ರಾಜಕೀಯ

ಈ ಬಾರಿ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ವಿಜಯಲಕ್ಷ್ಮಿ ಯಾರಿಗೆ..?ಈ ವರದಿಯಲ್ಲಿ ಏನಿದೆ ಗೊತ್ತಾ..?

461

ಕರ್ನಾಕಟ ವಿಧಾನಸಭಾ ಕ್ಷೇತ್ರಗಳಲ್ಲಿ ಬಹಳ ಮುಖ್ಯ ಪಾತ್ರವಾಯಿಸುವ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಯಾರಿಗೆ ವಿಜಯಲಕ್ಷ್ಮಿ ಒಲಿಯುವುದು ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಇನ್ನು ಒಂದು ಬಾರಿ ಬಿಜೆಪಿಗೆ ಒಲಿದಿದ್ದರೆ ಮತ್ತೊಂದು ಬಾರಿ ಕಾಂಗ್ರೆಸ್‍ಗೆ ಒಲಿದಿದೆ.

ಇನ್ನು ಯಶವಂತಪುರ ಕ್ಷೇತ್ರದ ರಾಜಕೀಯ ಇತಿಹಾಸ ಕೆದಕಿನೋಡಿದರೆ, ಕ್ಷೇತ್ರ ಪುನರ್‍ವಿಂಗಡಣೆ ನಂತರ 2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಗೆಲುವು ಸಾಧಿಸಿದ್ದರು.

2008 ಮತ್ತು 2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಜವರಾಯಿಗೌಡ ಅವರು ಇದುವರೆಗೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಮೂರನೆ ಅವಧಿಯಲ್ಲೂ ಜವರಾಯಿಗೌಡ ಅವರೇ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.

ಇನ್ನು 2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನ ಎಸ್.ಟಿ.ಸೋಮಶೇಖರ್‍ಗೌಡ ಅವರು 1,20,380 ಮತಗಳನ್ನು ಪಡೆದು ಜೆಡಿಎಸ್‍ನ ಜವರಾಯಿಗೌಡ ಅವರಿಗಿಂತ 29,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕ ಎಸ್.ಟಿ.ಸೋಮಶೇಖರ್‍ಗೌಡ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಕ್ಷೇತ್ರದ ಜನರ ಪ್ರಕಾರ ಸೋಮಶೇಖರ್ ಅವರು ಶಾಸಕರಾಗಿ ಆಯ್ಕೆಯಾದ ನಂತರ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಾಗಿವೆ. ಹೀಗಾಗಿ ಈ ಬಾರಿಯೂ ಕ್ಷೇತ್ರದ ಮತದಾರರು ಮತ್ತೊಮ್ಮೆ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸದಲ್ಲಿ ಅವರು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

ಇನ್ನು ಬಿಜೆಪಿ ಪಕ್ಷದಿಂದ ಯಶವಂತಪುರ ಕ್ಷೇತ್ರವನ್ನು ತಮ್ಮ ಕಪಿಮುಷ್ಟಿಗೆ ಪಡೆಯಲು ಪಕ್ಷ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಡುವುದು ಪಕ್ಕ ಎಂದು ಹೇಳಲಾಗುತ್ತಿದೆ ಎಂದು ರಾಜಕೀಯ ಮೂಲಗಳಿಂದ ತಿಳಿದುಬಂದಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ವಯಸ್ಕರಿಗೆ ಬಿಳಿ ಕೂದಲಿನ ಕಾಟವೇ ಆಗಾದರೆ ಈ ನ್ಯಾಚುರಲ್ ರೆಮಿಡಿ ಒಮ್ಮೆ ಟ್ರೈ ಮಾಡಿ ನೋಡಿ,.!

    ಬೆಳ್ಳಗಿನ ಕೂದಲು ಇರುವ ವ್ಯಕ್ತಿಗಳನ್ನು ಕಂಡರೆ ನಾವು ಅಜ್ಜಿ-ತಾತ ಎಂದು ಸಂಭೋಧಿಸುತ್ತೇವೆ. ಅಂದರೆ ಈ ನರೆ (ಬೆಳ್ಳಗಿನ) ಕೂದಲು ಸಂಭವಿಸುವುದು 50ರ ಮೇಲೆ ಎಂದಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಈ ನರೆ ಕೂದಲು 12 ರಿಂದ 20ರ ವಯಸ್ಸಿನಲ್ಲೇ ಕಂಡುಬರುತ್ತಿರುವುದು ಆತಂಕಕಾರಿ ವಿಚಾರ. ಆದರೆ ನರೆ ಕೂದಲು ಇಷ್ಟು ಚಿಕ್ಕ ವಯಸ್ಸಿಗೆ ಕಾಣಿಸಿಕೊಳ್ಳಲು ಕಾರಣವೇನು? ಸಮಸ್ಯೆಗೆ ಪರಿಹಾರ ಅಥವಾ ಮನೆಮದ್ದು ಏನೆಂಬುದನ್ನು ಇಲ್ಲಿ ತಿಳಿಸಲಾಗಿದೆ ನೋಡಿ. ಬಿಳಿ ಕೂದಲಿಗೆ ಕಾರಣವೇನು? : *ಆನುವಂಶಿಕತೆ, *ವಿಟಿಲಿಗೊ, ಟ್ಯೂಬೆರಸ್ ಸ್ಕ್ಲೆರೋಸಿಸ್,…

  • ಸಿನಿಮಾ

    ಹಾಲಿವುಡ್’ಗೆ ಹಾರಲಿರುವ ಸೂಪರ್ ಸ್ಟಾರ್ ‘ಕಿಚ್ಚ ಸುದೀಪ್’!

    ಕನ್ನಡ ಸೂಪರ್ ಸ್ಟಾರ್ ಕಿಚ್ಚ ಸುದೀಪ್’ರವರು ಸ್ಯಾಂಡಲ್‍ವುಡ್,ಕಾಲಿವುಡ್, ಟಾಲಿವುಡ್, ಮತ್ತು ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಈಗ ಹಾಲಿವುಡ್ ಸಿನಿಮಾ ಮಾಡಲು ಸಹಿ ಹಾಕಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.

  • ಸುದ್ದಿ

    ಇನ್ನಷ್ಟು ಸುರಕ್ಷಿತವಾದ ಎಂ-ಆಧಾರ್‌ ಆ್ಯಪ್‌ ಬಿಡುಗಡೆ,ಇದರ ವಿಶೇಷತೆಯಾದರು ಏನು ಗೊತ್ತಾ,.!

    ಸ್ಮಾರ್ಟ್‌ಫೋನ್‌ನಲ್ಲಿ ಬಳಕೆಗೆ ಅಭಿವೃದ್ಧಿಪಡಿಸಲಾಗಿರುವ ಎಂ-ಆಧಾರ್‌ ಆ್ಯಪ್‌ ಅನ್ನು ಮತ್ತಷ್ಟು ಸುರಕ್ಷಿತಗೊಳಿಸಿರುವ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ಹೊಸ ಆವೃತ್ತಿಯನ್ನು ಗ್ರಾಹಕರ ಬಳಕೆಗಾಗಿ ಬಿಡುಗಡೆಮಾಡಿದೆ.ಹಿಂದಿನ ಆವೃತ್ತಿಯನ್ನು ಅಳಿಸಿ,ನೂತನ ಆವೃತ್ತಿಯನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಸ್ಟಾಲ್‌ ಮಾಡಿಕೊಳ್ಳುವಂತೆ ಯುಐಡಿಎಐ ಸೂಚಿಸಿದೆ. ನೂತನ ಆವೃತ್ತಿಯ ಎಂ-ಆಧಾರ್‌ನಲ್ಲಿ ಕನ್ನಡ ಸೇರಿದಂತೆ 13 ಭಾಷೆಗಳಿವೆ. ಆಧಾರ್‌ ಕಾರ್ಡ್‌ ಡೌನ್‌ಲೋಡ್‌, ಆಫ್‌ಲೈನ್‌ ಇಕೆವೈಸಿ, ವಿಳಾಸ ಪರಿಷ್ಕರಣೆ, ಇ-ಮೇಲ್‌ ಪರಿಶೀಲನೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಗ್ರಾಹಕರು ಎಂ-ಆಧಾರ್‌ನಿಂದ ಪಡೆಯಬಹುದಾಗಿದೆ. ಗುರುತು ಖಾತ್ರಿಗಾಗಿ ಆಧುನಿಕ ಬಯೋಮೆಟ್ರಿಕ್‌ ವ್ಯವಸ್ಥೆಯನ್ನುನೂತನ ಆವೃತ್ತಿಯಲ್ಲಿ ಬಳಸಲಾಗಿದ್ದು, ಇದರಿಂದ ಆಧಾರ್‌ ಆ್ಯಪ್‌ಅನ್ನು ಲಾಕ್‌…

  • ಸಿನಿಮಾ

    TRP ರೇಟಿಂಗ್ಸ್ ನಲ್ಲೂ ಇತಿಹಾಸ ಬರೆದ ‘ದೊಡ್ಮನೆ ಹುಡುಗ’ “ಪುನೀತ್”!ಈ ಲೇಖನಿ ಓದಿ….

    ಕನ್ನಡ ರಾಜರತ್ನ ಪುನೀತ್ ರಾಜ್ ಕುಮಾರ್ ನಟಿಸಿರುವ “ದೊಡ್ಮನೆ ಹುಡುಗ” ಚಿತ್ರವು, ಪ್ರಪ್ರಥಮ ಬಾರಿಗೆ ದೂರದರ್ಶನ(ಟೆಲಿವಿಷನ್) ಇತಿಹಾಸದಲ್ಲಿ ಹೊಸದಂದು ಐತಿಹಾಸಿಕ ದಾಖಲೆ ಮಾಡಿದೆ. ಕನ್ನಡದ ಝೀ ಕನ್ನಡ ವಾಹಿನಿಯಲ್ಲಿ  ಮೇ 28, ಭಾನುವಾರ ಸಂಜೆ 7.30 ರ ವೇಳೆ ಪ್ರಸಾರವಾದ ದೊಡ್ಮನೆ ಹುಡುಗ ಚಿತ್ರವು 12,162 (ಟಿವಿಟಿ)ರೇಟಿಂಗ್ಸ್ ಗಳಿಸಿದೆ.    ಇದು ದೂರದರ್ಶನ ಪ್ರದರ್ಶನ ಇತಿಹಾಸದಲ್ಲಿ ಅತಿ ಹೆಚ್ಚು ರೇಟಿಂಗ್ಸ್ ಪಡೆದ ಕನ್ನಡದ ಮೊದಲ ಚಿತ್ರ. ಹಾಗೂ ಈ ಚಲನಚಿತ್ರವು ನಗರ ಮಾರುಕಟ್ಟೆಯಲ್ಲಿ 4,490 ಟಿವಿಟಿ(ರೇಟಿಂಗ್ಸ್ಗ)ಳನ್ನು ಗಳಿಸಿದೆ. ಈ…

  • ವಿಚಿತ್ರ ಆದರೂ ಸತ್ಯ

    ಬಬ್ಲುಗೆ 8 ವರ್ಷದ ನಂತರ ಸಿಕ್ಕ ಆ ಯುವತಿ ಏನಾಗಿದ್ದಳು ಗೊತ್ತಾ??? ಶಾಕ್ ಆಗ್ತೀರಾ! ಈ ಲೇಖನಿ ಓದಿ…

    ಈತ ಒಬ್ಬ ರಿಕ್ಷಾ ಓಡಿಸೋ ಸಾಮಾನ್ಯ ಚಾಲಕ. ಈತನ ಹೆಸರು ಬಬ್ಲು. ಇವರ ವೃತ್ತಿಯಲ್ಲಿ 8 ವರ್ಷದ ಹಿಂದೆ ನಡೆದಿದ್ದ ಕತೆ ಈಗ ಹೊರಜಗತ್ತಿಗೆ ಗೊತ್ತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸೂಪರ್ ಹೀರೊ ಹಾಗಿದ್ದಾರೆ. ಅಷ್ಟಕ್ಕೂ ಇವರು ಮಾಡಿ ಆ ಒಳ್ಳೆಯ ಕೆಲಸವೇನು ಗೊತ್ತಾ?

  • ಸುದ್ದಿ

    ಮನೆಯಲ್ಲಿ ಶನಿದೇವನ ಸ್ಥಾಪನೆ ಯಾವ ಕಾರಣಕ್ಕೆ ಮಾಡಬಾರದು ಗೊತ್ತ..!

    ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ನಿಯಮಿತ ಪೂಜೆಗೆ ವಿಶೇಷ ಮಹತ್ವವಿದೆ. ದೇವರನ್ನು ಆರಾಧಿಸುವ ಮೂಲಕ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆಗಳು ಉದ್ಭವಿಸುತ್ತವೆ. ಹಾಗಾಗಿ ಜನರು ಬೆಳಿಗ್ಗೆ ಮತ್ತು ಸಂಜೆ ದೇವರ ಪೂಜೆ, ಮಂತ್ರ ಪಠಣ ಮಾಡುತ್ತಾರೆ. ಪ್ರತಿಯೊಬ್ಬರ ದೇವರ ಮನೆಯಲ್ಲೂ ಅನೇಕ ದೇವರುಗಳ ಫೋಟೋಗಳನ್ನು ಇಡಲಾಗುತ್ತದೆ. ಆದ್ರೆ ಕೆಲ ದೇವರ ಫೋಟೋಗಳನ್ನು ಮನೆಯಲ್ಲಿ ಇಡುವಂತಿಲ್ಲ. ಶನಿ ದೇವರ ಫೋಟೋವನ್ನು ಕೂಡ ಮನೆಗೆ ತರಬಾರದು. ಹಿಂದೂ ಧರ್ಮದ ಪ್ರಕಾರ ಶನಿದೇವರ ಫೋಟೋ, ವಿಗ್ರಹವನ್ನು ಮನೆಯಲ್ಲಿ ಇಡಬಾರದು….