ಸುದ್ದಿ

ತಮಿಳು ಚಿತ್ರರಂಗದವರು ಈ ಹೆಸರು ಕೇಳಿದ್ರೆ ಬೆಚ್ಚಿಬೀಳುತ್ತರೆ…!ಯಾಕೆ ಗೊತ್ತ?

42

ತಮಿಳು ರಾಕರ್ಸ್ ಈ ಹೆಸರನ್ನು ಕೇಳಿದರೆ ಸಾಕು ಇಡೀ ತಮಿಳು ಚಿತ್ರೋದ್ಯಮ ಬೆಚ್ಚಿ ಬೀಳುತ್ತದೆ.

ಏಕೆಂದರೆ ನೂರಾರು ಕೋಟಿ ರೂಪಾಯಿ ಸುರಿದು ವರ್ಷಗಟ್ಟಲೆ ಸಿನಿಮಾ ಮಾಡಿ ಬಿಡುಗಡೆಯಾದ ದಿನವೇ ಮಧ್ಯಾಹ್ನದ ವೇಳೆಗೆ ಆ ಚಿತ್ರವನ್ನು ಮೊಬೈಲ್ ನಲ್ಲಿ ಲಭ್ಯವಾಗುವಂತೆ ಮಾಡುತ್ತಿದ್ದಾರೆ ಈ ತಮಿಳು ರಾಕರ್ಸ್.ಅಂದರೆ ಇವರ ದಂಧೆಯೇ ಹೊಸ ಹೊಸ ಚಿತ್ರಗಳನ್ನು ಪೈರಸಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿದೆ.

ಈ ತಮಿಳು ರಾಕರ್ಸ್ ಕೇವಲ ತಮಿಳು ಚಿತ್ರೋದ್ಯಮಕ್ಕಷ್ಟೇ ಅಲ್ಲ ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಇತರೆ ಭಾಷೆಗಳ ಚಿತ್ರಗಳ ಮೇಲೆ ಭಾರೀ ಪರಿಣಾಮವನ್ನು ಬೀರುತ್ತಿದೆ. ಚಿತ್ರ ತೆರೆ ಕಂಡ ಕೆಲವೇ ಗಂಟೆಗಳಲ್ಲಿ ಪೈರೇಟೆಡ್ ಚಿತ್ರ ಈ ರಾಕರ್ಸ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುತ್ತದೆ.

ತಮಿಳು ರಾಕರ್ಸ್ ಎಂಬ ವೆಬ್ ಸೈಟ್ ಪೈರಸಿ ಮಾಡುತ್ತಿದೆ ಎಂಬ ಆರೋಪದ ಮೇಲೆ ವೆಬ್ ಸೈಟ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಇನ್ನೊಂದು ಡೊಮೇನ್ ಮೂಲಕ ಮತ್ತೊಂದು ವೆಬ್ ಸೈಟ್ ಆರಂಭಿಸಿ ಅಲ್ಲಿ ಪೈರಸಿ ಮಾಡಲಾಗುತ್ತದೆ. ಹೀಗೆ ಹಲವು ವಿಧದಲ್ಲಿ ಪೈರಸಿ ಮಾಡಲಾಗುತ್ತಿದೆ.

ಅತ್ಯಂತ ಜನಪ್ರಿಯವಾಗಿರುವುದರಿಂದ ಜಾಹೀರಾತುಗಳ ಪ್ರಮಾಣ ಹೆಚ್ಚಾಗಿದ್ದು, ಲಕ್ಷಾಂತರ ರೂಪಾಯಿಯ ಆದಾಯ ಈ ತಮಿಳು ರಾಕರ್ಸ್ ಗೆ ಬರುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಗುಲ ದರ್ಶನ, ಸುದ್ದಿ

    ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬ ದೇವಿ ಜಾತ್ರ ಮಹೋತ್ಸವಕ್ಕೆ ಕ್ಷಣಗಣನೆ- ಯಾವಾಗ?ಇಲ್ಲಿದೆ ಸಂಪೂರ್ಣ ಮಾಹಿತಿ…

    ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನ ಅ.17ರಿಂದಆರಂಭವಾಗಲಿದ್ದು, ಅ.28ರ ವರೆಗೂ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಗುರುವಾರದಿಂದ ಹಾಸನಾಂಬ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದ್ದು, ಒಟ್ಟು 13 ದಿನ ನಡೆಯಲಿದೆ. ಅಶ್ವೀಜಮಾಸದ ಮೊದಲ ಗುರುವಾರ ಮಧ್ಯಾಹ್ನ12.30ಕ್ಕೆ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ದೇವಿಯ ದರ್ಶನಕ್ಕಾಗಿ ಭಕ್ತ ಸಾಗರಹರಿದು ಬರಲಿದೆ. ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಿ ದರ್ಶನ ಭಾಗ್ಯ ಕರುಣಿಸುತ್ತಾಳೆ. ಹೀಗಾಗಿ ಪ್ರತಿ ವರ್ಷ ಸಾವಿರಾರು ಭಕ್ತರು…

  • ಆರೋಗ್ಯ

    ಬಾಳೆಲೆ ಊಟ ಮಾಡುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ! ಹಲವು ಜನರಿಗೆ ತಿಳಿದಿಲ್ಲ.

    ಸಾಮಾನ್ಯವಾಗಿ ಬಾಳೆಲೆ ಊಟ ಹಿಂದಿನ ಕಾಲದಿಂದಲೂ ಬಳಕೆಯಲ್ಲಿದೆ ಹಾಗೂ ಪ್ರತಿಯೊಬ್ಬರಿಗೂ ಸಾಮಾನ್ಯವಾಗಿ ದೊರೆಯುವ ಬಾಳೆಲೆ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ. ಮಾಡುವೆ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಹಾಗೂ ಇತ್ತೀಚಿನ ದಿನಗಳಲ್ಲಿ ಹೋಟಲ್ ರೆಸ್ಟೋರೆಂಟ್ಗಳಲ್ಲಿ ಸಹ ಬಾಳೆಲೆ ಉಪಯೋಗಕಾರಿಯಾಗಿದೆ. ಚಿನ್ನದ ತಟ್ಟೆಗಿಂತ ಬೆಲ್ಲೆಲಿ ಊಟ ಮಾಡೋದು ಬೆಸ್ಟ್ ಅನ್ನೋದು ಯಾಕೆ ಅನ್ನೋದನ್ನ ತಿಳಿಸುತ್ತೇವೆ ಮುಂದೆ ನೋಡಿ. ಮನುಷ್ಯನಿಗೆ ಅರೋಗ್ಯ ಅತಿ ಹೆಚ್ಚು ಅವಶ್ಯಕ ಹಾಗಾಗಿ ಬೇಲಿ ಊಟ ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಅರೋಗ್ಯ ದೊರೆಯುತ್ತದೆ ಹಾಗೂ ನಾನಾ ತರಹದ ರೋಗಗಳನ್ನು…

  • ಸುದ್ದಿ

    ಡಿ.ಕೆ.ಶಿವಕುಮಾರ್ ಪುತ್ರಿಗೆ ಕೂಡಿಬಂದ ಕಂಕಣ ಭಾಗ್ಯ. ಎಸ್​.ಎಂ. ಕೃಷ್ಣ ಕುಟುಂಬದ ಜೊತೆ ಡಿಕೆಶಿ ನೆಂಟಸ್ತನ?

    ಕಾಂಗ್ರೆಸ್​ನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್​ ಮಗಳು ಐಶ್ವರ್ಯ ಹಾಗೂ ಸಿದ್ಧಾರ್ಥ ಹೆಗಡೆ ಅವರ ಮಗ ಅಮರ್ಥ್ಯ ಮದುವೆಯ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಬಹಳ ಹಿಂದೆಯೇ ಈ ಬಗ್ಗೆ ಮಾತುಕತೆ ನಡೆಸಲಾಗಿದ್ದು, ಈ ಮೂಲಕ ತಮ್ಮ ರಾಜಕೀಯ ಗುರುವಾಗಿರುವ ಎಸ್​.ಎಂ. ಕೃಷ್ಣ ಅವರ ಕುಟುಂಬದ ಜೊತೆ ನೆಂಟಸ್ತನ ಬೆಳೆಸಲು ಡಿಕೆಶಿ ಮುಂದಾಗಿದ್ದಾರೆ. ಖ್ಯಾತ ಉದ್ಯಮಿ ದಿವಂಗತ ಸಿದ್ದಾರ್ಥ ಹೆಗ್ಡೆ ಮಗ ಅಮರ್ಥ್ಯ ಜೊತೆಗೆ ಮದುವೆ ಗೆ  ಸಿದ್ದತೆ ನಡೆಯುತ್ತಿದ್ದು , ಎರಡು ಕುಟುಂಬದವರು ಈಗಾಗಲೇ ಮಾಜಿ ಮುಖ್ಯಮಂತ್ರಿ ಎಸ್….

