ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಲವರಲ್ಲಿ ನಿಶ್ಯಕ್ತಿ ಸಿಕ್ಕಾಪಟ್ಟೆ ಕಾಟ ಕೊಡ್ತಿರುತ್ತೆ. ಸ್ವಲ್ಪನೇ ಕೆಲಸ ಮಾಡಿದ್ರು ಜಾಸ್ತಿ ಸುಸ್ತಾಗೋವಂತ ತುಂಬಾ ಜನ ನಮ್ಮ ಮಧ್ಯನೇ ಇದಾರೆ. ಸುಸ್ತು ಖಾಯಿಲೆಯ ಗುರುತಾಗಿರಬಹುದು.ಥೈರಾಯಿಡ್ ಸಮಸ್ಯೆ, ಅಜೀರ್ಣ, ಮಲಬದ್ಧತೆ, ಮಧುಮೇಹ, ಅಧಿಕ ರಕ್ತದೊತ್ತಡ, ಅಪೌಷ್ಟಿಕತೆ, ರಕ್ತಹೀನತೆ, ಮಾನಸಿಕ ಒತ್ತಡ ಇತರೆ ಹತ್ತು ಹಲವು ಸಮಸ್ಯೆಗಳು ನಿಶ್ಯಕ್ತಿಗೆ ಮೂಲ ಕಾರಣವಾಗಿರಬಹುದು.
ಇಂದು ನಮ್ಮ ಜೀವನ ಹೇಗಾಗಿದೆ ಎಂದರೆ ಮನೆ ಯಿಂದ ಹೊರಗೆ ಹೋಗಿ ಮತ್ತೆ ಮನೆಗೆ ಬಂದು ಕುಳಿತ ಕೂಡಲೆ ಸುಸ್ತು ಬಂದು ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ಮನೆಯಿಂದ ಐದು ಕಿ.ಮೀ ಇರುವ ಆಫೀಸಿನಿಂದ ಮನೆಗೆ ಬರುವಷ್ಟರಲ್ಲಿ ಟ್ರಾಫಿಕ್ ಸಿಗ್ನಲ್ ಗಳ ಸೀಮೋಲ್ಲಂಘನ ಮಾಡಲಾಗದೆ ಬಸವಳಿ ಯುವ ಸರದಿ ನಮ್ಮದಾಗಿರುತ್ತದೆ. ಬರೀ ಟ್ರಾಫಿಕ್ ಮಾತ್ರ ನಮ್ಮನ್ನು ಸುಸ್ತು ಮಾಡುತ್ತದೆ ಎಂದು ಭಾವಿಸಬೇಡಿ. ಜೊತೆಗೆ ನಮ್ಮ ಅನಾರೋಗ್ಯಕರ ಆಹಾರ ಸೇವನೆ ಕ್ರಮವು ಸಹ ನಮ್ಮನ್ನು ಹಾಳು ಮಾಡುತ್ತಿದೆ. ಸೇವಿಸುವ ಆಹಾರದಲ್ಲಿ ಸತ್ವ ಇಲ್ಲವೆಂದಾದಲ್ಲಿ ನಮ್ಮ ದೇಹಕ್ಕೆ ಶಕ್ತಿ ಎಲ್ಲಿಂದ ಬರಬೇಕು?
ಮಾನವ ಅನಾದಿ ಕಾಲದಲ್ಲಿ ಬೇಟೆಯಾಡುತ್ತಾ ಬದುಕುತ್ತಿದ್ದ ಕಾಲದಲ್ಲಿ, ಪ್ರಾಣಿಗಳಿಗೆ ಸರಿಸಮಾನವಾದ ಸಾಮರ್ಥ್ಯವನ್ನು ಹೊಂದಿದ್ದನು. ಆಗ ಅವನಿಗೆ ಆರೋಗ್ಯದ ಸಮಸ್ಯೆಗಳು ಬಂದಾಗ ಅವನು ಮೊರೆ ಹೋಗುತಿದ್ದುದು ಸ್ವಾಭಾವಿಕ ಪದಾರ್ಥಗಳನ್ನೆ. ಸ್ವಾಭಾವಿಕವಾದ ಉತ್ಪನ್ನಗಳು ನಮ್ಮ ದೇಹಕ್ಕೆ ಶಕ್ತಿಯನ್ನು, ಆರೋಗ್ಯವನ್ನು ಮತ್ತು ತಾಕತ್ತನ್ನು ಎಲ್ಲವನ್ನೂ ನೀಡುತ್ತದೆ. ಬನ್ನಿ ಅದಕ್ಕಾಗಿಯೇ ಇಂದು ಬೋಲ್ಡ್‌ಸ್ಕೈ ನಿಮಗಾಗಿ ತಕ್ಷಣ ನಿಮ್ಮ ತಾಕತ್ತನ್ನು ಹೆಚ್ಚಿಸುವ ಜ್ಯೂಸ್ ರೆಸಿಪಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಆ ಜ್ಯೂಸ್ ಯಾವುದು ಎಂಬ ಕುತೂಹಲ ನಿಮಗಿದೆಯಲ್ಲವೇ? ಅದೇ ಬೀಟ್‌ರೂಟ್ ಜ್ಯೂಸ್. ಇದು ನಿಮ್ಮ ಶಕ್ತಿ ಮತ್ತು ಸಾಮರ್ಥ್ಯ ಗಳನ್ನು ತಕ್ಷಣ ಹೆಚ್ಚಿಸುತ್ತದೆ.
ಬೀಟ್‌ರೂಟ್‌ಗಳಲ್ಲಿ ಸಾವಯವವಲ್ಲದ ನೈಟ್ರೇಟ್ ಸಮೃದ್ಧವಾಗಿರುತ್ತದೆ. ಇದು ನಿಮಗೆ ಶಕ್ತಿಯನ್ನು ನೀಡಲು ಪ್ರಮುಖ ಪಾತ್ರವನ್ನು ನಿರ್ವ ಹಿಸುತ್ತದೆ. ಅಧ್ಯಯನಗಳ ಪ್ರಕಾರ ಬೀಟ್ ರೂಟ್ ಜ್ಯೂಸ್ ಪ್ರತಿಯೊಬ್ಬರ ಕಾರ್ಯ ವೈಖರಿಯನ್ನು ಸುಧಾರಿಸುತ್ತದೆ ಎಂದು ತಿಳಿದು ಬಂದಿದೆ. ಆದ್ರೆ ಬೀಟ್ರೂಟ್ನಲ್ಲಿ ರುಟಿನ್, ಕೆಫೀಕ್ ಆಸಿಡ್, ಎಪಿಕೆಟೆಚಿನ್ ಮತ್ತೆ ಬೀಟಾಲಿನ್ಸ್ ಅನ್ನೋ ರೋಗನಿರೋಧಕಗಳು ಹೇರಳವಾಗಿದೆ. ಅವು ಫ್ರೀ ರಾಡಿಕಲ್ಸ್ ಹಾರಾಟನ ತಣ್ಣಗ್ ಮಾಡತ್ತೆ. ಹಾಗಾಗಿ ಪದೇ ಪದೇ ಖಾಯಿಲೆ ಬೀಳದು ತಪ್ಪಿ, ಪ್ರತಿರೋಧ ಶಕ್ತಿ ಬರತ್ತೆ. ಫ್ರೀ ರಾಡಿಕಲ್ಸ್, ದೇಹದಲ್ಲಿ ಕೆರಳಿ ಹಾನಿ ಮಾಡೋದನ್ನ ಬೀಟ್ ರೂಟ್ ತಡಿಯತ್ತೆ.
ಈ ಫ್ರೀ ರಾಡಿಕಲ್ ನಮ್ ದೇಹದಲ್ಲಿ ನಡಿಯೋ ಮಾಮೂಲಿ ಪಚನ ಕ್ರಿಯೆಯಿಂದ, ಜೀವನಶೈಲಿಯಿಂದ, ತಿನ್ನೋ ಅಭ್ಯಾಸದಿಂದ ಮತ್ತೆ ಮಾನಸಿಕ ಒತ್ತಡದಿಂದಾನೂ ಉತ್ಪತ್ತಿಯಾಗಿ ಕೆರಳ್ಬೋದು. ಇದೆಲ್ಲಾ ಒಳಗಿಂದ ಆಗೋದು. ಇನ್ನು ಹೊರಗೆ ಓಡಾಡುವಾಗ ವಾತವರಣದಲ್ಲಿರೋ ಧೂಳು, ಫ್ಯಾಕ್ಟರಿಯಿಂದ ಬಿಡುಗಡೆ ಆಗೋ ರಾಸಾಯನಿಕಗಳಿಂದಾನೂ ಉತ್ಪತ್ತಿಯಾಗತ್ತೆ. ಅದೇನ್ ಮಾಡತ್ತೆ ಬಿಡಿ ಅನ್ನೋಹಾಗಿಲ್ಲ ಯಾಕಂದ್ರೆ ಈ ಫ್ರೀ ರಾಡಿಕಲ್ಸ್ ಕೆರಳೋದ್ರಿಂದನೇ ಕ್ಯಾನ್ಸರ್, ಸಂಧಿವಾತ ಮತ್ತೆ ಆಲ್ಝೈಮರ್ಸ್ ಖಾಯಿಲೆ ಎಲ್ಲಾ ಬರೋದು. ಬಹುತೇಕ ಅಥ್ಲಿಟ್‌ಗಳು ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಬೀಟ್‌ರೂಟ್ ರಸದ ಮೊರೆ ಹೋಗುತ್ತಾರೆ. ಕೆಲವೊಂದು ಅಧ್ಯಯನಗಳ ಪ್ರಕಾರ ಬೀಟ್‌ರೂಟ್ ರಸವನ್ನು ಸೇವಿಸಿದರೆ ಆಯಾಸ ವಿಲ್ಲದೆ ಎಲ್ಲಾ ಕೆಲಸ ಕಾರ್ಯ ಗಳನ್ನು ಮಾಡಬಹುದಂತೆ. ಬನ್ನಿ ಇನ್ನು ತಡ ಮಾಡದೆ ಈ ರಸವನ್ನು ತಯಾರಿಸಿ ಕೊಳ್ಳುವ ವಿಧಾನವನ್ನು ತಿಳಿದುಕೊಳ್ಳೋಣ…
1-2 ಹಣ್ಣಾದ ಬೀಟ್‌ರೂಟ್ 1 ಸೇಬು 1 ಶುಂಠಿ ತುಂಡು ಬೀಟ್‌ರೂಟ್ ಅನ್ನು ಮೊದಲು ಚೆನ್ನಾಗಿ ತೊಳೆದುಕೊಂಡು, ಸಣ್ಣ ಸಣ್ಣ ಹೋಳು ಮಾಡಿಕೊಳ್ಳಿ. ನಂತರ ಇದನ್ನು ಶೋಧಿಸಿಕೊಳ್ಳಿ. ನಿಮಗೆ ಅಗತ್ಯವಾದರೆ ಇದಕ್ಕೆ ಐಸ್ ಕ್ಯೂಬ್ ಸಹ ಬೆರೆಸಿಕೊಳ್ಳಬಹುದು.
ವಾರಕ್ಕೆ ೩-೪ ಬಾರಿ ಈ ರಸವನ್ನು ಸೇವಿಸಿ. ಆಗ ನೋಡಿ, ನಿಮ್ಮ ಸಾಮರ್ಥ್ಯವು ಹೇಗೆ ಸುಧಾರಿಸುತ್ತದೆ ಎಂದು. ಆದರೆ ಒಂದು ಮಾತು ನೆನಪಿಡಿ. ಇದನ್ನು ಒಂದೇ ಬಾರಿಗೆ ಸೇವಿ ಸುವ ಮೊದಲು ಸ್ವಲ್ಪ ಸೇವಿಸಿ, ರುಚಿ ನೋಡಿ. ಇದರ ರುಚಿಯು ನಿಮಗೆ ಒಗ್ಗಿದರೆ ಮುಂದುವರಿಯಿರಿ. ಇಲ್ಲವಾದರೆ ಬೇಡ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮುಸ್ಲಿಂ ಸಮುದಾಯದಲ್ಲಿ ಸಾಮಾನ್ಯವಾಗಿ ಮಹಿಳೆಯರು ಬುರ್ಖಾ ಹಾಕಿಕೊಂಡೇ ಹೋಗಬೇಕು ಎನ್ನುವ ಸಂಪ್ರದಾಯವಿದೆ. ಇನ್ನು ಪಾಕಿಸ್ತಾನದಂತ ರಾಷ್ಟ್ರಗಳಲ್ಲಿ ಈ ನಿಯಮ ಕಡ್ಡಾಯ. ಆದರೆ ಇಲ್ಲೊಂದು ಜೋಡಿ ಇದಕ್ಕೆ ತದ್ವಿರುದ್ಧ ಎನ್ನುವ ರೀತಿಯಲ್ಲಿ ಊಟಕ್ಕೆ ತೆರಳಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ್ದಾರೆ. ಹೌದು, ಪಾಕಿಸ್ತಾನ ಮೂಲದ ನವವಿವಾಹಿತ ಜೋಡಿಯೊಂದು ಊಟಕ್ಕೆ ತೆರಳಿದ್ದು, ಈ ವೇಳೆ ಯುವತಿ ಬುರ್ಖಾ ಧರಿಸಿಲ್ಲ. ಬದಲಿಗೆ ಆಕೆಯ ಪತಿ ಬುರ್ಖಾ ಧರಿಸಿದ್ದಾನೆ. ಪುರುಷ ಪ್ರಧಾನ ಸಮುದಾಯದಲ್ಲಿರುವ ಈ ರೀತಿಯ ಮೌಢ್ಯ ಹಾಗೂ ಮಹಿಳಾ ಸಬಲೀಕರಣ…
ಸುಮಲತಾ ಅಂಬರೀಷ್ ಹೆಸರಿಗಷ್ಟೇ ಪಕ್ಷೇತರ ಅಭ್ಯರ್ಥಿ, ಅವರಿಗೆ ಕಾಂಗ್ರೆಸ್, ಬಿಜೆಪಿ ಮತ್ತು ರೈತಸಂಘ ಬೆಂಬಲ ಅವರಿಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿಎಂ ಎಚ್.ಡಿ ಕುಮಾರಸ್ವಾಮಿ, ಸುಮಲತಾ ಗೆ ಕೇವಲ ಬಿಜೆಪಿ ಮಾತ್ರವಲ್ಲದೇ ಕಾಂಗ್ರೆಸ್ ಬೆಂಬಲವೂ ಇದೆ, ಮಂಡ್ಯದಲ್ಲಿ ಜೆಡಿಎಸ್ ಸೋಲಿಸಲು ಎಲ್ಲಾ ರೀತಿಯ ಚಕ್ರವ್ಯೂಹ ಹೆಣೆಯಲಾಗುತ್ತಿದೆ, ಸುಮಲತಾ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂದು ಹೇಳಿದ್ದಾರೆ.ಬಿಜೆಪಿ, ಕಾಂಗ್ರೆಸ್, ರೈತ ಸಂಘ ಎಲ್ಲ ಸೇರಿ ಚಕ್ರವ್ಯೂಹ ರೂಪಿಸಿದ್ದು, ಅದನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಮಂಡ್ಯ ಜನತೆ ನೀಡುವ…
ಅಂಬಿಕಾತನಯ ದತ್ತ ಎಂಬ ಕಾವ್ಯನಾಮ ಹೊಂದಿದ್ದ ಕನ್ನಡದ ವರಕವಿ, ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ ಸಾಹಿತ್ಯ ಲೋಕದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಲ್ಲೊಬ್ಬರು.
ಬೇವು ಬೆಲ್ಲದ ಆರೋಗ್ಯ ಪ್ರಯೋಜನಗಳು ಗೊತ್ತಾದ್ರೆ ನಿಜಕ್ಕೂ ಅಚ್ಚರಿಪಡುವಿರಿ!ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿ ಹೊಸ ವರ್ಷದ ದಿನವಾಗಿದೆ ಹಾಗೂ ಪವಿತ್ರ ಸಮಯ ಎಂದು ಪರಿಗಣಿಸಲ್ಪಡುತ್ತದೆ. ಕರ್ನಾಟಕದಲ್ಲಿ ಈ ಹಬ್ಬಕ್ಕೆ ಯುಗಾದಿ ಎಂದೂ ಮಹಾರಾಷ್ಟ್ರದಲ್ಲಿ ಗುಡಿ ಪಾವ್ಡಾ ಎಂಬ ಹೆಸರಿನಿಂದಲೂ ಆಚರಿಸಲಾಗುತ್ತದೆ. ಹಬ್ಬದ ವಿಶೇಷವಾಗಿ ಬೇವು ಮತ್ತು ಬೆಲ್ಲದ ಮಿಶ್ರಣವನ್ನು ಸಾಂಕೇತಿಕವಾಗಿ ಸೇವಿಸಲಾಗುತ್ತದೆ. ತಮಿಳುನಾದು ಮತ್ತು ಆಂಧ್ರಪ್ರದೇಶದಲ್ಲಿಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ ಹಾಗೂ ಸುಖ ದುಃಖದ ಸಂಕೇತಗಳಾಗಿ ಬೇವು ಬೆಲ್ಲವನ್ನು ಹಂಚಲಾಗುತ್ತದೆ. ಬೇವು ರುಚಿಯಲ್ಲಿ ಕಹಿ ಮತ್ತು ಬೆಲ್ಲ…
ಇತ್ತೀಚಿಗೆ ನಡೆದ ಮಹಿಳಾ ವಿಶ್ವಕಪ್ ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ದ ಸೋಲು ಅನುಭವಿಸಿತ್ತು.
ಮುಂದಿನ ತಿಂಗಳಿಂದ 500 ಕಿ.ಮೀ.ಗಿಂತ ಹೆಚ್ಚು ದೂರ ಸಂಚರಿಸುವ ರೈಲುಗಳ ಪ್ರಯಾಣದ ಅವಧಿಯನ್ನು ಸ್ವಲ್ಪ ಕಡಿಮೆ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.