ಸುದ್ದಿ

ಎಚ್ಚರಿಕೆ ಕಾವೇರಿ ನೀರು ಬಿಟ್ಟರೆ ಜನ ದಂಗೆ ಏಳ್ತಾರೆ: ಮಾದೇಗೌಡ ……!

29

ತಮಿಳುನಾಡಿಗೆ ನೀರು ಬಿಡುವಂತೆ ಕೇಂದ್ರ ಜಲ ಆಯೋಗ ಆದೇಶಿಸಿರುವ ಬೆನ್ನಲ್ಲೇ, ಮಂಡ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಈ ಆದೇಶ ಹೊರಬೀಳುತ್ತಿದ್ದಂತೆಯೇ ಜಿಲ್ಲೆಯ ವಿವಿಧೆಡೆ ರೈತರು ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ರೈತಸಂಘ, ಕನ್ನಡಸೇನೆ ಕಾರ್ಯಕರ್ತರು ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ನಾಲೆಗಳಿಗೆ ನೀರು ಬಿಡದೆ ಬೆಳೆದ ಬೆಳೆಗಳು ಒಣಗುತ್ತಿವೆ. ಬೆಂಗಳೂರಿಗೆ ಕುಡಿಯುವ ನೀರು ಹರಿಸಲು ಸಹ ಇರುವ ಸಂಗ್ರಹದಲ್ಲಿರುವ ನೀರು ಸಾಲುವುದಿಲ್ಲ. ಪರಿಸ್ಥಿತಿ ಇಷ್ಟು ವಿಷಮಿಸಿರುವಾಗ ತಮಿಳುನಾಡಿಗೆ ನೀರು ಬಿಟ್ಟರೆ ಜನರು ದಂಗೆ ಏಳುತ್ತಾರೆ ಎಂದು ಕಾವೇರಿ ಹೋರಾಟ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ ಅವರು, ರಾಜ್ಯಕ್ಕೆ ಪ್ರಾಧಿಕಾರದವರೇ ಬಂದು ಪರಿಶೀಲನೆ ನಡೆಸಲಿ. ನಮ್ಮ ಪರಿಸ್ಥಿತಿ ಹೇಗಿದೆ ಎಂದು ಖುದ್ದಾಗಿ ನೋಡಿಕೊಂಡು ಹೋಗಲಿ. ಅದನ್ನು ಬಿಟ್ಟು ಎಲ್ಲಿಯೋ ಕುಳಿತು ತೀರ್ಮಾನ ಕೈಗೊಳ್ಳುವುದು ಸರಿಯಲ್ಲ. ನೀರು ಬಿಟ್ಟರೆ ಹೋರಾಟ ನಡೆಸುವುದು ಅನಿವಾರ್ಯ ಎಂದರು.

ನನ್ನ 90 ವರ್ಷದ ಬದುಕಿನಲ್ಲಿ ಕುಡಿಯುವ ನೀರಿಗಾಗಿ ಇಷ್ಟೊಂದು ತತ್ವಾರ ಉಂಟಾಗಿದ್ದನ್ನು ನೋಡಿಲ್ಲ. ಕುಡಿಯುವ ನೀರಿಲ್ಲ ಎಂಬ ಕಾರಣಕ್ಕೆ ಹಳ್ಳಿಯ ಜನರು ನಗರ, ಪಟ್ಟಣಗಳಿಗೆ ಗುಳೆ ಹೋಗುತ್ತಿದ್ದಾರೆ. ಕೆರೆಕಟ್ಟೆಗಳು, ಕೊಳವೆ ಬಾವಿಗಳು ಬತ್ತಿಹೋಗಿವೆ. ಕೆಆರ್‌ಎಸ್‌ನಲ್ಲಿ ಇರುವ ನೀರನ್ನೇ ಕುಡಿಯುವ ಉದ್ದೇಶಕ್ಕೆ ಉಳಿಸಿಕೊಳ್ಳಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಹೇಳಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಹೇಳಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ನಿಮ್ಮ ಮಕ್ಕಳಿಗೆ ಕಣ್ಣಿಗೆ ಕಾಡಿಗೆ ಹಚ್ಚೋ ಮುಂಚೆ ಇದನೊಮ್ಮೆ ತಪ್ಪದೇ ಓದಿ…

    ಕಣ್ಣಿನ ಅಂದವನ್ನು ಕಾಡಿಗೆ ಹೆಚ್ಚಿಸುತ್ತದೆ. ಮಹಿಳೆಯರು ಕಾಡಿಗೆ ಹಚ್ಚಿಕೊಳ್ಳೋದು ಸಾಮಾನ್ಯ ಸಂಗತಿ. ಆದ್ರೆ ಕೆಲವರು ಮಕ್ಕಳ ಕಣ್ಣಿಗೂ ಕಾಡಿಗೆ ಹಚ್ಚುತ್ತಾರೆ. ದೃಷ್ಟಿ ತಾಗಬಾರದು ಎನ್ನುವ ಕಾರಣಕ್ಕೆ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚಲಾಗುತ್ತದೆ. ಆದ್ರೆ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚೋದು ಸುಲಭದ ಕೆಲಸವಲ್ಲ. ಕೆಲವೊಮ್ಮೆ ಮಕ್ಕಳ ಕಣ್ಣಿಗೆ ಕೈ ತಾಗುವುದುಂಟು. ಹಾಗೆ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವುದು ಸುರಕ್ಷಿತವಲ್ಲ. ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದಂತೆ ಕಣ್ಣಿನಿಂದ ನೀರು ಬರಲು ಶುರುವಾಗುತ್ತದೆ. ಇದು ಸೋಂಕಿನ ಅಪಾಯಕ್ಕೆ ಕಾರಣವಾಗುತ್ತದೆ. ಪ್ರತಿ ದಿನ…

  • ಸುದ್ದಿ

    ಮಾತ್ರೆಯಿಲ್ಲದೆ ತಲೆನೋವು ಮಾಯವಾಗಲು ಹೀಗೆ ಮಾಡಿ..!

    ತಲೆ ನೋವು ಕಾಣಿಸಿಕೊಳ್ಳಲು ಕಾರಣ ಒಂದಾ ಅಥವಾ ಎರಡ ಅನೇಕ ಕಾರಣಗಳಿವೆ. ಅದರಲ್ಲಿಯೂ ಅಧಿಕ ಒತ್ತಡ ಉಂಟಾದಾಗ ಹೆಚ್ಚಾಗಿ ತಲೆನೋವು ಕಾಣಿಸಿಕೊಳ್ಳುತ್ತಾದೆ ಇಂತಹ ಸಂದರ್ಭದಲ್ಲಿ ಮಾತ್ರೆ ಬಳಸದೆ ಮುಕ್ತಿ ಪಡೆಯಬಹುದು. ಮಾತ್ರೆಯಿಲ್ಲದೆ ತಲೆನೋವು ಮಾಯವಾಗಲು 10 ಸುಲಭ ಪರಿಹಾರಗಳು 1) ನಿದ್ದೆ ಕಡಿಮೆಯಾಗಿ ತಲೆನೋವು ಬಂದಿದ್ದರೆ ಬಸಳೆ ಸೊಪ್ಪಿನ ರಸವನ್ನು ತಲೆಗೆ ಲೇಪನ ಮಾಡಿಕೊಳ್ಳಬೇಕು ನಂತರ ನಿದ್ದೆ ಮಾಡಿ, ತಲೆನೋವು ಸರಿ ಹೋಗುತ್ತಾದೆ. 2) ಜಾಯಿಕಾಯಿಯ ಪುಡಿಯನ್ನು ತಣ್ಣಗಿನ ನೀರಲ್ಲಿ ಕಲಸಿ ಅದನ್ನು ದಿನದಲ್ಲಿ ಮೂರು ಭಾರೀ ಕುಡಿಯುವುದರಿಂದ ತಲೆನೋವು…

  • ಜ್ಯೋತಿಷ್ಯ

    ದಿನ ಭವಿಷ್ಯ ..ಪಂಡಿತ್ ಶ್ರೀ ರಾಮ್ ಭಟ್ ದೈವಜ್ಞ ಜ್ಯೋತಿಷ್ಯರು..ನಿಮ್ಮ ರಾಶಿ ಭವಿಷ್ಯ ಹೇಗಿದೆ ಎಂದು ನೋಡಿ ತಿಳಿಯಿರಿ…ಶೇರ್ ಮಾಡಿ…!

    ಪಂಡಿತ್ ಶ್ರೀ ರಾಮ್ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9535503456ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ9 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9535503456 call/ whatsapp ಮೇಷ : ಪ್ರೀತಿಯ ಶಕ್ತಿ…

  • ಕ್ರೀಡೆ

    ಕ್ರಿಕೆಟ್ ವಿಶ್ವಕಪ್’ನಲ್ಲಿ ರನ್ನರ್’ಅಪ್ ಆಗಿದ್ದ ಭಾರತ ತಂಡದ, ಕನ್ನಡದ ಈ ಮಹಿಳೆಯರಿಗೆ ಸಿಕ್ಕಿದ್ದೇನು ಗೊತ್ತಾ?

    ಇತ್ತೀಚಿಗೆ ನಡೆದ ಮಹಿಳಾ ವಿಶ್ವಕಪ್ ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ದ ಸೋಲು ಅನುಭವಿಸಿತ್ತು.ಆದರೂ ರನ್ನರ್ ಆಪ್ ಸ್ಥಾನವನ್ನು ಉಳಿಸಿಕೊಂಡಿತ್ತು.

  • ಸುದ್ದಿ

    ಎಚ್ಚರಿಕೆ ಕಾವೇರಿ ನೀರು ಬಿಟ್ಟರೆ ಜನ ದಂಗೆ ಏಳ್ತಾರೆ: ಮಾದೇಗೌಡ ……!

    ತಮಿಳುನಾಡಿಗೆ ನೀರು ಬಿಡುವಂತೆ ಕೇಂದ್ರ ಜಲ ಆಯೋಗ ಆದೇಶಿಸಿರುವ ಬೆನ್ನಲ್ಲೇ, ಮಂಡ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಈ ಆದೇಶ ಹೊರಬೀಳುತ್ತಿದ್ದಂತೆಯೇ ಜಿಲ್ಲೆಯ ವಿವಿಧೆಡೆ ರೈತರು ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ರೈತಸಂಘ, ಕನ್ನಡಸೇನೆ ಕಾರ್ಯಕರ್ತರು ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ನಾಲೆಗಳಿಗೆ ನೀರು ಬಿಡದೆ ಬೆಳೆದ ಬೆಳೆಗಳು ಒಣಗುತ್ತಿವೆ. ಬೆಂಗಳೂರಿಗೆ ಕುಡಿಯುವ ನೀರು ಹರಿಸಲು ಸಹ ಇರುವ ಸಂಗ್ರಹದಲ್ಲಿರುವ ನೀರು ಸಾಲುವುದಿಲ್ಲ. ಪರಿಸ್ಥಿತಿ…