ಜ್ಯೋತಿಷ್ಯ

ದಿನ ಭವಿಷ್ಯ ಗುರುವಾರ…ಇಂದು ನಿಮಗೆ ಗುರು ಒಲಿಯುತ್ತಾನೆಯೇ ನೋಡಿ ತಿಳಿಯಿರಿ…

344

ಗುರುವಾರ, 29/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಕೆಲಸದ ಸ್ಥಳದಲ್ಲಿ ಉತ್ಸಾಹದಾಯಕ ಹಾಗೂ ಚೈತನ್ಯದಾಯಕ ಪ್ರಚೋದಕ ಬೆಳವಣಿಗೆಗಳು ಉಂಟಾಗುವವು. ತೆರಿಗೆ ಅಧಿಕಾರಿಗಳ ಬಗ್ಗೆ ಜಾಗ್ರತೆ ವಹಿಸಬೇಕು. ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆಯಿಂದ ಮುನ್ನಡೆ ಇರುತ್ತದೆ. ಮನೆಯಲ್ಲಿ ಪಕ್ಕದವರ ಕಿರಿಕಿರಿಗಳಿಗೆ ತಲೆ ಕೆಟ್ಟು ಹೋಗುತ್ತದೆ. ಸಮಾಧಾನವಿರಲಿ. ನಿಮಗೆ ಸಹಾಯ ಸಹಕಾರ ನೀಡಿದ ಗುರುಹಿರಿಯರನ್ನುಗೌರವಿಸಿ ಮುಂದೆ ಉತ್ತಮ ದಿನಗಳಿವೆ.

ವೃಷಭ:-

ಮನೆ ಮಾರಾಟ, ಫ್ಲಾಟ್‌ ಖರೀದಿಗಳಿಗೆ ಅವಸರಿಸದಿರಿ. ಆರೋಗ್ಯದ ವಿಷಯದಲ್ಲಿ ಉದಾಸೀನ ಬೇಡ. ಸಣ್ಣಪುಟ್ಟ ಜ್ವರಾದಿಗಳು ಬಂದರೂ ನಿಮ್ಮ ಮನೆ ವೈದ್ಯರ ಸಲಹೆ ಪಡೆಯಿರಿ. ದೈವಬಲ ಇರುವುದರಿಂದ ಅತಿ ಚಿಂತೆ ಬೇಡ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.  ಮಿತ್ರರೊಡನೆ ವಿರಸವಾದೀತು. ವೃತ್ತಿರಂಗದಲ್ಲಿ ಮುನ್ನಡೆ ಇರುತ್ತದೆ. ತಪ್ಪು ಹೆಜ್ಜೆಯಿಂದ ಕಾರ್ಯವಿಳಂಬವಾದೀತು.

 

ಮಿಥುನ:

ಕನಸು ಕಾಣುತ್ತಿರುವ ಪ್ರೇಮಿಗಳು ಪ್ರಯೋಗ ಶೀಲತೆಯಿಂದ ನಡೆದರೆ ಯಶಸ್ಸು ಕಾಣುವಿರಿ. ಉಭಯ ಮನೆತನದ ಹಿರಿಯರ ಒಪ್ಪಿಗೆ ಪಡೆಯುವುದರಿಂದ ಜೀವನ ಉತ್ತಮವಾಗಿರುವುದು. ಕುಟುಂಬದ ಸದಸ್ಯರ ಬಗ್ಗೆ ಜಾಗ್ರತೆ ಇರಲಿ. ವಧುವರರಿಗೆ ಕಂಕಣಭಾಗ್ಯವೊದಗೀತು. ಆಗಾಗ ದೇಹಾರೋಗ್ಯದಲ್ಲಿ ಏರುಪೇರಾಗುತ್ತದೆ. ಕೋರ್ಟು ಕಚೇರಿ ಭಾಗದಲ್ಲಿ ಹೆಚ್ಚಿನ ಧನವ್ಯಯವಾದೀತು.

