ಆಧ್ಯಾತ್ಮ

ನಿಮ್ಮ ಸಂತೋಷ ನಿಮ್ಮ ಕೈಯಲ್ಲಿಯೇ ಇದೆ!ಹೇಗೆ ಗೊತ್ತಾ? ಈ ಲೇಖನಿ ಓದಿ…..

1652

ಈ ಜಗತ್ತಿನಲ್ಲಿ ಮನುಷ್ಯ ಜೀವನ ಪ್ರಾಣಿ–ಪಕ್ಷಿಗಳಿಗಿಂತ ಉನ್ನತ ಹಾಗೂ ಅರ್ಥಪೂರ್ಣವಾದುದ್ದು. ಒಮ್ಮೆ ಮನುಷ್ಯ ಜೀವ ತಳೆದ ಮೇಲೆ ಇನ್ನೊಂದು ಜನ್ಮದಲ್ಲಿ ಮತ್ತೆ ಮನುಷ್ಯನಾಗೇ ಹುಟ್ಟುತ್ತಾನೆ ಎಂದು ಹೇಳಲಾಗದು. ಇರುವ ಒಂದೇ ಜನ್ಮದಲ್ಲಿ ಸಕಲ ಸಂತೋಷವನ್ನು ಕಾಣಬೇಕು. ಮನುಷ್ಯ ಆಧ್ಯಾತ್ಮಿಕ ಮಾರ್ಗಗಳಲ್ಲಿ ಸಾಗುವ ಮೂಲಕ ತನ್ನೊಳಗೆ ತಾನು ಸಂತೋಷವನ್ನು ಕಂಡುಕೊಳ್ಳಬಹುದು.

ಒಬ್ಬ ಮನುಷ್ಯ ಜೀವನದಲ್ಲಿ ಐದಾರು ಕಾರುಗಳನ್ನು ಕೊಳ್ಳಬಹುದು, ಐಷಾರಾಮಿ ಬಂಗಲೆಯನ್ನು ಕಟ್ಟಿಸಬಹುದು, ಚಿನ್ನ, ಬೆಳ್ಳಿಯನ್ನು ಹೊದ್ದು ಮಲಗಬಹುದು. ಆದರೆ ಇದನ್ನೆಲ್ಲ ಅನುಭವಿಸಲು ಇರುವುದು ಒಂದೇ ಜನ್ಮ. ಈ ಜನ್ಮದಲ್ಲಿ ಅರ್ಧ ಸುಖ ಅನುಭವಿಸಿ, ಇನ್ನರ್ಧ ಸುಖವನ್ನು ಮುಂದಿನ ಜನ್ಮದಲ್ಲಿ ಅನುಭವಿಸುತ್ತೇನೆ ಎಂದರೆ ಅದು ಆಗದು. ಒಮ್ಮೆ ಜೀವನ ಮುಗಿದ ಮೇಲೆ ಮತ್ತೆ ಇನ್ನೊಂದು ಜನ್ಮವನ್ನು ನಾವು ಹಣ ಕೊಟ್ಟು ಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ ಮತ್ತೆ ಅಷ್ಟೇ ಸರಳ, ಸುಂದರ, ಪ್ರತಿಷ್ಠೆಯ ಜೀವನವನ್ನು ಪಡೆಯುತ್ತೇವೆ ಎಂದುಕೊಂಡರೆ ನಿಜಕ್ಕೂ ನಮ್ಮಷ್ಟು ಮೂರ್ಖರು ಯಾರು ಇಲ್ಲ.

