ದೇಶ-ವಿದೇಶ

ಕಡೆಗೂ ಬಂತು ಆಪಲ್ ಐಫೋನ್ ನಲ್ಲಿ ಕನ್ನಡ ಕೀಬೋರ್ಡ್ !ಇದು ಕನ್ನಡಿಗರಿಗೆ ಸಂದ ಜಯ….ಮುಂದೆ ಓದಿ…..

259

ಟೆಕ್ ದೈತ್ಯ ಕಂಪನಿ ಆಪಲ್, ಅದರ ಕೀಬೋರ್ಡ್ ಆಪರೇಟಿಂಗ್ ಸಿಸ್ಟಮ್, ಐಒಎಸ್ 2ರ  ಇತ್ತೀಚಿನ ಆವೃತ್ತಿಯಲ್ಲಿ ಕನ್ನಡ ಕೀಬೋರ್ಡ್ ಅನ್ನು ಬಿಡುಗಡೆ ಮಾಡಿದೆ.

ಇದು ತಮ್ಮ ಆಪಲ್ ಮೊಬೈಲ್ ಸಾಧನಗಳಲ್ಲಿ ಕನ್ನಡವನ್ನು ಬರೆಯಲು, ಬಳಕೆದಾರರು 5 ವರುಷಗಳಿಂದ ಹೋರಾಟ ಮತ್ತು ಪ್ರಚಾರ ಮಾಡುತ್ತಿದ್ದ ಕನ್ನಡಿಗರಿಗೆ ಸಂದ ಜಯವಾಗಿದೆ.

ಈ ಅಭಿಯಾನದಲ್ಲಿ ನಮ್ಮ ಹಳ್ಳಿ ಹುಡುಗ ಚೇತನ್ ರಾಮ್ ರವರು ಕೂಡಾ ಭಾಗಿಯಾಗಿದ್ದು ಇದಕ್ಕಾಗಿ ಅವರು ಕೂಡಾ ಮೇಲ್ಗಳನ್ನು ಮಾಡಿದ್ದಾರೆ. ಹಾಗಾಗಿ ಇದು ಹಳ್ಳಿ ಹುಡುಗರಿಗೆ ಸಂದ ಜಯವಾಗಿದೆ.

ಇತ್ತೀಚಿನ ಬಿಡುಗಡೆಯಾದ ಐಫೋನ್ ಮತ್ತು ಐಪ್ಯಾಡ್ ಬಳುಸುತ್ತಿರುವ ಬಳಕೆದಾರರು ಈಗ ಕನ್ನಡದಲ್ಲಿ ಟಿಪ್ಪಣಿಗಳನ್ನು ಬರೆಯಬಹುದು.

ಹಾಗೂ ಕನ್ನಡದಲ್ಲಿ ಪಠ್ಯ ಮತ್ತು ಇಮೇಲ್ ಸಂದೇಶಗಳನ್ನು ಕಳುಹಿಸಬಹುದು.

ಇತ್ತೀಚಿಗೆ ಸೇರ್ಪಡೆಯಾದ ಭಾರತೀಯ ಭಾಷೆಯಲ್ಲಿ ಮಲಯಾಳಂ ಕೂಡಾ ಒಂದಾಗಿದೆ. ಕಂಪನಿಯು ಈ ಕೀ ಬೋರ್ಡ್ಗಳನ್ನು ಸೇರಿಸುವ ನಿರ್ಧಾರವು ಭಾರತೀಯ ಭಾಷೆಗಳಿಗೆ ನೀಡುವ ಬೆಂಬಲವಾಗಿದೆ. ನಾವು ಪ್ರಪಂಚದಾದ್ಯಂತ ಪ್ರತಿ ಅಪ್ಡೇಟ್ನೊಂದಿಗೆ ಅನೇಕ ಭಾಷೆಗಳನ್ನು ಸಾಧ್ಯವಾದಷ್ಟು ಸೇರಿಸಲು ಪ್ರಯತ್ನಿಸುತ್ತೇವೆ, ಎಂದು “ಆಪಲ್ನ ಇಂಡಿಯನ್ ಡಿವಿಜನ್ನ ಅಧಿಕೃತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕಂಪನಿಯು ಅಮೆರಿಕದ ಕ್ಯುಪರ್ಟಿನೊದಲ್ಲಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