ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸ್ವಾತಂತ್ರ್ಯ ನಂತರದ ದೇಶದ ದೊಡ್ಡ ಮತ್ತು ಏಕರೂಪ ತೆರಿಗೆ ಎಂದು ಹೇಳಲಾಗಿರುವ (ಸರಕು ಮತ್ತು ಸೇವಾ ತೆರಿಗೆ)ಜಿಎಸ್‍ಟಿ ಜುಲೈ 1 ರಿಂದ ಜಾರಿಯಾಗಲಿದ್ದು, ಇದರಿಂದ ಯಾವ ಯಾವ ಸೇವೆಗಳ ಮೇಲೆ ಈ ತೆರಿಗೆ ಪ್ರಭಾವ ಬೀರಲಿದೆ ಎಂಬ ಮಾಹಿತಿಯನ್ನು ಮುಂದೆ ಓದಿ….
*ದುಬಾರಿಯಾಗಲಿರುವ ಸೇವೆಗಳು:-
ನೋಟ್ ಬ್ಯಾನ್ ಆದ ನಂತರ ಬ್ಯಾಂಕ್ ವ್ಯವಹಾರಗಳ ಮತ್ತು , ಎಟಿಎಂ ನಿಂದ ಹಣ ತೆಗೆಯುವವರ ಮೇಲೆ ಲಿಮಿಟ್ ಹೇರಿದ್ದ ಬ್ಯಾಂಕ್‍ಗಳು ಈಗ ಜಿಎಸ್‍ಟಿ ತೆರಿಗೆ ಹೆಸರಲ್ಲಿ ಹೆಚ್ಚುವರಿ ಸೇವಾ ತೆರಿಗೆ ವಿಧಿಸಲು ಮುಂದಾಗಿವೆ.
ಬ್ಯಾಂಕ್ ನ ಯಾವ ಯಾವ ಸೇವೆಗಳು ದುಬಾರಿ?
ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನಿರ್ವಹಣೆಗೆ ಸೇವಾ ತೆರಿಗೆ ಹೆಚ್ಚಳವಾಗಲಿದೆ. ಜೊತೆಗೆ 4 ಬಾರಿ ಎಟಿಎಂ ವಿತ್‍ಡ್ರಾ ಲಿಮಿಟ್ ಮುಗಿದ್ಮೇಲೆ,ಮಾಡುವೆ ಪ್ರತಿ ವಿತ್‍ಡ್ರಾಗೂ ಶುಲ್ಕ ಕಟ್ಟಬೇಕು. ಪೆಟ್ರೋಲ್ ಹಾಕಿಸಿದ್ರೆ, ಶಾಪಿಂಗ್, ಹೋಟೆಲ್‍ನಲ್ಲಿ ಕಾರ್ಡ್ ಉಜ್ಜಿದ್ರೂ ಸರ್ವಿಸ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ.
ನಿಮ್ಮ ವಿಮೆ(ಇನ್ಸುರೆನ್ಸೆ)ಮೇಲೆ ಜಿಎಸ್ಟಿ ಪ್ರಭಾವ
ನೀವು ವಿಮೆ(ಇನ್ಸುರೆನ್ಸೆ) ಮಾಡಿಸಿದ್ರೆ ಪ್ರತಿ ಕಂತಿನ ಮೇಲೆ ಸೇವಾ ತೆರಿಗೆ ಹಾಗೂ ಇನ್ಶುರೆನ್ಸ್ ಚೆಕ್ ರೂಪದಲ್ಲಿ, ನಗದು ರೂಪದಲ್ಲಿ ಹಣ ಕಟ್ಟಿದ್ರೂ ಸೇವಾ ತೆರಿಗೆ ಹೆಚ್ಚಳವಾಗಲಿದೆ.
ರೈತರನ್ನು ಬಿಡದ ಜಿಎಸ್ಟಿ:-
ಅನ್ನದಾತ ರೈತರು ವ್ಯವಸಾಯಕ್ಕಾಗಿ ಬಳಸುವ ರಾಸಾಯನಿಕ ಗೊಬ್ಬರ, ಯಂತ್ರಗಳ ಮೇಲೂ ಜಿಎಸ್‍ಟಿ ತೆರಿಗೆ ಬೀಳಲಿದೆ. ಹೊಸ ಟ್ರ್ಯಾಕ್ಟರ್ ಮತ್ತು ಬಿಡಿಭಾಗಗಳು ಖರೀದಿಗೂ ತೆರಿಗೆ ಹೊರೆ ಬೀಳಲಿದೆ. ಬೆಳೆಗಳಿಗೆ ಬಳಸುವ ಕ್ರಿಮಿನಾಶಕಗಳ ಹಾಗೂ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ತೆರಿಗೆ ಹೊರೆ ಬೀಳಲಿದೆ.
