ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಗತ್ತಿನ ಸರ್ವಾಧಿಕಾರಿಗಳಲ್ಲಿ 10 ಹತ್ತು ಮಂದಿ ಅಗ್ರ ಗಣ್ಯರು ಇವರೇ ವಿಶ್ವದ ಹತ್ತು ಸರ್ವಾಧಿಕಾರಿಗಳು ಅಲ್ಲಿ ಇವರು ಹೇಳಿದ್ದೇ ಶಾಸನ, ಮಾಡಿದ್ದೇ ಕಾನೂನು.
ಅಡಾಲ್ಫ್ ಹಿಟ್ಲರ್:-
ಜರ್ಮನಿಯ ನಾಜಿ ಪಾರ್ಟಿ ಮುಖ್ಯಸ್ಥರಾಗಿದ್ದ ಹಿಟ್ಲರ್ 1933ರಿಂದ 1945ರ ವರೆಗೆ ಜರ್ಮನಿ ಚಾನ್ಸಲರ್ಆಗಿದ್ದ. ಎರಡನೆ ಮಹಾಯುದ್ಧಕ್ಕೆ ಕಾರಣೀಭೂತನಾದ ವ್ಯಕ್ತಿ ಈತ. ಜರ್ಮನರೇ ಶ್ರೇಷ್ಠ ಎಂಬ ಅಭಿಪ್ರಾಯ ಹೊಂದಿದ್ದ ಹಿಟ್ಲರ್ ಯಹೂದಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಿಸಿದ್ದ.
ಜೋಸೆಫ್ ಸ್ಟಾಲಿನ್:-
ಅವಿಭಜಿತ ರಷ್ಯದ ಅಧ್ಯಕ್ಷ ರಾಗಿದ್ದ ಸ್ಟಾಲಿನ್ ಜಗತ್ತು ಕಂಡ ಮತ್ತೊಬ್ಬ ಕಟು ಸರ್ವಾಧಿಕಾರಿ. ಎರಡನೆ ಮಹಾಯುದ್ಧದಲ್ಲಿ ಇವರ ಪಾತ್ರವೂ ಇತ್ತು. ಸ್ಟಾಲಿನ್ ಕೂಡ ತನ್ನ ರಾಜಕೀಯ ವಿರೋಧಿಗಳನ್ನು ಸದೆಬಡಿಯುವಲ್ಲಿ ನಿಸ್ಸೀಮನಾಗಿದ್ದ.
ಮಾವೊ ಜೆಡಾಂಗ್:-
ಚೀನಾದ ಕ್ರಾಂತಿಕಾರಿ ಕಮ್ಯುನಿಷ್ಟ್ ಪಕ್ಷ ದ ಸಂಸ್ಥಾಪಕ. ಇವರ ರಾಜಕೀಯ ನೀತಿಗಳು ಮಾವೋಯಿಸಂ ಅಥವಾ ಮಾರ್ಕಿಸಮ್-ಲೆನಿನಿಸಮ್-ಮಾವೋಯಿಸಂ ಎಂದು ಖ್ಯಾತಿ ಗಳಿಸಿವೆ. ತಮ್ಮ ನೀತಿಗಳ ಅನುಷ್ಠಾನಕ್ಕೆ ದಮನಕಾರಿ ನೀತಿಯನ್ನು ಅಳವಡಿಸಿಕೊಂಡಿದ್ದ.
ಕಿಮ್ ಜಾಂಗ್ :-
ಉತ್ತರ ಕೊರಿಯಾದ ಸರ್ವಾಧಿಕಾರಿ. ಹಾಲಿ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ತಂದೆ. 1994 ರಿಂದ 2011 ರವರೆಗೆ ಅಧಿಕಾರದಲ್ಲಿದ್ದರು. ಹಿಟ್ಲರ್‌ಗಿಂತಲೂ ಕ್ರೂರ್ ಸರ್ವಾಧಿಕಾರಿ ಎಂದು ಬಣ್ಣಿಸಲಾಗುತ್ತದೆ.
ಸದ್ದಾಮ್ ಹುಸೇನ್:-
ಇರಾಕ್ ಅಧ್ಯಕ್ಷರಾಗಿದ್ದ ಸದ್ದಾಮ್ ಹುಸೇನ್ ಜಗತ್ತು ಕಂಡ ಮತ್ತೊಬ್ಬ ಸರ್ವಾಧಿಕಾರಿ. ಅರಬ್ ಸೋಷಿಯಲಿಸ್ಟ್ ಪಾರ್ಟಿ ಬಾತ್‌ನ ಅಧ್ಯಕ್ಷ ರಾಗಿದ್ದ ಹುಸೇನ್ 1979ರಿಂದ 2003 ರವರೆಗೂ ಇರಾಕ್‌ನ ನಾಯಕನಾಗಿದ್ದ. ಸಮೂಹನಾಶಕ ಅಸ್ತ್ರಗಳನ್ನು ಹೊಂದಿದ್ದಾನೆಂದು ಆರೋಪಿಸಿ ಅಮೆರಿಕ ಇರಾಕ್ ಮೇಲೆ ಯುದ್ಧ ಮಾಡಿ ಸದ್ದಾಮ್‌ನನ್ನು ಸದೆಬಡಿಯಿತು.
ಇದಿ ಅಮಿನ್:-
ಉಗಾಂಡದ ಮೂರನೇ ಅಧ್ಯಕ್ಷ ಹಾಗೂ ಕ್ರೂರಿ ಸರ್ವಾಧಿಕಾರಿ. ಈತನ ಆಡಳಿತಾವಧಿಯಲ್ಲಿ 3 ಲಕ್ಷ ಕ್ಕೂ ಹೆಚ್ಚು ಕೊಲೆಗಳಾಗಿವೆ. ಸಾಮೂಹಿಕ ಹತ್ಯೆಗಳ ಹಿಂದಿನ ರೂವಾರಿಯೂ ಈತನೇ. ಉಗಾಂಡ ಎಂಬ ಚಿಕ್ಕ ರಾಷ್ಟ್ರ ಈತನ ಸರ್ವಾಧಿಕಾರದಿಂದಲೇ ಹೊರ ಜಗತ್ತಿಗೆ ಗೊತ್ತಾಗಿದ್ದು.
ಮೊಹಮ್ಮದ್ ಗಡ್ಡಾಫಿ:-
ಲಿಬಿಯಾದ ಸರ್ವಾಧಿಕಾರಿ. 42 ವರ್ಷಗಳು ಲಿಬಿಯಾದಲ್ಲಿ ಆಡಳಿತ ನಡೆಸಿದ ಗಡಾಫಿ ತನ್ನದೇ ಸ್ವಂತ ಜನರನ್ನು ಕೊಲೆ ಮಾಡಿಸಿದ್ದಾನೆ. ಈತನ ಆಡಳಿತದಲ್ಲಿ ಪ್ರತಿಭಟನೆಗಳಿಗೆ ಅವಕಾಶವೇ ಇರಲಿಲ್ಲ. ಆಧುನಿಕ ಜಗತ್ತು ಕಂಡ ಅತಿ ಕೆಟ್ಟ ಸರ್ವಾಧಿಕಾರಿ.
ಪೋಲ್ ಪಾಟ್:-
ಕಾಂಬೋಡಿಯಾದ ಸರ್ವಾಧಿಕಾರಿ. 1975 ರಿಂದ 1979 ರವರೆಗೆ ಅಧ್ಯಕ್ಷ ನಾಗಿದ್ದ. ಕಾಂಬೋಡಿಯಾದಲ್ಲಿ ನಡೆದ ಸಾಮೂಹಿಕ ಹತ್ಯೆಗೆ ಪಾಟ್ ಕಾರಣ. ಹಸಿವು, ಜೈಲು ಶಿಕ್ಷೆ, ಕೊಲೆಗಳಿಂದಾಗಿ ಕಾಂಬೋಡಿಯಾದಲ್ಲಿ 1೦ ಲಕ್ಷ ಜನರು ತಮ್ಮ ಪ್ರಾಣ ಬಿಟ್ಟಿದ್ದಾರೆ. ನಗರಗಳಿಂದ ಜನರನ್ನು ಓಡಿಸಿದ್ದಾನೆ.
ಆಗಸ್ಟೋ ಪಿನೊಚೆಟ್:-
ಚಿಲಿಯನ್ನು 20 ವರ್ಷ ಕ್ಕೂ ಹೆಚ್ಚು ಕಾಲ ಆಳಿದ್ದಾನೆ ಈ ಆಗಸ್ಟೋ. ಅಧಿಕಾರದ ಮೊದಲ ಮೂರು ವರ್ಷ ದಲ್ಲಿ 1 ಲಕ್ಷ ಕ್ಕೂ ಹೆಚ್ಚು ತನ್ನ ವಿರೋಧಿಗಳನ್ನು ಸೆರೆಮನೆಗೆ ತಳ್ಳಿದ. ತನ್ನ ರಾಜಕೀಯ ವಿರೋಧಿ ಗಳನ್ನು ಮುಲಾಜಿಲ್ಲದೇ ಕೊಲ್ಲುತ್ತಿದ್ದ.
ಗೆಂಘಿಸ್ ಖಾನ್:-
ಮಂಗೋಲ್ ಬುಡಕಟ್ಟು ತನ್ನ ಆಳ್ವಿಕೆಯಲ್ಲಿ ಕ್ರೂರ ಮತ್ತು ದಯೆಯಿಲ್ಲದ ಮಿಲಿಟರಿ ತಂತ್ರಗಳೊಂದಿಗೆ ಕೊಲ್ಲಿಸುತ್ತಾನೆ ಟಾಟರ್ ಸೈನ್ಯದಿಂದ ತನ್ನ ತಂದೆಯ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ತೆಮುಜಿನ್ ಅವರು ಟಾಟರ್ ಪುರುಷನನ್ನು ಕೊಂದರು. ಗೆಂಘಿಸ್ ಖಾನ್ 1227 ರಲ್ಲಿ ನಿಧನರಾದರು.ಅವರ ಸಾವಿನ ಕಾರಣ ನಿಗೂಢವಾಗಿ ಉಳಿದಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲ. ಈಗ ಅಭಿಷೇಕಕ್ಕೆ ನೇತ್ರಾವತಿಯಲ್ಲಿ ತಾತ್ಕಲಿಕವಾಗಿ ನೀರಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ತಮ್ಮ ಕಳವಳವನ್ನು ಹೊರಹಾಕಿದ್ದಾರೆ.ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ನೀರಿನ ಸಮಸ್ಯೆಯಾಗಿದೆ. ಘಟ್ಟದ ಭಾಗದಲ್ಲಿ ಮಳೆಯಾಗದ ಕಾರಣ ನೇತ್ರಾವತಿಯಲ್ಲಿ ನೀರಿಲ್ಲ. ಅಲ್ಲದೆ ಹವಾಮಾನ ಇಲಾಖೆ ಇನ್ನೂ ಹತ್ತು ದಿನ ಮಳೆ ಬರಲ್ಲ ಎಂದು ಸೂಚನೆ ಕೊಟ್ಟಿದೆ. ಹೀಗಾಗಿ ಕ್ಷೇತ್ರ ದರ್ಶನ ಮುಂದೂಡಿ…
ಜಿಯೋ ಬಂದಮೇಲೆ ಮೊಬೈಲ್ ಕಂಪನಿಗಳ ನಡುವಿನ ಪೈಪೋಟಿ ಶುರುವಾಗಿದ್ದು,ಇದರಿಂದ ಗ್ರಾಹಕರಿಗೆ ಅನುಕೂಲವಾಗಿದೆ. ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ನೀಡಲು ಮುಂದಾಗಿದ್ದು, 98 ರೂಪಾಯಿಗೆ
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಬುಧವಾರ, 18/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಮೇಷ:- ಹಣಕಾಸಿನ ಹರಿವಿಗೆ ಇದ್ದ ತೊಂದರೆಗಳು ನಿವಾರಣೆಯಾಗಿ ಹಣ ಬರುವ ಮಾರ್ಗ ನಿಚ್ಚಳವಾಗುವುದು. ವಾಕ್ ಚಾತುರ್ಯದಿಂದ ನಿಮ್ಮ…
