ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾಮಾನ್ಯವಾಗಿ ಎಲ್ಲರ ಸೌಂದರ್ಯ ಹಾಳಾಗುವುದು ಮೊಡವೆಗಳಿಂದಲೇ. ಹದಿಹರೆಯದಲ್ಲಿ ಸಾಮಾನ್ಯವಾದ ಮೊಡವೆ ಅಳಿದರೂ ಕಲೆಗಳನ್ನು ಉಳಿಸುತ್ತದೆ. ಕೆಲವರಿಗಂತೂ ಎಷ್ಟೇ ವಯಸ್ಸಾದರೂ ಇವು ಬಿಟ್ಟು ಹೋಗುವ ಮಾತನ್ನೇ ಆಡುವುದಿಲ್ಲ.ಈ ಮೊಡವೆಗಳಿಗೆ ಹುಡುಗ ಹುಡುಗಿ ಚಿಕ್ಕವರು ದೊಡ್ಡವರು ಎಂಬ ಭೇದವಿಲ್ಲ ಎಲ್ಲರಿಗು ಇವು ಕಾಟ ಕೊಡುತ್ತಲೇ ಇರುತ್ತವೆ.
ಇವುಗಳಲ್ಲ ಹೇಳ ಹೆಸರಿಲ್ಲದಂತೆ ಹೋಗಲಾಡಿಸಲು ನಾವು ಹಲವು ಪ್ರಯತ್ನಗಳನ್ನ ಮಾಡಿ ಸೋತಿರುತ್ತೇವೆ. ಆದರೆ ಇನ್ನು ಮುಂದೆ ಸೋಲುವ ಮಾತಿಲ್ಲ, ಏಕೆಂದರೆ ಈ ಮೊಡವೆಗಳನ್ನ ಹೋಗಲಾಡಿಸಲು ಸುಲಭವಾದ ಉಪಾಯ ಇಲ್ಲಿದೆ ನೋಡಿ.
ಸೌತೆಕಾಯಿಯ ತಾಜಾ ಬಿಲ್ಲೆಗಳನ್ನು ಮುಖಕ್ಕೆ ಮಾಲೀಶು ಮಾಡಿದರೆ ಮೊಡವೆಯ ಕಲೆಗಳು ನಿವಾರಣೆಯಾಗುತ್ತವೆ.
ಬೆಳ್ಳುಳ್ಳಿ ಜಜ್ಜಿ ರಸ ತೆಗೆದು ಅದನ್ನು ಮೊಡವೆಯ ಜಾಗಕ್ಕೆ ಹಚ್ಚಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ನೀರಿನಿಂದ ಸ್ವಚ್ಛಗೊಳಿಸಿ. ಇದು ಮೊಡವೆಗಳನ್ನು ನಿವಾರಿಸಲು ಪರಿಣಾಮಕಾರಿ ವಿಧಾನ.ಮೊಡವೆ ನಿವಾರಿಸಲು ಮತ್ತೊಂದು ವಿಧಾನವೆಂದರೆ ಬೆಳ್ಳುಳ್ಳಿಯ ಎಸಳನ್ನು ಅರ್ಧ ಕತ್ತರಿಸಿ ಮೊಡವೆ ಇರುವ ಭಾಗಕ್ಕೆ ಲೇಪಿಸಿದರೆ ಮೊಡವೆ ಮಾಯುತ್ತದೆ.
ಶುದ್ಧ ಜೇನುತುಪ್ಪಕ್ಕೆ ಅರಸಿನ ಬೆರೆಸಿ ಲೇಪಿಸಿದರೆ ಮೊಡವೆ ಶೀಘ್ರ ಮಾಯುತ್ತದೆ.
ಗ್ರೀನ್ ಟೀ ತಯಾರಿಸಿ ಫ್ರಿಡ್ಜ್‌ನಲ್ಲಿರಿಸಿ ಐಸ್ ಕ್ಯೂಬ್ ತಯಾರಿಸಿ. ಇದನ್ನು ನಿಧಾನವಾಗಿ ಮುಖದ ಮೇಲೆ ಮೊಡವೆ ಇರುವ ಜಾಗದ ಮೇಲೆ ತಿಕ್ಕಿ. ಹೀಗೆ ಮಾಡುವುದರಿಂದ ನಿಮ್ಮ ಚರ್ಮದ ಜಿಡ್ಡು ನಿವಾರಣೆಯಾಗುತ್ತದೆ.
