ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಮಗೆ ನೀರು ಪದೇ ಪದೇ ಕುಡಿಯಲು ಬೇಜಾರೆನಿಸಿದರೆ ಮಜ್ಜಿಗೆ ಕುಡಿದು ನೋಡಿ, ದೇಹ ಉಲ್ಲಾಸಿತವಾಗುತ್ತದೆ. ಅಜೀರ್ಣ, ಹೊಟ್ಟೆನೋವು ಕಂಡುಬಂದಲ್ಲಿ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ.
ಮಜ್ಜಿಗೆ ಉತ್ತಮ ಜೀರ್ಣಕಾರಿ ದ್ರವ ಪದಾರ್ಥ. ಮನೆಯಲ್ಲಿ ಹಬ್ಬಹರಿದಿನಗಳ ಸಂದರ್ಭದಲ್ಲಿ, ಯಾವುದೋ ಸಮಾರಂಭಕ್ಕೆ ಹೋಗಿ ಊಟ ಮಾಡಿ ಹೊಟ್ಟೆ ಭಾರವೆನಿಸುತ್ತಿದ್ದರೆ ಮಜ್ಜಿಗೆಗೆ ಉಪ್ಪು ಸೇರಿಸಿ ಕುಡಿದರೆ ತಿಂದ ಆಹಾರ ಜೀರ್ಣವಾಗುತ್ತದೆ. ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಕಿದರೆ ಇನ್ನಷ್ಟು ರುಚಿ ಕೊಡುತ್ತದೆ.
ಅದೆಷ್ಟೋ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ತಯಾರಿಸುವ ಪದಾರ್ಥಗಳು ಪರಿಣಾಮಕಾರಿಯಾಗಿರುತ್ತವೆ. ಆದರೆ, ಅವುಗಳ ನಿಜವಾದ ಉಪಯೋಗ ನಮಗೆ ತಿಳಿದಿರುವುದಿಲ್ಲ. ಅಂತಹವುಗಳಲ್ಲಿ ಮಜ್ಜಿಗೆಯೂ ಒಂದು. ಹಾಲಿನ ಉಪ ಉತ್ಪನ್ನವಾದ ಮಜ್ಜಿಗೆ ನಿಜವಾಗಿಯೂ ಆರೋಗ್ಯವರ್ಧಕ ಮಜ್ಜಿಗೆಯನ್ನು ನಿತ್ಯ ಇದನ್ನು ಸೇವಿಸುವುದರಿಂದ ಹಲವು ಅನುಕೂಲಗಳಿವೆ. ಅವುಗಳಲ್ಲಿ ಮುಖ್ಯವಾದವುಗಳನ್ನು ಇಲ್ಲಿ ವಿವರಿಸಲಾಗಿದೆ.
ಕ್ಯಾನ್ಸರ್ ತಡೆ, ಕೊಲೆಸ್ಟ್ರಾಲ್ ಕಡಿಮೆ ಹಾಗೂ ರಕ್ತದೊತ್ತಡ ನಿಯಂತ್ರಿಸಲು ಮಜ್ಜಿಗೆ ರಾಮಬಾಣವಾಗಿದೆ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತಾಯಿಗೆ ಕಾರು ಡಿಕ್ಕಿ ಹೊಡೆದ ನಂತರ ಪುಟ್ಟ ಬಾಲಕ ಸಿಟ್ಟಿನಿಂದ ಕಾರಿಗೆ ಒದೆಯುವ ಮೂಲಕ ತಾಯಿಯ ಮೇಲಿನ ಪ್ರೀತಿಯನ್ನು ಹೊರಹಾಕಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚೀನಾದ ಚಾಂಗ್ಕಿಂಗ್ ನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ತಾಯಿ ಝೀಬ್ರಾ ಕ್ರಾಸ್ ಮೂಲಕ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಆಗ ತಾಯಿ ನೆಲಕ್ಕೆ ಬಿದ್ದಿದ್ದು, ತಕ್ಷಣ ಎಚ್ಚೆತ್ತ ಬಾಲಕ ಮೊದಲು ತಾಯಿಯನ್ನು ಮಾತನಾಡಿಸುತ್ತಾನೆ. ನಂತರ ಸಿಟ್ಟಿಗೆದ್ದು ಕಾರಿಗೆ ಒದೆಯಲು…
ಜೀವಸತ್ವಗಳು ಅರ್ಥಾತ್ ವಿಟಮಿನ್ ನಮ್ಮ ದೇಹದ ವಿವಿಧ ಕಾರ್ಯಗಳಿಗೆ ಅತ್ಯವಶ್ಯಕವಾಗಿ ಬೇಕಾದ ಅಂಶಗಳು. ನಾವು ಸೇವಿಸುವ ಆಹಾರದಲ್ಲಿನ ಜೀವಸತ್ವಗಳು ಪಚನವಾಗಿ ರಕ್ತದಲ್ಲಿ ಹೀರುವಂತಾಗಲು ಜಿಡ್ಡಿನಂಶದ ಅಗತ್ಯಕ್ಕೆ ಅನುಗುಣವಾಗಿ ಅವುಗಳನ್ನು ಜಿಡ್ಡಿನಲ್ಲಿ ಕರಗುವ ಮತ್ತು ನೀರಿನಲ್ಲಿ ಕರಗುವ ಜೀವಸತ್ವಗಳೆಂದು ವಿಂಗಡಿಸಲಾಗಿದೆ. ವಿಟಮಿನ್ ಎ, ಡಿ, ಇ, ಕೆಗಳನ್ನು ಜಿಡ್ಡಿನಲ್ಲಿ ಕರಗುವ ಜೀವಸತ್ವಗಳೆಂದೂ, ಬಿ ಕಾಂಪ್ಲೆಕ್ಸ್ ಅನ್ನೊಳಗೊಂಡ ಒಂಬತ್ತು ಜೀವಸತ್ವಗಳನ್ನು ನೀರಿನಲ್ಲಿ ಕರಗುವ ಗುಂಪನ್ನಾಗಿಯೂ ಹೆಸರಿಸಲಾಗಿದೆ.
ಶಿವಪರಮಾತ್ಮನ ಉಪಾಸನೆಯಲ್ಲಿ ರುದ್ರಾಕ್ಷಕ್ಕೆ ಅತ್ಯಂತ ಪ್ರಮುಖ ಸ್ಥಾನ.”ರುದ್ರ” ಹಾಗೂ “ಅಕ್ಷ” ಈ ಎರಡು ಪದಗಳಿರುವ ಶಬ್ದ ರುದ್ರಾಕ್ಷ,ಅಂದರೆ ರುದ್ರನ ಕಣ್ಣು.”ರುದ್ರಸ್ಯ ಅಕ್ಷಿಃ ರುದ್ರಾಕ್ಷಃ”. ರುದ್ರಾಕ್ಷವೆಂಬುದು ಒಂದು ಮರ.ಆ ಮರದ ಬೀಜವೇ ರುದ್ರಾಕ್ಷಿ.ಶಿವ ಪುರಾಣ,ವಿದ್ಯೇಶ್ವರ ಸಂಹಿತಾ ಹಾಗೂ ಶ್ರೀ ದೇವೀಭಾಗವತಗಳಲ್ಲಿ ರುದ್ರಾಕ್ಷಕ್ಕೆ ಸಂಬಂಧಿಸಿದ ವಿಷಯಗಳಿವೆ.ಅನೇಕ ವರ್ಷಗಳ ಸತತ ಧ್ಯಾನದ ನಂತರ ಸದಾಶಿವ ತನ್ನ ಕಣ್ಣುಗಳನ್ನು ತೆರೆದ.ಆಗ ಕಣ್ಣುಗಳಿಂದ ಅಶ್ರು ಸುರಿಯಿತು.ಆ ಕಣ್ಣಿರಿನಿಂದಲೇ ಜನ್ಯವಾದದ್ದು ರುದ್ರಾಕ್ಷವೃಕ್ಷ ಎಂಬ ಪೌರಾಣಿಕ ಕಥೆಯಿದೆ.
ಸಾಮಾನ್ಯವಾಗಿ ರೈತರು ಮನೆಯಲ್ಲೇ ರಾಗಿ, ಭತ್ತ ಹಾಗೆ ಇತರೆ ತರಕಾರಿಗಳನ್ನ ಬೆಳೆಯುತ್ತಾರೆ ಮತ್ತು ಮನೆಗಳಲ್ಲಿ ಕುರಿ ಮತ್ತು ಕೋಳಿಗಳನ್ನ ಸಾಕಿ ಜೀವನವನ್ನ ಮಾಡುತ್ತಾರೆ ಹಾಗೆ ಊರಿನ ಹಬ್ಬದ ಇದೆ ಕೋಳಿ ಮತ್ತು ಕುರಿಯನ್ನ ಕಡಿದು ಅಡುಗೆಯನ್ನ ಮಾಡಿ ಊಟ ಮಾಡುತ್ತಾರೆ. ಇನ್ನು ಚೀನಾ ದೇಶದಲ್ಲಿ ರೈತರು ಊರು ಹಬ್ಬದ ದಿನ ಬೇಟೆಯಾಡಿ ತಂದ ಮಾಂಸವನ್ನ ಅಡುಗೆ ಮಾಡಿ ಊರಿಗೆಲ್ಲ ಬಡಿಸುತ್ತಾರೆ, ಇನ್ನು ಇದೆ ರೀತಿಯಾಗಿ ಉಹಾನ್ ಅನ್ನುವ ರೈತ ಬೇಟೆಗಾಗಿ ಕಾಡಿಗೆ ಹೋಗಿ ಕಾಡಿನಲ್ಲಿ ಹಂದಿಯನ್ನ ಬೇಟೆಯಾಡಿ…
ಅತ್ಯಮೂಲ್ಯ ನೈಸರ್ಗಿಕವಾಗಿ ದೊರೆಯುವ ‘ಕೀಡಾ ಜಾಡಿ’ ಅಥವಾ ಹಿಮಾಲಯನ್ ವಯಾಗ್ರಾಕ್ಕಾಗಿ ಉತ್ತರಾಖಂಡದ ಎರಡು ಗ್ರಾಮಗಳ ಜನರು ಕಿತ್ತಾಡಿದ್ದು ನಿಷೇಧಾಜ್ಞೆ ಜಾರಿಯಾಗಿದೆ.ನೈಸರ್ಗಿಕ ವಯಾಗ್ರಾ ಸಂಗ್ರಹಿಸುವ ವಿಚಾರವಾಗಿ ಪಿತೋರ್‍ಗಢ ಜಿಲ್ಲೆಯ ಬುಯಿ ಮತ್ತು ಪಾಟೋ ಗ್ರಾಮಗಳ ಜನರು ಜಗಳ ಮಾಡಿಕೊಂಡಿದ್ದಾರೆ. ವಯಾಗ್ರಾ ಬೆಳೆಯುವ ಪ್ರದೇಶ ನಮಗೆ ಸೇರಿದ್ದು ಎಂದು ಎರಡೂ ಗ್ರಾಮದವರು ಶಸ್ತ್ರಾಸ್ತ್ರ ಹಿಡಿದು ನಿಂತಿದ್ದಾರೆ. ಪಿತೋರ್‌ಗಢ ಜಿಲ್ಲೆಯ ಹಿಮಾಲಯ ಪ್ರದೇಶ ರಾಲಂ ಮತ್ತು ರಾಜರಾಂಘ ಬಗ್ಯಾಲ್ಸ್ ಹುಲ್ಲುಗಾವಲಿನಲ್ಲಿ ವಯಾಗ್ರಾ ಬೆಳೆಯುತ್ತಿದೆ. ಪರ್ವತದ ಎತ್ತರದಲ್ಲಿ ಬೆಳೆಯುವ ವಯಾಗ್ರಾವನ್ನು ಧಾರ್ಚುಲಾ ಮತ್ತು…
ಕೋಲಾರ:- ರಾಮನ ಪೂಜೆ ಎಲ್ಲಾ ಕಡೆ ನಡೆಯುತ್ತದೆ ಅದರಲ್ಲಿ ವಿಶಿಷ್ಟತೆ ಏನೂ ಇಲ್ಲ ಆದರೆ, ತಾಲ್ಲೂಕಿನ ಸುಗಟೂರು ಮತ್ತು ವಕ್ಕಲೇರಿ ಗ್ರಾಮಗಳಲ್ಲಿ ನಂತರ ಶಿವ ಭಕ್ತನಾದ ರಾವಣನಿಗೂ ಪ್ರಾಧಾನ್ಯತೆ ನೀಡಿ ಪೂಜಿಸುವ ವಿಶಿಷ್ಟ ಪದ್ದತಿ ರೂಢಿಯಲ್ಲಿದೆ. ವಕ್ಕಲೇರಿ ಗ್ರಾಮದಲ್ಲಿ ಮಾರ್ಕಂಡೇಶ್ವರ ಸ್ವಾಮಿ ರಥೋತ್ಸವ ಮುಗಿದಿದ್ದು, ಫೆ.7ರ ಮಂಗಳವಾರ ರಾತ್ರಿ 10 ತಲೆಗಳನ್ನೊತ್ತ ರಾವಣನ ಮೂರ್ತಿ ಮತ್ತು ಮೇಲೆ ಮಾರ್ಕಂಡೇಶ್ವರ ಸ್ವಾಮಿಯ ಮೂರ್ತಿಗಳನ್ನಿಟ್ಟು ವೈಭವದಿಂದ ರಾವಣೋತ್ಸವ ನಡೆಸಲಾಯಿತು. ಅದೇ ರೀತಿ ತಾಲ್ಲೂಕಿನ ಸುಗಟೂರು ಗ್ರಾಮದಲ್ಲೂ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ ನಡೆದ…