ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಡೆಬಿಟ್ ಕಾರ್ಡ್, ಭೀಮ್ ಸೇರಿದಂತೆ ಆನ್ ಲೈನ್ ವಹಿವಾಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ ಇತರೆ ಆಪ್ ಗಳನ್ನು ಬಳಸುತ್ತಿದ್ದವರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ.
2018ರ ಜನವರಿ 1ರಿಂದ ಮುಂದಿನ ಎರಡು ವರ್ಷಗಳ ಕಾಲ ಡೆಬಿಟ್ ಕಾರ್ಡ್, ಭೀಮ್ ಯುಪಿಐ ಮತ್ತು ಎಇಪಿಎಸ್ ಮೂಲಕ ನಡೆಯುವ 2,000 ರೂ. ವರೆಗಿನ ವ್ಯವಹಾರಗಳ ಶುಲ್ಕ ವೆಚ್ಚವನ್ನು ಸರಕಾರವೇ ಭರಿಸಲಿದೆ ಮತ್ತು ಬ್ಯಾಂಕುಗಳಿಗೆ ಅದನ್ನು ಮರುಪಾವತಿಸಲಿದೆ. ಈ ಮಹತ್ವದ ನಿರ್ಧಾರವನ್ನು ಇಂದು ಕೇಂದ್ರ ಸಚಿವ ಸಂಪುಟ ಕೈಗೊಂಡಿತು.
ದೇಶಾದ್ಯಂತ ಆನ್ ಲೈನ್ ವಹಿವಾಟು ಹೆಚ್ಚುತ್ತಿದ್ದು, ಇದಕ್ಕೆ ಉತ್ತೇಜನ ನೀಡುವ ಸಲುವಾಗಿ ಹಣಕಾಸು ಇಲಾಖೆ ಈ ತೀರ್ಮಾನ ಕೈಗೊಂಡಿದ್ದು, ಡಿಸೆಂಬರ್ ತ್ರೈಮಾಸಿಕದಲ್ಲಿ ಭೀಮ್ ವಹಿವಾಟಿನಲ್ಲಿ ಶೇ.86 ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಇಲಾಖೆ ಕಾರ್ಯದರ್ಶಿ ರಾಜೀವ್ ಕುಮಾರ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಆನ್ ಲೈನ್ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ 2 ಸಾವಿರ ರೂ.ವರೆಗಿನ ವಹಿವಾಟಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲವೆನ್ನಲಾಗಿದ್ದು, ಇದರಿಂದ ಗ್ರಾಹಕರು ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ.
ಇನ್ನು ಮುಂದೆ ವರ್ಷಕ್ಕೆ 20 ಲಕ್ಷ ರೂ. ವಹಿವಾಟು ನಡೆಸುವ ಸಣ್ಣ ವ್ಯಾಪಾರಿಗಳು ಪಾಯಿಂಟ್ ಆಫ್ ಸೇಲ್ ಮಶೀನ್‌ನಲ್ಲಿ ನಡೆಸುವ ಹಣಕಾಸು ವ್ಯವಹಾರಕ್ಕೆ ಶೇ.0.40 ಎಂಡಿಆರ್ ಶುಲ್ಕವನ್ನು ವಿಧಿಸಲಾಗುವುದು ಮತ್ತು ಇದರ ಗರಿಷ್ಠ ಮಿತಿಯನ್ನು ತಲಾ ವ್ಯವಹಾರದ ಮೇಲೆ 200 ರೂ.ಗೆ ನಿಗದಿಸಲಾಗಿದೆ ಎಂದು ಹೊಸ ಅಧಿಸೂಚನೆ ತಿಳಿಸಿದೆ.
ವರ್ಷಕ್ಕೆ 20 ಲಕ್ಷ ಮೀರಿ ವಹಿವಾಟು ನಡೆಸುವ ಮಧ್ಯಮ ಮಟ್ಟದ ವ್ಯಾಪಾರಿಗಳಿಗೆ ತಲಾ 1,000 ರೂ. ವಹಿವಾಟಿನ ಮೇಲೆ ಶೇ.0.90 ಎಂಡಿಆರ್ ಶುಲ್ಕವಿದೆ. ಕ್ಯೂಆರ್ ಕೋಡ್ ಮೂಲಕ ವ್ಯವಹರಿಸಿದಲ್ಲಿ ಶೇ.0.80 ಎಂಡಿಆರ್ ಅನ್ವಯವಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಹುಶಃ ಮಾನವನಿಗೆ ಕಾಲಿಡೋಕೆ ಸಾಧ್ಯವಾಗದೇ ಇರುವ ಕೆಲವು ವಿಸ್ಮಯ ಪ್ರದೇಶಗಳು ನಮ್ಮ ಪ್ರಪಂಚದಲ್ಲಿದ್ದು, ನಾನಾ ನಿಗೂಢತೆಗಳನ್ನು ತನ್ನ ಮಡಿಲಿನಲ್ಲಿ ಬಚ್ಚಿಟ್ಟುಕೊಂಡಿದೆ!! ಹೀಗಿರಬೇಕಾದರೆ ಮುಖ್ಯ ಭೂಭಾಗದೊಂದಿಗೆ ಸಂಪರ್ಕವನ್ನು ಕಡಿದುಕೊಂಡು, ಪ್ರತ್ಯೇಕ ದ್ವೀಪವಾಗಿದ್ದರೂ ಕೂಡ ಅದು ಮಾನವನಿಂದ ಇನ್ನೂ ಮುಟ್ಟಲು ಅಸಾದ್ಯ!! ದ್ವೀಪದೊಳಗೆ ಒಂದು ಬಾರಿ ಕಾಲಿಟ್ಟರೆ ಹಿಂತಿರುಗುವ ಯಾವ ಗ್ಯಾರೆಂಟಿಯೂ ಇಲ್ಲ. ಯಾಕೆಂದರೆ ಪ್ರತಿ ಹೆಜ್ಜೆಯಲ್ಲೂ ಕೂಡ ಸಾವೇ ಹಿಂಬಾಲಿಸುತ್ತದೆ!! ಜಗತ್ತಿನಲ್ಲಿ ತಿಳಿಯದಿರದ ಅದೆಷ್ಟೋ ವಿಷಯಗಳು ಇರುತ್ತವೆ. ಅದರಲ್ಲೂ ವಿಚಿತ್ರವೆನಿಸುವ ಸಂಗತಿಗಳು ಸಾಕಷ್ಟಿದ್ದು, ಕುತೂಹಲಕ್ಕೂ ಕಾರಣವಾಗುತ್ತಲೇ ಇದೆ!! ಈ…
ಕೃಷ್ಣ ಜನ್ಮಾಷ್ಠಮಿಯಂದು ಕೃಷ್ಣನ ಆರಾಧನೆಗೆ ಭಕ್ತರು ಸಿದ್ಧರಾಗಿದ್ದಾರೆ. ಕೃಷ್ಣನಿಗೆ ಪ್ರಿಯವಾದ ವಸ್ತುಗಳಲ್ಲಿ ನವಿಲುಗರಿ ಕೂಡ ಒಂದು. ನವಿಲುಗರಿ ಅದೃಷ್ಟವನ್ನು ಬದಲಿಸುವ ಶಕ್ತಿ ಹೊಂದಿದೆ.ನವಿಲುಗರಿ ಮನೆ ಸೌಂದರ್ಯವನ್ನು ಮಾತ್ರವಲ್ಲ ಆರ್ಥಿಕ ವೃದ್ಧಿಗೆ ಕಾರಣವಾಗುತ್ತದೆ. ಶ್ರೀಕೃಷ್ಣನ ಮುಕುಟದ ಮೇಲಿರುವ ನವಿಲುಗರಿ ಬಗ್ಗೆ ಶಾಸ್ತ್ರಗಳಲ್ಲಿ ಕೆಲವೊಂದು ಉಪಾಯಗಳನ್ನು ಹೇಳಲಾಗಿದೆ. ಜನ್ಮಾಷ್ಠಮಿಯಂದು ಆ ಉಪಾಯಗಳನ್ನು ಅನುಸರಿಸಿದ್ರೆ ಅದೃಷ್ಟ ನಿಮ್ಮದಾಗಲಿದೆ. ಮನೆಯಲ್ಲಿ ಯಾವಾಗಲೂ ಜಗಳವಾಗ್ತಿದ್ದರೆ, ಮನಸ್ಸಿನಲ್ಲಿ ಕಿರಿಕಿರಿಯಿದ್ದರೆ ಇದಕ್ಕೆ ನವಿಲುಗರಿ ಪರಿಹಾರ ನೀಡಬಲ್ಲದು. ನವಿಲುಗರಿಯನ್ನು ದೇವರ ಮನೆಯಲ್ಲಿ ಕೊಳಲಿನ ಜೊತೆ ಇಡಬೇಕು. ಮನೆಯಲ್ಲಿ ಹರಡುವ…