ಆಧ್ಯಾತ್ಮಿಕ ಚಿಂತನೆಗಳು ನಮ್ಮ ಮನಸ್ಸಿಗೆ ಸಂತಸವನ್ನು ಹುಡುಕುವ ಮಾರ್ಗವನ್ನು ತೋರುತ್ತವೆ. ಜೀವನದಲ್ಲಿ ನಿರೀಕ್ಷೆಗಳಿಲ್ಲದೆ ಬದುಕಿದಾಗ ಸಂತೋಷದ  ಜೀವನವು ತಾನಾಗಿಯೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಆಧ್ಯಾತ್ಮಿಕ ಸತ್ಯಗಳನ್ನು ಕಂಡುಕೊಳ್ಳುವುದರಿಂದ ನಮ್ಮೊಳಗಿನ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬಹುದು. ತನ್ನ ಹಾಗೂ ಪರರ ಇಚ್ಛೆಗಳನ್ನು ಪೂರೈಸಲು ಕೂಡ ಈ ಚಿಂತನೆಗಳಿಂದ ಸಾಧ್ಯ.

ದೇವರು ನೀಡಿರುವ ಈ ಅಪರೂಪದ ಮಾನವ ಜೀವನವನ್ನು ಸಂತಸದಿಂದ ಕಳೆಯಬೇಕು. ಸದಾ ಕೊರಗುತ್ತಾ ಬದುಕಿ ಇರುವ ಒಂದೇ ಒಂದು ಜನ್ಮವನ್ನು ನೋವಿನಲ್ಲಿ ಕಳೆಯುವುದಕ್ಕಿಂತ ‘ಈ ಭೂಮಿ ಮೇಲೆ  ದೇವರು ನನಗೆ ನೀಡಿರುವ ಅಪರೂಪದ ಜನ್ಮ, ಮನುಷ್ಯ ಜನ್ಮ. ಇದು ನನಗೆ ಸಿಕ್ಕಿರುವ ಭಾಗ್ಯ. ನಾನೇ ಅದೃಷ್ಟವಂತ’ ಎಂದು ನಮಗೆ ನಾವೇ ಅಂದುಕೊಳ್ಳಬೇಕು. ಅಂತೆಯೇ  ಬದುಕನ್ನು ಸುಂದರವಾಗಿ ರೂಪಿಸಿಕೊಂಡು ಪ್ರತಿ ಕ್ಷಣದಲ್ಲೂ ಸಂತೋಷವನ್ನು ಹುಡುಕಿ ಬದುಕಬೇಕು.

 

ಸಂತೋಷವನ್ನು ಕಂಡುಕೊಳ್ಳಲು ಕೇವಲ ಮೂರು ಸೂತ್ರಗಳನ್ನು ಅನುಸರಿಸಿ :-

 1. ಏನಾದರೂ ಮಾಡುತಿರು ತಮ್ಮ…

ಜೀವನದಲ್ಲಿ ನಾವು ಅನೇಕ ಬಾರಿ, ಹಲವು ಕಾರಣಗಳಿಗೆ ಬೇಸರಗೊಳ್ಳುತ್ತೇವೆ. ಕಾರಣವೇ ಇಲ್ಲದೆ ಮನಸ್ಸಿಗೆ ಖೇದವಾಗುತ್ತದೆ. ಅದೇ ನೋವಿನಲ್ಲೇ ನಾವು ಎಷ್ಟೋ ಅಮೂಲ್ಯ ಸಮಯವನ್ನು ಹಾಳುಮಾಡಿಕೊಂಡಿರುತ್ತೇವೆ. ನಮಗೆ ಬೇಸರವಾದಾಗ ಅದರಿಂದ ಹೊರಬರುವ ಮಾರ್ಗವನ್ನು ನಾವೇ ಕಂಡುಕೊಳ್ಳಬೇಕು. ‘ಬೇಸರವಾದಾಗ ನಾನು ಇಂತಹ ಕೆಲಸ ಮಾಡಬೇಕು’ ಎಂದುಕೊಂಡು ಅದೇ ದಾರಿಯಲ್ಲಿ ಸಾಗಬೇಕು. ನಮ್ಮ ಮನಸ್ಸು ಸಂತಸಗೊಳ್ಳುವ ಹಾದಿಯನ್ನು ಕಂಡುಕೊಂಡು ಆ ಹಾದಿಯಲ್ಲೇ  ಮುಂದುವರಿಯಬೇಕು. ಬೇಸರ ಕಳೆಯಲು ಏನಾದರೂ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಅಡುಗೆ ಮಾಡುವುದನ್ನು ಕಲಿಯಬೇಕು. ಪ್ರತಿ ದಿನ ಹೊಸ ಹೊಸ ಪ್ರಯೋಗಗಳಲ್ಲಿ  ತೊಡಗಿಸಿಕೊಳ್ಳಬೇಕು. ಇದು ನಿಮ್ಮ ಮನಸ್ಸು ದುಃಖ, ನಿರಾಸೆಯೆಡೆಗೆ ಸುಳಿಯದಂತೆ ಮಾಡುತ್ತದೆ, ಜೊತೆಗೆ ಮನಸ್ಸನ್ನು ಸಂತಸದಿಂದಿರುವಂತೆ ನೋಡಿಕೊಳ್ಳುತ್ತದೆ.

