ಸುದ್ದಿ

ಕೃಷ್ಣ ಜನ್ಮಾಷ್ಠಮಿಯಂದು ನವಿಲು ಗರಿಯನ್ನು ನಿಮ್ಮ ಮನೆಯ ಈ ಭಾಗದಲ್ಲಿಡಿ..ಅದೃಷ್ಟವಂತರಾಗಿ….!

410

ಕೃಷ್ಣ ಜನ್ಮಾಷ್ಠಮಿಯಂದು ಕೃಷ್ಣನ ಆರಾಧನೆಗೆ ಭಕ್ತರು ಸಿದ್ಧರಾಗಿದ್ದಾರೆ. ಕೃಷ್ಣನಿಗೆ ಪ್ರಿಯವಾದ ವಸ್ತುಗಳಲ್ಲಿ ನವಿಲುಗರಿ ಕೂಡ ಒಂದು. ನವಿಲುಗರಿ ಅದೃಷ್ಟವನ್ನು ಬದಲಿಸುವ ಶಕ್ತಿ ಹೊಂದಿದೆ.ನವಿಲುಗರಿ ಮನೆ ಸೌಂದರ್ಯವನ್ನು ಮಾತ್ರವಲ್ಲ ಆರ್ಥಿಕ ವೃದ್ಧಿಗೆ ಕಾರಣವಾಗುತ್ತದೆ.

ಶ್ರೀಕೃಷ್ಣನ ಮುಕುಟದ ಮೇಲಿರುವ ನವಿಲುಗರಿ ಬಗ್ಗೆ ಶಾಸ್ತ್ರಗಳಲ್ಲಿ ಕೆಲವೊಂದು ಉಪಾಯಗಳನ್ನು ಹೇಳಲಾಗಿದೆ. ಜನ್ಮಾಷ್ಠಮಿಯಂದು ಆ ಉಪಾಯಗಳನ್ನು ಅನುಸರಿಸಿದ್ರೆ ಅದೃಷ್ಟ ನಿಮ್ಮದಾಗಲಿದೆ.

ಮನೆಯಲ್ಲಿ ಯಾವಾಗಲೂ ಜಗಳವಾಗ್ತಿದ್ದರೆ, ಮನಸ್ಸಿನಲ್ಲಿ ಕಿರಿಕಿರಿಯಿದ್ದರೆ ಇದಕ್ಕೆ ನವಿಲುಗರಿ ಪರಿಹಾರ ನೀಡಬಲ್ಲದು. ನವಿಲುಗರಿಯನ್ನು ದೇವರ ಮನೆಯಲ್ಲಿ ಕೊಳಲಿನ ಜೊತೆ ಇಡಬೇಕು. ಮನೆಯಲ್ಲಿ ಹರಡುವ ನಕಾರಾತ್ಮಕ ಶಕ್ತಿಯನ್ನು ಇದು ಕಡಿಮೆ ಮಾಡುತ್ತದೆ. ಮನೆ ಶಾಂತವಾಗಿರುವಂತೆ ನೋಡಿಕೊಳ್ಳುತ್ತದೆ.

ಜನ್ಮಾಷ್ಠಮಿ ಪೂಜೆ ನಂತ್ರ ಇಡೀ ಮನೆಗೆ ನವಿಲುಗರಿ ತೋರಿಸುವುದ್ರಿಂದ ಮನೆಯ ವಾತಾವರಣ ಬದಲಾಗುತ್ತದೆ. ಮನೆಯಲ್ಲಿ ಯಾವುದೇ ಘರ್ಷಣೆಯಾಗುವುದಿಲ್ಲ. ಸಾಧ್ಯವಾದ್ರೆ ಮನೆಯ ಪ್ರತಿಯೊಂದು ಕೋಣೆಯಲ್ಲೂ ಒಂದೊಂದು ನವಿಲುಗರಿಯನ್ನು ಇಡಿ. ದೇವತೆ ಲಕ್ಷ್ಮಿ ಪ್ರಸನ್ನಳಾಗಿ ಆಶೀರ್ವಾದ ಮಾಡ್ತಾಳೆಂಬ ನಂಬಿಕೆಯಿದೆ.

ಮನೆಯಲ್ಲಿ ಶಾಂತಿ, ನೆಮ್ಮದಿ ಇರಬೇಕೆಂದ್ರೆ ಪ್ರತಿ ದಿನ ಪೂಜೆ, ಧೂಪದ ನಂತ್ರ ಮನೆಗೆ ನವಿಲುಗರಿಯನ್ನು ತೋರಿಸಬೇಕು.ಜನ್ಮಾಷ್ಠಮಿ ದಿನ ಮನೆಗೆ ಬರುವವರ ಕಣ್ಣು ಮೊದಲು ಬೀಳುವ ಜಾಗದಲ್ಲಿ ನವಿಲುಗರಿ ಇಡಿ. ಇದು ಕೆಟ್ಟ ದೃಷ್ಟಿ ಬೀಳದಂತೆ ನೋಡಿಕೊಳ್ಳುತ್ತದೆ. ನಕಾರಾತ್ಮಕ ಶಕ್ತಿ ದೂರ ಮಾಡುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