ನಟ, ನಿರ್ದೇಶಕನಾಗಿ ಹೆಸರು ಮಾಡಿದ್ದು ಯುವತಿಯೊರ್ವಳನ್ನು ಅತ್ಯಾಚಾರ ಮಾಡುತ್ತಿದ್ದರೂ ಅದನ್ನು ವಿರೋಧಿಸದೇ ಆತನ ವಿಕೃತ ಕಾರ್ಯಕ್ಕೆ ತಾಯಿಯೋರ್ವಳು ಸಹಾಯ ಮಾಡಿರುವ ಹೀನಾಯ ಕೃತ್ಯ ಬೆಂಗಳೂರಿನಲ್ಲಿ ನಡೆದಿದೆ. ಕಿರುಚಿತ್ರ ನಿರ್ದೇಶಕ, ನಟ ಪಿ ಪ್ರಮೋದ್ ಕುಮಾರ್ ಎಂಬಾತ 21 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಮನೆಗೆ ಕರೆದುಕೊಂಡು ಹೋಗಿ ತಮ್ಮ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಈ ವೇಳೆ ನಟನ ತಾಯಿ ಮನೆಯಲ್ಲಿ ಇದ್ದರೂ ಸಹ ಏನು ಮಾಡದೇ ಸುಮ್ಮನಿದ್ದಾರೆ. ಈ ಸಂಬಂಧ ಪ್ರಮೋದ್ ಕುಮಾರ್ ಮೊದಲ ಆರೋಪಿಯಾಗಿದ್ದು ಆತನ ತಾಯಿ…
ಬ್ರಹ್ಮಾವರ ತಾಲೂಕಿನೆಲ್ಲೆಡೆ ಕುಂಭ ದ್ರೋಣ ಮಳೆಯ ಅಬ್ಬರ ಜೋರಾಗಿದ್ದು, ಮಂಗಳವಾರ ಬೆಳಗ್ಗಿನಿಂದಲೇ ಸುರಿದ ಮಳೆಯಿಂದಾಗಿ ಹಲವೆಡೆಗಳಲ್ಲಿ ನೆರೆ ಆವರಿಸಿದೆ. ಕೆಲವೆಡೆ ಮನೆಯೊಳಗೆ ನೀರು ನುಗ್ಗಿದ್ದರೆ, ಅನೇಕ ಕಡೆಗಳಲ್ಲಿ ಗದ್ದೆ, ಅಡಿಕೆ, ತೆಂಗಿನ ತೋಟ ಸಹಿತ ಕೃಷಿ ಪ್ರದೇಶಗಳು ಜಲಾವೃತಗೊಂಡಿವೆ. ಬ್ರಹ್ಮಾವರ ಪರಿಸರದ ಮಟಪಾಡಿ, ನೀಲಾವರ, ನಂದನಕುದ್ರು, ರಾಮನಕುದ್ರು, ಬಲ್ಜಿ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು ಇದರಿಂದಾಗಿ ವಾಹನ ಸವಾರರು ಕೂಡ ಸಮಸ್ಯೆಯನ್ನು ಅನುಭವಿಸಿದರು. ಅನೇಕ ಕಡೆಗಳಲ್ಲಿ ಭತ್ತದ ಕೃಷಿ ಬೆಳೆದಿರುವ ಗದ್ದೆ ಜಲಾವೃತಗೊಂಡಿದ್ದರೆ, ಅಡಿಕೆ ತೋಟಗಳಲ್ಲಿ ನೀರು ನಿಂತಿದೆ….
ಬೆಳಗಿನ ತಿಂಡಿಯನ್ನು ತಿನ್ನಲೂ ಹೆಚ್ಚಿನವರಿಗೆ ಪುರಸೊತ್ತು ಇರುವುದಿಲ್ಲ. ಹೆಚ್ಚಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಇದಕ್ಕೆ ಹೊರತಲ್ಲ. ಬ್ರೇಕ್‌ಫಾಸ್ಟ್ ತಪ್ಪಿಸುವುದರಿಂದ ಆರೋಗ್ಯ ಸಮಸ್ಯೆಗಳಿಗೆ ಮುಕ್ತ ಆಹ್ವಾನ ನೀಡಿದಂತಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ
ಪರೀಕ್ಷೆ ಎಲ್ಲ ಮುಗಿಯಿತು. ಇನ್ನಿರುವುದು ಮುಂದಿನ ಆಯ್ಕೆ ಬಗ್ಗೆ. ಹಲವಾರು ಕೋರ್ಸ್ಗಳಿವೆ. ಆದರೆ ಸರಿಯಾದ ಆಯ್ಕೆ ಹೇಗೆ ಮಾಡಲಿ ಎಂಬ ಗೊಂದಲ ಮನದಲ್ಲಿ ಎದ್ದಾಗಿದೆ. ಹೆತ್ತವರ ಸಲಹೆ ಒಂದಾದರೆ, ಮಕ್ಕಳದ್ದು ಇನ್ನೊಂದು. ಈ ನಡುವೆ ಹುಟ್ಟಿದ ಹಲವಾರು ಅನುಮಾನಗಳು. ಯಾವುದು, ಎಲ್ಲಿ, ಏನು, ಹೇಗೆ…? ಇದಕ್ಕಾಗಿಯೇ ಒಂದಷ್ಟು ಮಾಹಿತಿ ಇಲ್ಲಿವೆ.