 

ಕಟಕ :-

ಅಸಹನೆ-ದುರಾಸೆಗೆ ಕಾರಣರಾಗದಿರಿ. ಸಂತಾನ ಸಂಬಂಧ ದುಃಖವಾದೀತು. ಕಚೇರಿಯಲ್ಲಿ ಅಧಿಕಾರಿ ವರ್ಗದವರು ಧರ್ಮಬಾಹಿರ ಕಾರ್ಯವನ್ನು ಮಾಡಲಿದ್ದಾರೆ. ಜಾಗ್ರತೆ ವಹಿಸಿರಿ. ಕಾರಣವಿರದ ಚಿಂತೆ ಹಾಗೂ ಖಿನ್ನತೆಗಳನ್ನು ಬಿಟ್ಟು ಗೆಳೆಯರೊಂದಿಗೆ ಚರ್ಚಿಸಿ. ಒಳಿತಿನ ದಾರಿ ನಿಮಗೆ ಗೋಚರವಾಗುವುದು. ಆಂಜನೇಯ ದೇವಸ್ಥಾನಕ್ಕೆ ತಪ್ಪದೇ ಹೋಗಿ ಬನ್ನಿ. ಭಗವಂತ ನಿಮಗೆ ಅಭಯ ನೀಡುವನು.

 

 

 ಸಿಂಹ:

ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಇರಲಿ. ಉದರ ಶೂಲೆ ಸಂಬಂಧ ನಿರ್ಜಲೀಕರಣದಿಂದಾಗಿ ಸುಸ್ತಾಗುವಿರಿ. ಅದಕ್ಕೆ ಸೂಕ್ತ ಔಷಧೋಪಚಾರ ನಡೆಸಿ. ಹಣಕಾಸಿನ ಸ್ಥಿತಿ ಸಾಧಾರಣ ಮಟ್ಟದ್ದಾಗಿರುತ್ತದೆ. ಹೊಸ ಚಿಂತನೆಗೆ ಸಾಧ್ಯತೆ ಇರುತ್ತದೆ. ಆದರೂ ದುಡುಕದೆ ಮುಂದುವರಿಯಬೇಕು. ಕಾರ್ಯಭಾರದಿಂದ ದೇಹಾಯಾಸಕ್ಕೆ ಕಾರಣರಾಗದಂತೆ ಜಾಗ್ರತೆ ವಹಿಸಬೇಕು. ಶುಭಕಾರ್ಯಗಳಿಗೆ ಓಡಾಟ ಒದಗಿ ಬರಲಿದೆ.

 

ಕನ್ಯಾ :-

ತಾಂತ್ರಿಕ ವರ್ಗ ಮತ್ತು ವೈದ್ಯಕೀಯ ರಂಗದಲ್ಲಿರುವವರಿಗೆ ವಿಶೇಷ ಅನುಕೂಲತೆಗಳು ಉಂಟಾಗುವವು. ನಿಮ್ಮ ಸಾಮಾಜಿಕ ಕಾಳಜಿ ಮತ್ತು ಸೇವೆಯನ್ನುಜನರು ಕೊಂಡಾಡುವರು. ಬಲವನ್ನು ಮುಂದುವರಿಸಬೇಕು. ಶುಭಮಂಗಲ ಕಾರ್ಯಗಳಿಗಾಗಿ ಓಡಾಟ ವಿರುತ್ತದೆ. ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳು ಪ್ರಯತ್ನ

 

ತುಲಾ:

ಶ್ರೀದೇವತಾ ದರ್ಶನ ಭಾಗ್ಯದಿಂದ ಶಾಂತಿ ಸಮಾಧಾನ ಸಿಗಲಿದೆ. ಆಗಾಗ ಮಾನಸಿಕ ಅಸ್ಥಿರತೆ ಕಾಡಬಹದು. ಸಮಾಧಾನ ಚಿತ್ತರಾಗಿ ಮುಂದುವರಿಯಬೇಕಾಗು ತ್ತದೆ. ದಿನಾಂತ್ಯ ಅತಿಥಿಗಳು ಬಂದಾರು. ಸರ್ಕಾರಿ ಕೆಲಸ ಕಾರ್ಯಗಳಲ್ಲಿನ ಕಾರ್ಯವಿಳಂಬತೆಯನ್ನು ತಪ್ಪಿಸಿಕೊಳ್ಳಲು ಕುಲದೇವತಾ ಪ್ರಾರ್ಥನೆ ಮಾಡಿ. ಭಿಕ್ಷುಕರಿಗೆ ಮತ್ತು ಬಡವರಿಗೆ ಚಿತ್ರಾನ್ನ ನೀಡಿ. ಒಳಿತಾಗುವುದು.

 

ವೃಶ್ಚಿಕ :-

ವರಮಾನ ತೆರಿಗೆ ಇಲಾಖೆ ಬಗೆಗಿನ ಕೆಲಸ ಕಾರ್ಯಗಳನ್ನೆಲ್ಲ ಶಿಸ್ತಿನಿಂದ ಪೂರೈಸಿ. ವರ್ಷದ ಆಯವ್ಯಯ ಪಟ್ಟಿಯನ್ನು ತಯಾರಿಸಿ. ಅದರ ಬಗ್ಗೆ ಪೂರ್ವ ತಯಾರಿ ಮಾಡಿಟ್ಟುಕೊಳ್ಳಿ. ಬಲದಿಂದ ಮುಂದುವರಿಸಿದಲ್ಲಿ ಕಾರ್ಯಸಾಧ‌ನೆ. ಕಂಟ್ರಾಕ್ಟ್ ವೃತ್ತಿಯವರಿಗೆ ಲಾಭ ತಂದೀತು. ಸಾಂಸಾರಿಕವಾಗಿ ಮನದನ್ನೆಯ ಮಾತನ್ನು ನಡೆಸಬೇಕಾಗುತ್ತದೆ. ಕೆಲಸಕಾರ್ಯಗಳನ್ನು ಪ್ರಯತ್ನ

 

 

ಧನಸ್ಸು:

ಒಡವೆ, ಆಭರಣ, ಬೆಲೆ ಬಾಳುವ ವಸ್ತುಗಳ ಬಗ್ಗೆ ಎಚ್ಚರದಿಂದಿರಿ. ಒಡವೆಯನ್ನು ಒಂದೆಡೆ ಇಟ್ಟು ಮರೆಯುವ ಸ್ವಭಾವ ಇರುವ ನೀವು ಆಭರಣಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ದೇವತಾರಾಧನೆಯ ಚಿಂತನೆ ನಡೆಯಲಿದೆ. ನಿಂತು ಹೋದ ಕೆಲಸಕಾರ್ಯಗಳು ಪುನಃ ಚಾಲನೆಗೆ ಬರಲಿವೆ. ಧನಾಗಮನದಲ್ಲಿ ಅಭಿವೃದ್ಧಿ ತೋರಿ ಬಂದು ಕಾರ್ಯಸಾಧನೆಗೆ ಅನುಕೂಲ. ಮುಂದುವರಿಯಿರಿ.

 

ಮಕರ :-

ಆದಾಯ ವೃದ್ಧಿಯಾದರೂ ಜಾಗ್ರತೆಯಿಂದ ಖರ್ಚು ಮಾಡಬೇಕು. ವಾಸ ಸ್ಥಳದ ಬದಲಾವಣೆ ಇರುತ್ತದೆ. ಆದರೂ ವಿಘ್ನಗಳು ತೊಂದರೆಗಳು ಬರುತ್ತಾ ಇರುತ್ತವೆ. ಆರೋಗ್ಯದ ಬಗ್ಗೆ ಉದಾಸೀನತೆ ಮಾಡದಿರಿ. ನಿಮ್ಮ ಕೆಲಸ ಕಾರ್ಯಗಳನ್ನು ಸಾರ್ಥಕವಾಗಿಸಲು ನಿಮ್ಮ ಮಕ್ಕಳು ನಿಮಗೆ ಸಹಕಾರಿಯಾಗಿ ನಿಲ್ಲುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಬೆಳ್ಳಗೆ ಇರುವುದೆಲ್ಲಾ ಹಾಲು ಎಂದು ನಂಬಿ ಮೋಸ ಹೋಗದಿರಿ.