ಸೀಬೆ ಹಣ್ಣು “ಬಡವರ ಸೇಬು” ಎಂದರೆ ಅತಿಶಯೋಕ್ತಿಯೇನಲ್ಲ. ಇದರಲ್ಲಿರುವ ಪೌಷ್ಟಿಕಾಂಶ ಗಳನ್ನು ಅವಲೋಕಿಸಿದಾಗ, ಸೇಬಿನ ಗುಣಗಳನ್ನು ಹೊಂದಿದ್ದು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಹಣ್ಣಾಗಿದೆ. ಸೀಬೆ ಹಣ್ಣಿನ ತವರು ಅಮೆರಿಕ ಆದರೆ ಇದರ ಪ್ರಸ್ತುತ ಎಲ್ಲಾ ಕಡೆಗಳಲ್ಲೂ ಬೆಳೆಯಲಾಗುತ್ತದೆ. ಸೀಬೆ ಹಣ್ಣಿನ – ಬೇರು, ಎಲೆ, ಹೂವು, ಕಾಯಿ, ಹಣ್ಣು ಇವುಗಳೆಲ್ಲವೂ ಉಪಯುಕ್ತ ಭಾಗಗಳಾಗಿವೆ. ಪೋಷಕಾಂಶಗಳು(100 ಗ್ರಾಂ ಸೀಬೆಹಣ್ಣಿನಲ್ಲಿ ದೊರೆಯುವ ಪೌಷ್ಟಿಕಾಂಶಗಳು ಹೀಗಿವೆ) ತೇವಾಂಶ-85.3ಸಸಾರಜನಕ- 0.1 ಗ್ರಾಂಮೇದಸ್ಸು – 0.2 ಗ್ರಾಂಖನಿಜಾಂಶ – – 0.6 ಗ್ರಾಂಕಾರ್ಬೋಹೈಡ್ರೇಟ್ಸ್…
ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಈ ನಡುವೆ ಸಿಆರ್‌ಪಿಎಫ್ ಯೋಧರೊಬ್ಬರು ಕರ್ತವ್ಯ ಸಲ್ಲಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋ ನೋಡಿದವರು ಆ ಚಳಿಯಲ್ಲೂ ಎದೆಗುಂದದೆ ಕರ್ತವ್ಯ ಸಲ್ಲಿಸುತ್ತಿರುವ ಯೋಧನಿಗೆ ಸಲಾಂ ಎಂದಿದ್ದಾರೆ. ನಮ್ಮ ಸೈನಿಕರು ನಮ್ಮ ಹೆಮ್ಮೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ನಮ್ಮ ಸೈನಿಕರು ನಮಗಾಗಿ ಪ್ರತಿದಿನ ಪಡುವ ಕಷ್ಟ ಅಷ್ಟಿಷ್ಟಲ್ಲ. ಚಳಿಗಾಳಿ ಹಿಮಮಳೆ ಯಾವುದನ್ನೂ ಲೆಕ್ಕಿಸದೆ ಸೈನಿಕರು ಬಾರ್ಡರ್ ನಲ್ಲಿ ನಮಗಾಗಿ ಪ್ರಾಣ ಒತ್ತೆಯಿಟ್ಟು…
ಆನ್ ಲೈನ್ ಶಾಪಿಂಗ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‍ಕಾರ್ಟ್ ಗೆ 16ರ ಫೋರನೊಬ್ಬ ಸರಿಯಾದ ಸವಾಲನ್ನೇ ಹಾಕಿದ್ದಾನೆ. ಇದು ಈ ಎರಡು ಮಾರಾಟ ತಾಣಗಳಿಗೆ ಮಾತ್ರ ಸೀಮಿತ ಅಂದುಕೊಳ್ಳಬೇಡಿ ಆನ್ ಲೈನ್ಎಲ್ಲ ಮಾರಾಟ ತಾಣಗಳಿಗೂ ಬಾಲಕನ ಸವಾಲು ಅನ್ವಯವಾಗುತ್ತದೆ ಇದು ಎಲ್ಲಾ ಆನ್ಲೈನ್ ಮಾರಾಟಗಾರರು ತಿಳಿದುಕೊಳ್ಳಬೇಕಾದ ವಿಷಯ. ಆನ್‍ಲೈನ್ ಶಾಪಿಂಗ್ ತಾಣಗಳು ಒಂದು ಬಾರಿ ಬಳಸುವ ಪ್ಲಾಸ್ಟಿಕ್ ನಿಷೇಧಿಸಲು ಆಗ್ರಹಿಸಿ 16 ವರ್ಷದ ಬಾಲಕ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್‍ಜಿಟಿ)ಕ್ಕೆದೂರು ನೀಡಿದ್ದಾನೆ. ದೆಹಲಿಯ ಮಾಡರ್ನ್ ಶಾಲೆಯ 11ನೇ ತರಗತಿ ವಿದ್ಯಾರ್ಥಿ ಆದಿತ್ಯ ದುಬೆ ಎನ್‍ಜಿಟಿಗೆ…