ವಿಸ್ಮಯ ಜಗತ್ತು

ಆಕಾಶದಲ್ಲಿ ವಿಮಾನದ ಮೇಲೆ ದಾಳಿ ಮಾಡಿದ ಹದ್ದುಗಳು..!ತಿಳಿಯಲು ಇದನ್ನು ಓದಿ..

1034

ಆಕಾಶದಲ್ಲಿ ಅತೀ ವೇಗವಾಗಿ ಚಲಿಸುತ್ತಿದ್ದ ಒಂದು ವಿಮಾನದ ಮೇಲೆ ಹದ್ದುಗಳು ಒಮ್ಮೆಲೇ ದಾಳಿಮಾಡಿದವು. ಅದೂ ಸಹ ಒಂದಲ್ಲ ಎರಡಲ್ಲ ಹತ್ತಾರು ಸಂಖ್ಯೆಯಲ್ಲಿ ದಾಳಿ ಮಾಡಿ ಪೈಲೆಟ್ ಅನ್ನು ತಬ್ಬಿಬ್ಬುಗೊಳಿಸಿದವು. ಆತಂಕ ಗೊಂಡ ಪೈಲೆಟ್ ವಿಮಾನವನ್ನು ಆಕಡೆ, ಈಕಡೆ ಓಡಿಸತೊಡಗಿದ.

ಇದನ್ನು ಲೆಕ್ಕಿಸದ ಹದ್ದುಗಳು ಸ್ವಲ್ಪ ಸಮಯ ತಮ್ಮ ರೆಕ್ಕೆಗಳನ್ನು ಹರಡಿಸಿ ಸ್ವಚ್ಛಂದವಾಗಿ ಹಾರಾಡ ತೊಡಗಿದವು. ಇಂತಹ ಅಪರೂಪವಾದ ಘಟನೆಯನ್ನು ವಿಮಾನದಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ಪೋಟೊಗಳನ್ನು ತೆಗೆದರು. ಈ ಘಟನೆ ಜರುಗಿದ್ದು ನವಂಬರ್ 14 ಮಂಗಳವಾರ ಅಮೆರಿಕದಲ್ಲಿ.

ಫ್ಲೋರಿಡಾದಿಂದ ಹೊರಟ ಆ ವಿಮಾನ ಆಕಾಶಕ್ಕೆ ಏರುತ್ತಿರುವಾಗ ಈ ಘಟನೆ ನಡೆಯಿತು. ಇದರಿಂದಾಗಿ ಪೈಲೆಟ್ ಬಹಳಷ್ಟು ಸಮಯ , ಅವುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಅತೀ ವೇಗವಾಗಿ ವಿಮಾನವನ್ನು ಚಲಾಯಿಸಿದ.

ಆದರೂ ಸಹ ಹದ್ದುಗಳು ವಿಮಾನವನ್ನು ಸುತ್ತುವರೆದಿದ್ದವು. ಕೆಲವು ಹದ್ದುಗಳು ಭಯದಿಂದ ಪೈಲೆಟ್ ಮುಂದಿರುವ ಗಾಜಿನ ಮುಂದೆ ಒಟ್ಟು ಗೂಡಿದವು. ದಾರಿ ಕಾಣದೆ ಗಲಿಬಿಲಿಗೊಂಡ ಪೈಲೆಟ್ ಕೊನೆಗೆ ಬಲವಂತವಾಗಿ ಲ್ಯಾಂಡಿಂಗ್ ಮಾಡಲೇ ಬೇಕಾಯಿತು. ಇದನ್ನು ನೋಡುತ್ತಿದ್ದರೆ ಮೈ ಪುಳಕಗೊಂಡರೂ…ನಂತರ ಭಯಹುಟ್ಟಿಸಿತಂತೆ. ಪೈಲೆಟ್ ರನ್ನು ಬೇಡಿಕೊಳ್ಳಲಾಗಿ, ಬಲವಂತವಾಗಿ ಪ್ಲೋರಿಡಾದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಿದರು. ಕೆಲವು ಹದ್ದುಗಳು ಚಕ್ರದ ಅಡಿಗೆ ಸಿಲುಕಿ ಮರಣಿಸಿದವು.

ಚಕ್ರದ ಅಡಿಗೆ ಸಿಲುಕಿ ಮರಣಿಸಿದ ಹದ್ದುಗಳ ಫೋಟೋಗಳು, ವಿಮಾನವನ್ನು ಸುತ್ತುವರೆದಿರುವ ಹದ್ದುಗಳ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ವಾತಾವರಣದ ಏರುಪೇರಿನಿಂದ ವಿಮಾನವನ್ನು ಬಲವಂತವಾಗಿ ಲ್ಯಾಂಡಿಂಗ್ ಮಾಡಿದ್ದೇವೆ.ಆದರೆ ಹದ್ದುಗಳ ಉಪಟಳದಿಂದ ಬಲವಂತವಾಗಿ ಲ್ಯಾಂಡಿಂಗ್ ಮಾಡಿರುವುದು ಇದೇ ಮೊದಲು ಎಂದು ಅಧಿಕಾರಿಗಳು ಹೇಳುತ್ತಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