 

ಕುಂಭ:-

ನೀವು ಎಷ್ಟೇ ಎಚ್ಚರಿಕೆ ವಹಿಸಿದರೂ ಕಚೇರಿಯ ಕೆಲಸ ಕಾರ್ಯಗಳಲ್ಲಿ ತಪ್ಪುಗಳು ನುಸುಳುತ್ತವೆ. ಅದನ್ನು ಪ್ರಾಂಜ್ವಲ ಮನಸ್ಸಿನಿಂದ ಒಪ್ಪಿಕೊಳ್ಳುವುದರಿಂದ ಮೇಲಾಧಿಕಾರಿಗಳ ಮೆಚ್ಚುಗೆ ಪಡೆಯುವಿರಿ. ಔದ್ಯೋಗಿಕ ಆರ್ಥಿಕ ಅಭಿವೃದ್ಧಿ ಇರುತ್ತದೆ. ಧನವ್ಯಯವಾದರೂ ಆಗಾಗ ಧನಾಗಮನ ಇರುತ್ತದೆ. ಶುಭಮಂಗಲ ಕಾರ್ಯಗಳ ಪ್ರಸ್ತಾವಗಳು ನಡೆಯಲಿವೆ. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

 

ಮೀನ:-

ವೃತ್ತಿರಂಗದಲ್ಲಿ ಏರುಪೇರು ತೋರಿ ಬಂದರೂ ಛಲದಿಂದ ಮುಂದುವರಿಯಬೇಕು. ಸಾಂಸಾರಿಕವಾಗಿ ಮನದನ್ನೆಯ ಸಹಕಾರ ಇರುತ್ತದೆ. ವಿದ್ಯಾರ್ಥಿಗಳಿಗೆ ನಿರುದ್ಯೋಗಿಗಳಿಗೆ ಅಚ್ಚರಿಯ ವಾರ್ತೆ. ಇಟ್ಟಗುರಿ ಬಿಟ್ಟಬಾಣ ನೇರವಾಗಿ ಇರಬೇಕು. ಆದರೆ ಗ್ರಹಗತಿಗಳು ನಿಮಗೆ ಸ್ವಲ್ಪ ಆಲಸ್ಯವನ್ನು ತುಂಬುವರು. ಹಾಗಾಗಿ ನಿರ್ದಿಷ್ಟ ಗುರಿಯನ್ನು ತಲುಪಲು ಸಾಧ್ಯವಿಲ್ಲ. ಕುಲದೇವತಾ ಸ್ಮರಣೆ ಮಾಡಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ದೇಶದ ಎಲ್ಲಾ ವಾಹನ ಸವಾರರಿಗೊಂದು ಸಂತೋಷದ ಸುದ್ದಿ..! ಇವತ್ತಿನಿಂದಲೇ ಜಾರಿಗೆ ತರಲಿದ್ದಾರೆ,.!!

    ದೇಶಾದ್ಯಂತಒಂದೇ ಮಾದರಿಯ ಡಿಎಲ್ ಹಾಗೂಆರ್‍ಸಿ ಕಾರ್ಡ್‍ಗಳನ್ನುವಿತರಿಸಲು ಕೇಂದ್ರ ರಸ್ತೆ ಸಾರಿಗೆಸಚಿವಾಲಯ ಮುಂದಾಗಿದೆ. ನೂತನ ಡಿಎಲ್ ಹಾಗೂಆರ್‍ಸಿ ಕಾರ್ಡ್‍ಗಳುಸ್ಮಾರ್ಟ್ ತಂತ್ರಜ್ಞಾನವನ್ನು ಹೊಂದಿದ್ದು, ಇವುಗಳು ಎಟಿಎಂ ಕಾರ್ಡ್‍ಗಳು ಕೆಲಸ ನಿರ್ವಹಿಸುವರೀತಿಯಲ್ಲೇ ಕಾರ್ಯ ನಿರ್ವಹಿಸಲಿವೆ. ಈಸಂಬಂಧ ಸಾರಿಗೆ ಆಯುಕ್ತ ಎನ್.ಶಿವಕುಮಾರ್ ಪ್ರತಿಕ್ರಿಯಿಸಿ,  ಆಗಸ್ಟ್ 1 ರಿಂದ  ನೋಂದಣಿಯಾಗುವ ಎಲ್ಲಾ ವಾಹನ ಸವಾರರಿಗೆ ಅನ್ವಯವಾಗಲಿದೆ.ಹಳೆಯ ವಾಹನಗಳ ಮಾಲೀಕರು ನವೀಕರಣಸಮಯದಲ್ಲಿ ಹೊಸ ಕಾರ್ಡ್ ಪಡೆದುಕೊಳ್ಳಬಹುದು. ಈ ಹೊಸ ಮಾದರಿ ಸ್ಮಾರ್ಟ್ಕಾರ್ಡ್ ಕ್ಯೂಆರ್ ಕೋಡ್ ಹಾಗೂಮೈಕ್ರೋಚಿಪ್ ಹೊಂದಿರಲಿದೆ. ಇದರಿಂದ ಟ್ರಾಫಿಕ್  ಪೊಲೀಸರು  ಸಂಬಂಧಿಸಿದ ವಿವರಗಳನ್ನು,ಸುಲಭವಾಗಿ ಮತ್ತು…

  • ರಾಜಕೀಯ

    50,000 ಮತಗಳ ಅಂತರದಿಂದ ನನ್ನ ಗೆಲುವು: ವರ್ತೂರು ಪ್ರಕಾಶ್

    50,000 ಮತಗಳ ಅಂತರದಿಂದ ನನ್ನ ಗೆಲುವು: ವರ್ತೂರು ಪ್ರಕಾಶ್ ಕೋಲಾರ: ಕಸಬಾ ಹೋಬಳಿ ದೊಡ್ಡ ಹಸಾಳ ಗ್ರಾಮ ಪಂಚಾಯತಿಯ ಮುಖಂಡರು ಹಾಗೂ ಕಾರ್ಯಕರ್ತರು (ಸ್ಯಾನಿಟೋರಿಯಂ) ಆಸ್ಪತ್ರೆ ಮುಂಬಾಗ ಮಾಜಿ ಸಚಿವ ಆರ್ ವರ್ತೂರ್ ಪ್ರಕಾಶ್ ಹುಟ್ಟುಹಬ್ಬವನ್ನು ವರ್ತೂರು ಉತ್ಸವ ಶೀರ್ಷಿಕೆ ಅಡಿಯಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ವರ್ತೂರು ಪ್ರಕಾಶ್ ನನ್ನ ಹುಟ್ಟುಹಬ್ಬವನ್ನು ಆಚರಿಸಿ ನನಗೆ ಶುಭ ಕೋರಿದ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು ಹಾಗೂ 90 ದಿನಗಳಲ್ಲಿ ಚುನಾವಣೆ ಬರುತ್ತಿದೆ ನಮಗೆ ಉಳಿದಿರುವ…

  • ಸಿನಿಮಾ

    ಹುಟ್ಟಿದ ಊರಿನಲ್ಲಿ 80ಎಕರೆ ತೋಟ ಖರಿದಿಸಿದ ರಾಕಿಂಗ್ ಸ್ಟಾರ್…ಕಾರಣ ಕೇಳಿದ್ರೆ ಸಲಾಂ ರಾಕಿ ಭಾಯ್ ಅಂತೀರಾ…

