ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾವು ದಿನಾಲು ಬೆಳಿಗ್ಗೆ ಎದ್ದ ತಕ್ಷಣ ನಮಗೆ ಏನಿಲ್ಲಾ ಅಂದ್ರು ಬಿಸಿ ಬಿಸಿ ಚಹಾ(ಟೀ) ಬೇಕೇ ಬೇಕು. ಒಂದು ಸಮೀಕ್ಷೆಯ ಪ್ರಕಾರ ಶೇ. ತೊಂಬತ್ತಕ್ಕೂ ಹೆಚ್ಚು ಭಾರತೀಯರು ನಿತ್ಯವೂ ಕನಿಷ್ಠ ಮೂರು ಕಪ್ ಚಹಾ ಕುಡಿಯುತ್ತಾರೆ. ಆದರೆ ಚಹಾ ಕುಡಿಯುವವರಲ್ಲಿ ಹೆಚ್ಚಿನವರು ದಿನದ ಪ್ರಥಮ ಆಹಾರವಾಗಿ ಒಂದು ಟೀ ಸೇವಿಸುತ್ತಾರೆ. ಕೆಲವರಂತೂ ಹಾಸಿಗೆಯಿಂದ ಏಳುವ ಮುನ್ನವೇ ಬೆಡ್ ಟೀ ಎಂದು ಕುಡಿಯುತ್ತಾರೆ.
ಆದರೆ ಇದು ಆರೋಗ್ಯಕರವೇ? ತಜ್ಞರಲ್ಲಿ ಈ ಪ್ರಶ್ನೆಯನ್ನು ಕೇಳಿದರೆ ಖಾಲಿ ಹೊಟ್ಟೆಯಲ್ಲಿ ಟೀ ಸೇವಿಸುವುದು ಅತ್ಯಂತ ಅನಾರೋಗ್ಯಕರ ಅಭ್ಯಾಸ ಎಂಬ ಉತ್ತರ ಸಿಗುತ್ತದೆ.ಹಾಗಾದರೆ ಟೀ ಯಾವಾಗ ಕುಡಿಯಬೇಕು ಎಂಬ ಪ್ರಶ್ನೆಗೆ ತಜ್ಞರು ಬೆಳಗ್ಗಿನ ಉಪಾಹಾರದ ಬಳಿಕ ಸೇವಿಸುವುದು ಉತ್ತಮ ಎಂಬ ಉತ್ತರ ನೀಡುತ್ತಾರೆ. ಆದರೆ ಟೀ ಸೇವನೆಯ ಪ್ರಮಾಣ ಇಡಿಯ ದಿನದಲ್ಲಿ ಮಿತವಾಗಿರುವುದೂ ಅಗತ್ಯ.
ಹಾಗಾದ್ರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯಬಹುದೇ? ಮುಂದೆ ಓದಿ….
ವಾಕರಿಕೆ ಬರುತ್ತದೆಯೇ?
ಟೀ ಕ್ಷಾರೀಯವೂ ಆಗಿದೆ ಕೊಂಚ ಆಮ್ಲೀಯವೂ ಆಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಜೀರ್ಣರಸಗಳ ಪ್ರಭಾವ ಏರುಪೇರಾಗುತ್ತದೆ. ಈ ಏರುಪೇರು ವಾಕರಿಕೆ ಬರಿಸುತ್ತದೆ.
ಕಪ್ಪು (ಬ್ಲಾಕ್) ಟೀ ಸುರಕ್ಷಿತವೇ?
