ಜ್ಯೋತಿಷ್ಯ

ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ..?ಗುರು ಒಲಿಯುತ್ತಾನೆಯೇ ನೋಡಿ ತಿಳಿಯಿರಿ…

314

ಇಂದು ಗುರುವಾರ, 08/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ವ್ಯವಹಾರ ವೃದ್ಧಿಗೆ ಹಣ ವಿನಿಯೋಗ ಮಾಡಲು ಸೂಕ್ತ ದಿನ. ಸ್ವಂತ ಉದ್ಯಮಿಗಳಿಗೆ ಉತ್ತಮ ಲಾಭ. ಸಮಸ್ಯೆಗಳು ಉಪಶಮನವಾದರೂ ನೆಮ್ಮದಿ ಇರದು. ವೃತ್ತಿರಂಗದಲ್ಲಿ ಮುನ್ನಡೆಯಿಂದ ಉನ್ನತ ಸ್ಥಾನಮಾನಗಳನ್ನು ಪಡೆಯುವಿರಿ.  ವಿದ್ಯಾರ್ಥಿಗಳಿಗೆ ಪ್ರಗತಿಯ ದಿನ. ಬೆಂಕಿಯ ಜೊತೆ ಕೆಲಸ ಮಾಡುವಾಗ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ತಕ್ಕ ಫ‌‌ಲಿತಾಂಶ ಇದೆ.

ವೃಷಭ:-

ದೈಹಿಕವಾಗಿ ಸುಧಾರಣೆ ತಂದೀತು. ಸಮಸ್ಯೆಗಳೆಲ್ಲಾ ಪರಿಹಾರವಾಗಲಿವೆ. ಆರ್ಥಿಕವಾಗಿ ಅಭಿವೃದ್ಧಿ ಇರುತ್ತದೆ. ನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಉತ್ಸಾಹ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ವೃತ್ತಿರಂಗದಲ್ಲಿ ಮುನ್ನಡೆ. ಸಾಮಾಜಿಕವಾಗಿ ಸ್ಥಾನಮಾನ ಗೌರವ ತಂದೀತು. ಸರ್ಕಾರಿ ನೌಕರರಿಗೆ ಕಿರುಕುಳ ಉಂಟಾದೀತು. ಕುಟುಂಬ ಸಮೇತರಾಗಿ ಕುಲದೇವತಾ ದರ್ಶನ.

ಮಿಥುನ:

ವಿದ್ಯುದುಪಕರಣಗಳ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಏರಿಳಿತ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ. ಸ್ವತಂತ್ರ ಉದ್ಯಮದಲ್ಲಿ ಯಶಸ್ಸು. ಅಧಿಕಾರಿ ವರ್ಗದವರಿಗೆ ವೃತ್ತಿರಂಗದಲ್ಲಿ ಬದಲಾವಣೆ ತಂದೀತು. ಕೃಷಿ ಕ್ಷೇತ್ರದ ವ್ಯವಹಾರಗಳಿಂದ ಉತ್ತಮ ಆದಾಯ.  ವಿದ್ಯಾರ್ಥಿಗಳು ತಮ್ಮ ಪರಿಶ್ರಮದ ಫ‌ಲವನ್ನು ಪಡೆಯಲಿದ್ದಾರೆ. ದೇವತಾದರ್ಶನ ಭಾಗ್ಯದಿಂದ ಸಂತಸವನ್ನು ಅನುಭವಿಸುವಿರಿ.

ಕಟಕ :-

ಕುಶಲ ಕರ್ಮಿಗಳಿಗೆ ಹೆಚ್ಚಿನ ಬೇಡಿಕೆ. ಸಂಶೋಧನೆಯಲ್ಲಿ ತೊಡಗಿದವರಿಗೆ ಉತ್ತಮ ಮಾರ್ಗದರ್ಶನ. ಸಂತಾನ ಭಾಗ್ಯಕ್ಕೆ ಅಡೆತಡೆಗಳು ಕಂಡು ಬಂದಾವು. ಕಾರ್ಯರಂಗದಲ್ಲಿ ಸೋಲು ವಿಫ‌ಲತೆಗಳು ಕಂಡು ಬರುತ್ತವೆ. ಹೊಸ ವಿಷಯಗಳನ್ನು ಕಲೆಹಾಕುವುದರಿಂದ ಬರವಣಿಗೆಯಲ್ಲಿ ವಿಳಂಬದ ಸಾಧ್ಯತೆ. ಆರ್ಥಿಕವಾಗಿ ಧನಾಗಮನವಿದ್ದು ಅಧಿಕ ರೂಪದಲ್ಲಿ ಧನವ್ಯಯವಾಗಲಿದೆ.

