ಆರೋಗ್ಯ

ನಿಮ್ಮ ಒಂದು ಯೂನಿಟ್ ರಕ್ತವು ಎಷ್ಟು ಜನರ ಪ್ರಾಣ ಉಳಿಸುತ್ತೆ ಗೊತ್ತಾ!ರಕ್ತದಾನ ಮಾಡಿದ್ರೆ ಏನೆಲ್ಲ್ಲಾ ಪ್ರಯೋಜನ ಇದೆ ಗೊತ್ತಾ?

1189

ಭಾರತದಲ್ಲಿ ಬಹುಮಟ್ಟಿನ ಜನರು ರಕ್ತದಾನ ಮಾಡಲು ಹೆದರುತ್ತಾರೆ. ಈ ಕುರಿತು ಜಾಗೃತಿ ಮೂಡಿಸಲು ಸರ್ಕಾರ ಕಾಲದಿಂದ ಕಾಲಕ್ಕೆ ಅನೇಕ ಅಭಿಯಾನಗಳನ್ನು ನಡೆಸಿದೆ. ಜನ ಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸುವುದು ಮತ್ತು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವವರಿಗೆ ಮನಸ್ಥೈರ್ಯ ಮೂಡಿಸುವುದು, ಪ್ರೇರೆಪಿಸುವುದು ಅಗತ್ಯವಾಗಿ ಆಗಬೇಕಿದೆ.  ಮನುಷ್ಯನ ಜೀವಕ್ಕಿರುವಷ್ಟೇ ಮಹತ್ವ ರಕ್ತದಾನಕ್ಕೂ ಇದೆ.

ತುರ್ತು ಸಂದರ್ಭಗಳಲ್ಲಿ ಜೀವನ್ಮರಣದಲ್ಲಿ ಹೋರಾಟ ನಡೆಸುವ ಮನುಷ್ಯನಿಗೆ ಅಗತ್ಯ ಮಾದರಿಯ ರಕ್ತ ಸೂಕ್ತ ಸಮಯದಲ್ಲಿ ದೊರೆತರೆ ಪ್ರಾಣ ಉಳಿಸಲು ನೆರವಾಗುತ್ತದೆ ಸರ್ಕಾರವೂ ಶೇ.100ರಷ್ಟು ಸುರಕ್ಷಿತ ರಕ್ತವನ್ನು ಅವಶ್ಯಕತೆ ಇರುವವರಿಗೆ ಒದಗಿಸುತ್ತದೆ. ಆದರೆ ಇಲ್ಲಿವರೆಗೆ ಜೀವವುಳಿಸುವ ರಕ್ತದಾನಕ್ಕೆ ಜನಸಮೂಹ ಮುಕ್ತವಾಗಿ ಬಂದಿಲ್ಲ.

ಅದೇ ರೀತಿ 18 ರಿಂದ 60 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ, ಕನಿಷ್ಟ 45 ಕೆ.ಜಿ ದೇಹದ ತೂಕ ವಿರುವ ಮತ್ತು ಹಿಮೊಗ್ಲೋಬಿನ್‍ನ ಪ್ರಮಾಣ ಕನಿಷ್ಟ ಶೇ.12.5ರಷ್ಟು ಇರುವ ವ್ಯಕ್ತಿ ಕಡೆಯ ಪಕ್ಷ ವರ್ಷಕ್ಕೆ 2 ಬಾರಿಯಾದರೂ ರಕ್ತದಾನ ಮಾಡುವ ಅಭಿಲಾಷೆಯನ್ನು ಹೊಂದಿದಲ್ಲಿ ವಿಶ್ವದಲ್ಲಿ ರಕ್ತದ ಅವಶ್ಯಕತೆ ಇರುವ ಎಲ್ಲರಿಗೂ ಶೇ.100ರಷ್ಟು ರಕ್ತ ಒದಗಿಸುವಲ್ಲಿ ಯಶಸ್ವಿಯಾಗಬಹುದು.

