ಆರೋಗ್ಯ

ಕರ್ಜೂರದಲ್ಲಿರುವ ಆರೋಗ್ಯಕಾರಿ ಗುಣಗಳ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

639

ರುಚಿ ರುಚಿ ಕರ್ಜೂರ ಆರೋಗ್ಯಕ್ಕೂ ಒಳ್ಳೆಯದು. ಪ್ರತಿದಿನ ಕರ್ಜೂರ ತಿನ್ನುವುದರಿಂದ ಸಾಕಷ್ಟು ಲಾಭಗಳಿವೆ. ಮಿನರಲ್, ಫೈಬರ್, ವಿಟಮಿನ್ ಇದ್ರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕೇವಲ ಮೂರು ಕರ್ಜೂರ ತಿನ್ನುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶ ನಮ್ಮ ದೇಹ ಸೇರುತ್ತದೆ.

ಕರ್ಜೂರದ ರುಚಿ ಕಂಡವರು ತಿನ್ನೋದನ್ನು ಬಿಡೋದಿಲ್ಲ. ಈ ಕರ್ಜೂರದಲ್ಲಿ ಕಬ್ಬಿಣ, ಖನಿಜಾಂಶ, ಕ್ಯಾಲ್ಸಿಯಂ, ಅಮೈನೊ ಆ್ಯಸಿಡ್, ರಂಜಕ ಹಾಗೂ ವಿಟಮಿನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಮಧುಮೇಹಿಗಳಿಗೆ ಇದು ಒಳ್ಳೆಯದು.

ದೇಹದಲ್ಲಿ ರಕ್ತ ಕಡಿಮೆಯಿರುವವರು ಪ್ರತಿದಿನ ಕರ್ಜೂರವನ್ನು ತಿನ್ನುವುದು ಬಹಳ ಒಳ್ಳೆಯದು. ಇದ್ರಲ್ಲಿರುವ ಕಬ್ಬಿಣಾಂಶ ರಕ್ತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.ಕರ್ಜೂರದಲ್ಲಿರುವ ವಿಟಮಿನ್ ಬಿ ಕೂದಲಿಗೆ ಒಳ್ಳೆಯದು. ನಿಯಮಿತವಾಗಿ ಕರ್ಜೂರ ಸೇವನೆ ಮಾಡುವುದ್ರಿಂದ ಕೂದಲುದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಫ್ರಕ್ಟೋಸ್, ಸುಕ್ರೋಸ್ ಮತ್ತು ಗ್ಲೂಕೋಸ್ ಸಾಕಷ್ಟಿರುತ್ತದೆ. ಹಾಗಾಗಿ ಕರ್ಜೂರ ತಿಂದ ತಕ್ಷಣ ಶಕ್ತಿ ಉತ್ಪತ್ತಿಯಾಗುತ್ತದೆ. ಎರಡರಿಂದ ನಾಲ್ಕು ಕರ್ಜೂರ ಸೇವನೆ ಮಾಡಿದ್ರೆ ದೇಹಕ್ಕೆ ಶಕ್ತಿ ಸಿಗುತ್ತದೆ.

ಕಡಿಮೆ ತೂಕವುಳ್ಳವರು ಅವಶ್ಯವಾಗಿ ಕರ್ಜೂರ ತಿನ್ನಬೇಕು. ಇದ್ರಲ್ಲಿರುವ ವಿಟಮಿನ್, ಸಕ್ಕರೆ ಅಂಶ, ಜೀವಸತ್ವಗಳು ತೂಕ ಏರಲು ಸಹಾಯ ಮಾಡುತ್ತವೆ.ಕರ್ಜೂರ ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ತಾಮ್ರವನ್ನು ಒಳಗೊಂಡಿರುವುದ್ರಿಂದ ಮೂಳೆಗಳು ಬಲ ಪಡೆಯುತ್ತವೆ.

ಮಲಬದ್ಧತೆ ಸಮಸ್ಯೆಯುಳ್ಳವರು ಅವಶ್ಯವಾಗಿ ಕರ್ಜೂರ ಸೇವನೆ ಮಾಡಬೇಕು. ರಾತ್ರಿ ನಾಲ್ಕು ಕರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ತಕ್ಷಣ ಇದನ್ನು ಸೇವನೆ ಮಾಡುತ್ತ ಬಂದರೆ ಕೆಲವೇ ದಿನಗಳಲ್ಲಿ ಫಲಿತಾಂಶ ನೋಡಬಹುದಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