 ಸಿಂಹ:

ಶುಭಮಂಗಲ ಕಾರ್ಯಗಳಿಗಾಗಿ ಓಡಾಟ ವಿರುತ್ತದೆ. ಆರ್ಥಿಕವಾಗಿ ಚೇತರಿಕೆ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಕಚೇರಿ ಕೆಲಸಗಳ ನಿಮಿತ್ತ ದೂರದ ಪ್ರಯಾಣ. ಉದ್ಯೋಗಸ್ಥರಿಗೆ ಹೆಚ್ಚಿನ ಬಿಡುವಿನಿಂದ ಮಾನಸಿಕ ನೆಮ್ಮದಿ ದೊರಕುವುದು. ದೈಹಿಕವಾಗಿ ಜಾಗ್ರತೆಯಿಂದ ಇರಬೇಕು. ದೂರ ಸಂಚಾರದಲ್ಲಿ ಗಮನ ವಿರಲಿ. ದೂರವಿರಿ. ಮಹಿಳೆಯರಿಗೆ ಜವಾಬ್ದಾರಿ ಹೆಚ್ಚಳ.

ಕನ್ಯಾ :-

ವಿವಿಧ ಮೂಲಗಳಿಂದ ಧನಾಗಮನ ವಿರುತ್ತದೆ. ಉದ್ಯೋಗಿಗಳಿಗೆ ಉತ್ತಮ ಮುಂಬಡ್ತಿ ಇರುತ್ತದೆ. ನೆನೆಗುದಿಗೆ ಬಿದ್ದ ವಿವಾದ ನಿರ್ಣಯ ಕಾಣಲಿದೆ. ಆರ್ಥಿಕ ಸಮಸ್ಯೆಗಳಿಂದ ಪರಿಹಾರ. ಶಿಕ್ಷಕ ವೃತ್ತಿಯವರಿಗೆ ಗೌರವಾದರಗಳು ದೊರೆಯಲಿವೆ.  ಯೋಗ್ಯ ವಯಸ್ಕರ ವಿವಾಹ ಪ್ರಸ್ತಾವಗಳು ಕಂಕಣಬಲವನ್ನು ಒದಗಿಸಿ ಕೊಡುತ್ತವೆ. ದಿನಾಂತ್ಯ ಶುಭ. ಲೋಹದ ವ್ಯಾಪಾರಿಗಳಿಗೆ ಲಾಭದ ನಿರೀಕ್ಷೆ.

ತುಲಾ:

ಶುಭ ಮಂಗಲ ಕಾರ್ಯಗಳ ಚಿಂತನೆ ನಡೆಯಲಿದೆ. ಆಗಾಗ ಸಂಚಾರ ಒದಗಿ ಬರುತ್ತದೆ. ಅಧ್ಯಯನದಲ್ಲಿ ಆಸಕ್ತಿ ವಹಿಸುವಿರಿ. ವೃತ್ತಿಯಲ್ಲಿ ಕಿರಿಕಿರಿ. ಕೆಲಸದಲ್ಲಿ ಕಾರ್ಯಬಾಹುಳ್ಯ ಸಾಧ್ಯತೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಅತೀ ಅಗತ್ಯವಿದೆ. ಕೆಲಸದ ಒತ್ತಡದಿಂದಾಗಿ ದುಗುಡ ಉಂಟಾದೀತು. ಹಿರಿಯರ ಮಾತನ್ನು ಕಡೆಗಣಿಸದಿರಿ.

ವೃಶ್ಚಿಕ :-

ವೃತ್ತಿಯಲ್ಲಿ ಯಶಸ್ಸು. ಆರೋಗ್ಯದ ಬಗ್ಗೆ ಗಮನವಿರಲಿ. ಬಡವರಿಗೆ ಧಾನ್ಯಗಳನ್ನು ದಾನ ಮಾಡುವುದರಿಂದ ಸಂತೃಪ್ತಿ. ಸ್ವಜನರ ಕಿತಾಪತಿಯಿಂದ ಮನಸ್ಸಿಗೆ ನೆಮ್ಮದಿ ಇರದು. ಶನಿಯಿಂದ ಜಡತ್ವ, ದುರಾಲೋಚನೆಗಳು ಕಂಡು ಬರುತ್ತವೆ. ಪ್ರೇಮ ವಿವಾಹಗಳು ಯಶ ಕಾಣುವವು. ದೇವತಾರಾಧನೆಯಿಂದ ಯಶಸ್ಸು. ತಾಳ್ಮೆ, ಸಮಾಧಾನಚಿತ್ತರಾಗಿ ಮುಂದುವರಿಯಬೇಕು. ವೃತ್ತಿರಂಗದಲ್ಲಿ ಚೇತರಿಕೆ ಇರುತ್ತದೆ.

ಧನಸ್ಸು:

ಉದ್ಯೋಗಿಗಳಿಗೆ ಇನ್ನು ಉತ್ತಮ ಅವಕಾಶಗಳಿರುತ್ತವೆ. ಸದುಪಯೋಗಿಸಿಕೊಳ್ಳಿ. ಹಾಗೆ ಧನಾಗಮನ ತೃಪ್ತಿ ತರುತ್ತದೆ. ಗೃಹ ನಿರ್ಮಾಣ, ದುರಸ್ತಿ ಕಾರ್ಯಗಳಲ್ಲಿ ಯಶಸ್ಸು. ಸಮಸ್ಯೆಗಳ ಪರಿಹಾರಕ್ಕಾಗಿ ಧಾರ್ಮಿಕ ಕಾರ್ಯ ನಡೆಸಲಿದ್ದೀರಿ. ಹಳೇ ಮಿತ್ರರ ಸಮಾಗಮ ವಿರುತ್ತದೆ. ಹಿರಿಯ ಅಧಿಕಾರಿ ವರ್ಗದವರ ಸಹಕಾರ ಸಿಗುತ್ತದೆ.  ದಾಂಪತ್ಯ ಸಮಸ್ಯೆಗಳಿಗೆ ಹಿರಿಯರ ಸಲಹೆಯಿಂದ ಉತ್ತಮ ಪರಿಹಾರ.

ಮಕರ :-

ಗೃಹ ನಿರ್ಮಾಣದ ಬಗ್ಗೆ ಚಿಂತನೆ. ಬಂಧುಗಳೊಂದಿಗಿನ ಬಾಂಧವ್ಯ ಗಟ್ಟಿಗೊಳ್ಳುವುದು. ಆರ್ಥಿಕ ಸಂಪನ್ಮೂಲಗಳು ಕೂಡಿಬರಲಿವೆ.
ವೃತ್ತಿರಂಗದಲ್ಲಿ ನೆಮ್ಮದಿ ತರುತ್ತದೆ. ಚಿಂತಿತ ಕಾರ್ಯಗಳಲ್ಲಿ ಪ್ರಯತ್ನಬಲ ಅಗತ್ಯವಿದೆ. ಅವಿವಾಹಿತರಿಗೆ ಅಚ್ಚರಿಯ ರೀತಿಯಲ್ಲಿ ಕಂಕಣಬಲದ ಸಾಧ್ಯತೆ ಇರುತ್ತದೆ. ಮಕ್ಕಳ ಸಲುವಾಗಿ ವಿದೇಶ ಪ್ರಯಾಣ. ಸಹೋದರರ ಸಹಕಾರ. ಹಣಕಾಸಿನ ಬಗ್ಗೆ ಆದಷ್ಟು ಜಾಗ್ರತೆ ಇರಬೇಕು.  ಹಣಕಾಸಿನ ಬಗ್ಗೆ ಆದಷ್ಟು ಜಾಗ್ರತೆ ಇರಬೇಕು.

ಕುಂಭ:-

ಶುಭಮಂಗಲ ಕಾರ್ಯಗಳಿಂದ ಸಂಭ್ರಮಿಸು ವಂತಾದೀತು. ದೇಹಾರೋಗ್ಯದ ಬಗ್ಗೆ ಗಮನ ಹರಿಸುತ್ತಾ ಇರಬೇಕು. ಉದ್ಯೋಗ ಕ್ಷೇತ್ರದಲ್ಲಿ ಪದೋನ್ನತಿ ಸಾಧ್ಯತೆ. ವೈಯಕ್ತಿಕ ವಿಷಯಗಳ ಬಗ್ಗೆ ಜಾಗರೂಕರಾಗಿರುವುದು ಸೂಕ್ತ. ವೃತ್ತಿರಂಗದಲ್ಲಿ ಸಮಾಧಾನ ಸಿಗಲಿದೆ. ಆಗಾಗ ಬಂಧುಮಿತ್ರರ ಹಾಗೂ ಹಿತೈಷಿಗಳ ಆಗಮನ ವಿರುತ್ತದೆ.  ಆರೋಗ್ಯದಲ್ಲಿ ವೃದ್ಧಿ. ಪ್ರಾಪ್ತ ವಯಸ್ಕರಿಗೆ ಸಂತಾನ ಭಾಗ್ಯದ ಯೋಗ.