  • ಸುದ್ದಿ

    ಅನಾಥ ಯುವತಿಯರನ್ನು ಮದುವೆಯಾದ ಅಂಕೋಲದ ಯುವಕರು ವಿಜೃಂಭಣೆಯಿಂದ, ಶಾಸ್ತ್ರೋಕ್ತವಾಗಿ ಧಾರೆಯೆರೆದು ಕೊಟ್ಟ ಮಾತೃಛಾಯಾ ಟ್ರಸ್ಟ್…!

    ಕನಸನ್ನು ಹೊತ್ತಿರುವ ಅನಾಥರ ಬಾಳಲ್ಲಿ ಬೆಳಗುವ ದೀಪದಂತೆ ಅವರ ಜೀವನ ಸಾಕಾರಗೊಳಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಸೇವಾಭಾರತಿ ಟ್ರಸ್ಟ್​ನಿಂದ ಕಳೆದ 25 ವರ್ಷಗಳಿಂದ ಆರಂಭಿಸಿರುವ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದ ಆಶ್ರಯದಲ್ಲಿ ಬೆಳೆದ ಇಬ್ಬರು ಹೆಣ್ಣು ಮಕ್ಕಳ ಬಾಳಿಗೆ ಇಂದು ಹೊಸ ಜೀವನ ನೀಡಲಾಯಿತು. ಚಿಕ್ಕಂದಿನಿಂದಲೂ ಮನೆಯ ಮಕ್ಕಳಂತೆ ಮಾತೃಛಾಯಾ ಟ್ರಸ್ಟ್ ಆಶ್ರಮದಲ್ಲಿ ಬೆಳೆದ ಜಾಹ್ನವಿ ಹಾಗೂ ಸಂಜನಾ ಎಂಬ ಯುವತಿಯರು ಇವತ್ತು ಅಂಕೋಲಾ ಮೂಲದ ಹುಡುಗರನ್ನು ವರಿಸಿದರು. ಮನೆಯ ಮಕ್ಕಳಂತೆ ಪೋಷಣೆ ಮಾಡಿದ್ದ ಟ್ರಸ್ಟ್ ಇಂದು ಅತ್ಯಂತ…

  • ರಾಜಕೀಯ

    ಕೋಲಾರದಿಂದ ಸ್ಪರ್ಧೆ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಘೋಷಣೆ

    ಕೋಲಾರ: ನಾನು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಕೋಲಾರದ ಜೂನಿಯರ್ ಕಾಲೇಜು ಮೈದಾನದಲ್ಲಿ ಇಂದು ನಡೆದ ಕೋಲಾರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೆ ಸ್ಪರ್ಧಿಸಲು ಸರಿಯಾದ ಕ್ಷೇತ್ರವೇ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ವರುಣಾದಿಂದ ಮತ್ತೆ ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದಾರೆ, ಬಾದಾಮಿ ದೂರ ಆಯ್ತು ಎಂಬ ಕಾರಣಕ್ಕೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ ಎಂದಿದ್ದಕ್ಕೆ…

  • ಸೌಂದರ್ಯ

    ನಿಮ್ಮ ಸುಂದರ ಕೂದಲಿಗಾಗಿ ಇಲ್ಲಿದೆ ಸುಲಭೋಪಾಯಗಳು….

    ದಟ್ಟವಾದ ರೇಷಿಮೆಯಂತಹ ಕೂದಲು ನೋಡಿದರೆ ಕಣ್ಮನ ಸೆಳೆಯುತ್ತದೆ. ಸುಂದರ ಕೇಶ ಯಾವ ಮೇಕಪ್ ಮತ್ತು ಆಭರಣಗಳು ನೀಡದಂತಹ ಮೆರುಗನ್ನು ನೀಡುತ್ತದೆ. ನಿದಾನವಾಗಿ ತಲೆಬಾಚಲು ಸಹ ಸಮಯ ಸಿಗದ ಇಂದಿನ ದಿನಗಳಲ್ಲಿ ಕೇಶಕ್ಕಾಗಿ ಆರೈಕೆ ತುಸು ಕಷ್ಟವೇ.