    ನಟ ರಾಕಿಂಗ್ ಸ್ಟಾರ್ ಯಶ್ ಹಾಸನದಲ್ಲಿ ಮನೆ ಹಾಗೂ 80 ಎಕರೆ ತೋಟ ಖರೀದಿಸಿದ್ದಾರೆ. ಹಾಸನ ದೊಡ್ಡಕೊಂಡಗೋಳ ಯಶ್ ತಾಯಿ ಪುಷ್ಪಾ ಅವರ ತವರಾಗಿದೆ.ಯಶ್ ಜನಿಸಿದ್ದು ಹಾಸನ ಜಿಲ್ಲಾಸ್ಪತ್ರೆಯಲ್ಲಿ. ಈ ನಂಟಿನಿಂದ ಹುಟ್ಟೂರು ಹಾಸನದಲ್ಲಿ ಮನೆ ಹಾಗೂ ತೋಟವನ್ನು ಅವರು ಖರೀದಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಈಗಾಗಲೇ ತನ್ನುರಿನ ಕೆರೆಯನ್ನು ಕೋಟಿಗಳ ವೆಚ್ಛದಲ್ಲಿ ಹೂಳು ತೆಗೆಸಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆಯನ್ನು ಹೋಗಲಾಡಿಸಿದ್ದರು. ಈಗ ಅದರ ಜೊತೆಗೆ ತನ್ನ ಹುಟ್ಟೂರಿನಲ್ಲಿ ಜಮೀನು ಮತ್ತು…

  • ಜೀವನಶೈಲಿ, ಸಿನಿಮಾ, ಸುದ್ದಿ

    ಬಯಲಾಯ್ತು ವಿನೋದ್ ಮದುವೆ! ಮದುವೆ ಯಾಕೆ ಆಗಿಲ್ಲ ಗೊತ್ತಾ?

    ವಿನೋದ್ ರಾಜ್ ಕನ್ನಡ ಚಿತ್ರರಂಗದ ನಾಯಕ ನಟರಲ್ಲಿ ಒಬ್ಬರು. ಖ್ಯಾತ ನಟಿ ಡಾ.ಲೀಲಾವತಿ ಅವರ ಪುತ್ರ. ಡ್ಯಾನ್ಸ್ ರಾಜಾ ಡ್ಯಾನ್ಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಕೃಷ್ಣಾ ನೀ ಕುಣಿದಾಗ, ಕಾಲೇಜ್ ಹೀರೋ, ನಂಜುಂಡ, ಮಹಾಭಾರತ, ಶ್ರೀ ವೆಂಕಟೇಶ್ವರ ಮಹಿಮೆ, ನನಗೂ ಹೆಂಡ್ತಿ ಬೇಕು, ಯುದ್ಧಪರ್ವ, ನಾಯಕ, ಬನ್ನಿ ಒಂದ್ಸಲ ನೋಡಿ, ಗಿಳಿ ಬೇಟೆ, ಕ್ಯಾಪ್ಟನ್, ಬೊಂಬಾಟ್ ರಾಜ ಬಂಡಲ್ ರಾಣಿ, ರಂಭಾ ರಾಜ್ಯದಲ್ಲಿ ರೌಡಿ, ರಾಜಣ್ಣ, ದಳವಾಯಿ, ಸ್ನೇಹಲೋಕ, ಓಂ ಶಕ್ತಿ, ಬ್ರಹ್ಮ ವಿಷ್ಣು, ವಂದೇ ಮಾತರಂ, ರಾಷ್ಟ್ರಗೀತೆ,…

  • ಸುದ್ದಿ

    ನಾನು ಸಾಯುವ ಮುನ್ನ. ಅಯೋಧ್ಯಾ ತೀರ್ಪು ಕೊನೆಗೊಳ್ಳಬೇಕೆಂದು ಪಣ ತೊಟ್ಟು ಗೆದ್ದುಬಿಟ್ಟ 92 ರ ಇಳಿವಯಸ್ಸಿನ ಪರಸರನ್.

    ದಶಕಗಳ ಕಾಲ ಕೋರ್ಟ್ ನಲ್ಲಿ ವಿವಾದಕ್ಕೆ ಕಾರಣವಾಗಿದ್ದ ಅಯೋಧ್ಯಾ ಭೂ ವಿವಾದ ಪ್ರಕರಣ ನಿನ್ನೆ ಸುಪ್ರೀಂ ಕೋರ್ಟ್ ನೀಡಿದ ತೀರ್ಮಾನದ ನಂತರ ಭೂ ವಿವಾದ ಕೊನೆಗೊಂಡಿದೆ. ಈ ಪ್ರಕರಣದ ಕುರಿತಾಗಿ ಅಂದರೆ ಅಯೋಧ್ಯೆಯಲ್ಲಿ ರಾಮಮಂದಿರ ಇತ್ತು ಎಂದು ಕೋರ್ಟ್ ನಲ್ಲಿ ವಾದ ಮಾಡಿ ಸಾಬೀತು ಪಡಿಸಿ ಇಗಿನ  ಈ ತೀರ್ಪಿಗೆ ಪೂರಕವಾದ ವಾದ ಮಂಡನೆ ಮಾಡಿದ ಆ ವಕೀಲರು ಯಾರು ಎನ್ನುವುದನ್ನು ನಾವು ತಿಳಿಯಲೇಬೇಕು. ಅಯೋಧ್ಯಾ ಭೂ ವಿವಾದ ಪ್ರಕರಣ ಕುರಿತಾಗಿ ವಾದ ಮಂಡಿಸಿದ ವಕೀಲರ ಪ್ರಸ್ತುತ ವಯಸ್ಸು…

  • ಸುದ್ದಿ

    ಪವಿತ್ರ ಲೋಹವಾದ ಬೆಳ್ಳಿಯನ್ನು ಶುಭ ಸಮಾರಂಭಗಳಲ್ಲಿ ಯಾಕೆ ಬಳಸುತ್ತಾರೆ ಗೊತ್ತಾ..?

    ಊಟಕ್ಕೆ ಬೆಳ್ಳಿ ತಟ್ಟೆ ಹಾಗೂ ನೀರು ಕುಡಿಯಲು ಬೆಳ್ಳಿ ಲೋಟ ಬಳಸಿದರೆ ಅದು ಶ್ರೀಮಂತರ ಶೋಕಿ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಹಳೆ ಕಾಲದವರು ಬೆಳ್ಳಿ ಪೂಜಾ ಸಾಮಗ್ರಿಗಳು, ಮಕ್ಕಳಿಗೆ ಊಟ ಹಾಕಲು ಬೆಳ್ಳಿ ಬಟ್ಟಲು, ಮನೆಗೆ ಬಂದವರಿಗೆ ನೀರು ಕುಡಿಯಲು ಬೆಳ್ಳಿ ಲೋಟ…. ಹೀಗೆ ಸಾಧ್ಯವಾದಷ್ಟು ಬೆಳ್ಳಿ ಪಾತ್ರೆಗಳನ್ನೇ ಬಳಸುತ್ತಿದ್ದರು. ಅದನ್ನು ಎಲ್ಲರೂ ಬಳಸಲಿ ಎಂದೇ ಬೆಳ್ಳಿಗೆ ಪವಿತ್ರ ಲೋಹ ಎಂಬ ಹಣೆಪಟ್ಟಿ ಕಟ್ಟಿದರು. ಇದಕ್ಕೆ ಕಾರಣ ಬೆಳ್ಳಿ ದುಬಾರಿ ಎಂಬುದಲ್ಲ. ಬದಲಿಗೆ, ಬೆಳ್ಳಿಯಲ್ಲಿರುವ ಆರೋಗ್ಯವರ್ಧಕ…