ದೇವರು-ಧರ್ಮ

ಕಲಿಯುಗ ಅಂತ್ಯವಾಗುತ್ತಿದೆ ಎಂಬುದು ನಮಗೆ ತಿಳಿಯುವುದಾದರೂ ಹೇಗೆ..?ವೇದಗಳು ಹೇಳಿರುವ ಈ ಸಂಕೇತಗಳು ನಡೆಯುತ್ತಿವೆ ಅಲ್ಲವೇ?ತಿಳಿಯಲು ಮುಂದೆ ಓದಿ…

4299

ನಮ್ಮ ಹಿಂದೂ ಧರ್ಮದಲ್ಲಿ ಪುರಾಣಗಳ ಪ್ರಕಾರ ನಾಲ್ಕು ಯುಗಗಳಿದ್ದು, ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಗಳೆಂದು ಕರೆಯುತ್ತಾರೆ.ಪುರಾಣಗಳ ಪ್ರಕಾರ ನಾಲ್ಕು ಯುಗಗಳಲ್ಲಿ ಕಲಿಯುಗವೇ ಅತ್ಯಂತ ಕರಾಳವಾಗಿದ್ದು ಕತ್ತಲಿನಿಂದ ತುಂಬಿರುತ್ತದೆ. ಸಮಯ ಕಳೆದಂತೆ ಕಲಿಯುಗದಲ್ಲಿಯೂ ಹಲವಾರು ಬದಲಾವಣೆಗಳಾಗುತ್ತಾ ಬರುತ್ತದೆ. ಆಧ್ಯಾತ್ಮಿಕತೆಯತ್ತ ಜನರ ಒಲವು ಕಡಿಮೆಯಾಗುತ್ತಾ ಹೋಗುತ್ತದೆ.

ಕಲಿಯುಗದ ಅಂತ್ಯದಲ್ಲಿ ಜನರು ದೇವರನ್ನು  ಮರೆಯುತ್ತಾರೆ ಹಾಗೂ ಕಲಿಯುಗದಲ್ಲಿ ಮನುಷ್ಯರು ಉನ್ನತ ಸ್ಥಾನಕ್ಕೆ ಸೇರಿಕೊಳ್ಳಲು ವಿಧವಿಧವಾಗಿ ಪ್ರಯತ್ನಿಸುತ್ತಾರೆಂದು, ಅಗತ್ಯ ಬಿದ್ದರೆ ಅಡ್ಡದಾರಿ ಸಹ ತುಳಿಯುತ್ತಾರೆ, ವಯಸ್ಸು, ಎತ್ತರ, ಬಲ, ಜ್ಞಾನ, ಆಕರ್ಷಣೆಯಂತಹವು ಬರುಬರುತ್ತಾ ಕಲಿಯುಗದಲ್ಲಿ ಕಡಿಮೆಯಾಗುತ್ತವೆ ಎಂದು ಪುರಾಣಗಳು ಹೇಳುತ್ತಿವೆ. ಅವೆಲ್ಲಾ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ.


 

ಪುರಾಣಗಳ ಪ್ರಕಾರ ವೇದಗಳು ಕಲಿಯುಗದ ಬಗ್ಗೆ ಹೇಳಿರುವ ಸತ್ಯಗಳು ಏನು ಗೊತ್ತಾ..?

  • ಕಲಿಯುಗದಲ್ಲಿ ನಿಜ ಅನ್ನುವುದು ಸತ್ತು ಹೋಗುತ್ತದೆ. ಮನುಷ್ಯರು ನಿಜ ಹೇಳುವುದನ್ನು ಬಿಡುತ್ತಾರೆ. ಸುಳ್ಳಿನ ಮೇಲೆ ಜಗತ್ತು ನಡೆಯುತ್ತದೆ. ನಿಜ ಹೇಳುವ ಯಾವ ಮನುಷ್ಯ ಸಹ ಕಲಿಯುಗದಲ್ಲಿ ಇರಲಾಗುವುದಿಲ್ಲ. ಇರುವುದಿಲ್ಲ.

  • ಮನುಷ್ಯರಲ್ಲಿ ಒಳ್ಳೆಯತನ ಅನ್ನುವುದು ಇರುವುದಿಲ್ಲ. ಅದನ್ನು ನೋಡಬೇಕೆಂದರೂ ಯಾರಲ್ಲೂ ಕಾಣಸಿಗದು. ಎಲ್ಲೋ ಕೋಟಿಗೊಬ್ಬರು ಒಳ್ಳೆಯ ಮನುಷತ್ವ ಇರುವವರು ಕಾಣುತ್ತಾರೆ.

  • ಒಬ್ಬ ವ್ಯಕ್ತಿಗೆ ಇರುವ ಗುಣಗಳಿಗಿಂತ ಆತನಿಗಿರುವ ಆಸ್ತಿ ಇತರರಿಗೆ ಹೆಚ್ಚಾಗಿ ಕಾಣುತ್ತದೆ. ಹಣ ಅಂತಸ್ತು ನೋಡಿ ಮನುಷ್ಯನ ಗುಣ ಗಣಗಳನ್ನು ನಿರ್ಧರಿಸುತ್ತಾರೆ.

 

  • ಗಂಡ ಹೆಂಡತಿ ನಡುವೆ ನಿಜವಾದ ಪ್ರೀತಿ ಮಾಯವಾಗುತ್ತದೆ. ಅವರ ನಡುವೆ ಇರುವುದು ಕೇವಲ ಆಕರ್ಷಣೆ ಮಾತ್ರ. ಇದು ಅವರ ನಡುವಿನ ಸಂಬಂಧಕ್ಕೆ ಹೊಡೆತ ನೀಡುತ್ತದೆ.

  • ತಂದೆತಾಯಿಯನ್ನು ಮೋಸ ಮಾಡುವ ಮಕ್ಕಳು, ಮಕ್ಕಳನ್ನು ಮೋಸ ಮಾಡುವ ತಂದೆತಾಯಿ ಇರುತ್ತಾರೆ.

  • ಮತ, ಕುಲ, ವರ್ಗಗಳ ಹೆಸರಲ್ಲಿ ಮೋಸಗಳು ನಡೆಯುತ್ತವೆ. ಅವುಗಳನ್ನು ಅಡ್ಡವಾಗಿಟ್ಟುಕೊಂಡು ಕೆಲವರು ಕೆಟ್ಟ ಕೆಲಸಗಳಿಗೆ ಕೈಹಾಕುತ್ತಾರೆ.

ಹಾಗಾದ್ರೆ ಕಲಿಯುಗ ಅಂತ್ಯವಾಗುತ್ತಿದೆ ಎಂಬುದು ನಮಗೆ ತಿಳಿಯುವುದಾದರೂ ಹೇಗೆ..? ವೇದಗಳ ಪ್ರಕಾರ ಕಲಿಯುಗ ಅಂತ್ಯವಾಗುತ್ತಿದೆ ಎನ್ನುವುದಕ್ಕೆ ಕೆಲವು ಸಂಕೇತಗಳನ್ನು ಹೇಳಲಾಗಿದೆ…

1. ಕಲಿಯುಗ ಅಂತ್ಯವಾಗುತ್ತಿದೆ ಎಂದಾಗ ಹಸುಗಳು ಇರುವುದಿಲ್ಲ. ಸತ್ತು ಹೋಗುತ್ತವೆ.

 

2.ಯಾರಿಗೂ ಕರುಣೆ ಇರುವುದಿಲ್ಲ. ಒಬ್ಬರನ್ನೊಬ್ಬರು ಸಾಯಿಸಿಕೊಳ್ಳುವವರೆಗೂ ಬರುತ್ತದೆ.

3.ಮಹಿಳೆಯರು ತುಂಬಾ ಕ್ರೂರವಾಗಿ ನಡೆದುಕೊಳ್ಳುತ್ತಾರೆ. ಎಲ್ಲಿ ನೋಡಿದರೂ ವ್ಯಭಿಚಾರ, ಹತ್ಯೆಗಳು ನಡೆಯುತ್ತವೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬಜೆಟ್ ನಲ್ಲಿ ರೈತರಿಗೆ ಬಂಪರ್ ಆಫರ್ ಘೋಷಿಸಿದ ಕುಮಾರಣ್ಣ..ಪ್ರತಿ ಹೆಕ್ಟೇರಿಗೆ ಸಿಗಲಿದೆ 10000ರೂ ಹಣ..

    ಬಿಜೆಪಿಯ ಕಮಲದ ಆಪರೇಶನ್ ಭೀತಿಯ ನಡುವೆಯೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಜೆಟ್ ಮಂಡನೆ ಮಾಡಿದ್ದಾರೆ. ಈತ್ತಿಚೆಗಷ್ಟೇ ತಮ್ಮ ಕೊನೆಯ ಬಜೆಟ್ ಮಂಡಿಸಿದ್ದ ಕೇಂದ್ರಸರ್ಕಾರ ಸಣ್ಣ ರೈತರಿಗೆ ಮೂರೂ ಕಂತಿನಂತೆ ವರ್ಷಕ್ಕೆ ಆರು ಸಾವಿರ ಕೊಡುವುದಾಗಿ ಬಜೆಟ್ ನಲ್ಲಿ ಹೇಳಿತ್ತು. ಈಗ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದು ಮಂಡಿಸಿರುವ ಬಜೆಟ್ ನಲ್ಲಿ ಸಿರಿ ಧಾನ್ಯ ಬೆಳೆಯುವ ರೈತರಿಗೆ ಉತ್ತೇಜನ ನೀಡಲು ‘ಸಿರಿ ಯೋಜನೆ’ಯನ್ನು ಘೋಷಿಸಿದ್ದಾರೆ. ಈ ಯೋಜನೆಯನ್ವಯ ಸಿರಿಧಾನ್ಯ ಬೆಳೆಯುವ ರೈತರಿಗೆ, ಪ್ರತಿ ಹೆಕ್ಟೇರಿಗೆ ಹತ್ತು ಸಾವಿರ ರೂಪಾಯಿಗಳ ಪ್ರೋತ್ಸಾಹ ಧನ…

  • ಸುದ್ದಿ

    ಕಾಫಿ ಡೇ ಮಾಲೀಕ,ಮಾಜಿ ಸಿ ಎಂ ಎಸ್‌.ಎಂ.ಕೃಷ್ಣ ಅಳಿಯ, ಸಿದ್ಧಾರ್ಥ ನೇತ್ರಾವತಿ ನದಿ ಬಳಿ ಕಾಣೆ……!

    ಮಾಜಿ ವಿದೇಶಾಂಗ ಸಚಿವ, ಮಾಜಿ ರಾಜ್ಯಪಾಲ, ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಕರ್ನಾಟಕದ ಹಿರಿಯ ರಾಜಕಾರಣಿ ಎಸ್‌.ಎಂ.ಕೃಷ್ಣ ಅವರ ಅಳಿಯ ವಿ.ಜಿ.ಸಿದ್ಧಾರ್ಥ ಅವರು ಸೋಮವಾರ ದಿಢೀರ್‌ ನಾಪತ್ತೆಯಾಗಿದ್ದು, ಕುಟುಂಬ ಹಾಗೂ ಆಪ್ತ ವಲಯದಲ್ಲಿ ಆತಂಕ ಮನೆ ಮಾಡಿದೆ.ಕೆಫೆ ಕಾಫಿ ಡೇ ಸೇರಿದಂತೆ ಹಲವು ಉದ್ಯಮಗಳನ್ನು ಮುನ್ನಡೆಸುತ್ತಿದ್ದ ಸಿದ್ಧಾರ್ಥ್ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಅಲ್ಲಿ ಅವರು ಕಾಣೆಯಾಗಿದ್ದಾರೆ ಎಂಬ ಮಾಹಿತಿ ಇದ್ದು, ಅವರಿಗಾಗಿ ಸ್ಥಳೀಯ ಪೊಲೀಸರು ಭಾರೀ ಹುಡುಕಾಟ ನಡೆಸಿದ್ದಾರೆ. ಆಗಿದ್ದೇನು?: ಸಿದ್ಧಾರ್ಥ ಅವರು ಸೋಮವಾರ ವ್ಯವಹಾರ ನಿಮಿತ್ತ ತಮ್ಮ ಇನ್ನೋವಾ ವಾಹನದಲ್ಲಿ ಬೆಂಗಳೂರಿನಿಂದ…

  • ಸುದ್ದಿ

    ಬೆಳಕಿನ ಹಬ್ಬ ದೀಪಾವಳಿಯ ಸೊಬಗು ಹೆಚ್ಚಿಸುವ ದೀಪಗಳ ಇಂದಿರುವ ಮಹತ್ವಗಳೇನು ಗೊತ್ತಾ..?

    ದೀಪಾವಳಿ, ದೀಪಗಳ ಹಬ್ಬ; ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ದೀಪಗಳು ಮನೆಯನ್ನು ಬೆಳಗೋದರ ಜೊತೆಗೆ ಮನಸ್ಸಿಗೆ ಮುದವನ್ನಾ ನೀಡುತ್ತವೆ. ಮನೆ ಮನಗಳನ್ನು ಬೆಳಗೋ ದೀಪಾವಳಿಗೆ ಇನ್ನೇನು ಒಂದು ವಾರವಷ್ಟೇ ಬಾಕಿ ಇದ್ದು ಸಿಲಿಕಾನ್ ಸಿಟಿಯ ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಒಂದ್ಕಡೆ ಟೆರಾಕೋಟಾ ಇಂದ ತಯಾರಾಗಿರೋ ಪುಟ್ಟ ಪುಟ್ಟ ದೀಪಗಳು. ಅವುಗಳ ಅಂದವನ್ನು ಮತ್ತಷ್ಟು ಹೆಚ್ಚಸ್ತಿರೋ ಬಣ್ಣ ಬಣ್ಣದ ದೀಪಗಳು….

  • ಸುದ್ದಿ

    ಪ್ರಾಂಶುಪಾಲರ ಮೂರು ಷರತ್ತು ಒಪ್ಪಿ ಎಂಜಿನಿಯರಿಂಗ್ ಸೇರಿದ್ದ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ

    ಎಂಜಿನಿಯರಿಂಗ್ ಪದವಿ ಕೋರ್ಸ್ ಸೇರುವ ಸಂದರ್ಭದಲ್ಲಿ ಪ್ರಾಂಶುಪಾಲರು ನನಗೆ ಮೂರು ಷರತ್ತುಗಳನ್ನು ವಿಧಿಸಿದ್ದರು ಎಂದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇದೇ ವೇಳೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು ವಿಧಿಸುವ ಷರತ್ತುಗಳ ಕುರಿತು ವಿವರಿಸಿದ್ದಾರೆ. ಸುಧಾಮೂರ್ತಿಯವರು ಹಾವೇರಿ ಜಿಲ್ಲೆಯ ಶಿಗ್ಗಾಂವ್ ಮೂಲದವರಾಗಿದ್ದು, ತಮ್ಮ ಎಂಜಿನಿಯರಿಂಗ್ ಪದವಿಯನ್ನು ಹಾವೇರಿಯ ಬಿವಿಬಿ (ಈಗಿನ ಕೆಎಲ್‍ಇ) ಕಾಲೇಜಿನಲ್ಲಿ ಓದಿದ್ದಾರೆ. ಈ ಕುರಿತು ಹಿಂದಿಯ ಖಾಸಗಿ ವಾಹಿನಿಯಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮದಲ್ಲಿ…

  • Village

    ನಿಮ್ಮ ಹಳ್ಳಿಯಲ್ಲಿ ಕರೊನಾ ಜಾಸ್ತಿ ಆಗಲು ಈ ಕಾರಣ ಇರಬಹುದು.

    ಕೊರೊನಾ ಈ ದೇಶಕ್ಕೆ ಕಾಲಿಟ್ಟಾಗ ಹಳ್ಳಿಗಳು ಕೊರೊನಾ ವೈರಸ್ ನಿಂದ ಬಹುದೂರದಲ್ಲಿದ್ದವು. ಪೇಟೆಗಳಲ್ಲಿ ಮಾತ್ರ ಜನ ಕೊರೊನಾಕ್ಕೆ ಬಲಿ ಆಗ್ತಾ ಇದ್ರು. ಆದ್ರೆ ಕೊರೊನಾ ಎರಡನೇ ಅಲೆ ಹಳ್ಳಿಗರನ್ನು ತೀವ್ರವಾಗಿ ಬಾಧಿಸುತ್ತಿದೆ. ಇದಕ್ಕೆ ಹಳ್ಳಿಗರ ಸ್ವಯಂಕೃತ ಅಪರಾಧವೇ ಕಾರಣವಾಗಿದೆ.

  • ಸಾಧನೆ

    ಸಿವಿಲ್ ಕೋರ್ಟ್‌ನ ನ್ಯಾಯಾಧೀಶೆಯಾಗಿ ಕೋಲಾರ ಗಾಯಿತ್ರಿ ಆಯ್ಕೆ

    ಕರ್ನಾಟಕ ಹೈ ಕೋರ್ಟ್‌ನ ಸಿವಿಲ್ ನ್ಯಾಯಾಧೀಶೆಯಾಗಿ ಬಂಗಾರಪೇಟೆಯ ಎನ್.ಗಾಯಿತ್ರಿ ರವರು ಆಯ್ಕೆಯಾಗಿ ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 2021ರಲ್ಲಿ ಕಾನೂನು ಪದವಿ ಪಡೆದುಕೊಂಡಿರುವ ಗಾಯತ್ರಿರವರು ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸತತ ಮತ್ತು ಸರಿಯಾದ ಪ್ರಯತ್ನದ ಮೂಲಕ 25ನೇ ವಯಸ್ಸಿಗೆ ಕರ್ನಾಟಕ ಸಿವಿಲ್ ಕೋರ್ಟ್‌ನ  ನ್ಯಾಯಾಧೀಶರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯವು ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು.  ಇದೀಗ ಫಲಿತಾಂಶ ಪ್ರಕಟಗೊಂಡಿದ್ದು ಗಾಯತ್ರಿ ಅವರು ಆಯ್ಕೆಯಾಗಿದ್ದಾರೆ….