 1. ಪ್ರೀತಿ ಇರಲಿ ಸಕಲವಸ್ತುಗಳಲಿ…

ಸ್ನೇಹಿತರು ಮತ್ತು ಬಂಧುಗಳು ನಮ್ಮ ಸಂತೋಷದ ಪಾಲುದಾರರಾಗಿರುತ್ತಾರೆ. ನಮ್ಮ ಪ್ರತಿ ನೋವು, ನಲಿವಿನಲ್ಲೂ  ಜೊತೆಯಾಗುವುದು ನಮ್ಮ ಸ್ನೇಹಿತರೇ. ಕೆಲಸವಿಲ್ಲದೇ ಅಲೆಯುತ್ತಿದ್ದಾಗ, ಕಾಯಿಲೆ ಬಿದ್ದು ಹಾಸಿಗೆಯಲ್ಲಿ ಮಲಗಿದ್ದಾಗ, ಪರಮಾಪ್ತರು ನಮ್ಮಿಂದ ದೂರವಾದಾಗ, ಆ ನೋವನ್ನೆಲ್ಲ ನಮ್ಮಿಂದ ಭರಿಸಲು ಸಾಧ್ಯವಾಗುವುದು ನಮ್ಮ ಸ್ನೇಹಿತರು ಮತ್ತು ಬಂಧುಗಳಿಗೆ ಮಾತ್ರ. ನಮ್ಮನ್ನು ಪ್ರೀತಿಸುವವರನ್ನು ನಾವು ಪ್ರೀತಿಸಿದರೆ ನಮ್ಮೊಳಗಿನ ನೋವುಗಳಲ್ಲಿ ಅವರು ಜೊತೆಯಾಗುತ್ತಾರೆ. ಮನುಷ್ಯರು ನಂಬಿಕೆಗೆ ಆರ್ಹರಲ್ಲ ಎನ್ನಿಸಿದರೆ – ಪ್ರಾಣಿ, ಪಕ್ಷಿಗಳನ್ನು ಪ್ರೀತಿಸಬೇಕು. ಆ ಪ್ರೀತಿಗೆ ನೋವು ಮರೆಸುವ ಮಾಂತ್ರಿಕ ಶಕ್ತಿಯಿದೆ.

