ಸ್ಪೂರ್ತಿ

ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿರೋ 7 ವರ್ಷದ ಪುಟ್ಟ ಬಾಲಕನೊಬ್ಬನ ಕಥೆ ಏನು ಗೊತ್ತಾ..?ತಿಳಿಯಲು ಈ ಲೇಖನ ಓದಿ..

159

7 ವರ್ಷದ ಕ್ಸಿಯೋ ಚಾಂಗ್ ಜಿಯಾಂಗ್ ಚೀನಾದ ಕಿಂಗ್‍ಡಾವೋ ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದಾನೆ. ಈತನ ವಿಡಿಯೋವನ್ನ ಮೊದಲು ಚೀನಾದ ವಿಡಿಯೋ ಹಂಚಿಕೆ ಜಾಲತಾಣ ಪೀರ್‍ವಿಡಿಯೋದಲ್ಲಿ ಹಂಚಿಕೊಳ್ಳಲಾಗಿದ್ದು, ಅನಂತರ ವೈರಲ್ ಆಗಿದೆ.

ವರದಿಗಳ ಪ್ರಕಾರ ಬಾಲಕನ ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದು, ತಾಯಿ ಪುಟ್ಟ ಮಗನನ್ನು ಒಂಟಿಯಾಗಿ ಬಿಟ್ಟು ಹೋಗಿ ಬೇರೊಂದು ಮದುವೆಯಾಗಿದ್ದಾಳೆ. ನಂತರ ಬಾಲಕ ತನ್ನ ತಂದೆಯ ಮಾಜಿ ಸಹೋದ್ಯೋಗಿಯ ಬಳಿ ಬೆಳೆದಿದ್ದಾನೆ. ಅವರನ್ನ ಈತ ಅಂಕಲ್ ಅಂತಾ ಕರೀತಾನೆ. ಮೊದಮೊದಲು ತನ್ನ ಅಂಕಲ್‍ಗೆ ಪ್ಯಾಕೇಜ್‍ಗಳನ್ನ ಡೆಲಿವರಿ ಮಾಡಲು ಸಹಾಯ ಮಾಡುತ್ತಿದ್ದ.

ಆದ್ರೆ ನಂತರ ತನ್ನ ಕೆಲಸದ ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದು, ತಾನಾಗೇ ಪ್ಯಾಕೇಜ್‍ಗಳನ್ನ ಡೆಲಿವರಿ ಮಾಡುತ್ತಾನೆ. ಒಂದು ದಿನಕ್ಕೆ 30 ಪ್ಯಾಕೇಜ್‍ಗಳನ್ನ ತಲುಪಿಸುತ್ತಾನೆ. ಹಾಗೇ ಈತ ಈ ಪ್ರದೇಶದಲ್ಲಿ ಸಖತ್ ಫೇಮಸ್ ಆಗಿದ್ದು, ಜನ ಈ ಬಾಲಕನನ್ನ ಮಿನಿ ಸೆಲೆಬ್ರಿಟಿ ಅಂತ ಕರೀತಾರೆ. ಈ ಕೆಲಸ ಮಾಡೋದ್ರಲ್ಲಿ ನನಗೆ ಎಷ್ಟು ಸಂತೋಷವಿದೆ ಎಂದ್ರೆ ಮುಂದೆ ದೊಡ್ಡವನಾದ ಮೇಲೂ ಡೆಲಿವರಿ ಬಾಯ್ ಆಗಬೇಕು ಎಂದು ಬಾಲಕ ಹೇಳಿದ್ದಾನೆ.

ವಾಂಗ್ ಕಿಂಗ್ವೀ ಎಂಬವರು ಬಾಲಕನ ಫೋಟೋ ಹಂಚಿಕೊಂಡ ನಂತರ ಚಾಂಗ್ ನ ಕಥೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪುಟ್ಟ ಬಾಲಕ ಸ್ವಲ್ಪ ಕಷ್ಟ ಪಡುತ್ತಾ ನನಗೆ ಪ್ಯಾಕೇಜ್ ಡೆಲಿವರಿ ಮಾಡೋದನ್ನ ಕಂಡು ಆಶ್ಚರ್ಯವಾಯ್ತು ಎಂದು ಅವರು ಬರೆದುಕೊಂಡಿದ್ದಾರೆ.ಈ ಕೆಲಸ ಮಾಡೋದ್ರಲ್ಲಿ ನನಗೆ ಎಷ್ಟು ಸಂತೋಷವಿದೆ ಎಂದ್ರೆ ಮುಂದೆ ದೊಡ್ಡವನಾದ ಮೇಲೂ ಡೆಲಿವರಿ ಬಾಯ್ ಆಗಬೇಕು ಎಂದು ಬಾಲಕ ಹೇಳಿದ್ದಾನೆ.

ಬಾಲಕನ ಬಗ್ಗೆ ಸುದ್ದಿ ವರದಿಯಾದ ಬಳಿಕ ಸ್ಥಳೀಯ ಅಧಿಕಾರಿಗಳು ಆತನನ್ನು ವೆಲ್‍ಫೇರ್ ಅಸೋಸಿಯೇಷನ್‍ಗೆ ಕಳಿಸಿದ್ದು, ಬಾಲಕ ಅಲ್ಲಿ ತನ್ನ 7ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾನೆ. ಬಾಲಕನ ತಾಯಿಗಾಗಿ ಕೂಡ ಹುಡುಕಾಟ ನಡೆಸಲಾಗ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