ಸರ್ಕಾರಿ ರಕ್ತ ನಿಧಿ ಕೇಂದ್ರಗಳಲ್ಲಿ ರಕ್ತದಾನಿಯಿಂದ ಪಡೆದುಕೊಂಡ ರಕ್ತವನ್ನು ಅಗತ್ಯವಿರುವವರಿಗೆ ನೀಡುವ ಮುನ್ನ ಗುಣಮಟ್ಟವನ್ನು ಪರೀಕ್ಷಿಸುವ ದೃಷ್ಟಿಯಿಂದ ನ್ಯಾಟ್ ಪರೀಕ್ಷೆಯನ್ನು ಮಾಡಲಾಗುತ್ತದೆ. ಈ ಪರೀಕ್ಷೆಯ ಸಹಾಯದಿಂದ ಕೇವಲ 6 ದಿನಗಳ ಒಳಗೆ ಹೆಚ್‍ಐವಿ ಹಾಗೂ ಇನ್ನಿತರ ಸೋಂಕುಗಳ ಇರುವಿಕೆಯನ್ನು ಪತ್ತೆಹಚ್ಚಿ ಸೋಂಕಿತ ರಕ್ತವನ್ನು ನಾಶಪಡಿಸಿ ಸೋಂಕುರಹಿತ ರಕ್ತವನ್ನು ಅಗತ್ಯವಿರುವವರಿಗೆ ನೀಡಲಾಗುತ್ತಿದೆ.

ಒಂದು ಯುನಿಟ್ ರಕ್ತವು 3 ಜೀವಗಳನ್ನು ಉಳಿಸುವಲ್ಲಿ ಉಪಯೋಗವಾಗುವುದು ಎಂಬುದನ್ನು ಮನವರಿಕೆ ಮಾಡಿಕೊಡುವುದು ಹಾಗೂ ಪ್ರತಿಯೊಬ್ಬ ಯುವಕ-ಯುವತಿಯರು ತಮ್ಮ ಹುಟ್ಟುಹಬ್ಬದಂದು ಪ್ರತೀ ವರ್ಷ ಒಂದು ಯುನಿಟ್ ರಕ್ತವನ್ನು ದಾನ ಮಾಡುವುದರೊಂದಿಗೆ  ಹುಟ್ಟುಹಬ್ಬ ಆಚರಿಸಿಕೊಳ್ಳುವ ನಿರ್ಣಯ ಕೈಗೊಳ್ಳಬೇಕಿದೆ. ಇಲ್ಲಿ ಓದಿ:-ಖಾಲಿ ಹೊಟ್ಟೆಯಲ್ಲಿ ಟೀ ಕುಡಿದ್ರೆ ಏನಾಗುತ್ತೆ ಗೊತ್ತಾ ???

ರಕ್ತದಾನದಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳು:-

  • ಒಂದು ಯುನಿಟ್ ರಕ್ತವು 3 ಜೀವಗಳನ್ನು ಉಳಿಸುವಲ್ಲಿ ಉಪಯೋಗವಾಗುವುದು.
  • ರಕ್ತದಾನದಿಂದ ಹೆಚ್ಚುವರಿ ಕಬ್ಬಿಣಾಂಶ ಹೊರಹೋಗುತ್ತದೆ. ಹೆಚ್ಚವರಿ ಕಬ್ಬಿಣಾಂಶದಿಂದ ಅಧಿಕ ರಕ್ತದ ಒತ್ತಡ ಮುಂತಾದ ಅಡ್ಡ ಪರಿಣಾಮಗಳಿರುತ್ತವೆ. ಇದು ಲಿವರ್, ಹೃದಯ ಮತ್ತು ಪಿತ್ತಜನಕಾಂಗದಲ್ಲಿ ಶೇಖರಣೆಯಾಗಿ ಹೃದಯಬೇನೆ, ರಕ್ತದೊತ್ತಡ ಉಲ್ಬಣವಾಗುತ್ತದೆ.
  • ರಕ್ತದ ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ. ರಕ್ತದಾನ ಮಾಡುವುದರಿಂದ ರಕ್ತಕ್ಯಾನ್ಸರ್ ಅಪಾಯ ತಗ್ಗುತ್ತದೆಂದು ಸಂಶೋಧಕರು ಪತ್ತೆಹಚ್ಚಿದ್ದಾರೆ.  ರಕ್ತದಾನ ಮಾಡಿದಾಗ ನಿಮ್ಮ ದೇಹ ಹೊಸ ರಕ್ತ ಪಡೆಯುವ ಅವಕಾಶ ಸಿಗುತ್ತದೆ ಮತ್ತು ರಕ್ತದ ಕ್ಯಾನ್ಸರ್ ಅವಕಾಶ ಕಡಿಮೆಯಾಗುತ್ತದೆ.