ಆಭರಣ ಪ್ರಿಯರಿಗೆ ತೆರಿಗೆ :-
ಆಭರಣ ಪ್ರಿಯರು ಇನ್ಮುಂದೆ ಸ್ವಲ್ಪ ಯೋಚನೆ ಮಾಡಿ ಚಿನ್ನ ಕೊಳ್ಳಬೇಕಾಗಬಹುದು. ಏಕೆಂದರೆ ಚಿನ್ನದ ಮೇಲೆ ಮತ್ತು ಮೇಕಿಂಗ್ ಮೇಲೆ ತೆರಿಗೆ ಬೀಳಲಿದೆ. ಬೆಳ್ಳಿ ಮೇಲೆಯೂ ಜಿಎಸ್‍ಟಿ ತೆರಿಗೆ ಬೀಳಲಿದೆ.
ಮಹಿಳೆಯರ ಇನ್ಮುಂದೆ ಮೇಕಪ್ ಮಾಡಕ್ಕೂ ಮುಂಚೆ ಯೋಚನೆ ಮಾಡಿ:-
ಮಹಿಳೆಯರ ಮೇಕಪ್ ಐಟಮ್ಸ್, ಬ್ಯೂಟಿ ಪಾರ್ಲರ್ ಸೇವೆಗಳು ದುಬಾರಿಯಾಗಲಿವೆ. ಮೆನಿಕ್ಯೂರ್, ಪೆಡಿಕ್ಯೂರ್, ಸುಗಂಧ ದ್ರವ್ಯಗಳ, ಮೇಕಪ್ ಸಾಧನಗಳ, ಸ್ಕಿನ್ ಕೇರ್ ಸನ್‍ಸ್ಕ್ರೀನ್ ಮೇಲೆ ಜಿಎಸ್‍ಟಿ ಬೀಳಲಿದೆ. ಇನ್ನು ಲೆದರ್ ಬ್ಯಾಗ್ ಹಾಗೂ ಸ್ಯಾನಿಟರಿ ನ್ಯಾಪ್‍ಕಿನ್ಸ್ ಮೇಲೆ ಕೂಡ ಜಿಎಸ್‍ಟಿ ತೆರಿಗೆ ಹೆಚ್ಚಲಿದೆ.
ಜಿಎಸ್‍ಟಿಯಿಂದ ವಿನಾಯಿತಿ ಪಡೆಯಲಿರುವ ವಸ್ತುಗಳು ಯಾವುವು ಗೊತ್ತಾ…
ಮಹಿಳೆಯರ ಬಳೆ, ಕುಂಕುಮ ಹಾಗೂ ಬಿಂದಿಗೆ ಜಿಎಸ್‍ಟಿ ತೆರಿಗೆಯಿಂದ ವಿನಾಯಿತಿ ಸಿಕ್ಕಿದೆ.
ಕುಡುಕರ ನಶೆ ಇಳಿಸಲಿರುವ ಜಿಎಸ್ಟಿ..
ತುರಾಡೋ ಕುಡುಕರಿಗೆ ಶಾಕ್ ಕೊಡಲಿರುವ ಜಿಎಸ್‍ಟಿ ಜಾರಿಯಾದ್ಮೇಲೆ ಮದ್ಯ ತಯಾರಿಸೋ ಕಂಪನಿಗಳಿಗೆ ಉತ್ಪಾದನಾ ವೆಚ್ಚ ಹೆಚ್ಚಾಗಲಿದೆ. ಇದನ್ನ ಸರ್ವೀಸ್ ಟ್ಯಾಕ್ಸ್ ಹೆಸರಲ್ಲಿ ವಸೂಲಿ ಮಾಡಲು ಕಂಪನಿಗಳು ನಿರ್ಧರಿಸಿವೆ. ಮದ್ಯ ತಯಾರಿಕಾ ಕಂಪನಿಗಳ ಪ್ರಕಾರ ಉತ್ಪಾದನಾ ತೆರಿಗೆ ಹೆಚ್ಚಾಗಲಿದ್ದು, ಈ ಹೊರೆಯನ್ನ ತಪ್ಪಿಸಲು ರಮ್, ಜಿನ್ನು, ವೈನ್, ಬಿಯರ್, ವಿಸ್ಕಿ ದರ ಹೆಚ್ಚಿಸಿ ಅದನ್ನ ಸೇವಾದರ ಹೆಸರಲ್ಲಿ ಗ್ರಾಹಕರಿಂದಲೇ ವಸೂಲಿ ಮಾಡಲು ಕಂಪನಿಗಳು ತೀರ್ಮಾನಿಸಿವೆ.
ನಟ ನಟಿಯರ ಮೇಲೆ ಜಿಎಸ್ಟಿ ತೆರಿಗೆ
ಜಿಎಸ್‍ಟಿ ಯಿಂದ 20 ಲಕ್ಷಕ್ಕೂ ಅಧಿಕ ಸಂಭಾವನೆ ಪಡೆಯುವ ನಟ ನಟಿಯರಿಗೂ ಬಿಸಿ ತಟ್ಟಲಿದೆ. ನಟ ನಟಿಯರ ಸಂಭಾವನೆ ಮೇಲಿನ ತೆರಿಗೆ ಹೆಚ್ಚಳವಾಗಿದೆ.
ಆನ್‍ಲೈನ್ ಬುಕ್ಕಿಂಗ್ ಮತ್ತು ವ್ಯವಹಾರದ ಮೇಲೆ ಜಿಎಸ್ಟಿ ಬರೆ
ಜುಲೈ 1 ರಾ ನಂತರ ಆನ್‍ಲೈನ್ ವ್ಯವಹಾರದ ಮೇಲೆ 1% ತೆರಿಗೆ ನಿಗದಿಯಾಗಿದೆ. ನಷ್ಟ ಸರಿದೂಗಿಸಲು ಆನ್‍ಲೈನ್ ಬುಕಿಂಗ್ ಕಂಪನಿಗಳ ವಸ್ತುಗಳ ಮೇಲಿನ ಬೆಲೆ ಏರಿಕೆಯಾಗಲಿದೆ.
ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್:-
ಜುಲೈ 1ರಿಂದ ದೇಶಾದ್ಯಂತ ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್ ಜಾರಿಯಾಗ್ತಿದ್ದು, ಎಲ್ಲಾ ವಸ್ತುಗಳು ಒಂದೇ ತೆರಿಗೆ ವ್ಯಾಪ್ತಿಗೆ ಬರಲಿವೆ. ಇದ್ರಿಂದ ಮನೆ ಖರೀದಿ ಕಡಿಮೆಯಾಗಲಿದೆ ಎನ್ನಲಾಗಿದೆ.
ಕನಸಿನ ಮನೆ ನಿರ್ಮಾಣ ಕಷ್ಟ :-
ಕಟ್ಟಡಕ್ಕೆ ಬಳಸುವ ವಸ್ತುಗಳ ಬೆಲೆ ಹೆಚ್ಚಾಗಲಿದ್ದು, ಕಟ್ಟಡ ರಿಪೇರಿಗಾಗಿ ಪಡೆಯುವ ಸಾಲದ ಮೇಲೆ ಸಹ ಜಿಎಸ್ಟಿ ತೆರಿಗೆ ಬೀಳಲಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೊಸ ವರ್ಷದ ಆಗಮನಕ್ಕೆ ಒಂದೇ ದಿನ ಬಾಕಿಯಿದೆ. ಹೊಸ ವರ್ಷ ಈ ವರ್ಷಕ್ಕಿಂತ ಹೆಚ್ಚು ಖುಷಿ, ಯಶಸ್ಸು ತರಲಿ ಎಂದು ಪ್ರತಿಯೊಬ್ಬರೂ ಬಯಸ್ತಾರೆ. ಹೊಸ ವರ್ಷ ಸುಖ, ಸಂತೋಷ, ಸಮೃದ್ಧಿಯಿಂದ ಕೂಡಿರಬೇಕೆಂದ್ರೆ ಕೆಲವೊಂದು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಸ ವರ್ಷ ಸುಖ, ಸಂತೋಷದಿಂದ ಕೂಡಿರಬೇಕು ಎಂದಾದ್ರೆ ಹೊಸ ವರ್ಷದ ಮೊದಲ ದಿನ ಅಂದ್ರೆ ಜನವರಿ ಒಂದರಂದು ತಾಮ್ರದ ಲೋಟದಲ್ಲಿ ನೀರನ್ನು ಹಾಕಿ, ಅದಕ್ಕೆ ಕೇಸರಿ ಹಾಕಿ ಶಿವಲಿಂಗಕ್ಕೆ ಅರ್ಪಿಸಿ. ಜಲ ಅರ್ಪಿಸುವ ವೇಳೆ ಓಂ…
ಉಪ್ಪು ಎಷ್ಟು ಅನಿವಾರ್ಯ ಎಂಬುದು ತಿಳಿದ ವಿಷಯವೇ. ಆದರೆ ಕಪ್ಪು ಉಪ್ಪು ಸಹ ಭಾರತೀಯರಲ್ಲಿ ಹಿಂದಿನಿಂದಲೂ ಬಳಕೆಯಲ್ಲಿದೆ. ಈ ಕಪ್ಪು ಉಪ್ಪು ಸಹ ಔಷಧೀಯ ಗುಣಗಳ ಆಗರವೇ ಆಗಿದೆ. ಹಿಮಾಲಯದ ಕಪ್ಪು ಉಪ್ಪು ಅಥವಾ ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ ಭಾರತೀಯ ಕಪ್ಪು ಉಪ್ಪು ಎಂದೇ ಪ್ರಚಲಿತದಲ್ಲಿದೆ.
