ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ,
ಮೃತ್ಯೋರ್ಮಾ ಅಮೃತಂಗಮಯ… ಓಂ ಶಾಂತಿ, ಶಾಂತಿ ಶಾಂತಿಃ
ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು. ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ. ದೀಪ +ಅವಳಿ ಎಂದರೆ ಜೋಡಿ ದೀಪ ಅಥವಾ ದೀಪಗಳ ಸಾಲು ಎಂದರ್ಥ. ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ.
ದೀಪಾವಳಿಯ ಕಥೆಗಳು ಹಲವಾರು. ಕೆಲವರು ಈ ದಿನದಂದು ರಾಮ ಸೀತೆ ಹಾಗೂ ಲಕ್ಷ್ಮಣರು 14 ವರ್ಷಗಳ ನಂತರ ಅಯೋಧ್ಯೆಗೆ ಮರಳಿದ ದಿನಗಳು ಎಂದರೆ. ಮತ್ತೆ ಕೆಲವರು ಇದು ಪಾಂಡವರು 12 ವರ್ಷ ವನವಾಸ ಮತ್ತು 1 ವರ್ಷ ಅಜ್ಞಾತವಾಸವನ್ನು ಮುಗಿಸಿ ಪುನಃ ಹಸ್ತಿನಾಪುರಕ್ಕೆ ಹಿಂದಿರುಗಿದ ದಿವಸಗಳು ಎನ್ನುತ್ತಾರೆ. ಇನ್ನು ವಿಷ್ಣುಪುರಾಣಗಳು ಈ ದಿನದಂದು ಲಕ್ಮೀ ಮಾತೆ ಹಾಲಿನ ಸರೋವರದಿಂದ ಜನಿಸಿದ್ದು. ತದನಂತರ ವಿಷ್ಣುವನ್ನು ಒಪ್ಪಿ ಮದುವೆಯಾದ ದಿನಗಳು ಆದ್ದರಿಂದಲೇ ಈ ದಿನದಂದು ಲಕ್ಷ್ಮೀ ಪೂಜೆಯನ್ನು ಮಾಡಿದರೆ ಮಾತೆ ಒಲಿಯುತ್ತಾಳೆ ಎಂಬ ಕಥಾನಕವನ್ನೂ ನೀಡುತ್ತದೆ.
ಇನ್ನೂ ಹಿಂದೆ ಹೋದರೆ ಕಥೋಪನಿಷದ್ ಈ ದಿನದಂದು ಯಮ ಮತ್ತು ನಚಿಕೇತರ ನಡುವಿನ ಕಥೆಯನ್ನು ತೆರೆದಿಡುತ್ತದೆ. ಮೊದಲದಿನವಾದ ನರಕ ಚರ್ತುದಶಿಯಂದು ನಚಿಕೇತನು ಧರ್ಮ -ಅಧರ್ಮ, ಸರಿ-ತಪ್ಪು, ಅಜ್ಞಾನ-ಜ್ಞಾನ ಗಳ ಬಗ್ಗೆ ಸಂಪೂರ್ಣ ಚಿತ್ರಣ ನೀಡಿದ ದಿನ ಎಂದು ತಿಳಿಸುತ್ತದೆ.
ಇನ್ನು ಇದರೊಂದಿಗೆ ಬಲಿ ಚಕ್ರವರ್ತಿಯ ಕಥೆಯೂ ಸೇರಿಕೊಂಡಿದೆ. ಸ್ವರ್ಗವನ್ನೇ ಗೆದ್ದು ಅಲ್ಲಿ ಭೂಮಿಯ ಹಾಗೆ ಏನು ಇಲ್ಲ ಎಂದು ಹಿಂದಿರುಗಿದ ಮಹಾ ಪರಾಕ್ರಮಿ ಬಲಿ ಚಕ್ರವರ್ತಿಯು ಇಂದ್ರ ಸ್ಥಾನವನ್ನು ಪಡೆಯಲು ಯಜ್ಞ ಮಾಡುತ್ತಿರುವಾಗ ದೇವತೆಗಳ ಬೇಡಿಕೆಯಂತೆ ವಾಮನ ಅವತಾರದಲ್ಲಿ ಪ್ರತ್ಯಕ್ಷನಾದ ವಿಷ್ಣುವು 3 ಪಾದ (ಅಡಿ) ಜಾಗವನ್ನು ಕೇಳಿದಾಗ ಯಾವುದೇ ಯೋಚನೆ ಮಾಡದೇ ದಾನದ ಅರ್ಗ್ಯ ನೀಡಿದ ಬಲಿಗೆ ತನ್ನ ಬಲವ ಪ್ರದರ್ಶಿಸಿ ಭೂ-ಮಂಡಲದಲ್ಲೊಂದು ಕಾಲು ಆಕಾಶದಲ್ಲೊಂದು ಪಾದವಿರಿಸಿ..