 

 

ರಕ್ತದಾನದಿಂದ ನಿಮಗೆ ಸಿಗುವ ಪ್ರಯೋಜನಗಳು:-

  •   ನೀವು ಆರೋಗ್ಯ ತಪಾಸಣೆ ಅವಕಾಶ ಪಡೆಯುತ್ತೀರಿ.
  • ರಕ್ತದಾನ ಕೇಂದ್ರದಲ್ಲಿ ವೈದ್ಯರು ಹೃದಯಬಡಿತ, ರಕ್ತದೊತ್ತಡ, ಕೊಲೆಸ್ಟರಾಲ್, ಹೇಮೋಗ್ಲೋಬಿನ್ ಮಟ್ಟವನ್ನು ಪರೀಕ್ಷೆ ಮಾಡುತ್ತಾರೆ.
  • ರಕ್ತದಾನ ಮಾಡುವ ಮೂಲಕ ನಿಮ್ಮ ಆರೋಗ್ಯದ ಜಾಡು ಹಿಡಿಯಬಹುದು ಮತ್ತು ಆಹಾರ, ವ್ಯಾಯಾಮ, ಜೀವನಶೈಲಿ ಬದಲಾವಣೆ ಮತ್ತಿತರ ಅಂಶಗಳು ಹೇಗೆ ದೇಹದ ಮೇಲೆ ಪರಿಣಾಮ ಬೀರುತ್ತದೆಂದು ತಿಳಿಯಬಹುದು.

ರಕ್ತದಾನ ಮಾಡಲು ಭಯ ಪಡಬೇಡಿ. ನಿಮಗೆ ರಕ್ತದಾನ ಮಾಡಿದ್ರೆ ಏನಾಗುತ್ತದೆಂಬ ಭಯವೆನಾದರು ಇದ್ದರೆ, ನಿಮ್ಮ ಹತ್ತಿರದ  ಆಸ್ಪತ್ರೆ ಡಾಕ್ಟರನ್ನು ಸಂಪರ್ಕಿಸಿ ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳಿ.

ನೆನಪಿಡಿ:-  ದಾನಗಳಲ್ಲೇ ಮಹದಾನ ರಕ್ತದಾನ. ನಿಮ್ಮ ಒಂದು ಯುನಿಟ್ ರಕ್ತವು 3 ಜೀವಗಳನ್ನು ಉಳಿಸಬಲ್ಲದು.

ಹಾಗಾದ್ರೆ ನೀವು ರಕ್ತದಾನ ಮಾಡ್ತೀರಾ ಆಲ್ವಾ….      

 

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಕಾಗೆ ನಿಮ್ಮ ಮನೆ ಮುಂದೆ ಪದೇ ಪದೇ ಕೂಗುತ್ತಿದ್ದರೆ ಏನಾಗುತ್ತೆ ಗೊತ್ತಾ..!

    ಶುಭ-ಅಶುಭ ನಂಬಿಕೆಗಳು ಶತ-ಶತಮಾನಗಳಿಂದಲೂ ನಡೆದುಕೊಂಡು ಬಂದಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಭ-ಅಶುಭಕ್ಕೂ ನಮ್ಮ ಆಸುಪಾಸಿರುವ ಪ್ರಾಣಿ-ಪಕ್ಷಿಗಳಿಗೂ ಸಂಬಂಧವಿದೆ. ಕಾಗೆಗೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳು ನಮ್ಮ ಪುರಾಣದಲ್ಲಿವೆ. ನಮ್ಮ ಜೀವನದಲ್ಲಿ ಬರಬಹುದಾದ ಸಂಕಷ್ಟಗಳ ಬಗ್ಗೆ ಕಾಗೆ ಮುನ್ಸೂಚನೆ ನೀಡುತ್ತದೆ. ಗ್ರಾಮ ಅಥವಾ ಒಂದು ಸ್ಥಳದಲ್ಲಿ ನಾಲ್ಕೈದು ಕಾಗೆಗಳು ಒಟ್ಟಿಗೆ ಕೂಗ್ತಾ ಇದ್ದರೆ ಆ ಗ್ರಾಮಕ್ಕೆ ಆಪತ್ತು ಬರಲಿದೆ ಎಂದರ್ಥ. ಮನೆ ಮುಂದೆ ಕಾಗೆಗಳು ಕೂಗಾಡ್ತಾ ಇದ್ದರೆ ಆ ಮನೆಯ ಯಜಮಾನನಿಗೆ ತೊಂದರೆ ಬರಲಿದೆ. ವ್ಯಕ್ತಿ ಮೈ ಮೇಲೆ ಕಾಗೆ…

  • ಸುದ್ದಿ

    ಕಳ್ಳನಿಂದ ಬಾಯಿ ಬಿಡಿಸಲು ಈ ಪೊಲೀಸರು ಮಾಡಿದ್ದೇನು ಗೊತ್ತಾ..?ಮೈ ಜುಮ್ಮೆನುಸುವ ಈ ವಿಡಿಯೋ ನೋಡಿ…

    ಪೊಲೀಸರು ಕಳ್ಳರ ಬಾಯಿ ಬಿಡಿಸಲು ಲಾಠಿಯಲ್ಲಿ ಹೊಡೆಯುತ್ತಾರೆ, ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ (ಅಮಾನವೀಯ ಚಿತ್ರಹಿಂಸೆ) ಅನ್ನು ಪ್ರಯೋಗಿಸುತ್ತಾರೆ. ಅಥವಾ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ.ಆದರೆ ಇಂಡೋನೇಷ್ಯಾ ಪೊಲೀಸರು ದೇಹದ ಮೇಲೆ ಹಾವನ್ನು ಬಿಟ್ಟು ಬಾಯಿ ಬಿಡಿಸಿದ್ದಾರೆ. ಇಂಡೋನೇಷ್ಯಾದ ಪಪುವಾ ಪ್ರಾಂತ್ಯದಲ್ಲಿ ಮೊಬೈಲ್ ಕದ್ದ ಆರೋಪದ ಮೇಲೆ ಒಬ್ಬನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಾರೆ. ಆಗ ಆತ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಕೊನೆಗೆ ಪೊಲೀಸರು ಆತನ ಕೈಗಳನ್ನು ಕಟ್ಟಿ ಹಾಕಿ ಕುತ್ತಿಗೆಯ ಸುತ್ತ ಹಾವನ್ನು ಬಿಟ್ಟಿದ್ದಾರೆ….

  • ಸುದ್ದಿ

    ಹಳ್ಳಿ ಹುಡುಗನ ಮೇಲೆ ವಿದೇಶಿ ಹುಡುಗಿಯ ಪ್ರಪೋಸ್. ಪ್ರೇಮ ಕುರುಡೋ? ಪ್ರೇಮಿ ಕುರುಡೋ? ದೇವರೇ ಬಲ್ಲ..

    ಪ್ರೀತಿ ಎಂಬುದು ಒಂದು ಸುಮಧುರ ಅನುಭವ, ಪ್ರತಿಯೊಬ್ಬರ ಜೀವನದಲ್ಲಿ ಅನುಭವಿಸಬೇಕಾದ ಒಂದು ಫೀಲಿಂಗ್. ಮನುಷ್ಯನ ಜೀವನದಲ್ಲಿ ಒಂದು ಅವಿಭಾಜ್ಯ ಅಂಶ ಎಂದರೆ ಈ ಪ್ರೀತಿ ಎಂಬ ಫೀಲಿಂಗ್. ತಮಗೆಲ್ಲರಿಗೂ ತಿಳೆದಿರುವ ಹಾಗೆ ಪ್ರೀತಿ ಎಂಬುದು ಯಾವಾಗ, ಯಾರಿಗೆ, ಯಾವ ಜಾಗದಲ್ಲಿ, ಯಾವ ಕ್ಷಣದಲ್ಲಿ ಹೇಗೆ ಹುಟ್ಟುತ್ತದೆ ಎಂಬುದು ಹೇಳಲು ಬಹಳ ಕಷ್ಟಸಾಧ್ಯ.. ಯಾವ ರೂಪದಲ್ಲಿ ಯಾರ ಮೇಲಾದರೂ ಕೂಡ ಆಗಬಹುದು ಉದಾಹರಣೆಗೆ ಬಡವ ಶ್ರೀಮಂತ ,ಸುಂದರಿ ಕುರೂಪಿ , ಮುಸಲ್ಮಾನ ಲಿಂಗಾಯಿತ ಹೀಗೆ ಯಾವ ಧರ್ಮಗಳ ಮೇಲೆ…

  • ಸುದ್ದಿ

    ಮದುವೆಯಾದ ಕೇವಲ ಮೂರೇ ನಿಮಿಷಕ್ಕೆ ಡಿವೋರ್ಸ್..!ಶಾಕ್ ಆಗ್ತೀರಾ ಕರಣ ಕೇಳಿದ್ರೆ..?

    ಸ್ಟುಪಿಡ್ ಎಂದು ಹೇಳಿದಕ್ಕೆ ಮದುವೆ ಆಗಿ ಮೂರೇ ನಿಮಿಷಕ್ಕೆ ಪತ್ನಿ ತನ್ನ ಪತಿಯಿಂದ ವಿಚ್ಛೇದನ ಪಡೆದ ಘಟನೆ ಕುವೈಟ್‍ನಲ್ಲಿ ನಡೆದಿದೆ. ನಗರದ ನ್ಯಾಯಾಲಯದಲ್ಲಿ ವರ ಹಾಗೂ ವಧು ಮದುವೆ ಆಗಲು ತೆರಳಿದ್ದರು. ಮದುವೆ ಪತ್ರದ ಮೇಲೆ ಸಹಿ ಹಾಕಿ ಹೊರಗೆ ಬರುವಾಗ ವಧು ಕಾಲು ಜಾರಿ ಕೆಳಗೆ ಬಿದಿದ್ದಾಳೆ. ಮಹಿಳೆ ಕೆಳಗೆ ಬಿದ್ದಿದ್ದನ್ನು ನೋಡಿದ ವರ ಆಕೆಗೆ ಸಹಾಯ ಮಾಡುವ ಬದಲು ಸ್ಟುಪಿಡ್ ಎಂದು ಬೈದಿದ್ದಾನೆ. ವರ ಈ ರೀತಿ ಬೈದಿದ್ದರಿಂದ ವಧು ಮನನೊಂದಿದ್ದಳು. ಅಲ್ಲದೇ ಮದುವೆ…

  • ಜ್ಯೋತಿಷ್ಯ

    ಯಾವ ದಿನ ಹುಟ್ಟಿದವರು, ಏನೆಲ್ಲಾ ಗುಣ ನಡೆತೆ ಹೊಂದಿರುತ್ತಾರೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಜ್ಯೋತಿಷ್ಯಾಸ್ತ್ರ ಬಹು ಪುರಾತನವಾಗಿದ್ದರೂ ಕೆಲವರು ಇಂದಿಗೂ ನಂಬುವುದಿಲ್ಲ. ಆದರೆ ನಮ್ಮ ಹುಟ್ಟಿನ ಕೆಲವು ಅಂಶಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂಬುದು ಜ್ಯೋತಿಷ್ಯಾಸ್ತ್ರದಲ್ಲಿ ಹೇಳದೇ ಇದ್ದರೂ ವಾಸ್ತವಾಂಶಗಳನ್ನು ಗಮನಿಸಿ ನಿಜ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ.