ಉಪಯುಕ್ತ ಮಾಹಿತಿ

ಅಡುಗೆ ಮನೆಯಲ್ಲಿರುವ ಈ ಕರಿಮೆಣಸಿನ ಬಗ್ಗೆ ನಿಮ್ಗೆ ಗೊತ್ತಿಲ್ಲದ ಪ್ರಯೋಜನಗಳು..ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ..

300

ಮಸಾಲೆಗಳ ರಾಣಿಯಂದೇ ಖ್ಯಾತಿ ಪಡೆದಿರುವ ಕಾಳು ಕರಿ ಮೆಣಸು. ಅಡುಗೆ ಮನೆಯಲ್ಲಿ ಇದರದ್ದೇ ಕಾರು ಬಾರು, ಸಾಮಾನ್ಯವಾಗಿ ಇದನ್ನ ಮಸಾಲೆ ಪದಾರ್ಥವಾಗಿ ಬಳಸುತ್ತಾರೆ, ಇದು ಅಡುಗೆಯ ರುಚಿಯನ್ನ ಹೆಚ್ಚಿಸುತ್ತದೆ. ಇದು ಬಹಳ ಕಾರವಾಗಿದ್ದು ಇದರ ಸೇವನೆ ಆರೋಗ್ಯಕ್ಕೆ ಬಹಳ ಉಪಯುಕ್ತಕಾರಿ. ಕಾಳು ಮೆಣಸು ನಮ್ಮ ದೇಹದ ಅನೇಕ ರೋಗಗಳನ್ನ ಕಡಿಮೆ ಮಾಡುತ್ತದೆ.

ಶೀತ-ನೆಗಡಿ:-

2 ಗ್ರಾಂ ಕಾಳು ಮೆಣಸಿನ ಪುಡಿಯನ್ನು ಬೆಲ್ಲದ ಜೊತೆ ಸೇರಿಸಿ ತಿನ್ನುವುದ್ರಿಂದ ಶೀತ-ನೆಗಡಿ ಕಡಿಮೆಯಾಗುತ್ತದೆ. ಕಾಳು ಮೆಣಸಿನ ಪುಡಿಯ ವಾಸನೆಯನ್ನು ತೆಗೆದುಕೊಳ್ಳುವುದ್ರಿಂದ ಸೀನು, ತಲೆನೋವು ನಿಯಂತ್ರಣಕ್ಕೆ ಬರುತ್ತದೆ.

ಕಣ್ಣಿನ ಸಮಸ್ಯೆ:-

ಕಣ್ಣಿನ ದೋಷವಿರುವವರು ಪ್ರತಿದಿನ ಬೆಳಿಗ್ಗೆ ಕಾಳು ಮೆಣಸಿನ ಪುಡಿ ಜೊತೆ ಸಕ್ಕರೆ ಹಾಗೂ ತುಪ್ಪ ಬೆರೆಸಿ ತಿನ್ನುವುದು ಒಳ್ಳೆಯದು. ಇದು ದೃಷ್ಟಿಯನ್ನು ಚುರುಕುಗೊಳಿಸುತ್ತದೆ.

*ತಲೆ ಹೊಟ್ಟು:-

ಕಾಳುಮೆಣಸಿನಲ್ಲಿ ಇರುವ ಜೀವವಿರೋಧಿ ಅಂಶ ತಲೆಹೊಟ್ಟು ಹೋಗಲಾಡಿಸಲು ಸಹಕರಿಸುತ್ತದೆ.ಒಂದು ಚಮಚ ಪುಡಿಮಾಡಿದ ಕಾಳುಮೆಣಸನ್ನು ಒಂದು ಲೋಟ ಮೊಸರಿನೊಂದಿಗೆ ಸೇರಿಸಿ ನೆತ್ತಿಗೆ ಹಚ್ಚಿ.ನಂತರ ಅರ್ಧ ಗಂಟೆ ಬಿಟ್ಟು ಕೂದಲನ್ನು ಸರಿಯಾಗಿ ತೊಳೆಯಿರಿ. ಸೂಚನೆ: ಹೆಚ್ಚು ಕಾಳುಮೆಣಸು ಬಳಸಬೇಡಿ. ಇದರಿಂದ ತಲೆ ಸುಡುವ ಸಾಧ್ಯತೆ ಇದೆ.

ಹೊಟ್ಟೆ ಸಮಸ್ಯೆ:-

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿರುವವರು ಒಂದು ಗ್ರಾಂ ಕಾಳು ಮೆಣಸಿನ ಪುಡಿಗೆ ನಿಂಬೆ ರಸ ಹಾಗೂ ಶುಂಠಿ ರಸ ಬೆರೆಸಿ ಕುಡಿದ್ರೆ ಒಳ್ಳೆಯದು.

ರಕ್ತಸ್ರಾವ:-

ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ ಕಾಳು ಮೆಣಸಿನ ಪುಡಿಯನ್ನು ಮೊಸರು ಹಾಗೂ ಬೆಲ್ಲದ ಜೊತೆ ಸೇರಿಸಿ ತಿನ್ನುವುದ್ರಿಂದ ರಕ್ತ ಸೋರುವುದು ಕಡಿಮೆಯಾಗುತ್ತದೆ.

* ಹೊಟ್ಟೆ ಉಬ್ಬರ:-

ಕಾರ್ಮಿನೆಟಿವ್ ಗುಣವನ್ನು ಹೊಂದಿರುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಗೆ ಸಂಬಂಧಿಸಿದ ನೋವು ಕಡಿಮೆ ಆಗುವುದಲ್ಲದೆ ಹೊಟ್ಟೆ ಉಬ್ಬರ ಸಹ ಕಡಿಮೆಯಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