 1. ನಂಬಿ ಕೆಟ್ಟವರಿಲ್ಲವೋ…

ನಮ್ಮ ಜೀವನದಲ್ಲಿ ಏನಾದರೂ ಒಂದು ಹೊಸ ಸಂಗತಿ ಘಟಿಸುತ್ತದೆ ಎಂದು ನಂಬುವುದರಲ್ಲಿ ಸಂತೋಷದ ಗುಟ್ಟಿದೆ. ನಂಬಿಕೆ  ಸಂತೋಷದ ಬುನಾದಿ. ನಾವು ಅಂದುಕೊಂಡ ಗುರಿ ತಲುಪಲು ಕೂಡ ನಂಬಿಕೆಯಿಂದ ಸಾಧ್ಯ. ನಮ್ಮ ಪ್ರತಿ ಸಂತೋಷವೂ ಕೂಡ ನಾವು ಮಾಡಿದ ಕೆಲಸವನ್ನು ಅವಲಂಬಿಸಿದೆ.
ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೊಂದು ಗುರಿ ಇರಬೇಕು, ಆ ಗುರಿಯನ್ನು ಸಾಧಿಸಬೇಕು ಎಂಬ ಕನಸು ಇರಬೇಕು. ಆ ಗುರಿಯನ್ನು ನಾನು ಮುಟ್ಟಿಯೇ ತೀರುತ್ತೇನೆ ಎಂಬ ಛಲವಿರಬೇಕು. ನಾವು ಅಂದುಕೊಂಡ ಗುರಿ ಸಾಧಿಸದಿದ್ದರೆ ನಾವು ಸಂತೃಪ್ತರಾಗುವುದಿಲ್ಲ. ಸಂತೃಪ್ತಭಾವವು ಖುಷಿಯನ್ನು ಹರಡುವ ಮನೋಭಾವ. ನಾವು ಮಾಡುವ ಕೆಲಸ, ನಮ್ಮ ಸ್ನೇಹಿತರು ಹಾಗೂ ಬಂಧುಗಳ ನಡುವೆ ನಂಬಿಕೆಯನ್ನು ಕಳೆದುಕೊಂಡರೆ ನಮ್ಮೊಳಗಿನ ಸಂತೋಷವನ್ನು ನಾವೇ ಕಳೆದುಕೊಂಡಂತೆ.

ನಮ್ಮೊಳಗೇ ಇರುವ ಸಂತೋಷವನ್ನು ನಾವೇ ಕಂಡುಕೊಳ್ಳಬೇಕು. ಸಂತೋಷವನ್ನು ಅನುಭವಿಸುವುದೆಂದರೆ, ಈ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವುದು.

 

About the author / 

admin

Categories

Date wise

 • ಕೆಂದೆಳನೀರು

  ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

 • ಸಿನಿಮಾ

  ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಚಿತ್ರದ ಆಫರ್ ತಿರಸ್ಕರಿಸಿದ ರಿಯಲ್ ಸ್ಟಾರ್?ಈ ಸುದ್ದಿ ನೋಡಿ

  ತಮ್ಮ ಪ್ರಜಾಕೀಯ ಪಕ್ಷದ ಮೂಲಕ ಲೋಕಸಭಾ ಚುನಾವಣಾ ಸಮರಕ್ಕೆ ಸಿದ್ಧರಾಗಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಬಹು ನಿರೀಕ್ಷಿತ ಚಿತ್ರದ ಆಫರ್ ಗೆ ನೋ ಎಂದು ಹೇಳಿದ್ದಾರೆ. ಹೌದು.. ಪ್ರಸ್ತುತ ಪ್ರಜಾಕೀಯದಲ್ಲಿ ಬಿಸಿಯಾಗಿರುವ ನಟ ಉಪೇಂದ್ರ ಚಿತ್ರೀಕರಣಕ್ಕೆ ತಾತ್ಕಾಲಿಕ ವಿರಾಮ ಹಾಕಿದ್ದು, ಇದೇ ಕಾರಣಕ್ಕೆ ತಮ್ಮದೇ ಚಿತ್ರಗಳನ್ನು ಮುಂದೂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಪ್ರಜಾಕೀಯದತ್ತ ಗಮನ ಕೇಂದ್ರೀಕರಿಸುವ ನಟ ಉಪೇಂದ್ರ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ನೂತನ…