ಇನ್ನೊಂದು ಪಾದವೆಲ್ಲಿರಿಸಲಿ ಎಂದಾಗ ಸರ್ವತ್ಸ್ವವನ್ನೂ ಅರ್ಪಿಸುತ್ತ ತನ್ನ ಶಿರಸ್ಸಿನ ಮೇಲಿರಿಸಿ ಎಂದ. ಅದಕ್ಕನುಗುಣವಾಗಿ ವಾಮನನು ಅವನನ್ನು ಭೂಗರ್ಭಕ್ಕಿಳಿಸಿದ. ಆತನ ತ್ಯಾಗಕ್ಕೆ ಮೆಚ್ಚಿ ನಿನಗೇನು ಬೇಕು ಎಂದಾಗ ಮುಕ್ತಿ ಎಂದನಂತೆ.
ಇಂತಹ ತ್ಯಾಗಮನೋಭಾವದಿಂದ ಪ್ರಭಾವಿತನಾದ ವಿಷ್ಣುವು ಈ ದಿನವನ್ನು ಬಲಿಪಾಡ್ಯ ಎಂದೇ ವಿಶ್ವದಾದ್ಯಂತ ಆಚರಿಸುತ್ತಾರೆ ಎಂಬ ವರನಿತ್ತ ಎಂಬ ಪ್ರತೀತಿ ಕೂಡ ಇದೆ.
ಇವೆಲ್ಲವನ್ನೂ ಒಡಗೂಡಿ ನರಕಾಸುರನನ್ನು ವಧೆ ಮಾಡಿದ ದಿನವೂ ಇದೇ ಎಂದೂ ಹೇಳುವುದುಂಟು. ಹತ್ತು ಹಲವಾರು ಕಥೆಗಳನ್ನು ದೀಪಾವಳಿ ಹೊಂದಿದ್ದರೂ, ಇವೆಲ್ಲರ ಅರ್ಥ ಒಂದೇ ಒಳ್ಳೆಯದರ ಗೆಲುವು. ನಮ್ಮೆಲ್ಲರ ಮನಸ್ಸಿನ ವಿಕಾರಗಳಾದ ಕಾಮ, ಕ್ರೋಧ ಮದ, ಮತ್ಸರಗಳನ್ನು ಜುಸಿ.(ಬಲಿಯಾಗಿಸಿ), ಹೊಸ ತನದಿಂದ ಉತ್ತಮ ವಿಚಾರಗಳ ಉಗಮವಾಗಬೇಕು. ಮನದ ಕೊಳೆಯನ್ನು ಕಳಚಿ ಶುಭ್ರ ಬಟ್ಟೆಯ ತೊಡುವ ಹಾಗೆ, ನಿರಾಕಾರ ಜ್ಯೋತಿಯಷ್ಟೇ ಪರಿಶುದ್ಧ ಮನಸ್ಸನ್ನು ಪಡೆಯುವುದು. ನೀರು ತುಂಬುವ ಆಚರಣೆಂದ ಆರಂಭವಾಗುವ ಈ ಹಬ್ಬದ ಪ್ರತಿದಿನಕ್ಕೂ ಅದರದೇ ಆದ ವೈಶಿಷ್ಟ್ಯತೆ ಇದೆ.
ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ. ದೀಪಾವಳಿ ಹಬ್ಬದ ಸಂಭ್ರಮ-ಸಡಗರವನ್ನು ಇಮ್ಮಡಿಗೊಳಿಸಲು ಸುರಕ್ಷಿತವಾಗಿ ಆಚರಿಸುವುದು ಕೂಡ ಮುಖ್ಯ.
ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯುವ ಭರಾಟೆಯಲ್ಲಿ ಮಕ್ಕಳು ಕಣ್ಣು, ಕೈ, ಕಾಲಿಗೆ ಪೆಟ್ಟು ಮಾಡಿಕೊಳ್ಳುವುದು ಸಾಮಾನ್ಯ. ಪಟಾಕಿ ಸಿಡಿಸುವಾಗ ಏನು ಮುನ್ನೆಚ್ಚರಿಕೆ ವಹಿಸಬೇಕು ಎಂದು ಡಾ.ಅಗರ್ ವಾಲ್ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞ ಡಾ.ಅಮೋದ್ ನಾಯಕ್ ಹೇಳುತ್ತಾರೆ.
– ಪಟಾಕಿ ಸಿಡಿಸುವಾಗ ಮಕ್ಕಳು ಪಟಾಕಿಯಿಂದ ಕನಿಷ್ಠ ತೋಳಿನಷ್ಟು ದೂರದಲ್ಲಿರಬೇಕು.
– ಪಟಾಕಿ ಹೊಡೆಯುವಾಗ ಸಡಿಲ ಬಟ್ಟೆಗಳನ್ನು ಧರಿಸಬೇಡಿ.
-ರಕ್ಷಕ ಕವಚಗಳನ್ನು ದೇಹಕ್ಕೆ ಧರಿಸಿಕೊಳ್ಳಿ.
-ಬೇಡದ ವಸ್ತುಗಳು ದೇಹಕ್ಕೆ ಬಿದ್ದರೆ ನೀರಿನಿಂದ ತೊಳೆಯಿರಿ.
-ರಕ್ಷಾ ಫಲಕವಾಗಿ ಕಾಂಟಾಕ್ಸ್ಟ್ ಬದಲು ಗ್ಲಾಸುಗಳನ್ನು ಧರಿಸಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಲಕ್ಷದ್ವೀಪದ ಪ್ರವೇಶದ್ವಾರ ಅಂತಲೇ ಅಗಟ್ಟಿ ನಡುಗಡ್ಡೆ ಜನಪ್ರಿಯವಾಗಿದೆ. ಅಗಟ್ಟಿಯಲ್ಲಿ ಸ್ಥಳೀಯ ವಿಮಾನ ನಿಲ್ದಾಣವಿದೆ. 1988ರಲ್ಲಿ ಇಲ್ಲಿನ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಲಕ್ಷದ್ವೀಪಕ್ಕೆ ವಿಮಾನ ಸಂಪರ್ಕ ಕಲ್ಪಿಸುವ ಏಕೈಕ ದ್ವೀಪವೂ ಇದೇ ಆಗಿದೆ.
ಇಂದು ನಾವು ನಿಮಗೆ ಒಂದು ಸಂತಸದ ಸುದ್ದಿ ತಂದಿದ್ದೇವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿದೊಡ್ಡ ಬ್ಯಾಂಕ್ ಈ ಒಳ್ಳೆಯ ಸುದ್ದಿ ಘೋಷಿಸಿದೆ. ಬ್ಯಾಂಕ್ ತನ್ನ ಖಾತೆದಾರರಿಗೆ ಒಂದು ಯೋಜನೆಯನ್ನು ತಂದಿದೆ. ಎಸ್ಬಿಐ ಬ್ಯಾಂಕ್ ಈ ಯೋಜನೆಯನ್ನು ತಿಳಿಸಿದ ಸಮಯದಿಂದಲೂ, ಎಲ್ಲಾ ಜನರು ಆಶ್ಚರ್ಯಚಕಿತರಾಗಿದ್ದರೆ.
ಮಳೆ ಬಂದ್ರೆ ಸಾಕು ಬೆಂಗಳೂರಿಗರಿಗೆ ಭಯ.ಯಾಕೆಂದ್ರೆ ಎಲ್ಲಿ ಏನಾಗುತ್ತೆ ಗೊತ್ತಿಲ್ಲ. ಯಾವ ಮೋರಿಯಿಂದ ನೀರು ಹೊರಬಂದು ಮನೆಗಳಿಗೆ ನುಗ್ಗುತ್ತೋ ಎನ್ನುವ ಭಯ. ಎಲ್ಲಿ ಟ್ರಾಫಿಕ್ ಜಾಮ್ ಆಗುತ್ತೋ ಅನ್ನೋ ಭಯ.ಇವೆಲ್ಲದರ ನಡುವೆ ಇನ್ನೊಂದು ಭಾಗ್ಯ ಬೆಂಗಳೂರಿಗರಿಗೆ ಸೇರಲಿದೆ.
ಪರೀಕ್ಷೆ ಬರೆಯಲು ಹೋದ ತಾಯಂದಿರ ಮಕ್ಕಳನ್ನು ನೋಡಿಕೊಂಡ ಅಸ್ಸಾಂನ ಮಹಿಳಾ ಪೇದೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಸ್ಸಾಂನ ಮಹಿಳಾ ಪೇದೆಗಳು ಮಕ್ಕಳನ್ನು ಎತ್ತಿಕೊಂಡು ಅವರನ್ನು ನೋಡಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಸಾಕಷ್ಟು ಶೇರ್ ಆಗುತ್ತಿದ್ದು, ಅನೇಕರು ಪೇದೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಸ್ಸಾಂ ಪೊಲೀಸರು, ಇಬ್ಬರು ಮಹಿಳಾ ಪೇದೆಗಳು ಮಗುವನ್ನು ಎತ್ತಿಕೊಂಡು ಸಂತೈಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ತಾಯಿ ಯಾಗುವುದು ಒಂದು ಕ್ರಿಯೆ. ನೀವು ಅದನ್ನು…
ದೇಶದ ಖ್ಯಾತ ಧಾರ್ಮಿಕ ನಾಯಕ, ಸ್ವಘೋಷಿತ ದೇವಮಾನವ, ಗುರುಮೀತ್ ರಾಮ್ ರಹೀಂ ಬಾಬಾ ವಿರುದ್ಧದ ಅತ್ಯಾಚಾರ ಆರೋಪ ಸಾಬೀತಾಗಿದೆ.
ಪ್ರತಿಯೊಬ್ಬ ವ್ಯಕ್ತಿಯೂ ಶ್ರೀಮಂತನಾಗ್ಬೇಕೆಂದು ಬಯಸ್ತಾನೆ. ಸದಾ ಪರ್ಸ್ ನಲ್ಲಿ ಹಣವಿರಬೇಕೆಂದು ಆಶಿಸುತ್ತಾನೆ. ಕೆಲವರು ಪರ್ಸ್ ನಲ್ಲಿ ವಿಶೇಷ ವಸ್ತುಗಳನ್ನಿಟ್ಟುಕೊಳ್ತಾರೆ. ಇದ್ರಿಂದ ಅವ್ರ ಪರ್ಸ್ ನಲ್ಲಿ ಹಣ ತುಂಬಿ ತುಳುಕುತ್ತಿರುತ್ತದೆ. ಕೆಲವೊಮ್ಮೆ ಪರ್ಸ್ ನಲ್ಲಿರುವ ವಸ್ತುವೇ ದುರಾದೃಷ್ಟಕ್ಕೆ ಕಾರಣವಾಗುತ್ತದೆ. ಸಾಲ ಮಾಡುವ ಪರಿಸ್ಥಿತಿ ಎದುರಾಗುತ್ತದೆ. ಹಾಗಾಗಿ ಪರ್ಸ್ ನಲ್ಲಿ ಯಾವ ವಸ್ತು ಇಡಬೇಕು? ಯಾವುದನ್ನು ಇಡಬಾರದು ಎಂಬುದನ್ನು ತಿಳಿದಿರಬೇಕು. ಪರ್ಸ್ ನಲ್ಲಿ ಎಂದೂ ಹಳೆಯ ಕಾಗದಗಳನ್ನು ಇಡಬಾರದು. ಇದು ಒಳ್ಳೆಯದಲ್ಲ. ಲಕ್ಷ್ಮಿಗೂ ಇದು ಇಷ್ಟವಾಗುವುದಿಲ್ಲ. ಹಾಗಾಗಿ ಪರ್ಸ್ ಸ್ವಚ್ಛವಾಗಿರುವಂತೆ…