ನಿಂಬೆರಸದಲ್ಲಿ ಸಿಟ್ರಿಕ್ ಆಮ್ಲದ ಜೊತೆ ಆ್ಯಸ್ಕೂರ್‌ಬಿಕ್ ಆಮ್ಲದ ಅಂಶವಿರುವುದರಿಂದ ಒಂದು ಹತ್ತಿ ಉಂಡೆಯಲ್ಲಿ ತಾಜಾ ನಿಂಬೆರಸವನ್ನು ಅದ್ದಿ ರಾತ್ರಿ, ಅದನ್ನು ಮೊಡವೆಯ ಭಾಗಕ್ಕೆ ಲೇಪಿಸಿ ಮರುದಿನ ತೊಳೆಯಬೇಕು.
ಚಂದನವನ್ನು ಹಾಲಿನಲ್ಲಿ ಬೆರೆಸಿ ಮೊಡವೆಯಾದ ಜಾಗಕ್ಕೆ ಹಚ್ಚಿ ಹಾಗೇ ಬಿಡಿ. ಒಣಗಿದ ನಂತರ ತಂಪಾದ ನೀರಿನಲ್ಲಿ ತೊಳೆಯಿರಿ.
ಟೊಮೆಟೊ ಹಣ್ಣಿನ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮುಖ ಮೃದುವಾಗುತ್ತದೆ ಎಂಬ ವಿಷಯ ನಿಮಗೆ ಗೊತ್ತೇ ಇದೆ. ಅದೇ ರೀತಿ ದಿನಕ್ಕೆ ಎರಡು ಬಾರಿ ಟೊಮೆಟೊ ರಸವನ್ನು ಮೊಡವೆಗಳ ಮೇಲೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿದರೆ ಕಲೆಗಳು ವಾಸಿಯಾಗುತ್ತದೆ.
ಟೂತ್‌ಪೇಸ್ಟ್‌ನ ಬಿಳಿಭಾಗದಲ್ಲಿ ಬೇಕಿಂಗ್ ಸೋಡಾ ಹಾಗೂ ಹೈಡ್ರೋಜನ್ ಪೆರಾಕ್ಸೆ„ಡ್‌ಗಳು ಇರುವುದರಿಂದ ಮೊಡವೆ ಇರುವ ಭಾಗಕ್ಕೆ ಟೂತ್‌ಪೇಸ್ಟ್ ಲೇಪಿಸಿ 10 ನಿಮಿಷಗಳ ಬಳಿಕ ತೊಳೆದರೆ ಮೊಡವೆ ಶಮನವಾಗುತ್ತದೆ.
1/4 ಚಮಚ ಸಾಸಿವೆಯೊಂದಿಗೆ 1 ಚಮಚ ಜೇನುತುಪ್ಪವನ್ನು ಚೆನ್ನಾಗಿ ಮಿಶ್ರಣಮಾಡಿ ಮುಖದ ಎಲ್ಲಾ ಭಾಗಕ್ಕೆ ಹಚ್ಚಿಕೊಳ್ಳಿ. 15 ನಿಮಿಷದ ನಂತರ ಶುದ್ಧ ನೀರಿನಿಂದ ಮುಖವನ್ನು ನಯವಾಗಿ ತೊಳೆಯಿರಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಬಿಜೆಪಿ ಸರ್ಕಾರದ ಕೊನೆಯ ಮಧ್ಯಂತರ ಬಜೆಟ್ ನಲ್ಲಿ ಪಿಯೂಷ್ ಗೋಯಲ್ ಪ್ರಧಾನ ಮಂತ್ರಿ ಶ್ರಮ ಮಾನ್ ಧನ್ ಯೋಜನೆ ಘೋಷಿಸಿದ್ದಾರೆ. ಇದು ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿ ಹೊಂದಿದ್ದು, ನಿರ್ದಿಷ್ಟ ವಯಸ್ಸು ತಲುಪಿದ ನಂತರ ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ ಸರಕಾರ ಪಿಂಚಣಿ ನೀಡುತ್ತದೆ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯನ್ನು ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಮೂಲಕ ಜಾರಿಗೆ ತರಲಾಗುತ್ತಿದೆ. ಐಆರ್ಡಿಎಐ…
ಒಮ್ಮೆ ರಾಜನಿಗೆ ಈ ಇಳೆಯಲ್ಲಿ ಯಾರು ಹೆಚ್ಚು ಸುಖೀ ಹಾಗೂ ಸಂತೃಪ್ತ…! ಎಂದು ತಿಳಿಯುವ ಮನಸ್ಸಾಯಿತು. ತನ್ನ ಪ್ರಶ್ನೆಯನ್ನು ಸಭಾಸದರ ಮುಂದಿಟ್ಟ. ತಲೆಗೊಂದೊಂದು ಉತ್ತರ ಬಂತು. ಯಾವ ಉತ್ತರವೂ ರಾಜನಿಗೆ ಸಮಾಧಾನ ತರಲಿಲ್ಲ. ತನ್ನನ್ನು ಕಾಡುತ್ತಿರುವ ಪ್ರಶ್ನೆಗೆ ಹೇಗಾದರೂ ಉತ್ತರ ಕಂಡುಕೊಳ್ಳಬೇಕೆಂಬ ತವಕದಿಂದ ರಾಜ ಮಾರುವೇಷದಲ್ಲಿ ಸಂಚಾರ ಹೊರಟ.
ಊಟಕ್ಕೆ ಗತಿಯಿಲ್ಲದ ಯುವಕರು ಸೇನೆಗೆ ಸೇರುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಬಿಜೆಪಿ ಸರಣಿ ಟ್ವೀಟ್ ಮೂಲಕ ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಸೇನೆಗೆ ಸೇರುವವರು ಬಡ ಕುಟುಂಬದ ಯುವಕರೇ ಹೊರತು, ಶ್ರೀಮಂತರ ಮನೆಯ ಮಕ್ಕಳಲ್ಲ ಎನ್ನುವ ನೀವು ನಿಮ್ಮ ಮಗನಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವಲ್ಲಿ ತೋರಿದ ಉತ್ಸಾಹವನ್ನು ಸೇನೆಗೆ ಸೇರಿಸಲು ಯಾಕೆ ತೋರಿಸಲಿಲ್ಲ ಎಂದು ಪ್ರಶ್ನಿಸಿದೆ. ಊಟಕ್ಕೆ ಗತಿ ಇಲ್ಲದ ಯುವಕರು ಸೇನೆಗೆ ಸೇರುತ್ತಾರೆ ಎಂದು…
ಟೆಕ್ ದೈತ್ಯ ಕಂಪನಿ ಆಪಲ್, ಅದರ ಕೀಬೋರ್ಡ್ ಆಪರೇಟಿಂಗ್ ಸಿಸ್ಟಮ್, ಐಒಎಸ್ 2ರ ಇತ್ತೀಚಿನ ಆವೃತ್ತಿಯಲ್ಲಿ ಕನ್ನಡ
ಸ್ವಾತಂತ್ರ್ಯ ನಂತರದ ದೇಶದ ದೊಡ್ಡ ಮತ್ತು ಏಕರೂಪ ತೆರಿಗೆ ಎಂದು ಹೇಳಲಾಗಿರುವ (ಸರಕು ಮತ್ತು ಸೇವಾ ತೆರಿಗೆ)ಜಿಎಸ್ಟಿ ಜುಲೈ 1 ರಿಂದ ಜಾರಿಯಾಗಲಿದ್ದು, ಇದರಿಂದ ಯಾವ ಯಾವ ಸೇವೆಗಳ ಮೇಲೆ ಈ ತೆರಿಗೆ ಪ್ರಭಾವ ಬೀರಲಿದೆ
ಸಾಮಾನ್ಯವಾಗಿ ಹಿಂದೆ ಹರಳೆಣ್ಣೆ ಎಂದರೆ ಎತ್ತಿನಗಾಡಿಯ ಕೀಲುಗಳಿಗೆ ಹಾಕಲು ಅಥವಾ ತಲೆಗೆ ಮತ್ತು ಮಲಬದ್ಧತೆಗೆ ಔಷಧೀಯ ರೂಪದಲ್ಲಿ ಬಳಸಲಾಗುತ್ತಿತ್ತು. ವಾಸ್ತವವಾಗಿ ಹರಳೆಣ್ಣೆ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ.