ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಂಡಕ್ಟರಿಲ್ಲದ ಕೆಎಸ್ಆರ್ಟಿಸಿ bus
ವಿರಾಜಪೇಟೆಯಿಂದ ಮೈಸೂರಿಗೆ ಪ್ರಯಾಣ ಹೊರಟೆ. ಸುಖಕರ ಹಾಗು ಸುರಕ್ಷಿತ ಪ್ರಯಾಣಕ್ಕೆ KSRTC ಬೆಸ್ಟ್. ಅಂದ ಮಾತ್ರಕ್ಕೆ ಬಸ್ ಹತ್ತಿ ಕಿಟಕಿಯ ಆಸನವನ್ನೇ ಆರಿಸಿ ಕುಳಿತುಕೊಂಡೆ. ನಾಲ್ಕೈದು ನಿಮಿಷದ ನಿಲುಗಡೆಯ ನಂತರ ಚಾಲಕ ಬಸ್ ಚಲಾಯಿಸಿದ. ಸಾಮಾನ್ಯವಾಗಿ ಬಸ್ ತಲುಪಿಸುವುದು ಚಾಲಕನಾದರೂ ಪ್ರಯಾಣಿಕರನ್ನು ನಿಭಾಯಿಸುವುದು ನಿರ್ವಾಹಕರು ತಾನೆ? ಅದೆ ನಮ್ಮ ಕಂಡಕ್ಟರ್.
ಬಸ್ 500 ಮೀಟರ್ ಮುಂದೆ ತಲುಪಿತು. ಪ್ರಯಾಣಿಕರೆಲ್ಲರೂ ಮೊಬೈಲ್, ಮಾತುಕತೆಗಳಲ್ಲಿ ನಿರತರಾಗಿದ್ದಾರೆ. ಆಸನಗಳು ಭರ್ತಿಯಾದ ಬಸ್ಸಿನಲ್ಲಿ ಕಂಡಕ್ಟರ್ ಇಲ್ಲವೆಂದು ಯಾರಿಗೂ ಭಾಸವಾಗಲಿಲ್ಲ.
ಸಾರ್ ಕಂಡಕ್ಟರ್ ಇಲ್ಲ ಎಂದು ಯುವಕನೊಬ್ಬ ಕೇಕೆ ಹಾಕಿದ. ಕೇಕೆ ಚಾಲಕನ ಕಿವಿಗೆ ಕೇಳದಿದ್ದರೂ ಕೇಳಿದ ಪ್ರಯಾಣಿಕರೆಲ್ಲರೂ ದಬ್ಬಿಬ್ಬಾಗಿ ಪರಸ್ಪರ ಮುಖ ನೋಡಿ ನಗು ಶುರುಮಾಡಿದರು. ಚಾಲಕನಿಗೆ ವಿಷಯದ ಪರಿವೇ ಇಲ್ಲ. ಪಟ್ಟಣದಲ್ಲಿ ವಾಹನಗಳ ದಟ್ಟಣೆ ಇರುವುದರಿಂದ ನಿಧಾನವಾಗಿ ಚಲಾಯುಸುತ್ತಿದ್ದಾನೆ. ಎಲ್ಲಿಯಾದರೂ ಸ್ಟೋಪ್ ಮಾಡಬೇಕಾದರೆ ಕಂಡಕ್ಟರ್ ನ ಪೀಪಿಯ ಪೀ….. ಶಬ್ಧ ಕೇಳಬೇಕಲ್ಲವೇ..!?
ಹಿಂದಿನಿಂದ ಬಂದ ಯುವಕನೊಬ್ಬ ಚಾಲಕನ ಬಳಿ ತೆರಳಿ ಕಂಡಕ್ಟರ್ ಇಲ್ಲ ಎಂದು ಜೋರಾಗಿ ಕೂಗಿದ. ತಟ್ಟನೆ ಹಿಂದೆ ತಿರುಗಿದೆ ಚಾಲಕ ನಗುತ್ತಾ ಬಸ್ ಬದಿಗೆ ನಿಲ್ಲಿಸಿದ. ಕತ್ತು ತಿರುಗಿಸಿ ಪ್ರಯಾಣಿಕರೊಂದಿಗೆ
ಎಲ್ಲಿ ಹೋದ ಇವ ? ಎಂದು ಕೇಳಿದ. ಹ್ನೇ…. ಕಾಲ್ ಮಾಡಿ ನೋಡು ಎಂದರು ಪ್ರಯಾಣಿಕರು. ನನ್ನತ್ರ ನಂಬರ್ ಇಲ್ಲ ಎಂದ. ಕೇಳಿದ ಪ್ರಯಾಣಿಕರಿಗೆ ಇದೇನೋ ಹಾಸ್ಯ ನಾಟಕದಂತೆ. ಹಾಗಾದ್ರೆ ಸ್ವಲ್ಪ ವೈಟ್ ಮಾಡಿ ಕಂಡಕ್ಟರ್ ಈಕಡೆ ಕಾಲ್ ಮಾಡ್ತಾನೆ ಎಂದರು ಪ್ರಯಾಣಿಕರು. ಇಲ್ಲ ಅವನತ್ರ ನನ್ನ ನಂಬರೂ ಇಲ್ಲಾರೀ ಎಂದನು ಚಾಲಕ.
ನಾವಿಬ್ಬರೂ ಈ ಬಸ್ಸಲ್ಲಿ ಹೊಸಬರು, ಇವತ್ತು ಬೆಳಿಗ್ಗೆ ನೇಮಕವಾಗಿದ್ದಷ್ಟೆ. ಪರಿಚಯವಾಗಲು ಬಿಡುವು ಸಿಗಲಿಲ್ಲ. ಪ್ರಯಾಣಿಕರಿಗೆ ಟಿಕೆಟ್ ಇಲ್ಲದೆ ಮೈಸೂರು ತಲುಪಬಹುದೆಂಬ ಆಸೆಯೇನೋ ಎಲ್ಲರೂ ಫುಲ್ ಖುಷಿಯಲ್ಲಿ.
ತಕ್ಷಣ ಹಿಂದಿನಿಂದ ಜೋರು ಹಾರ್ನ್ ಶಬ್ದ. ತಿರುಗಿ ನೋಡಿದಾಗ ಅತಿವೇಗದಿಂದ ಬಂದ ಆಟೋದಿಂದ ನಗುತ್ತಾ ಇಳಿದು ಬಸ್ಸತ್ತಿದ ಕಂಡಕ್ಟರ್ ಮಾಮ. ಏನಿದ್ದರೂ ಕಂಡಕ್ಟರ್ ಇಲ್ಲದ KSRTC ಒಡೆಯನಿಲ್ಲದ ಮನೆಯಂತಿತ್ತು.
Shafi Anvaari
Kodagarahalli
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಾಟ್ಸಾಪ್ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್. ಜಗತ್ತಿನಾದ್ಯಂದ ಸುಮಾರು 1.5 ಬಿಲಿಯನ್ ವಾಟ್ಸಾಪ್ ಬಳಕೆದಾರರಿದ್ದಾರೆ. ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದಿದೆ.ನಿಮಗೆ ಮುಜುಗರ ಹುಟ್ಟಿಸುವಂತಹ ಖಾಸಗಿ ಕ್ಷಣಗಳನ್ನು ಬಹಿರಂಗಪಡಿಸಬಲ್ಲ ದೋಷವೊಂದು ವಾಟ್ಸಾಪ್ ನಲ್ಲಿ ಕಂಡು ಬಂದಿದೆ. ಆಕಸ್ಮಿಕವಾಗಿ ಯಾವುದಾದ್ರೂ ಮೆಸೇಜ್ ಕಳಿಸಲ್ಪಟ್ಟಲ್ಲಿ ಅದನ್ನು ಅಳಿಸಿಹಾಕಲು ಡಿಲೀಟ್ ಫಾರ್ ಎವರಿವನ್ ಎಂಬ ಆಪ್ಷನ್ ಇದೆ.ಆದ್ರೆ ನೀವು ಡಿಲೀಟ್ ಮಾಡಿದ ಮೇಲೂ ಆ ಮೆಸೇಜ್ ನ ಅವಶೇಷಗಳು ಉಳಿದುಕೊಳ್ಳುತ್ತಿವೆಯಂತೆ. ಐಫೋನ್ ಹಾಗೂ ಆಂಡ್ರಾಯ್ಡ್ ಡಿವೈಸ್ ಗಳಲ್ಲಿ ಈ ಫೀಚರ್ ಕಾರ್ಯನಿರ್ವಹಿಸುವ ವಿಧಾನದಲ್ಲಿನ…
ಬಿಗ್ಬಾಸ್ ರಿಯಾಟಲಿ ಶೋ ದಿನದಿಂದ ದಿನಕ್ಕೆ ತನ್ನ ಕುತೂಹಲವನ್ನು ದ್ವಿಗುಣಗೊಳಿಸುತ್ತಿದೆ. ಚಿತ್ರರಂಗದಲ್ಲಿ ಘಟಿಸಿಹೋದಂತಹ ಹಲವು ಘಟನೆಗಳು ಬಿಗ್ಬಾಸ್ನಲ್ಲಿ ಅನಾವರಣಗೊಳ್ಳುತ್ತಿದೆ. ಮೊನ್ನೆ ಶಂಕರ್ನಾಗ್ ಹಾಗೂ ಮಂಜುಳಾ ಬಗ್ಗೆ ರವಿಬೆಳಗೆರೆ ಅವರು ಮಾತನಾಡಿದ್ದರು. ಇದೀಗ ಹಿರಿಯ ನಟ ಜೈ ಜಗದೀಶ್ ಶಂಕರ್ನಾಗ್ ಬಗ್ಗೆ ಕುತೂಹಲಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ನಿನ್ನೆ ನಡೆದ ಸಂಚಿಕೆಯಲ್ಲಿ ಜೈ ಜಗದೀಶ್ ಇತರೆ ಸ್ಪರ್ಧಿಗಳ ಜತೆ ಮಾತನಾಡುವಾಗ ಒಂದು ಪ್ರಶ್ನೆಯನ್ನು ಮುಂದಿಟ್ಟರು. ಒಬ್ಬ ಫೇಮಸ್ ನಟ ತನ್ನ ಮಾರ್ಕೆಟ್ ಬಿದ್ದಾಗ ವ್ಯಾನ್ ಒಳಗೆ ಕ್ಯಾಂಟೀನ್ ಇಟ್ಟುಕೊಂಡು ಓಡಾಡುತ್ತಿದ್ದರು….
ಜಿಲ್ಲೆಯಲ್ಲಿ ಮತ್ತೆ ಜೋಡೆತ್ತು ಸದ್ದು ಮಾಡಿದ್ದು, ರಾಜಕೀಯವಾಗಿ ಅಲ್ಲದೆ ಜೋಡೆತ್ತುಗಳು ಮಾನವೀಯತೆ ಮೆರೆದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಗೋಮಾತೆ ಸೇವೆಗೆ ಸಿದ್ಧರಾಗಿದ್ದಾರೆ. ನಟ ದರ್ಶನ್ ಕಳೆದ ದಿನ ಚೈತ್ರ ಗೋಶಾಲೆಗೆ ಸುಮಾರು 15 ಟ್ರ್ಯಾಕ್ಟರ್ ಭತ್ತದ ಹುಲ್ಲನ್ನು ಅನುದಾನ ಮಾಡಿದ್ದರು. ಇದೀಗ ನಟ ಯಶ್ ಕೂಡ ಚೈತ್ರ ಗೋಶಾಲೆಗೆ ಸಹಾಯ ಮಾಡುತ್ತಿದ್ದಾರೆ. ಈ ಮೂಲಕ ಮಂಡ್ಯದ ಚೈತ್ರ ಗೋಶಾಲೆಗೆ ದರ್ಶನ್ ಮತ್ತು ಯಶ್ ಬೆಳಕಾಗಿದ್ದಾರೆ. ಯಶ್ ಪಾಂಡವಪುರದ ತಾಲೂಕಿನ ದೊಡ್ಡಬ್ಯಾಡರಹಳ್ಳಿಯಲ್ಲಿರುವ ಚೈತ್ರ ಗೋಶಾಲೆಯ…
ಗುಜರಾತ್ ನ ಸೂರತ್ ನಲ್ಲಿ ನಡೆದ ಭೀಕರ ಕಟ್ಟಡ ಅಗ್ನಿ ಅಘಡದಲ್ಲಿ ಸಾವಿಗೀಡಾದವರ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.ಸೂರತ್ ಸಾರ್ತನ ಪ್ರದೇಶದ ತಕ್ಷಶಿಲಾ ಆರ್ಕೇಡ್ ಕಟ್ಟಡದ ಮೂರನೇ ಮಹಡಿಯಲ್ಲಿದ್ದ ಕೋಚಿಂಗ್ ಸೆಂಟರ್ ನಲ್ಲಿ ಇಂದು ಮಧ್ಯಾಹ್ನ 3.30ರ ಸುಮಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಈ ಅಗ್ನಿ ಅವಘಡ ಸಂಭವಿಸಿದೆ. ಮೂಲಗಳ ಪ್ರಕಾರ ಘಟನೆಯಲ್ಲಿ ಈ ವರೆಗೂ ಸುಮಾರು 20 ಮಂದಿ ಸಾವಿಗೀಡಾಗಿದ್ದು, ಮೃತರಲ್ಲಿ ಬಹುತೇಕರು ವಿದ್ಯಾರ್ಥಿಗಳು ಎಂದು…
ಪೇಟಿಮ್ ಬಂದ ಮೇಲೆ ಬೇರೆ ಬೇರೆ ಡಿಜಿಟಲ್ ಪೇಮೆಂಟ್ ಆಪ್ ಗಳು ಪ್ರಾರಂಭಿಸಿದವು. ಸಾಮಾಜಿಕ ಜಾಲತಾಣದ ದೈತ್ಯ ವಾಟ್ಸಪ್ ಸದ್ಯದಲ್ಲೇ ಡಿಜಿಟಲ್ ಪೇಮೆಂಟ್ ಶುರು ಮಾಡಲು ಹೊರಟಿದೆ. ಪ್ರಪಂಚದಲ್ಲಿ ಭಾರತದಲ್ಲೇ ಈ ರೀತಿಯ ಮೊದಲ ಹೆಜ್ಜೆ ಇಡುತ್ತಿರುವುದು.
ಬೆಂಗಳೂರು ಮೂಲದ ಆರೋಗ್ಯ ರೆಸಾರ್ಟ್ ಆಯುರ್ವೇದ ಮತ್ತು ಹೋಮಿಯೋಪತಿ ಬಳಕೆಯಿಂದ ಕರೋನವೈರಸ್ನ ಬ್ರಿಟಿಷ್ ಸಿಂಹಾಸನದ ಉತ್ತರಾಧಿಕಾರಿಯಾದ ಪ್ರಿನ್ಸ್ ಚಾರ್ಲ್ಸ್ ಅವರನ್ನು ಗುಣಪಡಿಸಿದೆ ಎಂದು ಕೇಂದ್ರ ಆಯುಷ್ ರಾಜ್ಯ ಸಚಿವ ಶ್ರೀಪಾಡ್ ನಾಯಕ್ ಗುರುವಾರ ಹೇಳಿದ್ದಾರೆ.