ಕಾನೂನು

ನಿಮ್ಮ ಜಮೀನು ವ್ಯವಹಾರಕ್ಕೆ ಇದು ಕಡ್ಡಾಯವಲ್ಲ..?ಇದು ಕೇವಲ ವದಂತಿ ಎಂದ ಕೇಂದ್ರ ಸರ್ಕಾರ..!

599

ಆಸ್ತಿ ವಹಿವಾಟಿಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾವವೂ ಸದ್ಯಕ್ಕೆ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಈ ಕುರಿತ ಲಿಖಿತ ಉತ್ತರ ನೀಡಿದ ವಸತಿ ಖಾತೆ ರಾಜ್ಯ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರು, 1908ರ ನೋಂದಣಿ ಕಾಯಿದೆಯ ನಿಬಂಧನೆಗಳಡಿ ಆಸ್ತಿ ನೋಂದಾಯಿಸಲು ಸಮ್ಮತಿಯೊಂದಿಗೆ ಆಧರ್ ಬಳಸಿಕೊಳ್ಳುವ ಬಗ್ಗೆ ಪರಿಶೀಲಿಸುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಗಿದೆ ಎಂದರು.

ಬೇನಾಮಿ ಆಸ್ತಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಲ್ಲ ಸ್ಥಿರಾಸ್ತಿಗಳನ್ನು ಆಧಾರ್‌ ಸಂಖ್ಯೆಯೊಂದಿಗೆ ಜೋಡಣೆ ಮಾಡಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ ಎಂಬ ವದಂತಿ ಕೆಲವು ದಿನಗಳಿಂದ ದಟ್ಟವಾಗಿತ್ತು.

ಇಲ್ಲಿ ಓದಿ:-ನಿಮ್ಮ ಜಮೀನಿನ ಪಹಣಿ (RTC)ಯನ್ನು ಈಗ ನೀವು ನಿಮ್ಮ ಮೊಬೈಲಿನಲ್ಲೇ ನೋಡಿ ಪಡೆಯಬಹುದು..!ಹೇಗೆಂದು ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…

ಈ ಮುಂಚೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ‘ಆಧಾರ್‌ ಸಂಖ್ಯೆಯ ಮೂಲಕ ಬೇನಾಮಿ ಆಸ್ತಿ ಪತ್ತೆ ಮಾಡಲಾಗುವುದು ಎಂದು ಹೇಳಿದ್ದರು. ಹೀಗಾಗಿ ಆಸ್ತಿ ವ್ಯವಹಾರಕ್ಕೆ ಆಧಾರ್ ಕಡ್ಡಾಯಗೊಳಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿದ್ದವು.

‘ಆಸ್ತಿ ವಹಿವಾಟಿಗೆ ಆಧಾರ್ ಸಂಪರ್ಕ ಕಲ್ಪಿಸುವ ಯೋಚನೆಯೇ ಸರ್ಕಾರಕ್ಕೆ ಇಲ್ಲ ಎಂದ ಮೇಲೆ ಗಡುವು ವಿಸ್ತರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 ವದಂತಿ ಹರಡಿದ್ದು ಹೇಗೆ..?

ಬ್ಯಾಂಕ್‌ ಖಾತೆ, ಮೊಬೈಲ್‌ ಸಂಖ್ಯೆಗಳ ರೀತಿಯಲ್ಲಿಯೇ ಆಸ್ತಿ ನೋಂದಣಿಗೂ ಆಧಾರ್‌ ಸಂಪರ್ಕ ಕಡ್ಡಾಯಗೊಳಿಸುವುದು ನಿಜಕ್ಕೂ ಒಳ್ಳೆಯ ಕಲ್ಪನೆ’ ಎಂದು ಸಚಿವ ಹರ್‌ದೀಪ್‌ ಸಿಂಗ್‌ ಪುರಿ  ನವೆಂಬರ್‌ನಲ್ಲಿ ಹೇಳಿದ್ದರು.

ಆಧಾರ್‌ ಜೋಡಣೆಯೊಂದಿಗೆ ಬೇನಾಮಿ ಆಸ್ತಿಗಳಿಗೆ ಕಡಿವಾಣ ಬೀಳಲಿದ್ದು, ಭೂ ಮತ್ತು ಆಸ್ತಿ ವಹಿವಾಟುಗಳಲ್ಲಿ ಪಾರದರ್ಶಕತೆ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿತ್ತು.

ಈ ಸುದ್ದಿ ಭೂಗಳ್ಳರಲ್ಲಿ ನಡುಕ ಹುಟ್ಟಿಸಿತ್ತು.ಭೂ ವಹಿವಾಟುಗಳ ಅಕ್ರಮಕ್ಕೆ ತೆರೆ ಬೀಳಲಿದೆ ಎಂಬ ಆಶಾಭಾವನೆಯನ್ನು ಜನಸಾಮಾನ್ಯರಲ್ಲಿ ಹುಟ್ಟುಹಾಕಿತ್ತು.

ಇಬ್ಬರ ನಡುವಿನ ಆಸ್ತಿ ವ್ಯವಹಾರದ ಮೇಲೆ ನಿಗಾ ಇಡಬಹುದು ಮತ್ತು ಮತ್ತೊಬ್ಬರ ಹೆಸರಿನಲ್ಲಿ ಆಸ್ತಿ ನೋಂದಣಿ ತಪ್ಪಿಸಬಹುದು ಎಂದು ನಗರಾಭಿವೃದ್ಧಿ ಸಚಿವಾಲಯದ ಅಧಿಕಾರಿಯೊಬ್ಬರು ಈ ಹಿಂದೆ ತಿಳಿಸಿದ್ದರು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