News

ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಶಾಕ್
ಉಪಯುಕ್ತ ಮಾಹಿತಿ

ಕಾಫಿ,ಟೀ ಆರೊಗ್ಯಕ್ಕೆ ಒಳ್ಳೆಯದು – ಒಳ್ಳೆಯದಲ್ಲ ಯಾವುದು ಸರಿ ನಿಮಗೆ ಗೊತ್ತಾ…!ತಿಳಿಯಲು ಈ ಲೇಖನ ಓದಿ…

452

ಕಾಫಿ, ಟೀಗೆ ಸಂಬಂದಿಸಿದಂತೆ ದಿನನಿತ್ಯ ಹಲವಾರು ಸುದ್ದಿಗಳು ಹರಿದಾಡುತ್ತಿರುತ್ತವೆ. ಕೆಲವರು ಕಾಫಿ,ಟೀ ಆರೊಗ್ಯಕ್ಕೆ ಒಳ್ಳೆಯದು ಎಂದರೆ ಇನ್ನು ಕೆಲವರು ಒಳ್ಳೆಯದಲ್ಲ ಎಂಬ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅಷ್ಟೇ ಅಲ್ಲ ಕಾಫಿ, ಟೀ ಮೇಲೆ ಆಗಾಗ ನಾನಾ ಬಗೆಯ ಸಂಶೋಧನೆಗಳೂ ನಡೆಯುತ್ತಿರುತ್ತವೆ.

ಮುಂಜಾನೆಯ ಒಂದು ಕಪ್ ಟೀ ಅಥವಾ ಕಾಫಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಹಾಗೂ ದೈಹಿಕವಾಗಿ ಚಟುವಟಿಕೆಯಿಂದಿರಲು ಈ ಪಾನೀಯಗಳು ಸಹಾಯಮಾಡುತ್ತವೆ ಎಂಬಿತ್ಯಾದಿ ಸಂಶೋಧನಾವರದಿಗಳು ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಪ್ರಕಟವಾಗುತ್ತಲೇ ಇರುತ್ತವೆ. ಆದರೆ ಈ ಬಾರಿ ಕಾಫಿ ಮೇಲೆ ನಡೆದ ಒಂದು ಸಂಶೋಧನೆ ವಿಶೇಷ ವೆನಿಸಿಕೊಳ್ಳುತ್ತದೆ.

ಏಕೆಂದರೆ ಅದು ಗ್ಲ್ಯಾಮರ‍್ಗೆ ಸಂಬಂಧಿಸಿದ್ದು….! ಹೌದು, ತೆಳ್ಳಗೆ, ಬೆಳ್ಳಗೆ ಗ್ಲ್ಯಾಮರಸ್ ಆಗಿ ಕಾಣಬೇಕು ಅಂತಾ ಯಾರಿಗೆ ತಾನೆ ಆಸೆ ಇರಲ್ಲಾ ಹೇಳಿ.. ಈ ಗ್ಲ್ಯಾಮರಸ್ ಲುಕ್ ಒಂದು ಕಪ್ ಕಾಫಿಯಿಂದ ಬಂದರೆ ಮೇಕಪ್ ಪ್ರಿಯರಿಗೆ ಇದಕ್ಕಿಂತ ಖುಷಿ ಸುದ್ದಿ ಇನ್ನೇನಿದೆ ಹೇಳಿ ಇತ್ತೀಚಿನ ಸಂಶೋಧನೆಗಳಲ್ಲಿ ಕಾಫಿಯಲ್ಲಿ ಸೌಂದರ್ಯವರ್ಧಕ ಅಂಶಗಳಿರುವುದು ಬೆಳಕಿಗೆ ಬಂದಿದೆ.

ಇತ್ತೀಚಿನ ಒಂದು ಸಂಶೋಧನೆಯ ಪ್ರಕಾರ ಕಾಫಿ ಸೇವಿಸುವುದರಿಂದ ಚರ್ಮಕ್ಕೂ ಸಾಕಷ್ಟು ಲಾಭಗಳು ಆಗುತ್ತವೆ ಎಂಬುದು ದೃಢಪಟ್ಟಿರುವುದು ಕಾಫಿ ಪ್ರಿಯರಲ್ಲಿ ಖುಷಿಯನ್ನುಉಂಟು ಮಾಡಿದೆ. ಕಾಫಿ ಈಗಾಗಲೇ ಅದ್ಭುತ ಪಾನಿಯ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದ್ದು, ಇದರ ಮುಂದುವರಿದ ಭಾಗವಾಗಿ ಚರ್ಮದ ಆರೋಗ್ಯ ಮತ್ತು ಸೌಂದರ್ಯ ವೃದ್ಧಿಸುತ್ತದೆ.

ಕಾಫಿ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂಬ ಅಂಶ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ ವಾತಾವರಣದ ಬದಲಾವಣೆ ಮತ್ತು ಪರಿಸರದ ಮಾಲಿನ್ಯದಿಂದ ಚರ್ಮದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯುವಂತಹ ಶಕ್ತಿ ಕಾಫಿಗಿದೆ ಎಂದು ಹೇಳಲಾಗಿದೆ. ಸೂರ್ಯನ ಕಿರಣಗಳಿಂದಾಗುವ ಚರ್ಮದ ತೊಂದರೆಗಳನ್ನು ತಡೆಗಟ್ಟುವ ಶಕ್ತಿ ಇದಕ್ಕಿದೆ. ಚರ್ಮವನ್ನು ಮೃದು ಮತ್ತು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.

ಕಾಫಿ ಸೇವನೆಯಿಂದ ರಕ್ತ ಚಲನೆ ಸರಾಗವಾಗಿ ಆಗುವುದರಿಂದ ಚರ್ಮ ಕೊಶಗಳು ಹೆಚ್ಚು ಕ್ರಿಯಾಶೀಲವಾಗುತ್ತದೆ. ಇದರ ಪರಿಣಾಮ ಚರ್ಮದ ರಕ್ಷಣೆಗೆ ಗ್ಲ್ಯಾಮರ‍್ಗೆ ಕಾರಣವಾಗುತ್ತದೆ. ಕಾಫಿ ಮೇಲೆ ನಡೆದ ಈ ಸಂಶೊಧನೆ ವರದಿ ಕಾಫಿ ಪ್ರಿಯಗರಿಗಷ್ಟೆ ಅಲ್ಲ ಈಗ ಗ್ಲ್ಯಾಮರ‍್ಪ್ರೀಯರಿಗೂ ಖುಷಿಯನ್ನು ಹೊತ್ತು ತಂದಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Home quarantine, Lockdown, Top News

    ಕ್ವಾರಂಟೀನ್ ನಲ್ಲಿದ್ದರೂ ಒಂದುಗೂಡಿ ನಮಾಜ್…!! ಮೂರ್ಖತನ

    ಮೂರ್ಖತನ ಹಾಗೂ ಉಗ್ಘಟತನದ ಪರಮಾವಧಿ ಎಂದರೆ ಇದೇ ಅಲ್ಲವೇ?
    ಸರ್ಕಾರ ಕೊರೋನಾ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಠಿಣ ನಿರ್ದೇಶನ ನೀಡಿದ್ದರೂ ಈ ಮೂರ್ಖರು ಏನು ಮಾಡಿದ್ದಾರೆ ಎಂಬುದನ್ನು ನೋಡಿ.

  • ಸರ್ಕಾರದ ಯೋಜನೆಗಳು

    ನಿಮ್ಮ ಮನೆಯಲ್ಲಿ ಕಾರಿದ್ದು ‘ಎಲ್ ಪಿ ಜಿ ಗ್ಯಾಸ್’ ಉಪಯೋಗಿಸುತ್ತಿದಿರಾ..?ಹಾಗಾದ್ರೆ ಈ ಲೇಖನ ಓದಿ ..