ಕೆಲವರಿಗೆ ಎಣ್ಣೆ ಚರ್ಮದಿಂದ ಮುಖದಲ್ಲಿ ಎಣ್ಣೆ ಜಿನುಗುವಂತೆ ಕಾಣಿಸುತ್ತದೆ. ಇದರಿಂದ ಕೆಲವರಿಂದ ಕೀಟಲೆಯ ಮಾತು ಕೇಳಬಹುದು. ಮುಖದಲ್ಲಿ ಎಣ್ಣೆ ಪ್ರಮಾಣ ಕಡಿಮೆ ಮಾಡಿಕೊಂಡ ಮುಖ ಫ್ರೆಶ್ ಆಗಿ ಚೆನ್ನಾಗಿ ಕಾಣಲು ಕೆಲ ಸಲಹೆ ಇಲ್ಲಿವೆ.
ಆ ವ್ಯಕ್ತಿಯೇ ರಿಯಾ ಕೂಪರ್. ಆತ ತನ್ನ ಲಿಂಗದ ಗೊಂದಲದಲ್ಲಿ ಮೂರು ಸಲ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾನೆ. ರಿಯಾ ಕೂಪರ್ ಇಂಗ್ಲೆಂಡಿನಲ್ಲಿ ಅತೀ ಸಣ್ಣ ವಯಸ್ಸಿನಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡವ ಎನ್ನುವ ಪ್ರಸಿದ್ಧಿಗೆ ಒಳಗಾದ. ಆತ ಕೇವಲ 15 ವರ್ಷದಲ್ಲಿ ಮಹಿಳೆಯಾಗಿ ಲಿಂಗ ಪರಿವರ್ತನೆ ಮಾಡಿ ಕೊಂಡ ಮತ್ತು ಇದರಿಂದ ಬೇಸತ್ತು ಮತ್ತೆ ಲಿಂಗ ಪರಿವರ್ತನೆಗೆ ಮುಂದಾದ.
ಶಾಲಾ ಬಾಲಕನೊಬ್ಬ ಎಂಟು ಡಾಲರ್ ಮೌಲ್ಯದ ಊಟ ಮಾಡಿ, ಬಳಿಕ ಹಣ ಪಾವತಿಸಲು ಸಾಧ್ಯವಾಗಿಲ್ಲವೆಂದು ಸರ್ವ್ ಮಾಡಿದ ಲಂಚ್ ಲೇಡಿಯನ್ನು ವಜಾಗೊಳಿಸಿರುವ ಘಟನೆ ನಡೆದಿದೆ. ಈ ಘಟನೆ ನ್ಯೂ ಹ್ಯಾಮ್ಶೈರ್ ಭಾಗದ ಮಸ್ಕೋಮಾ ವ್ಯಾಲಿಯಲ್ಲಿರುವ ಶಾಲಾ ಭಾಗದಲ್ಲಿ ನಡೆದಿದೆ. ಬೋನಿ ಕಿಂಬಲ್ ಎನ್ನುವ ಲಂಚ್ ಲೇಡಿ, ಬಾಲಕ ಕೇಳಿರುವ ಆಹಾರ ಒದಗಿಸಿದ್ದಾಳೆ. ಆದರೆ ತಿಂದ ಬಳಿಕ ಪಾವತಿಸಲು ಬಾಲಕನ ಬಳಿ ಹಣವಿಲ್ಲ. ಆದ್ದರಿಂದ ಹಣವಿಲ್ಲದ ಬಾಲಕನಿಗೆ ಆಹಾರ ನೀಡಿದ್ದಕ್ಕೆ ಆಕೆಯನ್ನು ವಜಾಗೊಳಿಸಲಾಗಿದೆ. ಈ ವಿಷಯ ಹರಡುತ್ತಿದ್ದಂತೆ ವಿದ್ಯಾರ್ಥಿಗಳು…
ಇಂದು ಶನಿವಾರ, 17/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…