ಕಪ್ಪು ಟೀ ಎಂದರೆ ಹೆಚ್ಚು ಕುದಿಸದ ಮತ್ತು ಹಾಲು ಸೇರಿಸದ ಟೀ. ಇದು ತೂಕ ಇಳಿಸಲು ಉತ್ತಮವಾದರೂ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಮೂಲಕ ಆಮ್ಲೀಯತೆ ಹೆಚ್ಚುತ್ತದೆ, ಇದರಿಂದ ಹೊಟ್ಟೆಯ ಜೀರ್ಣರಸಗಳೂ ಪ್ರಭಾವಕ್ಕೊಳಗಾಗಿ ಹೊಟ್ಟೆಯುಬ್ಬರಿಕೆ ಮತ್ತು ಹೊಟ್ಟೆ ತುಂಬಿರುವ ಹುಸಿಭಾವನೆಯನ್ನು ಮೂಡಿಸುತ್ತದೆ.
ಹಾಲು ಸೇರಿಸಿದ ಟೀ ಕುಡಿದರೆ ಆಗುವ ಅಡ್ಡಪರಿಣಾಮಗಳೇನು?
ಭಾರತದಲ್ಲಿ ಟೀ ಕುಡಿಯುವ ತೊಂಭತ್ತು ಶೇಖಡಾ ಜನರಲ್ಲಿ ಎಂಭತ್ತೊಂಭತ್ತು ಶೇಖಡಾ ಜನರು ಹಾಲು ಸೇರಿಸಿದ ಟೀ ಕುಡಿಯುತ್ತಾರೆ. ಆದರೆ ದಿನಕ್ಕೆ ಮೂರಕ್ಕಿಂತ ಹೆಚ್ಚು ಕಪ್ ಕುಡಿದರೆ ಇದು ಅನಗತ್ಯ ಕೊಬ್ಬು, ಆಮ್ಲೀಯತೆ ಮತ್ತು ಟಿನ್ನಿಟಸ್ ಅಥವಾ ಕಿವಿಗಳಲ್ಲಿ ಗುಂಯ್ಗುಡುವ ತೊಂದರೆಯನ್ನು ತಂದಿಡುತ್ತದೆ.
ಅದರಲ್ಲೂ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಸುಸ್ತಾದ ಭಾವನೆ, ಹೊಟ್ಟೆಯುಬ್ಬರಿಕೆ, ಜೀರ್ಣರಸಗಳು ಪ್ರಭಾವ ಕಳೆದುಕೊಳ್ಳುವುದು ಮೊದಲಾದ ತೊಂದರೆಗಳು ಎದುರಾಗಬಹುದು. ಇಲ್ಲಿ ಓದಿ :- ಗರ್ಭಿಣಿ ಮಹಿಳೆಯರು ಇವನ್ನು ಬಳಸಿದರೆ, ಹುಟ್ಟುವ ಮಕ್ಕಳಿಗೆ ಅಪಾಯ..!
ಸ್ಟ್ರಾಂಗ್ ಟೀ ಕುಡಿದರೆ ಯಾವ ದುಷ್ಪರಿಣಾಮಗಳಾಗುತ್ತವೆ?
ಹೆಚ್ಚಿನ ರುಚಿ ಪಡೆಯಲು ಎರಡು ವಿಧಾನಗಳಿವೆ. ಮೊದಲನೆಯದು ಟೀಪುಡಿಯನ್ನು ಹೆಚ್ಚು ಸಮಯದವರೆಗೆ ಕುದಿಸುವುದು. ಎರಡನೆಯದು ಹೆಚ್ಚಿನ ಪ್ರಮಾಣದ ಟೀ ಪುಡಿಹಾಕಿ ಕೊಂಚ ಸಮಯದ ವರೆಗೆ ಕುದಿಸುವುದು. ಆದರೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದಾದರೆ ಎರಡೂ ವಿಧಾನಗಳು ಮಾರಕವಾಗಿವೆ. ಅದರಲ್ಲೂ ಹಾಲಿಲ್ಲದ ಸ್ಟ್ರಾಂಗ್ ಟೀ ಕುಡಿಯುವುದರ ಮೂಲಕ ಜೀರ್ಣವ್ಯವಸ್ಥೆ ಹಾಳಾಗುತ್ತದೆ. ಏಕೆಂದರೆ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಆಮ್ಲಗಳು ಜೀರ್ಣರಸಗಳ ರಚನೆಯನ್ನು ಬದಲಿಸಿಬಿಡುತ್ತವೆ. ಇದು ಅಲ್ಸರ್, ಹುಳಿತೇಗು, ಹೊಟ್ಟೆಯುರಿ, ಎದೆಯುರಿ ಮೊದಲಾದವುಗಳಿಗೆ ನೇರವಾಗಿ ಕಾರಣವಾಗುತ್ತದೆ.