    ನಿಮ್ಮ ಬಳಿ ಕಾರಿದ್ದು ಎಲ್ ಪಿ ಜಿ ಸಬ್ಸಿಡಿಯನ್ನೂ ಪಡೆಯುತ್ತಿದ್ದರೆ ನಿಮಗೊಂದು ಶಾಕಿಂಗ್ ನ್ಯೂಸ್ ನೀಡಲು ಕೇಂದ್ರ ಸರ್ಕಾರ ಸಜ್ಜಾಗ್ತಿದೆ. ದೇಶದಲ್ಲಿ ಎಷ್ಟು ಮಂದಿ ಬಳಿ ಕಾರಿದೆಯೋ ಅವರಿಗೆ ಸಬ್ಸಿಡಿಯಲ್ಲಿ ಅಡುಗೆ ಅನಿಲ ನೀಡುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಲಿದೆ. ಈ ಬಗ್ಗೆ ಮೋದಿ ಸರ್ಕಾರ ಯೋಜನೆ ರೂಪಿಸುತ್ತಿದ್ದು, ಸದ್ಯದಲ್ಲಿಯೇ ಘೋಷಣೆಯಾಗುವ ಸಾಧ್ಯತೆಯಿದೆ.

  • ಸ್ಪೂರ್ತಿ

    ಮಸೀದಿಯಲ್ಲಿ ತಯಾರದ ಶಿವ ಭಂಡಾರಾದ ಅಡುಗೆ ……!

    ಇತ್ತೀಚಿಗೆ ಅಯೋಧ್ಯೆಯ ಸೀತಾರಾಮ ದೇವಸ್ಥಾನ, ಮುಸ್ಲಿಮರಿಗಾಗಿ ಇಫ್ತಾರ್ ಕೂಟ ಏರ್ಪಡಿಸಿ ಬಾಂಧವ್ಯದ ಬೆಸುಗೆಯನ್ನು ಎತ್ತಿ ಹಿಡಿದಿತ್ತು. ಇದೀಗ ಅದೇ ರೀತಿಯಲ್ಲಿ ಉತ್ತರ ಪ್ರದೇಶದ ಮೀರಥ್‌ನ ಜಾಮಾ ಮಸೀದಿಯಲ್ಲಿ ಶಿವ ಭಂಡಾರಾದ ಊಟದ ತಯಾರಿ ನಡೆಸಲು ಮುಂದಾಗುವ ಮೂಲಕ ಸಾಮರಸ್ಯವನ್ನು ಸಾರಿದೆ. ನಗರದಲ್ಲಿರುವ ಸೋಮನಾಥ ಶಿವ ದೇವಸ್ಥಾನದ 150ನೇ ಪ್ರತಿಷ್ಠಾಪನೆಯ ದಿನವನ್ನು ಆಚರಿಸುವ ಸಂದರ್ಭದಲ್ಲಿ ಶಿವ ಭಂಡಾರವನ್ನು ಏರ್ಪಡಿಸಿದ್ದು, ಈ ವೇಳೆ ಜಾಮಿಯಾ ಮಸೀದಿಯ ಮುಖ್ಯ ಖಾಝಿ ಜೇನ್-ಉಸ್-ಸಜಿದಿನ್ ಆಹಾರ ವ್ಯವಸ್ಥೆಯನ್ನು ನೋಡಿಕೊಳ್ಳಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ತರಕಾರಿ…

  • ಸುದ್ದಿ

    750 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿಗೆ ಶಾಶ್ವತ ಕುಡಿಯವ ನೀರು ಯೋಜನೆ…!

    ಕಲಬುರಗಿ ಮಹಾನಗರಕ್ಕೆ ಶಾಶ್ವತ ಕುಡಿಯವ ನೀರು ಕಲ್ಪಿಸುವ ಸಂಬಂಧ 750 ಕೋಟಿ ರೂ.ಗಳ ವೆಚ್ಚದ ಯೋಜನೆಗೆ ಮುಂದಿನ ಮೂರು ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಘೋಷಿಸಿದ್ದಾರೆ. ಕಲಬುರಗಿ ಪಾಲಿಕೆಯ ಸ್ಮಾರಕ ಭವನ (ಟೌನ್‍ಹಾಲ್) ದಲ್ಲಿ ಮಂಗಳವಾರ ಜನಸ್ಪಂದನ ಕಾರ್ಯಕ್ರಮದ ಬಳಿಕ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಮುಂದಿನ 5 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದ್ದು, ಭೀಮಾ ನದಿ, ಬೆಣ್ಣೆತೊರಾವಲ್ಲದೆ, ನಗರದ ಕಲ್ಯಾಣಿಗಳು, ಬಾವಿಗಳು ಮುಂತಾದ ನೀರಿನ ಮೂಲಗಳನ್ನು ಪತ್ತೆ ಹಚ್ಚಿ ಯೋಜನೆ…

  • ಸುದ್ದಿ

    ಭೂಕುಸಿತ ನೋಡಲು ಬಂದವರು ಸಮಾಧಿ..!50 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ

    ದೇಶದ 7 ರಾಜ್ಯಗಳಲ್ಲಿ ಈಗ ಜಲಕಂಟಕ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ಒಡಿಶಾ, ರಾಜಸ್ಥಾನ, ಗುಜರಾತ್‌ನಲ್ಲಿ ಪ್ರವಾಹ ತಲೆದೋರಿದೆ. ಪ್ರವಾಹ ಹಾಗೂ ಭೂ ಕುಸಿತಕ್ಕೆ ಊರಿಗೆ ಊರುಗಳೇ ನಾಶವಾಗಿವೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತ ಶಿಬಿರ ಸೇರಿರುವ ಸಂತ್ರಸ್ತರ ಗೋಳು ಹೇಳತೀರದು. ಕೇರಳದಲ್ಲಿ ಭಾರೀ ಭೂಕುಸಿತ : ಈ ಬಾರಿಯೂ ಭಾರೀ ಮಳೆ ಮತ್ತು ಭೂಕುಸಿತಕ್ಕೆ ತುತ್ತಾಗಿರುವ ಕೇರಳದಲ್ಲಿ ಇಲ್ಲಿವರೆಗೆ 30 ಮಂದಿ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇಂದು ಒಂದೇ ದಿನ…

  • ಸುದ್ದಿ

    ಅಮ್ಮ ಸಾವನ್ನಪ್ಪಿರುವ ವಿಷಯ ತಿಳಿಯದ ಪುಟ್ಟ ಕಂದಮ್ಮಆಟವಾಡುತ್ತಾ, ಅಮ್ಮ ಎಂದು ಕರೆದು ಎಬ್ಬಿಸುತ್ತಿರುವ ವಿಡಿಯೋ ವೈರಲ್.

    ಬಿಹಾರದ ಮುಜಾಫರ್ ನಗರದ ರೈಲ್ವೆ ನಿಲ್ದಾಣವೊಂದರಲ್ಲಿ ಶ್ರಮಿಕ್ ರೈಲಿನಲ್ಲಿ ಬಂದಿಳಿದ ಮಹಿಳೆಯೊಬ್ಬಳು ಹಸಿವು, ಸುಸ್ತಿನಿಂದ ರೈಲ್ವೆ ನಿಲ್ದಾಣದಲ್ಲೇ ಸಾವನ್ನಪ್ಪಿದ್ದಳು. ಆ ಮಹಿಳೆ ಸಾವನ್ನಪ್ಪಿರುವ ವಿಷಯ ಗೊತ್ತಾಗುತ್ತಿದ್ದಂತೆ ಜೊತೆಗಿದ್ದ ಸಂಬಂಧಿಕರು ಆಕೆಯ ಮೃತದೇಹವನ್ನು ಮುಜಾಫರ್ ನಗರದ ರೈಲ್ವೆ ನಿಲ್ದಾಣದಲ್ಲೇ ಬಟ್ಟೆಯಿಂದ ಸುತ್ತಿ ಇರಿಸಿದ್ದರು. ಆದರೆ, ಆ ಬಟ್ಟೆಯನ್ನು ಎಳೆದು ತೆಗೆದ ಆಕೆಯ ಮಗು ಅಮ್ಮನನ್ನು ಎಬ್ಬಿಸಲು ಪರದಾಡುತ್ತಿತ್ತು. 23 ವರ್ಷದ ಬಿಹಾರ ಮೂಲದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಗುಜರಾತ್‍ನ ಅಲಹಾಬಾದ್‍ನಲ್ಲಿ ವಾಸವಾಗಿದ್ದಳು. ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಆಕೆಗೆ ಲಾಕ್​ಡೌನ್​…