 • ಆರೋಗ್ಯ

  ಹಲವು ಸಮಸ್ಯೆಗಳಿಗೆ ರಾಮಭಾಣ ಖರಬೂಜ ಹಣ್ಣು. ಈ ಹಣ್ಣಿನ

  ಈ ಕೆಳಕಂಡ ಸಮಸ್ಯೆಯಿಂದ ಬಳಲುತ್ತಿರುವವರು ಕರಬೂಜ ಸೇವನೆ ಮಾಡುವುದು ಉತ್ತಮ. ಕರಬೂಜ ಹಲವು ಸಮಸ್ಯೆಗಳಿಗೆ ನಿವಾರಣಾ ಗುಣ ಹೊಂದಿದೆ. ನಾವು ಇದರ ಸೇವನೆಯನ್ನು ಮಾಡುವುದು ಉತ್ತಮ ಇದರಿಂದ ದೇಹಕ್ಕೆ ಹಲವು ಲಾಭಗಳು ಲಭಿಸಲಿವೆ. ಕರಬೂಜದಲ್ಲಿ ಪಿಟೋಕೆಮಿಕಲ್ಸ್ ಎನ್ನುವ ಪದಾರ್ಥ ಇದೆ. ಈ ಪದಾರ್ಥಕ್ಕೆ ಉರಿಯೂತದ ವಿರುದ್ಧ ಹೊರಡುವ ಹೂನವಿದೆ. ಇದನ್ನ ತಿನ್ನುವುದರಿಂದ ಮೊಣಕೈ, ಮೊಣಕಾಲು ದೇಹದಲ್ಲಿರೋ ಸಂದಿಗಳಲ್ಲಿ ಬರುವ ನೋವು ಕಡಿಮೆಯಾಗುತ್ತದೆ. ಕರಬೂಜ ಹಣ್ಣು ತಿನ್ನುವುದರಿಂದ ಸಂದಿವಾತ ಬರುವುದನ್ನ ಸಹ ತಡೆಯಬಹುದು. ಕರಬೂಜದಲ್ಲಿ ರೋಗ ನೀರೋದಕ ಶಕ್ತಿ…

 • Health

  ನೆನೆಸಿಟ್ಟ ಒಣದ್ರಾಕ್ಷಿ ದಿನಾ ಒಂದೆರಡು ತಿಂದ್ರೆ, ಏನೆಲ್ಲಾ ಲಾಭವಿದೆ ಗೊತ್ತಾ?

  ಸಾಮಾನ್ಯವಾಗಿ ಸಿಹಿತಿಂಡಿಗಳ ರುಚಿಯನ್ನು ಹೆಚ್ಚಿಸಲು ಗೋಡಂಬಿಯ ಜೊತೆಗೆ ದ್ರಾಕ್ಷಿಯನ್ನು ಸೇರಿಸುತ್ತಾರೆ. ಹಲವು ಅಡುಗೆಗಳಿಗೆ ಈ ದ್ರಾಕ್ಷಿ ಗೋಡಂಬಿಗಳನ್ನು ಬಳಸುತ್ತಾರೆ. ಆದರೆ ಒಣದ್ರಾಕ್ಷಿಯ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೂ ಹಲವು ಲಾಭಗಳಿವೆ ಏನೆಂದು ತಿಳಿಯೋಣ ಬನ್ನಿ. ಹೃದಯದ ತೊಂದರೆಗಳಿಂದ ರಕ್ಷಿಸುತ್ತದೆ : ಒಣದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದ್ದು ಇದರೊಂದಿಗೆ ಹಲವು ಇತರ ಪೋಷಕಾಂಶಗಳೂ ಇವೆ. ಈ ಪೋಷಕಾಂಶಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ತನ್ಮೂಲಕ ಹೃದಯ ಸಂಬಂಧಿ…

 • ಭವಿಷ್ಯ, ವಿಧ್ಯಾಭ್ಯಾಸ

  ಪಿಯುಸಿ ನಂತರ ಹೆಚ್ಚಾಗಿ ಆರ್ಟ್ಸ್‌ ಆಯ್ಕೆ ಮಾಡುಕೊಳ್ಳುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಗೂಡ್ ನ್ಯೂಸ್..!ತಿಳಿಯಲು ಈ ಲೇಖನ ಓದಿ…

  ಬಹಳಷ್ಟು ವಿದ್ಯಾರ್ಥಿಗಳು ಪಿಯುಸಿ ನಂತರ ಹೆಚ್ಚಾಗಿ ಆರ್ಟ್ಸ್‌ ಆಯ್ಕೆ ಮಾಡುಕೊಳ್ಳುತ್ತಾರೆ. ಆದರೆ ಹೆಚ್ಚಿನವರ ನಂಬಿಕೆ ಏನೆಂದರೆ ಸಯನ್ಸ್‌ ಮತ್ತು ಕಾಮರ್ಸ್‌ನಲ್ಲಿ ಇರೋವಷ್ಟು ಕರಿಯರ್‌ ಆಪ್ಷನ್‌ ಆರ್ಟ್ಸ್‌ನಲ್ಲಿ ಇಲ್ಲ ಎಂದು ಹೇಳಲಾಗುತ್ತದೆ. ಆದರೆ ಅದು ಸುಳ್ಳು ಆರ್ಟ್ಸ್‌‌ನಲ್ಲಿ ಬಹಳಷ್ಟು ಕರಿಯರ್‌ ಅವಕಾಶಗಳು ಇವೆ. ಅದಕ್ಕಾಗಿ ನೀವು ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಸ್ವಲ್ಪ ಮಾಹಿತಿ ಇಲ್ಲಿ ತಿಳಿದುಕೊಳ್ಳಬೇಕು.

 • ಗ್ಯಾಜೆಟ್

  ಈ ಆ್ಯಪ್’ನಲ್ಲಿ ಕೆಟ್ಟದಾಗಿ ಮೆಸೇಜ್ ಕಳುಹಿಸುತ್ತಿರಾ,ಎಚ್ಚರ..!ಬಯಲಾಗಲಿದೆ ರಹಸ್ಯ!ಹೇಗೆ ಗೊತ್ತಾ?ತಿಳಿಯಲು ಈ ಲೇಖನಿ ಓದಿ…

  ಸರಹ  ಆ್ಯಪ್ ಎಂಬ ಹೆಸರಿನ ಈ ಅಪ್ಲಿಕೇಷನ್ ಈಗಂತೂ ತುಂಬಾ ಟ್ರೆಂಡ್ ಕ್ರಿಯೇಟ್ ಮಾಡಿದೆ. ಇದರ ಮೂಲಕ ಯಾರಿಗೂ ನೀವು ರಹಸ್ಯ ಮೆಸೇಜ್ ಕಳುಹಿಸಬಹುದು ಅಗಿದೆ. ಜೈನ್ ಅಲಾಬ್ದೀನ್ ತೌಫಿಕ್ ಎಂಬ ಸೌದಿಅರೇಬಿಯಾದ ವ್ಯಕ್ತಿ ತಯಾರಿಸಿರುವ ಅಪ್ಲಿಕೇಷನ್ ಇದಾಗಿದೆ .

 • ಆರೋಗ್ಯ

  ‘ಮುಟ್ಟಿದರೆ ಮುನಿ’ ಗಿಡ ಈ ಔಷಧೀಯ ಗುಣಗಳನ್ನು ಹೊಂದಿದೆ!

  ನಾವು ಸಣ್ಣವರಿದ್ದಾಗ ಹೊಲಗಳಲ್ಲಿ, ತೋಟಗಳಲ್ಲಿ ಬೆಳೆಯುವ ಮುಟ್ಟಿದರೆ ಮುನಿ ಗಿಡಗಳನ್ನು ಮುಟ್ಟಿ,ಮುಟ್ಟಿ ಅದು ಮುದುರಿಕೊಳ್ಳುವುದನ್ನು ನೋಡಿ ಭಯವೂ ಆಗ್ತಾಯಿತ್ತು, ಮತ್ತೆ ತುಂಬಾ ಮಜವು ಸಿಗ್ತಾ ಇತ್ತು. ಆ ಗಿಡದ ಬಗ್ಗೆ ಅಸ್ಟು ಬಿಟ್ಟರೆ ಬೇರೆ ನಮ್ಗೆ ಗೊತ್ತಿರಲಿಲ್ಲ.