ನಾಲ್ಕೈದು ಬಗೆಯ ಟೀಪುಡಿ ಬೆರೆಸಿದರೆ ಏನಾಗುತ್ತದೆ
ಫ್ಯಾಕ್ಟರಿಯಲ್ಲಿ ತ್ಯಾಜ್ಯವಾಗಿ ಹೋಗಬಹುದಾದ, ಆದರೆ ಕೊಂಚ ಟೀ ಅಂಶವಿರುವ ಪುಡಿಯನ್ನು ಅಲ್ಪ ಪ್ರಮಾಣದಲ್ಲಿ ಟೀಪುಡಿಯಲ್ಲಿ ಬೆರೆಸಿ ಲಾಭ ಮಾಡಿಕೊಳ್ಳಲಾಗುತ್ತದೆ. ಅಗ್ಗದ ಟೀಪುಡಿಯನ್ನು ದುಬಾರಿ ಟೀಪುಡಿಯೊಂದಿಗೂ ಬೆರೆಸಿ ಮಾರಾಟ ಮಾಡುತ್ತಾರೆ.
ಆದರೆ ಪ್ರತಿಷ್ಠಿತ ಸಂಸ್ಥೆಗಳು ನುರಿತ ಚಹಾ ರುಚಿ ನೋಡುವವರ ಮೂಲಕ , ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಎರಡು ಅಥವಾ ಹೆಚ್ಚು ಪುಡಿಗಳನ್ನು ಬೆರೆಸಿ ಪರೀಕ್ಷಿಸಿ ಸುರಕ್ಷಿತ ಎಂದು ಖಚಿತಪಡಿಸಿದ ಮೇಲೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಇದಕ್ಕೆ ಬ್ಲೆಂಡ್ಎಂದು ಕರೆಯುತ್ತಾರೆ.
ಈ ಬ್ಲೆಂಡ್ ಟೀಪುಡಿ ಕುಡಿಯುವುದು ಸುರಕ್ಷಿತವೇ ಹೊರತು ನಾವಾಗಿ ನಮ್ಮ ಮನಸ್ಸಿಗೆ ಬಂದಂತೆ ಎರಡು ಅಥವಾ ಹೆಚ್ಚಿನ ಟೀಪುಡಿಗಳನ್ನು ಸೇರಿಸಿ ಕುಡಿಯುವುದು ಆರೋಗ್ಯಕ್ಕೆ ಮಾರಕ ಹಾಗೂ ಇದು ಪಾನಮತ್ತನಾಗಿರುವ ಅನುಭವವನ್ನೂ ನೀಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಥ್ರೀಮಿಕ್ಸ್, ಸೆವೆನ್ ಮಿಕ್ಸ್ ಎಲ್ಲವೂ ವ್ಯಾಪಾರದ ತಂತ್ರಗಳೇ ಹೊರತು ಆರೋಗ್ಯಕರವಲ್ಲ.
ಟೀ ಮತ್ತು ಬಿಸ್ಕತ್
ಭಾರತದಲ್ಲಿ ಅತಿ ಸಾಮಾನ್ಯವಾದ ಧಿಡೀರ್ ತಿಂಡಿ ಎಂದರೆ ಟೀ ಮತ್ತು ಬಿಸ್ಕತ್. ಟೀ ಮತ್ತು ಬಿಸ್ಕತ್ ತಿನ್ನುವುದು ಉತ್ತಮ ಅಭ್ಯಾಸ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಬಿಸ್ಕತ್ ಬದಲಿಗೆ ಟೋಸ್ಟ್, ರಸ್ಕ್ ಮೊದಲಾದವುಗಳನ್ನೂ ಸೇವಿಸಬಹುದು. ಇವುಗಳಲ್ಲಿರುವ ಹಿಟ್ಟಿನ ಅಂಶ ಟೀ ಯಲ್ಲಿರುವ ಆಮ್ಲೀಯತೆಯನ್ನು ಹೀರಿಕೊಳ್ಳುವ ಕಾರಣ ಜೀರ್ಣರಸಗಳು ಹೆಚ್ಚು ಪ್ರಭಾವಕ್ಕೊಳಗಾಗುವುದಿಲ್ಲ. ಟೀ ಒಟ್ಟಿಗೆ ಸಿಹಿ ಅಥವಾ ಉಪ್ಪಿನ ಅಂಶವಿರುವ ತಿಂಡಿಗಳನ್ನು ತಿನ್ನುವ ಮೂಲಕ ದೇಹಕ್ಕೆ ಅಗತ್ಯವಾದ ಸೋಡಿಯಂ ಅಂಶವನ್ನು ಪಡೆದುಕೊಂಡು ಹೊಟ್ಟೆಯ ಮತ್ತು ಕರುಳಿನ ಹುಣ್ಣು (ಅಲ್ಸರ್) ನಿಂದ ಪಾರಾಗಬಹುದು
ಟೀ ಕುಡಿಯುವುದರಲ್ಲಿ ಅತಿಕೆಟ್ಟ ಅಭ್ಯಾಸ
ಆಹಾರ ಸೇವನೆಯ ಬಳಿಕ ಟೀ ಕುಡಿಯುವುದು ಕೆಟ್ಟ ಅಭ್ಯಾಸವಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
19 ವರ್ಷದ ಚಿಕ್ಕ ವಯಸ್ಸಿನ ಮಗಳೊಬ್ಬಳು ತಂದೆಯ ಜೀವ ಉಳಿಸಲು ತನ್ನ ಲಿವರ್ ದಾನ ಮಾಡಿ ಆದರ್ಶ ಮಗಳೆನಿಸಿಕೊಂಡಿದ್ದಾಳೆ. ರಾಖಿ ದತ್ತ ತಂದೆಗಾಗಿ ತನ್ನ ಲಿವರ್ ದಾನ ಮಾಡಿದ್ದಾಳೆ. ದೇಹದ ಮೇಲೆ ಲಿವರ್ ಶಸ್ತ್ರಚಿಕಿತ್ಸೆಯ ಕಲೆ ಹಾಗೆ ಉಳಿದುಕೊಳ್ಳುತ್ತದೆ, ತನ್ನ ಮುಂದಿನ ಜೀವನದಲ್ಲಿ ಇದರಿಂದ ತೊಂದರೆಯಾತ್ತದೆ ಎನ್ನುವುದನ್ನೂ ಲೆಕ್ಕಿಸದೇ ಈ ಯುವತಿ ತನ್ನ ತಂದೆಯ ಜೀವ ಉಳಿಸಲು ತನ್ನ 65% ಲಿವರ್ನನ್ನು ದಾನ ಮಾಡಿ, ತಂದೆಗೆ ಪುನರ್ಜನ್ಮ ನೀಡಿದ್ದಾಳೆ. ಈ ಬಗ್ಗೆ ವಾಣಿಜ್ಯೋದ್ಯಮಿ ಹರ್ಷ ಗೋಯೆಂಕಾ ಅವರು…
ಧೂಮಪಾನವು ಆರೋಗ್ಯಕ್ಕೆ ಹಾನಿಕಾರಕ ಎಂದು ಸಿಗರೇಟ್ ಪ್ಯಾಕ್ಗಳ ಮೇಲೆ ಬರೆದುಕೊಂಡು ಇದ್ದರೂ ಜನರು ಲೆಕ್ಕಿಸುವುದಿಲ್ಲ. ಅದನ್ನು ನೋಡಿಯೇ ಸಿಗರೇಟನ್ನು ಸೇದುತ್ತಾರೆ. ನಿಧಾನವಾಗಿಯೇ ಶ್ವಾಸಕೋಶಗಳನ್ನು ದುರ್ಬಲಗೊಳಿಸುವ ಧೂಮ ಪಾನ ವ್ಯಸನಿಯ ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಆಂತರಿಕವಾಗಿ ಅನೇಕ ಆರೋಗ್ಯ ಸಮಸ್ಯೆಗಳ ಹುಟ್ಟಿಗೆ ಕಾರಣವಾಗುವುದು
ಅನೇಕ ವರ್ಷಗಳ ಹಿಂದೆ, ವಿದ್ಯಾರ್ಥಿಯೋಬ್ಬನು ಕಾನೂನು ಶಿಕ್ಷಣವನ್ನು ಕಲಿಯಲು ಬಂದ. ಆದ್ರೆ ಅವನ ಹತ್ತಿರ ಶುಲ್ಕವನ್ನು ಪಾವತಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಅವನು ಶಿಕ್ಷಕರ ಜೊತೆ ಒಪ್ಪಂದವೊಂದನ್ನು ಮಾದಿಲೊಂಡನು.ಅದೆಂದರೆ “ನಾನು ನ್ಯಾಯಾಲಯದಲ್ಲಿ ನನ್ನ ಮೊದಲ ಪ್ರಕರಣವನ್ನು ಗೆಲ್ಲುವ ದಿನ ನಿಮ್ಮ ಶುಲ್ಕವನ್ನು ನಾನು ಪಾವತಿಸುತ್ತೇನೆ” ಎಂದು ವಿಧ್ಯಾರ್ಥಿ ಮತ್ತು ಶಿಕ್ಷಕರು ಒಪ್ಪಂದ ಮಾಡಿಕೊಂಡರು.
ನಾವು ಪ್ರತಿದಿನ ಕನಿಷ್ಠ ಎಂಟು ಗ್ಲಾಸ್ ನೀರನ್ನು ಕುಡಿಯಬೇಕು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ನೀರು ಕುಡಿಯಲು ಸರಿಯಾದ ಸಮಯ ಯಾವುದು? ಶರೀರದಲ್ಲಿ ನೀರಿನ ಪರಿಣಾಮವನ್ನು ಗರಿಷ್ಠವಾಗಿಸಲು ಅದನ್ನು ಸೇವಿಸಲು ಅತ್ಯುತ್ತಮ ಸಮಯ ಯಾವುದು ಮತ್ತು ಹಾನಿಕಾರಕ ಪರಿಣಾಮವನ್ನು ತಪ್ಪಿಸಲು ನೀರನ್ನು ಯಾವ ಸಮಯ ದಲ್ಲಿ ಸೇವಿಸಬಾರದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಗರ್ಭಿಣಿ ಸ್ತ್ರೀಯರು ಶಾಂಪೂ, ಹೇರ್ ಕಂಡೀಶನರ್ ಮತ್ತು ಡಿಟರ್ಜೆಂಟ್ ಅತಿಯಾಗಿ ಬಳಸುವುದರಿಂದ ಹುಟ್ಟುವ ಮಕ್ಕಳಿಗೆ ಕೆಲ ನ್ಯೂನತೆಗಳು ಕಾಣಿಸಿಕೊಳ್ಳುತ್ತವೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ.
ಚಂದನವನದ ನಟ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ, ಬುಲ್ಡೋಜರ್ಸ್ ತಂಡದ ಖ್ಯಾತ ಆಟಗಾರ ಧ್ರುವ ಶರ್ಮಾ ನಿಧನರಾಗಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.