ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಳ್ಳೆ ಹುಡುಗ ಪ್ರಥಮ್ ಹಾಗೂ ನಟ ಭುವನ್ ನಡುವೆ ಖಾಸಗಿ ವಾಹಿನಿಯೊಂದರ ಧಾರಾವಾಹಿ ಚಿತ್ರೀಕರಣದ ವೇಳೆ ಜಗಳವಾಗಿದ್ದು, ಪ್ರಥಮ್ ನನ್ನ ತೊಡೆ ಕಚ್ಚಿದ್ದಾರೆಂದು ಭುವನ್ ಆರೋಪ ಮಾಡಿದ್ದಾರೆ.
ಚಿತ್ರೀಕರಣದ ವೇಳೆ ಪ್ರಥಮ್ ಅವರು ಸಂಜನಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ವೇಳೆ ಆಕ್ರೋಶಗೊಂಡಿರುವ ಭುವನ್ ಅವರು ಆ ರೀತಿ ಮಾತನಾಡದಂತೆ ತಾಕೀತು ಮಾಡಿದ್ದಾರೆ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಜಗಳ ವಿಕೋಫಕ್ಕೆ ತಿರುಗಿದೆ. ನಂತರ ಪ್ರಥಮ್ ಅವರು ಭುವನ್ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಹಲ್ಲೆ ನಡೆಸಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಚಿತ್ರೀಕರಣದ ಸಿಬ್ಬಂದಿಗಳು ಮಧ್ಯೆ ಪ್ರವೇಶ ಮಾಡಿದ್ದಾರೆ. ಆದರೂ ಸುಮ್ಮನಾಗದ ಪ್ರಥಣ್ ಅವರು ಭುವನ್ ಅವರ ತೊಡೆಗೆ ಕಚ್ಚಿದ್ದಾರೆಂದು ವರದಿಯಾಗಿದೆ.
ಪ್ರಥಮ್ ಮತ್ತು ಭುವನ್ ನಡುವೆ ಜಗಳ ನಡೀತಾಯಿದ್ದಾಗ ನಾನು ಅಲ್ಲಿರಲಿಲ್ಲ, ಸೆಟ್ ಒಳಗಡೆ ನಾನು ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದೆ ಹಾಗಾಗಿ ನಾನು ಜಗಳ ನೋಡಿಲ್ಲ. ನಾನು ಹೊರ ಬಂದಾಗ ಭುವನ್ ಪ್ರಥಮ್ ಕತ್ತನ್ನು ಹಿಡಿದಿದ್ರು. ಇಬ್ಬರ ನಡುವೆ ಗಲಾಟೆ ನಡೆಯುತಿತ್ತು, ಕೂಡಲೇ ಪಕ್ಕದ ರೂಮಿನಲ್ಲಿ ಕರೆದುಕೊಂಡು ಹೋಗಿ ನೋಡಿದಾಗ ಭುವನ್ ತೊಡೆಯ ಭಾಗದಲ್ಲಿ ಹಲ್ಲಿನ ಗುರುತುಗಳಿದ್ದವು. ಈ ವೇಳೆ ನಾನು, ಭುವನ್ ಹಾಗೂ ವಿಶಾಲಮ್ಮ ಎಂಬವರು ಸಹ ಇದ್ದರು. ಭುವನ್ ಗೆ ಯಾವ ನಾಯಿಯೂ ಕಚ್ಚಿಲ್ಲ. ಪ್ರಥಮ್ ಕಚ್ಚಿದ್ದು ಎಂದು ಸೆಟ್ನಲ್ಲಿ ಎಲ್ರೂ ಹೇಳ್ತಾಯಿದ್ರು. ಪ್ರಥಮ್ ಯಾವಗಲೂ ಕೆಟ್ಟದಾಗಿ ಕಮೆಂಟ್, ಟಾಂಟ್ ಮಾಡ್ತಾಯಿದ್ದ ಎಂದು ನಟಿ ಸಂಜನಾ ಹೇಳಿದ್ದಾರೆ.
ಇನ್ನು ಭುವನ್ ಅವರ ಆರೋಪಕ್ಕೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಪ್ರಥಮ್ ಅವರು, ನಾನು ಅಪ್ಪಟ ಸಸ್ಯಹಾರಿ, ನಾನು ಯಾರಿಗೂ ಕಚ್ಚಿಲ್ಲ. ಮೊದಲು ಭುವನ್ ಅವರೇ ನನ್ನ ಮೇಲೆ ಕೈ ಮಾಡಿದ್ದು, ಅಲ್ಲಿದ್ದ ಸಿಬ್ಬಂದಿಗಳು ನಮ್ಮ ಜಗಳ ಬಿಡಿಸಿದ್ದರು ಎಂದು ಹೇಳಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಾಯಿ ಹುಣ್ಣು ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಲ್ಲೂ ಕಂಡು ಬರುತ್ತದೆ. ಬಾಯಿ ಹುಣ್ಣು ಆದರೆ ಊಟಮಾಡುವುದು, ನೀರು ಕುಡಿಯುವುದು ಎಲ್ಲವೂ ಕಷ್ಟವಾಗುತ್ತದೆ. ಇದಕ್ಕೆ ಹಲವು ಬಗೆಯ ಮಾತ್ರೆಗಳನ್ನ ತೆಗೆದು ಕೊಂಡರು ಇದು ಕಡಿಮೆಯಾಗುವುದಿಲ್ಲ. ಈ ಬಾಯಿ ಹುಣ್ಣು ಕಾಣಿಸಿಕೊಳ್ಳಲು ಕಾರಣವೇನು…? ಈ ಬಾಯಿ ಹುಣ್ಣನ್ನ ಕಡಿಮೆ ಮಾಡುವುದು ಹೇಗೆ…? ಎಂಬುದಕ್ಕೆ ಇಲ್ಲಿದೆ ಮಾಹಿತಿ ಓದಿ ತಿಳಿಯಿರಿ… ಬಾಯಿ ಹುಣ್ಣಿಗೆ ಮುಖ್ಯ ಕಾರಣಗಳು:- ಬಾಯಿ ಸ್ವಚ್ಛವಾಗಿ ಇಲ್ಲದೆ ಇರುವುದು, ಬಿ ಕಾಂಪ್ಲೆಕ್ಸ್ ಕೊರತೆ ಇರುವುದು, ವೈರಸ್ ಬ್ಯಾಕ್ಟೀರಿಯಾ , ಫಂಗಲ್…
ಅದೃಷ್ಟ ಅನ್ನೋದು ಯಾರಿಗೆ, ಹೇಗೆ, ಎಲ್ಲಿ ಒಲಿಯುತ್ತೆ ಅಂತ ಹೇಳೋದು ಕಷ್ಟ. ಈ ಮಾತು ಸಿನಿ ರಂಗಕ್ಕೂ ಸರಿಯಾಗಿ ಹೊಂದುತ್ತದೆ. ಇಲ್ಲಿ ಯಶಸ್ಸು ಅನ್ನೋದು ಕೆಲವೊಬ್ಬರಿಗೆ ಮಾತ್ರ ಸಿಗುತ್ತದೆ. ಕಲರ್ಫುಲ್ ದುನಿಯಾಗೆ ಎಂಟ್ರಿಯಾಗಿ ಅದೆಷ್ಟೊ ವರ್ಷಗಳಾದ ಮೇಲೆ ಅದೃಷ್ಟ ಒಲಿದರೆ, ಇನ್ನು ಕೆಲವರಿಗೆ ರಾತ್ರೋ ರಾತ್ರಿ ಸ್ಟಾರ್ ಕಿರೀಟ ದಕ್ಕುತ್ತದೆ. ಹಾಗೇ ಬೇರೆ ಬೇರೆ ಭಾಷೆಗಳಲ್ಲಿ ಕಮಾಲ್ ಕೂಡ ಮಾಡ್ತಾರೆ.
ಆಗ್ರಾ: ವಿಶ್ವದ ಅದ್ಭುತಗಳಲ್ಲಿ ಒಂದಾಂದ ವಿಶ್ವವಿಖ್ಯಾತ ತಾಜ್ ಮಹಲ್ ಗೆ ಭೇಟಿ ನೀಡುವ ಪ್ರವಾಸಗರಿಗೆ ಶಾಕಿಂಗ್ ಸುದ್ದಿಯೊಂದು ಬಂದಿದ್ದು, ತಾಜ್ ಮಹಲ್ ನಲ್ಲಿ 3 ಗಂಟೆಗಿಂತ ಹೆಚ್ಚಿನ ಅವಧಿ ಕಳೆದರೆ ದಂಡ ವಿಧಿಸಲಾಗುತ್ತದೆಯಂತೆ… ಹೌದು…. ಪ್ರೇಮಸೌಧ ತಾಜ್ ಮಹಲ್ ಗೆ ಭೇಟಿ ನೀಡುವ ಪ್ರವಾಸಿಗರು ತಾಜ್ ಮಹಲ್ ಪ್ರವೇಶ ಮಾಡಿದ ಮೂರುಗಂಟೆಯೊಳಗೆ ಅಲ್ಲಿಂದ ಹೊರಗೆ ಹೋಗಬೇಕು. ಇಲ್ಲವಾದಲ್ಲಿ ದಂಡ ಕಟ್ಟಬೇಕಾಗುತ್ತದೆ. ಈ ಬಗ್ಗೆ ಭಾರತೀಯ ಪುರಾತತ್ವ ಇಲಾಖೆ ಹೊಸ ನಿಯಮದ ಆದೇಶ ಹೊರಡಿಸಿದ್ದು, ತಾಜ್ ಮಹಲ್ ಗೆ…
ಐಸಿಐಸಿಐ ಬ್ಯಾಂಕ್’ಶೂನ್ಯ ಬ್ಯಾಲೆನ್ಸ್’ ಖಾತೆದಾರರು ತಮ್ಮ ಶಾಖೆಗಳಲ್ಲಿ ಮಾಡುವ ಪ್ರತಿ ನಗದು ವಿತ್ ಡ್ರಾವಲ್ ಮೇಲೆರೂ. 100 ರಿಂದ 125 ವರೆಗೆ ಶುಲ್ಕವನ್ನು ಭರಿಸಬೇಕಾಗುತ್ತದೆ. ಜಿರೋ ಬ್ಯಾಲೆನ್ಸ್ ಖಾತೆದಾರರು ಮಾಡುವ ಪ್ರತಿ ನಗದು ಹಿಂಪಡೆಯುವಿಕೆ ಮೇಲೆ ರೂ. 100-125 ಶುಲ್ಕ ವಿಧಿಸುವ ಜೊತೆಗೆ ಕರೆನ್ಸಿ ಮರುಬಳಕೆ ಮೇಲೆಮಾಡುವ ನಗದು ಠೇವಣಿ ಮೇಲೂ ಶುಲ್ಕ ವಿಧಿಸಲು ಐಸಿಐಸಿಐ ಬ್ಯಾಂಕ್ ನಿರ್ಧರಿಸಿದೆ. ಇದೇ ಸಂದರ್ಭ, ಎಲ್ಲಆನ್ಲೈನ್ ವ್ಯವಹಾರ ಸೇವೆಗಳ ಮೇಲೆ ಶುಲ್ಕ ತೆಗೆದಿರುವ ಐಸಿಐಸಿಐ ಬ್ಯಾಂಕ್, ಡಿಜಿಟಲ್ ವ್ಯವಹಾರವನ್ನುಉತ್ತೇಜಿಸಲು ಮುಂದಾಗಿರುವುದಾಗಿ…
ಟೆಕ್ ಗುರು ಎನಿಸಿಕೊಂಡಿರುವ ಗೂಗಲ್ ವಿಡಿಯೊ ಕಾಲಿಂಗ್ಗಾಗಿ ‘ಗೂಗಲ್ ಡುಯೋ'(Google Duo) ಆಪ್ ಅನ್ನು ಪರಿಚಯಿಸಿದೆ. ಈ ಆಪ್ನಲ್ಲಿ ವಿಡಿಯೊ ಕಾಲಿಂಗ್ ಗುಣಮಟ್ಟವು ಅತ್ಯುತ್ತಮವಾಗಿದ್ದು, ಬಹುಬೇಗನೆ ಜನಪ್ರಿಯತೆ ಪಡೆದುಕೊಂಡಿದೆ. ಸದ್ಯ ವಿಡಿಯೊ ಕಾಲಿಂಗ್ ಭಾರೀ ಟ್ರೆಂಡ್ ಪಡೆದುಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಮುಂದುವರೆದಿರುವ ಕಂಪನಿಯು ತನ್ನ ‘ಗೂಗಲ್ ಡುಯೋ’ ಆಪ್ನಲ್ಲಿ ಮತ್ತಷ್ಟು ಹೊಸತನಗಳನ್ನು ಅಳವಡಿಸಲು ಸಜ್ಜಾಗಿದೆ. ಹೌದು, ಗೂಗಲ್ ತನ್ನ ‘ಗೂಗಲ್ ಡುಯೋ’ ಆಪ್ನಲ್ಲಿ ಇದೀಗ ‘ಗ್ರೂಪ್ ವಿಡಿಯೊ ಕಾಲಿಂಗ್’ ಮತ್ತು ‘ಡಾಟಾ ಸೇವಿಂಗ್ ಮೋಡ್’ ಫೀಚರ್ಸ್ಗಳನ್ನು ಸೇರಿಸಲಿದೆ….
ಇಂಗ್ಲಿಷ್ ಸಂಬಳಕ್ಕಾದರೆ, ಕನ್ನಡ ಉಂಬಳಕ್ಕೆ ಎಂಬ ಮಾತು ನಾಡಿನಲ್ಲಿ ಪ್ರಚಲಿತದಲ್ಲಿದೆ. ಆದರೆ, ಕನ್ನಡ ನಮ್ಮ ಸಂಬಳ ಹಾಗೂ ಉಂಬಳ ಎರಡಕ್ಕೂ ಆಗಬೇಕು. ಈ ದಿಸೆಯಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡುವ ದಿಸೆಯಲ್ಲಿ ಪ್ರಯತ್ನ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಎರಡು ಸಂಸ್ಥೆಗಳು ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ೨೦೧೯ನೇ ಸಾಲಿನ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿ. ಮಾತನಾಡಿದ…