ಮೀನ:-

ವ್ಯವಹಾರದಲ್ಲಿ ಉನ್ನತಿ. ಹಿತ ಶತ್ರುಗಳಿಂದ ಸಂಕಷ್ಟ. ತುಸು ಅಭಿವೃದ್ಧಿಯು ಗೋಚರಕ್ಕೆ ಬರುತ್ತದೆ. ಎಲ್ಲಾ ಕೆಲಸಕಾರ್ಯಗಳು ನಿರೀಕ್ಷಿತ ರೀತಿಯಲ್ಲಿ ನಡೆಯಲಾರವು. ವೈದ್ಯಕೀಯ ಚಿಕಿತ್ಸೆಗಾಗಿ ಅಧಿಕ ವೆಚ್ಚ ಭರಿಸಬೇಕಾದೀತು. ಬಂಧುಗಳ ಆಗಮನ ಸಾಧ್ಯತೆ. ಪ್ರಯತ್ನಬಲಕ್ಕೆ ಒತ್ತು ನೀಡಬೇಕಾಗುತ್ತದೆ. ಪತ್ನಿಗೆ ಆಗಾಗ ದೇಹಾರೋಗ್ಯದಲ್ಲಿ ಸಮಸ್ಯೆ ತಂದೀತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ಸಾರಿಗೆ ನೌಕರರಿಗೆ 12.50% ವೇತನ ಹೆಚ್ಚಳ: ಸರ್ಕಾರದ ಏಕಪಕ್ಷೀಯ ನಿರ್ಧಾರಕ್ಕೆ ನೌಕರ ಸಂಘಟನೆಗಳ ಅಸಮಾಧಾನ

    0

    ಸಾರಿಗೆ ನೌಕರರಿಗೆ 12.50% ವೇತನ ಹೆಚ್ಚಳ: ಸರ್ಕಾರದ ಏಕಪಕ್ಷೀಯ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ ಕರ್ನಾಟಕ ಸರ್ಕಾರ 12.50% ವೇತನ ಹೆಚ್ಚಳ ಘೋಷಿಸಿದ್ದು, ಈ ನಿರ್ಧಾರ ಇದೀಗ ಸಾರಿಗೆ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸರ್ಕಾರವು ನೌಕರ ಸಂಘಟನೆಗಳೊಂದಿಗೆ ಅಂತಿಮ ಒಪ್ಪಂದಕ್ಕೆ ಬರದೇ ಏಕಪಕ್ಷೀಯವಾಗಿ ವೇತನ ಹೆಚ್ಚಳ ಪ್ರಕಟಿಸಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಹಲವು ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಯಾವ ನಿಗಮಗಳ ನೌಕರರಿಗೆ ಅನ್ವಯ? ಈ ವೇತನ ಹೆಚ್ಚಳವು ರಾಜ್ಯದ ನಾಲ್ಕು…

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ, ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 18 ಜನವರಿ, 2019 ಅಧ್ಯಯನಗಳನ್ನು ತಪ್ಪಿಸಿಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಿಕೆ ನಿಮ್ಮ ಪೋಷಕರಿಗೆ ಕೋಪ ಬರಿಸಬಹುದು. ವೃತ್ತಿ…

  • ಆಧ್ಯಾತ್ಮ

    ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಮತ್ತು ಪೂಜಿಸುವ ರೀತಿ ನೀತಿಗಳ ಸಂಪೂರ್ಣ ಮಾಹಿತಿಗೆ ಈ ಲೇಖನಿ ಓದಿ…

    ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಅದರಲ್ಲೂ ಹೆಣ್ಣುಮಕ್ಕಳಿಗೆ ಪ್ರಿಯವಾದ ವರಮಹಾಲಕ್ಷ್ಮಿ ಹಬ್ಬವೂ ಸಹ ಈ ಮಾಸದಲ್ಲೇ ಬರುತ್ತದೆ. ಪೂಜೆ ಹೆಸರೇ ಸೂಚಿಸುವಂತೆ ಇದು ಲಕ್ಷ್ಮಿದೇವಿಯನ್ನು ಪೂಜಿಸುವ ದಿನ. ಶ್ರಾವಣ ಮಾಸದ ಶುಕ್ಷ ಪಕ್ಷದ ಶುಕ್ರವಾರನ್ನು ವರಮಹಾಲಕ್ಷ್ಮಿ ದಿನ ಎಂದು ಕರೆಯುವುದುಂಟು.

