ಉದ್ಯೋಗ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ನೇಮಕಾತಿಯ ಅಧಿಸೂಚನೆ ಪ್ರಕಟಿಸಿದೆ

11

ಬೆಂಗಳೂರು –  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಇಲಾಖೆಯ ಜಲ ಜೀವನ ಮಿಷನ್‌ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಕೇಂದ್ರ ಕಛೇರಿ ಹಾಗೂ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ/ ಹೊರಗುತ್ತಿಗೆ ಆಧಾರದ ಮೇಲೆ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿದೆ.

ಹುದ್ದೆಗಳ ವಿವರ
ದಾಖಲಾತಿ ತಜ್ಞರು 01
ಹಿರಿಯ ಭೂ ವಿಜ್ಞಾನಿ o1
ಸಮಾಲೋಚಕರು 02
ಹಿರಿಯ ಸಮಾಲೋಚಕರು 02
ಕಿರಿಯ ಸಮಾಲೋಚಕರು 01
ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ ಸಮಾಲೋಚಕರು 05
ಸಪೋರ್ಟ್‌ ಇಂಜಿನಿಯರ್ 04
ಡೇಟಾ ಎಂಟ್ರಿ ಆಪರೇಟರ್ 02
ಜಿಲ್ಲಾ ಯೋಜನಾ ವ್ಯವಸ್ಥಾಪಕ 08
ಜಿಲ್ಲಾ ಸಮಾಲೋಚಕರು 16 .
ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು 01 .
ನೈರ್ಮಲ್ಯ ಹಾಗೂ ಶುಚಿತ್ವ ಸಮಾಲೋಚಕರು o7 .
ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ ಸಮಾಲೋಚಕರು 02 .
ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಸಮಾಲೋಚಕರು 02 .

ಈ ಹುದ್ದೆಗಳನ್ನು ಕೇಂದ್ರ ಕಛೇರಿ, ಜಿಲ್ಲಾ ಪಂಚಾಯಿತಿ ಕಛೇರಿ- ಜಲ ಜೀವನ ಮಿಷನ್, ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಈ ಕಛೇರಿಗಳಲ್ಲಿ ನೇಮಕ ಮಾಡಲಾಗುತ್ತದೆ.

ವಯೋಮಾನ ಮತ್ತು ವಿದ್ಯಾರ್ಹತೆ
ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ 45 ವರ್ಷಗಳು ಮೀರಿರಬಾರದು. ಕೆಳಗೆ ನೀಡಲಾದ ಅಧಿಸೂಚನೆಯಲ್ಲಿ ಯಾವ್ಯಾವ ಹುದ್ದೆಗೆ ಯಾವ ವಿದ್ಯಾರ್ಹತೆ ಅಗತ್ಯ ಎಂದು ತಿಳಿಸಲಾಗಿದ್ದು, ಓದಿ ತಿಳಿಯಿರಿ.

ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ತುಂಬಿ, ವಯಸ್ಸಿನ ದೃಢೀಕರಣ, ವಿದ್ಯಾರ್ಹತೆ, ಅನುಭವ, ಪ್ರಮುಖ ಸಾಮರ್ಥ್ಯಗಳು, ರೆಸ್ಯೂಮ್‌ ಹಾಗೂ ಅರ್ಜಿ ಜೊತೆಗೆ, ‘ನಾನೂ ಈ ಹುದ್ದೆಗೆ ಯಾವ ರೀತಿ ಸೂಕ್ತನಾಗಿದ್ದೇನೆ’ ಎಂಬುದರ ಬಗ್ಗೆ ಒಂದು ಪುಟದಲ್ಲಿ ಟಿಪ್ಪಣಿ ಬರೆದು ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ : ನೈರ್ಮಲ್ಯ ಇಲಾಖೆ, 2ನೇ ಮಹಡಿ, ಕೆ.ಹೆಚ್‌.ಬಿ ಕಟ್ಟಡ, ಕಾವೇರಿ ಭವನ, ಕೆ.ಜಿ ರಸ್ತೆ, ಬೆಂಗಳೂರು-560009.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31-08-2020 (ಸಂಜೆ-05-30 ಗಂಟೆ) ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನವನ್ನು ಕೇಂದ್ರ ಕಛೇರಿ ಅಥವಾ ಆಯಾ ಜಿಲ್ಲಾ ಪಂಚಾಯಿತಿ ಕಛೇರಿಯಲ್ಲಿ ವಿಡಿಯೋ ಸಂವಾದದ ಮೂಲಕ ನಡೆಸಲಿದ್ದು, ನಿಗದಿಪಡಿಸಿದ ದಿನಾಂಕ ಮತ್ತು ವೇಳೆಯಲ್ಲಿ ಹಾಜರಾಗುವುದು. ಹಾಗೂ ಸಂದರ್ಶನದಲ್ಲಿ ಆಯ್ಕೆಯಾದ ಕೆಲವು ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಿದ್ದು, ನಿಗದಿತ ದಿನಾಂಕದಲ್ಲಿ ಪರೀಕ್ಷೆಗೆ ಹಾಜರಾಗುವುದು.
ಹುದ್ದೆಗಳಿಗೆ ನಿಗದಿಪಡಿಸಿದ ಮಾಸಿಕ ಸಂಭಾವನೆಯನ್ನು ನೀಡಲಾಗುತ್ತದೆ

About the author / 

Chethan Mardalu

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