ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜನರ ನಗದು ಚಲಾವಣೆಯನ್ನು ಸುಲಭವಾಗಿಸಲು 200 ರೂಪಾಯಿಯ ನೋಟುಗಳು ಸದ್ಯದಲ್ಲೇ ಚಲಾವಣೆಗೆ ಬರಲಿವೆ. 200 ರೂ. ಮುಖಬೆಲೆಯ ಹೊಸ ನೋಟುಗಳ ಮುದ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.
ಸರ್ಕಾರಿ ಅಧಿಕಾರಿಗಳು ಎಎನ್`ಐಗೆ ನೀಡಿರುವ ಮಾಹಿತಿ ಪ್ರಕಾರ, 200 ರೂಪಾಯಿಯ ಮುದ್ರಣಕ್ಕೆ ಈಗಾಗಲೇ ಆದೇಶ ಹೊರಬಿದ್ದಿದೆ. ಇದೀಗ ನೋಟಿನ ಹೊಸ ವಿನ್ಯಾಸವನ್ನು ಸಿದ್ಧಪಡಿಸಲಾಗಿದ್ದು, ಮುದ್ರಣಾಲಯಕ್ಕೆ ನೋಟಿನ ವಿನ್ಯಾಸವನ್ನು ನೀಡಿಲಾಗಿದೆ ಎಂದು ಹೇಳಲಾಗುತ್ತಿದೆ.
ನವೆಂಬರ್ 8ರಂದು ಕೇಂದ್ರ ಸರಕಾರ ಅಪನಗದೀಕರಣ ಘೋಷಿಸಿತ್ತು. ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿತ್ತು. ಇದರಿಂದ ಚಾಲ್ತಿಯಲ್ಲಿದ್ದ 17.9 ಲಕ್ಷ ಕೋಟಿ ಬೆಲೆಯ ಶೇಕಡಾ 86ರಷ್ಟು ನೋಟುಗಳು ಅಮಾನ್ಯವಾಗಿದ್ದವು.
ನಂತರ ಕೇಂದ್ರ ಸರಕಾರ ಹೊಸ 2000 ಮುಖಬೆಲೆಯ ಹಾಗೂ 500 ಮುಖಬೆಲೆಯ ನೋಟನ್ನು ಜಾರಿಗೆ ತಂದಿತ್ತು. 2000 ರೂ. ನೋಟಿಗೆ ವ್ಯಾಪಕ ಚಿಲ್ಲರೆ ಅಭಾವ ಎದುರಾದ ಪರಿಣಾಮ ಹೆಚ್ಚುವರಿಯಾಗಿ 100 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿತ್ತು.
ಹೊಸದಾಗಿ ಚಲಾವಣೆ ಬರಲಿವೆ ಎನ್ನಲಾಗುತ್ತಿರುವ 200 ರೂ. ನೋಟುಗಳು ಪ್ಲಾಸ್ಟಿಕ್ ನೋಟ್ ಆಗಿರಲಿದ್ದು, ನಕಲು ಮಾಡಲು ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ. ಇದರ ಜೊತೆಗೆ 200 ರೂ ನೋಟು ದೇಶಾದ್ಯಂತ ಸೃಷ್ಟಿಯಾಗಿರುವ ಚಿಲ್ಲರೆ ಸಮಸ್ಯೆಗೆ ಪರಿಹಾರ ನೀಡಲಿದೆ ಎನ್ನಲಾಗುತ್ತಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸರ್ವರ್ ಸಮಸ್ಯೆಯಿಂದಾಗಿ ಜಗತ್ತಿನಾದ್ಯಂತ ಮೊಬೈಲ್ ಗ್ರಾಹಕರು ವಾಟ್ಸಪ್ ಕ್ರ್ಯಾಶ್ ಆದ ಹಿನ್ನೆಲೆಯಲ್ಲಿ ಸಂದೇಶ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗದೆ ಇರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಲಂಕೆಯಲ್ಲಿ ಮಹಾಯುದ್ಧ ನಡೆದು ರಾವಣ ರಾಮಬಾಣಕ್ಕೆ ತುತ್ತಾಗಿ ಧರೆಗುರುಳಿದ. ಅವನು ಇನ್ನೂ ಮರಣಶಯ್ಯೆಯಲ್ಲಿರುವಾಗ ರಾಮ, “ಲಕ್ಷ್ಮಣಾ, ರಾವಣ ಮಹಾ ಪಂಡಿತ. ಅಧ್ಯಯನ ಮತ್ತು ಅನುಭವದಿಂದ ಅಪಾರ ಜ್ಞಾನ ಗಳಿಸಿದ್ದಾನೆ. ಅವನ ಬಳಿ ಹೋಗಿ, ಅವನಿಂದ ಅಮೂಲ್ಯವಾದ ಪಾಠಗಳನ್ನು ಕಲಿತು ಕೊಂಡು ಬಾ ಎಂದು ಹೇಳಿದ. ಅದರಂತೆ ಲಕ್ಷ್ಮಣ ರಾವಣನ ಪಾದದ ಬಳಿ ನಿಂತು, ರಾವಣನ ಬೋಧನೆಗಳನ್ನು ಆಲಿಸಿ, ಹೃದ್ಗತ ಮಾಡಿಕೊಳ್ಳುತ್ತಾನೆ. ರಾವಣ ಸಾಯುವ ಮುನ್ನ ಲಕ್ಷ್ಮಣನಿಗೆ ರಾವಣ ಯೋಧ ಮಾತ್ರವಲ್ಲ, ಸರ್ವೋಚ್ಚ ವಿದ್ವಾಂಸನು ಆಗಿದ್ದ ಬ್ರಾಹ್ಮಣ ಕುಲದಲ್ಲಿ ಜನಿಸಿದ…
ಹಲ್ಲು ನೋವು ಅಂತ ಕೇಳಿದ ಕೂಡಲೇ ನಮಗೆ ಅದು ಭಯ ಬೀಳಿಸುತ್ತದೆ.ಹಲ್ಲು ನೋವು ಬಂದಾಗ ಜನರು ಅವುಗಳನ್ನು ಪರಿಹರಿಸಿಕೊಳ್ಳಲು ಹಲವಾರು ಮಾರ್ಗಗಳನ್ನು ಹುಡುಕುತ್ತಾರೆ. ಇದರಿಂದ ಅವರ ನೋವು ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾಗುತ್ತದೆ. ಹಲ್ಲು ಹಾಗೂ ವಸಡುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದಿದ್ದರೆ ನಾನಾ ಸಮಸ್ಯೆಗಳನ್ನು ಎದುರಿಸಲೇಬೇಕಾಗುತ್ತೆ. ಸಾಮಾನ್ಯವಾಗಿ ಕಾಡುವ ಹಲ್ಲು ನೋವು ಹಾಗೂ ವಸಡುಗಳ ರಕ್ತಸ್ರಾವದ ಕೆಲವು ಸಮಸ್ಯೆಗಳು ಕಾಣಿಸಿಕೊಂಡಾಗ ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಹಲವಾರು ಮದ್ದುಗಳಿಂದ ನಿಮ್ಮ ಹಲ್ಲು ನೋವಿಗೆ ಅಗತ್ಯವಾದ…
ಭಗವದ್ಗೀತೆಯ ಕಿರು ಪರಿಚಯ.. ಪ್ರಶ್ನೋತ್ತರಮಾಲಿಕೆ.. ಪ್ರತಿಯೊಬ್ಬರೂ ಓದಿ.. ಶೇರ್ ಮಾಡಿ.. * ಭಗವದ್ಗೀತೆಯನ್ನು ಯಾರು ಯಾರಿಗೆ ಬೋಧಿಸಿದರು..? ಉತ್ತರ : ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ. * ಯಾವಾಗ ಬೋಧಿಸಿದ..? ಉತ್ತರ : ಇಂದಿನಿಂದ ಸುಮಾರು ೭ ಸಾವಿರ ವರ್ಷಗಳ ಹಿಂದೆ. * ಯಾವ ದಿನ ಬೋಧಿಸಿದ..? ಉತ್ತರ : ರವಿವಾರ. * ಯಾವ ತಿಥಿಯಲ್ಲಿ..? ಉತ್ತರ : ಏಕಾದಶಿಯಂದು. * ಎಲ್ಲಿ ಬೋಧಿಸಿದ..? ಉತ್ತರ : ಕುರುಕ್ಷೇತ್ರದ ರಣಭೂಮಿಯಲ್ಲಿ. * ಎಷ್ಟು ಸಮಯ ಬೋಧಿಸಿದ..? ಉತ್ತರ : 45…
ಚಾರ್ಲಿ ಚಾಪ್ಲಿನ್ ಹೆಸರು ಕೇಳದವರಿಲ್ಲ. ಹಾಸ್ಯ ಲೋಕದ ಈ ಸಾಮ್ರಾಟ 1913ರಂದು ಡಿಸೆಂಬರ್ 16ರಂದು ವಾರಕ್ಕೆ 150 ಡಾಲರ್ಗಳಿಗೆ ಸಿನಿಮಾ ವೃತ್ತಿ ಆರಂಭಿಸಿದರು. ಈ ಜಗದ್ವಿಖ್ಯಾತ ಕಾಮಿಡಿ ಸೂಪರ್ಸ್ಟಾರ್ ಬಗ್ಗೆ ಚುಟುಕು ಸುದ್ದಿ. ಇಂಗ್ಲಿಷ್ ಹಾಸ್ಯ ನಟ, ಸಿನಿಮಾ ನಿರ್ಮಾಪಕ ಮತ್ತು ಸಂಯೋಜಕ ಸರ್ ಚಾರ್ಲೆಸ್ ಸ್ಪೆನ್ಸರ್ ಚಾರ್ಲಿ ಚ್ಲಾಪಿನ್ ಜನಿಸಿದ್ದು 16ನೇ ಏಪ್ರಿಲ್ 1889ರಲ್ಲಿ.
ನೀರಜ್ ಜಾರ್ಜ್ ಬೇಬಿ. ಊರುಗೋಲಿನ ಸಹಾಯದಿಂದ ಅತ್ತಿಂದಿತ್ತ ಓಡಾಡುವ ಯುವಕ. ಸದ್ಯ ಇದೇ ಯುವಕ ವಿಶ್ವದ ಗಮನ ಸೆಳೆದಿದ್ದಾರೆ. ಅದು ತಮ್ಮ ಸಾಧನೆಯ ಮೂಲಕ ಕೇರಳದ ಅಲುವಾ ಮೂಲದ 32 ವರ್ಷದ ನೀರಜ್ ಜಾರ್ಜ್ ಸಂಪೂರ್ಣ ಹಿಮದಿಂದ ಆವೃತವಾದ ಆಫ್ರಿಕಾದ ಅತೀ ಎತ್ತರದ ಕಿಲಿಮಂಜಾರೋ ಪರ್ವತವನ್ನೇರಿದ್ದಾರೆ. ಈ ಮೂಲಕ ತಮ್ಮ ಕನಸನ್ನು ಸಾಕಾರಗೊಳಿಸಿದ್ದಾರೆ. ಇದು ನನ್ನ ಬದುಕಿನ ಅತ್ಯಂತ ಅಪೂರ್ವ ಕ್ಷಣ. ಈ ಕನಸಿನ ಈಡೇರಿಕೆಗೆ ಅತ್ಯಂತ ನೋವಿನಿಂದ ನಾನು ಐದು ವರ್ಷದಿಂದ ಕಾಯುತ್ತಿದ್ದೇನೆ’ ಎಂದು ನೀರಜ್…