  • ಸುದ್ದಿ

    ನೂತನ ಸ್ಪೀಕರ್ ಆಗಿ​ ವಿಶ್ವೇಶ್ವರ ಹೆಗಡೆ ಕಾಗೇರಿ ಆಯ್ಕೆ

    ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿನ್ನೆ ಸದನದಲ್ಲಿ ಬಹುಮತ ಕೂಡ ಸಾಬೀತು ಮಾಡಿದ್ದಾರೆ. ಬಿಎಸ್​ವೈ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸ್ಪೀಕರ್​ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಸ್ಪೀಕರ್​ ಆಗಿ ಆಯ್ಕೆಯಾಗಿದ್ದು, ನಾಳೆ ಸದನದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ. ಕಾಂಗ್ರೆಸ್​  ಮತ್ತು ಜೆಡಿಎಸ್​ ನಾಯಕರು ಸ್ಪೀಕರ್​ ಚುನಾವಣೆಯಿಂದ ಹಿಂದೆ ಸರಿದಿದ್ದು, ಯಾವುದೇ ನಾಮಪತ್ರ ಸಲ್ಲಿಸಿರಲಿಲ್ಲ. ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರು. ಹೀಗಾಗಿ ಕಾಗೇರಿ…

  • ಆರೋಗ್ಯ

    ಕೋಳಿಯನ್ನು ತಿನ್ನುವುದರಿಂದ ಆಗುವ ಪರಿಣಾಮಗಳ ಬಗ್ಗೆ ನಿಮಗೆ ಗೊತ್ತಾ..? ತಿಳಿಯಲು ಈ ಲೇಖನ ಓದಿ …

    ದೇಹವು ಹೊಸ ಪ್ರೋಟೀನ್‌ನ್ನು ಉತ್ಪತ್ತಿ ಮಾಡಲು(ಪ್ರೋಟೀನ್ ಪ್ರತಿಧಾರಣ) ಮತ್ತು ಹಾನಿಗೊಂಡ ಪ್ರೋಟೀನ್‌ಗಳನ್ನು ಮರುಪೂರಣ ಮಾಡಲು(ನಿರ್ವಹಣೆ) ಅಮೈನೋ ಆಮ್ಲದ ಅಗತ್ಯವಿದೆv ಆಹಾರದಲ್ಲಿನ ಪ್ರೋಟೀನ್ ಮೂಲಗಳೆಂದರೆ ಮಾಂಸ, ತೋಫು ಮತ್ತು ಇತರ ಸೋಯಾ ಪದಾರ್ಥಗಳು

  • ಸುದ್ದಿ

    ಮದ್ಯ ಸೇವಿಸಿ 5ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ನೀಚ ತಂದೆ…!

    ಚಿಕ್ಕಬಳ್ಳಾಪುರ: ಕಾಮುಕ ತಂದೆಯೊಬ್ಬ ಮದ್ಯದ ಅಮಲಿನಲ್ಲಿ ಸ್ವಂತ ಮಗಳ ಮೇಲೆಯೇ ಅತ್ಯಚಾರ ಎಸಗಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶಿಡ್ಲಘಟ್ಟ ತಾಲೂಕಿನ ತಾಲೂಕಿನಲ್ಲಿ ಗುರುವಾರ ಘಟನೆ ನಡೆದಿದೆ. ತಂದೆಯ ಹೇಯ ಕೃತ್ಯದಿಂದ ಬಾಲಕಿ ತೀವ್ರ ಅಸ್ವಸ್ಥಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತನ್ನ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಗ್ರಾಮದಿಂದ ಪರಾರಿಯಾಗಿದ್ದ. ಘಟನಾ ಸ್ಥಳಕ್ಕೆ ದಿಬ್ಬೂರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಆರೋಪಿ ತಂದೆಗಾಗಿ ಬಲೆ ಬೀಸಿದ್ದರು. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು…