುತ್ತದೆ. ಇದರಿಂದ ಅದನ್ನು ಬಿಸಿ ಮಾಡಿ ಹಚ್ಚಿಕೊಳ್ಳುತ್ತಿದ್ದೆವು.. ನೆನಪಿದೆಯೇ.
ಹೆಣ್ಣಾಗಿದ್ದುಕೊಂಡ ಆ ಅಧಿಕಾರಿ ಗರ್ಭಿಣಿಯ ಹೊಟ್ಟೆಗೆ ಒದ್ದು ಗರ್ಭಪಾತವಾಗುವಂತಹ ಪಾಪದ ಕರ್ಮ ಮಾಡಿದ್ದಾರೆ.ಹಾಗಂತ ಈಕೆಯೇನೂ ಅನಕ್ಷರಸ್ಥರಲ್ಲ. ಐಪಿಎಸ್ ಪಾಸ್ ಮಾಡಿಕೊಂಡು ಹಿರಿಯ ಪೊಲೀಸ್ ಅಧಿಕಾರಿಯಾಗಿರುವವರು. ಅಧಿಕಾರದ ಮದವನ್ನು ನೆತ್ತಿಗೇರಿಸಿಕೊಂಡು ಈ ಕೆಲಸ ಮಾಡಿದ್ದಾರೆ. ಈ ಘಟನೆ ಒಡಿಶಾದಲ್ಲಿ ನಡೆದಿದೆ. ಕಳೆದ ಜುಲೈ 3 ರಂದು ಕನಿಕಾ ಗ್ರಾಮದಲ್ಲಿ ವೇಗವಾಗಿ ಬಂದ ಎಸ್.ಯು.ವಿ. ವಾಹನ 19 ವರ್ಷದ ಯುವಕನ ಮೇಲೆ ಹರಿದ ಪರಿಣಾಮ ಆತ ಮೃತಪಟ್ಟಿದ್ದ. ಇದನ್ನು ಖಂಡಿಸಿ ಕನಿಕಾ ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದ್ದರಲ್ಲದೇ ಈ…
ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು. ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ. ದೀಪ +ಅವಳಿ ಎಂದರೆ ಜೋಡಿ ದೀಪ ಅಥವಾ ದೀಪಗಳ ಸಾಲು ಎಂದರ್ಥ. ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ.
ಲಕ್ನೋ: ಗೂಡ್ಸ್ ರೈಲು ಹಳಿ ತಪ್ಪಿದ್ದ ಸುದ್ದಿಯನ್ನು ವರದಿ ಮಾಡಲು ಹೋಗಿದ್ದ ಪತ್ರಕರ್ತನ ಮೇಲೆ ಹಲ್ಲೆ ಮಾಡಿ, ಆತನ ಬಟ್ಟೆ ಬಿಚ್ಚಿಸಿ ಬಲವಂತವಾಗಿ ಮೂತ್ರ ಕುಡಿಸಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಧೀಮಾನ್ಪುರಾದಲ್ಲಿ ಗೂಡ್ಸ್ ರೈಲು ಹಳಿತಪ್ಪಿದ ಸಂದರ್ಭದಲ್ಲಿ ಪತ್ರಕರ್ತ ವರದಿ ಮಾಡಲು ಹೋದಾಗ ಈ ಘಟನೆ ನಡೆದಿದೆ. ಸರ್ಕಾರಿ ರೈಲ್ವೇ ಪೊಲೀಸ್(ಜಿಆರ್ ಪಿ) ಅಧಿಕಾರಿ ರಾಕೇಶ್ ಕುಮಾರ್ ನೇತೃತ್ವದ ಸಿಬ್ಬಂದಿ ಪತ್ರಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ. ಪತ್ರಕರ್ತನ ಮೇಲೆ ಹಲ್ಲೆ ಮಾಡಿರುವ…